ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಒಂದೇ ಸೂರಿನಡಿ ಪ್ರವಾಸ, ಸಾರಿಗೆ, ವಾಸ್ತವ್ಯ ಮತ್ತು ಆತಿಥ್ಯವನ್ನು ಒದಗಿಸುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ತನ್ನ ಹೆಜ್ಜೆ ಗುರುತುಗಳನ್ನು ಕರ್ನಾಟಕದಲ್ಲಿ ಸೀಮಿತಗೊಳಿಸದೆ, ಹೊರ ರಾಜ್ಯಗಳಿಗೂ ಮುಂದುವರಿಸಿದೆ. ಹೇಳಿ- ಕೇಳಿ- ಓದಿ ತಿಳಿದರೂ ಮುಗಿಯದಷ್ಟು ವೈಭವದ ಇತಿಹಾಸ ಕರ್ನಾಟಕಕ್ಕಿದೆ. ಇದನ್ನು ಪುಟಗಳಿಗೆ ಮಾತ್ರ ಸೀಮಿತವಾಗಿರಿಸದೆ, ಜನರನ್ನು ಸುತ್ತಿಸಿ ಪ್ರವಾಸದಲ್ಲಿನ ಸಾರ ಸತ್ವವನ್ನು ಹಂಚಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ ಕೆಎಸ್‌ಟಿಡಿಸಿ. ಇಡೀ ರಾಜ್ಯವನ್ನು ಸುತ್ತಿಸುವ ಮನೋಬಯಕೆ ಹೊಂದಿರುವ ಕೆಎಸ್‌ಟಿಡಿಸಿ ಇದೀಗ ಪ್ರವಾಸಿಗರನ್ನು ಉತ್ತರ ಕರ್ನಾಟಕದತ್ತ ಕೊಂಡೊಯ್ಯುತ್ತಿದೆ. ಐದು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಪ್ರತಿ ಪ್ರವಾಸವೂ ರಾಜಧಾನಿ ಬೆಂಗಳೂರಿನಿಂದಲೇ ಪ್ರಾರಂಭವಾಗುತ್ತದೆ. ಕೆಎಸ್‌ಟಿಡಿಸಿ ಕಚೇರಿಯಿಂದ ಆರಂಭವಾಗುವ ಪ್ರವಾಸವು, ಪ್ರವಾಸಿಗರನ್ನು ಅದ್ಭುತ ತಾಣಗಳಿಗೆ ಕರೆದೊಯ್ಯಲಿದೆ. ಪ್ರತಿ ಪ್ರವಾಸವೂ ಮಜವಾದ ಅನುಭವವನ್ನು ನೀಡುತ್ತದೆ. ಮನೆಯಲ್ಲೇ ಕೂತು ಬೇಸರಗೊಂಡಿರುವವರು ಕೆಎಸ್‌ಟಿಡಿಸಿ ಮೂಲಕ ಇಡೀ ರಾಜ್ಯ ಸುತ್ತಬಹುದು. ದೇಶಿ ಮತ್ತು ವಿದೇಶಿ ಪ್ರವಾಸವೆಂಬ ಆಯ್ಕೆಯೂ ಇದೆ. ವಿದೇಶದಿಂದ ಬರುವ ಪ್ರವಾಸಿಗರಿಗೂ ಕೆಎಸ್‌ಟಿಡಿಸಿ ವಿಶೇಷವಾದ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಹಂಪಿ, ಚಿತ್ರದುರ್ಗ, ಬಾದಾಮಿ, ಬಿಜಾಪುರ ಹೀಗೆ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳನ್ನು ತೋರಿಸುವ ಮೂಲಕ ಪ್ರವಾಸಿಗರ ಸಂಭ್ರಮವನ್ನು ಹೆಚ್ಚಿಸುತ್ತಿದೆ.

Chitradurga Fort

ಒಂದೇ ಸೂರು ಹತ್ತಾರು ಟೂರು

ಕೆಎಸ್‌ಟಿಡಿಸಿ ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಮೂಲಕ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಿದೆ. ಒಂದೇ ಸೂರಿನಡಿ ಹತ್ತಾರು ಪ್ರವಾಸವನ್ನು ಆಯೋಜಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಹೊರಡುವ ಕೆಎಸ್‌ಟಿಡಿಸಿ ಬಸ್‌ನಲ್ಲಿ ಪ್ರವಾಸಿಗರನ್ನು ತುಂಬಿಕೊಂಡು ಹೊರಡುತ್ತದೆ. ಚಿತ್ರದುರ್ಗ, ಬಾದಾಮಿ, ಬಿಜಾಪುರ, ಹಂಪಿ ಹೀಗೆ ಸಾಕಷ್ಟು ಕಡೆ ಕರೆದೊಯ್ಯುತ್ತದೆ. ಚಿತ್ರದುರ್ಗದ ಕಲ್ಲಿನ ಕೋಟೆ, ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಗತಕಾಲದ ಚರಿತ್ರೆಗಳನ್ನು ನಮ್ಮ ಅನುಭವಕ್ಕೆ ತಂದುಕೊಳ್ಳಬಹುದು. ಇನ್ನು ಬಾದಾಮಿಯೂ ಇತಿಹಾಸದ ವೈಭವತೆಯನ್ನು ತನ್ನ ಗರ್ಭದಲ್ಲಿರಿಸಿಕೊಂಡಿದೆ. ಹಂಪಿಯಲ್ಲಿ ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ, ಸಾಸಿವೆ ಕಾಳು ಮತ್ತು ಕಡಲೆಕಾಳು ಗಣೇಶ ದೇವಾಲಯ, ಅರಮನೆ ಹೀಗೆ ಹತ್ತಾರು ಸ್ಥಳಗಳನ್ನು ಕಂಡು ಆನಂದಿಸಬಹುದು. ಇನ್ನು ಬಿಜಾಪುರದ ಬಗ್ಗೆ ಹೆಚ್ಚೇನೂ ಹೇಳುವಂತದ್ದಿಲ್ಲ. ಬಿಜಾಪುರ ಗುಮ್ಮಟ ನಗರಿ ಎಂದೇ ಖ್ಯಾತಿಗಳಿಸಿದೆ. ಅಲ್ಲಿನ ಗೋಲ್ ಗುಂಬಜ್ ಪ್ರಮುಖ ಆಕರ್ಷಣೆಯ ತಾಣ. ಪ್ರತಿದಿನವೂ ಅಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

Hampi

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

Badami caves (1)

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಬೆಂಗಳೂರು - ಚಿತ್ರದುರ್ಗ - ಬಾದಾಮಿ - ಬಿಜಾಪುರ - ಹಂಪಿ - ಬೆಂಗಳೂರು (ವಿದೇಶಿ ಪ್ರವಾಸಿ)

ಬೆಂಗಳೂರಿನಿಂದ ಚಿತ್ರದುರ್ಗ, ಬಾದಾಮಿ, ಬಿಜಾಪುರ ಮತ್ತು ಹಂಪಿಗೆ ನಾಲ್ಕು ದಿನಗಳ ವಿಶೇಷ ಟೂರ್ ಪ್ಯಾಕೇಜ್ ಇದಾಗಿರುತ್ತದೆ.

Bijapur Gol Gumbaz

ದಿನ-1

ಬೆಳಗ್ಗೆ 6.00 ಗಂಟೆಗೆ ಬೆಂಗಳೂರಿನಿಂದ ಹೊರಡಲಾಗುತ್ತದೆ.

ದಾರಿ ಮಧ್ಯೆ ಬೆಳಗಿನ ತಿಂಡಿ

ಚಿತ್ರದುರ್ಗ ಕೋಟೆಗೆ ಭೇಟಿ

ಮಯೂರ ದುರ್ಗದಲ್ಲಿ ಮಧ್ಯಾಹ್ನದ ಊಟ

ದಾರಿ ಮಧ್ಯೆ ಸ್ನ್ಯಾಕ್ಸ್

ಟಿಬಿ ಡ್ಯಾಮ್‌ ಭೇಟಿ

ಟಿಬಿ ಡ್ಯಾಮ್‌ ಬಳಿ ರಾತ್ರಿಯ ಊಟ

ದಿನ -2

ಬೆಳಗ್ಗೆ 7.30ಕ್ಕೆ ಟಿಬಿ ಡ್ಯಾಂನಲ್ಲಿ ಉಪಾಹಾರ

ಬಾದಾಮಿ ಗುಹಾಂತರ ದೇವಾಲಯಗಳಿಗೆ ಭೇಟಿ

ಬಾದಾಮಿಯಲ್ಲಿ ಮಧ್ಯಾಹ್ನದ ಊಟ

ಪಟ್ಟದಕಲ್ಲು ಮಲ್ಲಿಕಾರ್ಜುನ, ವಿರೂಪಾಕ್ಷ ಮತ್ತು ಇತರ ದೇವಾಲಯಗಳಿಗೆ ಭೇಟಿ

ಐಹೊಳೆ ದುರ್ಗದಗುಡಿ ಮತ್ತು ಇತರ ದೇವಾಲಯಗಳಿಗೆ ಭೇಟಿ

ವಿಜಯಪುರದ ಆದಿಲ್‌ಶಾಹಿಯಲ್ಲಿ ರಾತ್ರಿ ಊಟ

ದಿನ-3

ಬೆಳಗ್ಗೆ 7.30 ಕ್ಕೆ ವಿಜಯಪುರದಲ್ಲಿ ಉಪಾಹಾರ

ಗೋಲ್ ಗುಂಬಜ್‌ಗೆ ಭೇಟಿ

ಜುಮ್ಮಾ ಮಸೀದಿಗೆ ಭೇಟಿ

ಇಬ್ರಾಹಿಂ ರೋಜಾ ಭೇಟಿ

ವಿಜಯಪುರದ ಆದಿಲ್ ಶಾಹಿಯಲ್ಲಿ ಊಟ

ಬರಾ ಕಮಾನ್

ಕೂಡಲಸಂಗಮೇಶ್ವರ ದೇವಸ್ಥಾನ ಮತ್ತು ಬಸವಣ್ಣ ಸಮಾಧಿಗೆ ಭೇಟಿ

ಅನುಭವ ಮಂಟಪಕ್ಕೆ ಭೇಟಿ

ಹಂಪಿ, ಭುವನೇಶ್ವರಿಯಲ್ಲಿ ಊಟ

ದಿನ-4

ಬೆಳಗ್ಗೆ 7.30ಕ್ಕೆ ಹಂಪಿಯಲ್ಲಿ ಉಪಾಹಾರ

ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ

ಉಗ್ರ ನರಸಿಂಹ ಸ್ವಾಮಿ ದೇವಾಲಯ ಭೇಟಿ

ಲೋಟಸ್ ಮಹಲ್ ಭೇಟಿ

ವಿಜಯ ವಿಠ್ಠಲ ದೇವಸ್ಥಾನ (ಕಲ್ಲಿನ ರಥ)

ಹಂಪಿ ಭುವನೇಶ್ವರಿಯಲ್ಲಿ ಊಟ

ಬೆಂಗಳೂರಿಗೆ ಹಿಂತಿರುಗಲಾಗುವುದು.

Mayura Hotel

ಹಂಪಿಯ ಮಯೂರ ಹೊಟೇಲ್‌ನ ಆತಿಥ್ಯ

ಆತಿಥ್ಯಕ್ಕೆ ಹೇಳಿ ಮಾಡಿಸಿದ ಹೊಟೇಲ್ ಎಂದರೆ ಅದು ಮಯೂರ. ಮಯೂರ ಹೊಟೇಲ್ ಎಂದರೆ ಅಲ್ಲಿ ಶುಚಿ ಮತ್ತು ರುಚಿಯಾದ ಊಟವಿರುತ್ತದೆ. ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ಹೊಟೇಲ್. ಸಾವಿರಾರು ಪ್ರವಾಸಿಗರ ಆಸೆ ಮತ್ತು ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರವಿದೆ. ಆತಿಥ್ಯವೆಂದರೆ ಮಯೂರ ಎಂಬಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಅಲ್ಲಿನ ಸಿಬ್ಬಂದಿ, ಹಿತವಾದ ವಾತಾವರಣ, ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಎಸ್‌ಟಿಡಿಸಿ ಪ್ಯಾಕೇಜ್ ನಡಿ ಪ್ರವಾಸಕ್ಕೆ ಹೊರಡುವ ಪ್ರವಾಸಿಗರಿಗೆಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ಒದಗಿಸಿಕೊಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಮಯೂರದಲ್ಲಿ ಗುಣಮಟ್ಟದ ಮತ್ತು ಆತ್ಮೀಯವಾದ ಆತಿಥ್ಯ ಇದ್ದೇ ಇರುತ್ತದೆ. ತನ್ನ ಗ್ರಾಹಕರನ್ನು ಅದ್ಭುತವಾಗಿ ಉಪಚರಿಸುತ್ತದೆ. ಸೇವೆ ನೀಡುವುದರಲ್ಲಿ ಯಾವುದೇ ರಾಜಿಯಿಲ್ಲ. ಪ್ರವಾಸಿಗನಿಗೆ ಮನೆಯ ವಾತಾವರಣವನ್ನು ಮಯೂರ ಹೊಟೇಲ್ ನಿರ್ಮಿಸಿಕೊಡುತ್ತದೆ. ಹೊಟೇಲ್‌ನ ಪ್ರತಿ ಸಿಬ್ಬಂದಿಯೂ ಆಪ್ತವಾಗಿ ಮಾತಿಗಿಳಿಯುತ್ತಾ ವಾಸ್ತವ್ಯವಿರುವ ಅಷ್ಟು ಗಳಿಗೆಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮಯೂರವೆಂದೆ ಬ್ರಾಂಡ್ ಎಂಬಂತಾಗಿದೆ.

ನೀವು ಹಂಪಿ ಪ್ರವಾಸಕ್ಕೆ ಹೊರಟರೆ ತಪ್ಪದೇ ಹಂಪಿಯ ವಿಜಯನಗರ ಮಯೂರದಲ್ಲಿ ಉಳಿದುಕೊಳ್ಳಿ. ನೀವು ನಿಮ್ಮ ಕುಟುಂಬ ಅಥವಾ ಗೆಳೆಯರೊಂದಿಗೆ ಅಲ್ಲಿ ವಾಸ್ತವ್ಯ ಹೂಡಲೇಬೇಕು. ಮನೆಯಲ್ಲಿದ್ದೇನೆ ಎಂಬ ಭಾವ ಖಂಡಿತ ಮೂಡುತ್ತದೆ. ಹೊಟೇಲ್ ಮಯೂರ ವಿಜಯನಗರವು ಡ್ಯಾಮ್‌ನ ಪಕ್ಕದಲ್ಲಿದ್ದು, ಪ್ರವಾಸಿಗರಿಗೆ ಪ್ರಶಾಂತವಾದ ಹಸಿರು ವಾತಾವರಣದ ಮೂಲಕ ದಿವ್ಯ ಅನುಭೂತಿ ನೀಡುತ್ತದೆ. ಹೊಟೇಲ್‌ನಲ್ಲಿ ಒಟ್ಟು 21 ರೂಮ್‌ಗಳಿದ್ದು, 17 ಎಸಿ ಡಬಲ್ ರೂಮ್‌ಗಳು, 2 ಎಸಿ ಡಿಲಕ್ಸ್, 4 ಬೆಡ್ ರೂಮ್‌ಗಳು ಮತ್ತು 2 ಎಸಿ ಸಿಂಗಲ್ ರೂಮ್‌ಗಳಿವೆ. ರೆಸ್ಟೋರೆಂಟ್ ಮತ್ತು ಬಿಯರ್ ಪಾರ್ಲರ್ ನಿಮ್ಮನ್ನು ತೃಪ್ತಿಗೊಳಿಸುತ್ತವೆ. ಹಂಪಿಯ ಗತ ಕಾಲದ ವೈಭವಕ್ಕೆ ಸಾಕ್ಷಿಯಾಗುತ್ತಾ, ಅಲ್ಲಿನ ಅದ್ಭುತ ಅನುಭವಗಳನ್ನು ನಿಮ್ಮೊಳಗೆ ತಂದುಕೊಳ್ಳುತ್ತಾ ಹೊಟೇಲ್ ಮಯೂರದಲ್ಲಿ ಉಳಿದುಕೊಳ್ಳಿ. ಪ್ರವಾಸದ ವೇಳೆ ನಾವು ಉಳಿದುಕೊಳ್ಳುವ ಜಾಗವೂ ಬಹಳ ಮುಖ್ಯವಾಗುತ್ತದೆ.

ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳು

ವಿಜಯ ವಿಠಲ ದೇವಸ್ಥಾನ

ತುಂಗಭದ್ರ ಗಾರ್ಡನ್ಸ್ & ಡ್ಯಾಮ್

ಹಜಾರ ರಾಮ ದೇವಾಲಯ

ಹಂಪಿ

ಹೇಮಕೂಟ ಬೆಟ್ಟ

ಸಂಪರ್ಕ:

Mr. Prakash M

Hampi, Near TB Dam,

Hospet, Bellary 583 225

Contact: 8970650002

0839-4259270

Email : vijayanagar@karnatakaholidays.net