ಕೇರಳದ ಪ್ರವಾಸ ಸಾಹಿತ್ಯೋತ್ಸವ ‘ಯಾನಂ 2025’ ಕ್ಕೆ ಅದ್ಧೂರಿ ಚಾಲನೆ
ವಿಶ್ವದ ವಿವಿಧ ಭಾಗಗಳ ಪ್ರವಾಸಿ ಬರಹಗಾರರು, ವ್ಲಾಗರ್‌ಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ, ಕೇರಳ ಪ್ರವಾಸೋದ್ಯಮ ಇಲಾಖೆಯ ಸಾಹಿತ್ಯೋತ್ಸವ ‘ಯಾನಂ 2025’ ಶುಕ್ರವಾರ ವರ್ಕಲಾದಲ್ಲಿ ಪ್ರಾರಂಭವಾಯಿತು.
ವಿಶ್ವದ ವಿವಿಧ ಭಾಗಗಳ ಪ್ರವಾಸಿ ಬರಹಗಾರರು, ವ್ಲಾಗರ್‌ಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ, ಕೇರಳ ಪ್ರವಾಸೋದ್ಯಮ ಇಲಾಖೆಯ ಸಾಹಿತ್ಯೋತ್ಸವ ‘ಯಾನಂ 2025’ ಶುಕ್ರವಾರ ವರ್ಕಲಾದಲ್ಲಿ ಪ್ರಾರಂಭವಾಗಿದೆ.

ವರ್ಕಲಾ ಕ್ಲಿಫ್‌ನ ರಂಗಕಲಾ ಕೇಂದ್ರದಲ್ಲಿ ಮೂರು ದಿನಗಳ ಉತ್ಸವವನ್ನು ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಮಾತನಾಡಿ “ಈ ಉತ್ಸವವು ವಿಶ್ವಾದಾದ್ಯಂತ ಇರುವ ಬರಹಗಾರರು, ಕಲಾವಿದರು ಹಾಗೂ ಪ್ರವಾಸಾಸಕ್ತರನ್ನು ಒಂದೆಡೆ ಸೇರಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸಂವಾದದ ಮೂಲಕ ಪ್ರೇರಣೆ ನೀಡಲು ಒಂದು ಅನನ್ಯ ವೇದಿಕೆಯಾಗಿದೆ. ಹೀಗಾಗಿ ಈ ಉತ್ಸವವನ್ನು ಕೇರಳ ಪ್ರವಾಸೋದ್ಯಮದ ವಾರ್ಷಿಕ ಕಾರ್ಯಕ್ರಮವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದರು.
ಈ ಉತ್ಸವವು ಕೇರಳ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುವುದರೊಂದಿಗೆ ಸುಸ್ಥಿರ ಹಾಗೂ ಸಮಗ್ರ ಪ್ರವಾಸೋದ್ಯಮದ ಬೆಳವಣಿಗೆಗೆ ತಜ್ಞರು ತಮ್ಮ ಸಲಹೆ ಮತ್ತು ವಿಚಾರಗಳನ್ನು ಮಂಡಿಸಲು ಅತ್ಯುತ್ತಮ ವೇದಿಕೆಯಾಗಿದೆ ಎಂಬ ಅಭಿಪ್ರಾಯವನ್ನೂ ಸಚಿವರು ತಿಳಿಸಿದರು.

ಕೇರಳದ ಈ ಪ್ರವಾಸ ಸಾಹಿತ್ಯೋತ್ಸವ ವರ್ಕಲದ ಪ್ರವಾಸೋದ್ಯಮಕ್ಕೂ ಚೈತನ್ಯ ತುಂಬಲಿದೆ. ಸಮುದ್ರತೀರದಲ್ಲಿ ನೆಲೆನಿಂತಿರುವ ಈ ನಗರವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಕೂಡ ಸಹಕಾರಿಯಾಗಲಿದೆ.