ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಒಂದೇ ಸೂರಿನಡಿ ಪ್ರವಾಸ, ಸಾರಿಗೆ, ವಾಸ್ತವ್ಯ ಮತ್ತು ಆತಿಥ್ಯವನ್ನು ಒದಗಿಸುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ತನ್ನ ಹೆಜ್ಜೆ ಗುರುತುಗಳನ್ನು ಕರ್ನಾಟಕದಲ್ಲಿ ಸೀಮಿತಗೊಳಿಸದೆ, ಹೊರ ರಾಜ್ಯಗಳಿಗೂ ಮುಂದುವರಿಸಿದೆ. ಹೇಳಿ- ಕೇಳಿ- ಓದಿ ತಿಳಿದರೂ ಮುಗಿಯದಷ್ಟು ವೈಭವದ ಇತಿಹಾಸ ಕರ್ನಾಟಕಕ್ಕಿದೆ. ಇದನ್ನು ಪುಟಗಳಿಗೆ ಮಾತ್ರ ಸೀಮಿತವಾಗಿರಿಸದೆ, ಜನರನ್ನು ಸುತ್ತಿಸಿ ಪ್ರವಾಸದಲ್ಲಿನ ಸಾರ ಸತ್ವವನ್ನು ಹಂಚಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ ಕೆಎಸ್​ಟಿಡಿಸಿ. ಇಡೀ ರಾಜ್ಯವನ್ನು ಸುತ್ತಿಸುವ ಮನೋಬಯಕೆ ಹೊಂದೊರುವ ಕೆಎಸ್​ಟಿಡಿಸಿ ಇದೀಗ ಪ್ರವಾಸಿಗರನ್ನು ಉತ್ತರ ಕರ್ನಾಟಕದತ್ತ ಕೊಂಡೊಯ್ಯುತ್ತಿದೆ. ಐದು ವಿಶೇಷ ಪ್ಯಾಕೇಜ್‌ ಗಳನ್ನು ಘೋಷಿಸಿದೆ. ಪ್ರತಿ ಪ್ರವಾಸವೂ ರಾಜಧಾನಿ ಬೆಂಗಳೂರಿನಿಂದಲೇ ಪ್ರಾರಂಭವಾಗುತ್ತದೆ.

ಕೆಎಸ್​ಟಿಡಿಸಿ ಕಚೇರಿಯಿಂದ ಆರಂಭವಾಗುವ ಪ್ರವಾಸವು, ಪ್ರವಾಸಿಗರನ್ನು ಅದ್ಭುತ ತಾಣಗಳಿಗೆ ಕರೆದೊಯ್ಯಲಿದೆ. ಪ್ರತಿ ಪ್ರವಾಸವೂ ಮಜವಾದ ಅನುಭವವನ್ನು ನೀಡುತ್ತದೆ. ಮನೆಯಲ್ಲೇ ಕೂತು ಬೇಸರಗೊಂಡಿರುವವರು ಕೆಎಸ್​ಟಿಡಿಸಿ ಮೂಲಕ ಇಡೀ ರಾಜ್ಯ ಸುತ್ತಬಹುದು. ದೇಶಿ ಮತ್ತು ವಿದೇಶಿ ಪ್ರವಾಸವೆಂಬ ಆಯ್ಕೆಯೂ ಇದೆ. ವಿದೇಶದಿಂದ ಬರುವ ಪ್ರವಾಸಿಗರಿಗೂ ಕೆಎಸ್‌ಟಿಡಿಸಿ ವಿಶೇಷವಾದ ಟೂರ್‌ ಪ್ಯಾಕೇಜ್‌ ಗಳನ್ನು ಘೋಷಿಸಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೆಎಸ್‌ಟಿಡಿಸಿ ನಾಲ್ಕಾರು ರೀತಿಯ ಸರ್ಕ್ಯುಟ್‌ ಟೂರ್‌ ಪ್ಯಾಕೇಜ್‌ ಗಳನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಹಂಪಿ, ವಿಜಯಪುರ, ಬಾದಾಮಿ, ಚಿತ್ರದುರ್ಗಕ್ಕೆ ಕೆಎಸ್‌ಟಿಡಿಸಿ ಬಸ್‌ಗಳು ಕರೆದೊಯ್ಯುತ್ತವೆ. ಡೊಮೆಸ್ಟಿಕ್‌ ಟ್ರಿಪ್‌ ಮತ್ತು ವಿದೇಶಿ ಪ್ರವಾಸ ಎಂದು ಎರಡು ರೀತಿಯ ಪ್ರವಾಸಗಳನ್ನು ಘೋಷಿಸುವ ಮೂಲಕ ಉತ್ತರ ಕರ್ನಾಟಕದಲ್ಲಿರುವ ತಾಣಗಳಿಗೆ ಹೊಸ ಮೆರುಗು ನೀಡಲು ಮುಂದಾಗಿದೆ. ಕೆಎಸ್‌ಟಿಡಿಸಿಯ ಈ ವಿಭಿನ್ನ ಪ್ರಯತ್ನದಿಂದ ಪ್ರವಾಸಿಗರು ಉತ್ತರ ಕರ್ನಾಟಕ ತಾಣಗಳನ್ನು ನೋಡಲು ಮನಸ್ಸು ಮಾಡುತ್ತಾರೆ. ಉತ್ತರ ಕರ್ನಟಕದ ಎಲ್ಲ ತಾಣಗಳಿಗೂ ಹೊಸ ರೂಪ ಮತ್ತು ಪ್ರಾಶಸ್ತ್ಯ ಸಿಗಲಿದೆ. ಈ ನಿಟ್ಟಿನಲ್ಲಿ ಕೆಎಸ್‌ಟಿಡಿಸಿ ಕೆಲಸ ಶ್ಲಾಘನಾರ್ಹ.

kstdc 1

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್​ಟಿಡಿಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್ ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್ ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್ ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್​ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಸರ್ಕ್ಯೂಟ್ 5: ಬೆಂಗಳೂರು - ಚಿತ್ರದುರ್ಗ - ಬಾದಾಮಿ - ಬಿಜಾಪುರ - ಹಂಪಿ - ಬೆಂಗಳೂರು (ವಿದೇಶಿ ಪ್ರವಾಸಿ)

ದಿನ-1
ಬೆಳಗ್ಗೆ 6.00 ಗಂಟೆಗೆ ಬೆಂಗಳೂರಿನಿಂದ ಹೊರಡಲಾಗುತ್ತದೆ

ದಾರಿ ಮಧ್ಯೆ ಉಪಾಹಾರ

ಚಿತ್ರದುರ್ಗ ಕೋಟೆಗೆ ಭೇಟಿ

ಮಯೂರ ಹೊಟೇಲ್‌ನಲ್ಲಿ ಊಟ
ದಾರಿ ಮಧ್ಯೆ ಸ್ನಾಕ್ಸ್
ಟಿಬಿ ಡ್ಯಾಮ್‌ಗೆ ಭೇಟಿ

ಟಿಬಿ ಡ್ಯಾಮ್‌ನಲ್ಲಿ ಊಟ ಮತ್ತು ವಿಶ್ರಾಂತಿ

ದಿನ-2
ಬೆಳಗ್ಗೆ 7.30ಕ್ಕೆ ಟಿಬಿ ಡ್ಯಾಂನಲ್ಲಿ ಉಪಾಹಾರ.

ಬಾದಾಮಿ ಗುಹಾಂತರ ದೇವಾಲಯಗಳಿಗೆ ಭೇಟಿ

ಬಾದಾಮಿಯಲ್ಲಿ ಊಟ

ಪಟ್ಟದಕಲ್ಲು ಮಲ್ಲಿಕಾರ್ಜುನ, ವಿರೂಪಾಕ್ಷ ಮತ್ತು ಇತರ ದೇವಾಲಯಗಳಿಗೆ ಭೇಟಿ

ಐಹೊಳೆ ದುರ್ಗದಗುಡಿ ಮತ್ತು ಇತರ ದೇವಾಲಯಗಳಿಗೆ ಭೇಟಿ

ವಿಜಯಪುರದ ಆದಿಲ್‌ಶಾಹಿಯಲ್ಲಿ ಊಟ ಮತ್ತು ವಿಶ್ರಾಂತಿ

ದಿನ-3

ಬೆಳಗ್ಗೆ 7.30 ಕ್ಕೆ ವಿಜಯಪುರದಲ್ಲಿ ಉಪಹಾರ

ಗೋಲ್ ಗುಂಬಜ್ ಭೇಟಿ

ಜುಮ್ಮಾ ಮಸೀದಿಗೆ ಭೇಟಿ

ಇಬ್ರಾಹಿಂ ರೋಜಾಗೆ ಭೇಟಿ

ವಿಜಯಪುರದ ಆದಿಲಶಾಹಿಯಲ್ಲಿ ಊಟ

ಬರಾ ಕಮಾನ್ ಭೇಟಿ

ಕೂಡಲಸಂಗಮೇಶ್ವರ ದೇವಸ್ಥಾನ ಮತ್ತು ಬಸವಣ್ಣ ಸಮಾಧಿಗೆ ಭೇಟಿ

ಅನುಭವ ಮಂಟಪಕ್ಕೆ ಭೇಟಿ

ಹಂಪಿ, ಭುವನೇಶ್ವರಿಯಲ್ಲಿ ಊಟ ಮತ್ತು ವಿಶ್ರಾಂತಿ

ದಿನ-4
7.30 ಹಂಪಿಯಲ್ಲಿ ಉಪಾಹಾರ

ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ

ಉಗ್ರ ನರಸಿಂಹ ದೇವಸ್ಥಾನ ಭೇಟಿ

ಲೋಟಸ್ ಮಹಲ್‌ಗೆ ಭೇಟಿ

ವಿಜಯ ವಿಠ್ಠಲ ದೇವಸ್ಥಾನ ಭೇಟಿ

ಹಂಪಿ, ಭುವನೇಶ್ವರಿಯಲ್ಲಿ ಊಟ

ಬೆಂಗಳೂರಿಗೆ ಹಿಂತಿರುಗಲಾಗುತ್ತದೆ

kstdc mayura

ಸರ್ಕ್ಯೂಟ್ 4: ಬೆಂಗಳೂರು - ಹಂಪಿ - ಬೆಂಗಳೂರು (ವಿದೇಶಿ ಪ್ರವಾಸಿ)

ದಿನ-1

ಬೆಳಗ್ಗೆ 6.00 ಗಂಟೆಗೆ ಬೆಂಗಳೂರಿನಿಂದ ಹೊರಡಲಾಗುತ್ತದೆ

ಭುವನೇಶ್ವರಿಯಲ್ಲಿ ಊಟ.

ವಿಜಯ ವಿಠ್ಠಲ ದೇವಸ್ಥಾನ (ಕಲ್ಲಿನ ರಥ) ಭೇಟಿ

ಪುರಂದರದಾಸ ಮಂಟಪ ಭೇಟಿ

ಕೋರಕಲ್ ಸವಾರಿ

ತುಂಗಭದ್ರಾ ಡ್ಯಾಮ್‌ನಲ್ಲಿ ಮ್ಯೂಸಿಕ್‌&ಲೈಟ್ಸ್‌ ಪ್ರೋಗ್ರಾಂ ವೀಕ್ಷಣೆ

ಟಿಬಿ ಡ್ಯಾಮ್‌ನಲ್ಲಿ ಊಟ ಮತ್ತು ವಿಶ್ರಾಂತಿ

ದಿನ-2
7.30ಕ್ಕೆ ಮಯೂರ ಭುವನೇಶ್ವರಿಯಲ್ಲಿ ಉಪಾಹಾರ

ಅಂಜನಾದ್ರಿ ಬೆಟ್ಟ / ಆನೆಗುಂದಿಗೆ ಭೇಟಿ

ದರೋಜಿ ಕರಡಿ ಸ್ಕ್ಯಾಂಟುರಿ ಭೇಟಿ

ಟಿಬಿ ಡ್ಯಾಮ್‌ನಲ್ಲಿ ಊಟ

ಮೃಗಾಲಯ ಭೇಟಿ

ಭುವನೇಶ್ವರಿಯಲ್ಲಿ ಊಟ ಮತ್ತು ವಿಶ್ರಾಂತಿ

ದಿನ-3

ಬೆಳಗ್ಗೆ 7.30ಕ್ಕೆ ಮಯೂರ ಭುವನೇಶ್ವರಿಯಲ್ಲಿ ಉಪಾಹಾರ

ವಿರೂಪಾಕ್ಷ ದೇವಾಲಯ ಭೇಟಿ

ಉಗ್ರ ನರಸಿಂಹ ಪ್ರತಿಮೆ ವೀಕ್ಷಣೆ

ಬಡವಿಶಿವಲಿಂಗ ದೇವಾಲಯಕ್ಕೆ ಭೇಟಿ

ಸಿಸ್ಟರ್ಸ್ ಸ್ಟೋನ್ ಭೇಟಿ

ಅಂಡರ್‌ಗ್ರೌಂಡ್‌ ಟೆಂಪಲ್‌ಗೆ ಭೇಟಿ

ಮಹಾನವಮಿ ದಿಬ್ಬ (ಪುಷ್ಕರಣಿ) ಭೇಟಿ

ಕ್ವೀನ್ಸ್ ಬಾತ್

ಮಯೂರ ಭುವನೇಶ್ವರಿಯಲ್ಲಿ ಊಟ.

ಬೆಂಗಳೂರಿಗೆ ಹಿಂತಿರುಗಲಾಗುತ್ತದೆ

ಬಾದಾಮಿಯಲ್ಲಿ ಮಯೂರ

ಆತಿಥ್ಯ ಮತ್ತು ಪ್ರೀತಿ ಎಂದ ಕೂಡಲೇ ಪ್ರತಿ ಪ್ರವಾಸಿಗನಿಗೂ ಮಯೂರ ಹೊಟೇಲ್‌ ನೆನಪಾಗಬೇಕು. ಅತಿಥಿಗಳ ಉಪಚಾರಕ್ಕೆ ಹೇಳಿ ಮಾಡಿಸಿದ ಹೊಟೇಲ್​ ಎಂದರೆ ಅದು ಮಯೂರ. ಅಲ್ಲಿ ಯಾವಾಗಲೂ ಶುಚಿ ಮತ್ತು ರುಚಿಯಾದ ಊಟವಿರುತ್ತದೆ. ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ಹೊಟೇಲ್.‌ ಸಾವಿರಾರು ಪ್ರವಾಸಿಗರ ಆಸೆ ಮತ್ತು ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರವಿದೆ.​ ಅಲ್ಲಿನ ಸಿಬ್ಬಂದಿ, ಹಿತವಾದ ವಾತಾವರಣ, ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಎಸ್​ಟಿಡಿಸಿ ಪ್ಯಾಕೇಜ್ ನಡಿ ಪ್ರವಾಸಕ್ಕೆ ಹೊರಡುವ ಪ್ರವಾಸಿಗರಿಗೆಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ಒದಗಿಸಿಕೊಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್​ನ ಶಾಖೆಗಳಿವೆ. ಮಯೂರದಲ್ಲಿ ಗುಣಮಟ್ಟದ ಮತ್ತು ಆತ್ಮೀಯವಾದ ಆತಿಥ್ಯ ಇದ್ದೇ ಇರುತ್ತದೆ. ತನ್ನ ಗ್ರಾಹಕರನ್ನು ಅದ್ಭುತವಾಗಿ ಉಪಚರಿಸುತ್ತದೆ. ಸೇವೆ ನೀಡುವುದರಲ್ಲಿ ಯಾವುದೇ ರಾಜಿಯಿಲ್ಲ.

kstdc badami

ಪ್ರವಾಸಿಗನಿಗೆ ಮನೆಯ ವಾತಾವರಣವನ್ನು ಮಯೂರ ಹೊಟೇಲ್ ನಿರ್ಮಿಸಿಕೊಡುತ್ತದೆ. ಹೊಟೇಲ್ ನ ಪ್ರತಿ ಸಿಬ್ಬಂದಿಯೂ ಆಪ್ತವಾಗಿ ಮಾತಿಗಿಳಿಯುತ್ತಾ ವಾಸ್ತವ್ಯವಿರುವ ಅಷ್ಟು ಗಳಿಗೆಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮಯೂರವೆಂದೆ ಬ್ರಾಂಡ್‌. ಅಂದಹಾಗೆ ನೀವು ಉತ್ತರ ಕರ್ನಟಕದತ್ತ ಪ್ರವಾಸಕ್ಕೆ ಹೊರಟಿದ್ದೀರ? ತಪ್ಪದೇ ಬಾದಾಮಿಗೆ ಭೇಟಿ ನೀಡಿ. ಅಲ್ಲಿ ಅದ್ಭುತವಾದ ಶಾಸನ ಮತ್ತು ಸ್ಮಾರಕಗಳಿವೆ. ಕೆತ್ತಿದ ಶಿಲ್ಪ ಕಲೆಗಳು, ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳು ನಿಮ್ಮ ಪ್ರವಾಸಿ ಮನಸ್ಸನ್ನು ಆಕರ್ಷಿಸುತ್ತದೆ. ಬಾದಾಮಿ ಎಷ್ಟೇ ಆದರೂ ಶಿಲ್ಪಕಲೆಗಳ ನಾಡು. ನಿಮ್ಮದು ಕಲಾವಿದನ ಮನಸ್ಸಾದರೆ ಖಂಡಿತಕ್ಕೂ ಬಾದಾಮಿ ನಿಮಗೆ ಒಲಳೆಯ ಅನುಭವವನ್ನು ಮೊಗೆ ಮೊಗೆದು ನೀಡುತ್ತದೆ. ನೀವು ಬಾದಾಮಿಗೆ ಹೋಗುವುದಾದರೆ ಬಾದಾಮಿಯ ಹೋಟೆಲ್ ಮಯೂರ ಚಾಲುಕ್ಯದಲ್ಲಿ ಉಳಿದುಕೊಳ್ಳಲೇಬೇಕು. ಬಸ್ ಸ್ಟ್ಯಾಂಡ್‌ನಿಂದ ತೀರಾ ಹತ್ತಿರದಲ್ಲಿದೆ. ಮಯೂರದಲ್ಲಿ ಎರಡು ಕೊಠಡಿಗಳಿವೆ. ಒಂದು ಬ್ಲಾಕ್‌ನಲ್ಲಿ 10 ಡಬಲ್ ಬೆಡ್ ರೂಮ್‌ಗಳಿದ್ದು, ಅದರಲ್ಲಿ 6 ಹವಾನಿಯಂತ್ರಿತ ಡಿಲಕ್ಸ್ ಕೊಠಡಿಗಳು ಮತ್ತು 10 ಎಸಿ ಸೆಮಿ ಡಿಲಕ್ಸ್ ಕೊಠಡಿಗಳಿವೆ. ಇನ್ನೊಂದು ಬ್ಲಾಕ್‌ನಲ್ಲಿ 10 ಹವಾನಿಯಂತ್ರಣವಿಲ್ಲದ ಕೊಠಡಿಗಳಿವೆ. ಇನ್ನೊಂದು ಬ್ಲಾಕ್‌ನಲ್ಲಿ 4 ಡಬಲ್ ಬೆಡ್‌ರೂಮ್‌ಗಳು ಮತ್ತು 2 ಮೂರು ಬೆಡ್‌ಗಳ ಕೊಠಡಿಗಳಿವೆ. ಹೋಟೆಲ್ ನಲ್ಲಿ ಚಿಲ್ ಆಗಿ ರಿಲ್ಯಾಕ್ಸ್‌ ಆಗಲು ರೆಸ್ಟೋರೆಂಟ್ ಮತ್ತು ಬಿಯರ್ ಪಾರ್ಲರ್ ಇದೆ. ಉಸ್ಸಪ್ಪಾ ಎಂದು ಹೋಗುವ ನಿಮಗೆ ಮತ್ತೇನು ಬೇಕು?

ಹತ್ತಿರದ ಪ್ರೇಕ್ಷಣೀಯ ಸ್ಥಳಗಳು

ಭೂತನಾಥ ದೇವಾಲಯ

ಅಗಸ್ತ್ಯ ಸರೋವರ

ಬನಶಂಕರಿ ದೇವಸ್ಥಾನ

ಬಾದಾಮಿ ಗುಹಾಂತರ ದೇವಾಲಯ

ಸಂಪರ್ಕ:
ಶ್ರೀಮತಿ ಪ್ರೀತಿ ಅಯ್ಯಪ್ಪ
ಮೊ: 8970650024, 08357-220046

ಇಮೇಲ್‌ : badami@karnatakaholidays.net

ಬಾದಾಮಿ- 587 201