ಮೈಸೂರು ಮೃಗಾಲಯ ಟು ಊಟಿ: ಕೆಎಸ್‌ಟಿಡಿಸಿ ರಥ ಬರ್ತಿದೆ ಜಾಗಬಿಡಿ
ಅಪರೂಪ ಮತ್ತು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಕಾಣಲು ಸಿಗುವ ನೀಲ ಕುರಂಜಿ ಹೂವುಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರಿಂದ ಈ ಬೆಟ್ಟ ಪ್ರದೇಶಕ್ಕೆ ನೀಲಗಿರಿ(ಊಟಿ)ಎನ್ನುವ ಹೆಸರು ಬಂದಿದೆ. ಅದರಂತೆ ಈ ನೀಲಗಿರಿ ಪರ್ವತ ಅತಿ ಎತ್ತರದ ಶಿಖರವಾಗಿದ್ದರಿಂದ ಈ ಬೆಟ್ಟಕ್ಕೆ ದೊಡ್ಡಬೆಟ್ಟ ಎನ್ನುವ ಹೆಸರು ಬಂದಿದೆ. ಹಲವು ಸಿನಿಮಾಗಳಲ್ಲಿ ಈ ಪ್ರದೇಶ ಕಾಣಿಸಿಕೊಂಡಿದ್ದು, ಜನಪ್ರಿಯ ಪ್ರವಾಸಿ ತಾಣವಾಗಿದೆ.
ಊರೂರು ಸುತ್ತುವವರು ಕೆಲಸವಿಲ್ಲದವರು ಎನ್ನುವ ಕಾಲ ಇದಲ್ಲ. ಊರು ಸುತ್ತುವುದಕ್ಕೆ ಹೊಸ ವಿಷಯಗಳು ಸೇರಿಕೊಂಡು ಇಂದು ಪ್ರವಾಸವಾಗಿದೆ. ಪ್ರವಾಸ ಒಂದೇ ವ್ಯಕ್ತಿಯನ್ನು ವೈವಿಧ್ಯ ಜನಮನಗಳ ಮಧ್ಯೆ ಬೆರೆಸುತ್ತದೆ. ವಿಶ್ವ ಮಾನವನನ್ನಾಗಿ ಮಾಡುತ್ತದೆ. ದೇಶ, ಭಾಷೆ, ವೈವಿಧ್ಯ ಭಾವಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಲೋಕದ ಭಿನ್ನ ರುಚಿಗಳನ್ನು ಇದರ ಅನುಭವಗಳನ್ನು ಪ್ರವಾಸ ನಿಮಗೆ ನೀಡುತ್ತದೆ. ಎಲ್ಲ ಕಡೆಯೂ ತಿರುಗಾಡಬೇಕು. ತಿನ್ನಲೂಬೇಕು. ಪ್ರವಾಸದ ಪೂರ್ಣ ಅನುಭವ ತಾಣಗಳನ್ನು ಸುತ್ತುವುದರ ಜತೆಗೆ ಅಲ್ಲಿರುವ ಅವಕಾಶಗಳಲ್ಲಿ ಬೆರೆಯುವುದರಲ್ಲೂ ಇದೆ. ಸರಿ ಆಗಲಿ, ನಾನದನ್ನು ತಿಂದು ತಿರುಗಿಯೇ ನೋಡುತ್ತೇನೆ ಬಿಡಿ ಎನ್ನಬೇಡಿ. ಇದಕ್ಕೊಂದು ಅನುಭವಿಗಳ ಯೋಜನೆಯೂ ಬೇಕು. ಎಲ್ಲ ಗೊಂದಲಗಳಿಗೆ ಇದೊಂದಿದೆ ಸುಂದರ ಉತ್ತರ. ಮತ್ತದೇ ಜವಾಬ್ದಾರಿಯುತ ಪ್ರವಾಸ. ಇದರಿಂದಲೇ ಎಲ್ಲೆಡೆಯ ಪ್ರವಾಸದ ಸುಂದರ ಅನುಭವಗಳು ನಿಮಗಾಗಬಹುದು. ನಿಜವಾದ ಪ್ರವಾಸವೆಂದರೆ ಕಂಡು, ಕೇಳಿ, ಅನುಭವಿಸಿ ಅಲ್ಲಿನ ಸರ್ವವನ್ನು ಅರಿಯುವುದು. ಅದರಂತೆ ಸ್ಥಳವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು, ಅಲ್ಲಿಗೆ ಭೇಟಿ ನೀಡುವುದರಿಂದ ಅನುಭವದ ನೆಲೆಯಲ್ಲಿ ಅರಿವಿಗೆ ತಂದುಕೊಳ್ಳಬಹುದು. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತ ನಿಮ್ಮನ್ನು ಸುತ್ತಿಸಿ, ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನ ಗೆದ್ದಿದೆ.
ಇದು ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವಿಶಿಷ್ಟ ಪ್ರಯತ್ನ. ರಾಜ್ಯದಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಕೆಎಸ್‌ಟಿಡಿಸಿ ನಿಮ್ಮ ಕೈಹಿಡಿದು ನಡೆಸುತ್ತದೆ. ಮತ್ತೆ ಕಾಯುವುದೇಕೆ, ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ತೋರಿಸದ ತಾಣವಿಲ್ಲ. ಪ್ರವಾಸಿ ತಾಣಗಳ ನೈಜ ಸ್ಥಳೀಯತೆಯ ಸ್ವಾದವನ್ನು ತನ್ನ ಜತೆಗೆ ಪ್ರವಾಸಕ್ಕೆ ಬರುವ ಪಯಣಿಗನಿಗೆ ನೀಡಬೇಕು ಎನ್ನುವ ತವಕ ಅದರದ್ದು.
ಹಾಗಾಗಿಯೇ, ವಿಶ್ವ ಪ್ರಸಿದ್ಧ ಮೈಸೂರಿನಿಂದ ಊಟಿಗೆ ಪಯಣಿಗರನ್ನು ಹೊತ್ತು ಸಾಗಲು, ನೂತನ ಪ್ರವಾಸ ಪ್ಯಾಕೇಜ್ ಹೊರ ತಂದಿದೆ. ಇದು ಮೂರು ದಿನಗಳ ಟೂರು. ಈ ಪ್ರವಾಸ ಪ್ಯಾಕೇಜ್ ಬೇರೆಲ್ಲೆಡೆಗಿಂತ ಕಡಿಮೆ ಖರ್ಚು ಅನುಭವ ಹೆಚ್ಚು ನೀಡುವ ಬಜೆಟ್ ಸ್ನೇಹಿ ಪ್ಯಾಕೇಜ್ ಆಗಿದೆ. ಇಲ್ಲಿ ಧಾರ್ಮಿಕ ಪ್ರವಾಸ, ಪ್ರಕೃತಿ ಪ್ರವಾಸ, ಚಾರಣಗಳಿವೆ. ಇದೊಂದು ಸುಂದರ ಅವಕಾಶ. ಪ್ರವಾಸ ಸಂಗಾತಿಯಾಗಿ ಕೆಎಸ್‌ಟಿಡಿಸಿ ನಿಮಗಾಗಿ ಕಾಯುತ್ತಿದೆ. ದೇಶ, ವಿದೇಶ ನೋಡದಿದ್ದರೂ ಪರವಾಗಿಲ್ಲ ನಮ್ಮದೇ ರಾಜ್ಯವನ್ನಾದರೂ ನೋಡದಿದ್ದರೆ ಹೇಗೆ. ಜಂಜಾಟಗಳನ್ನೆಲ್ಲ ಬದಿಗಿಟ್ಟು ಇದೋ ಬಂದೆ ಎಂದು ಹೊರಡಿ.

ಬ್ಯೂಟಿಗೆ ಊಟಿ, ಚಾರಣಕ್ಕೆ ದೊಡ್ಡಬೆಟ್ಟ
ಅಪರೂಪ ಮತ್ತು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಕಾಣಲು ಸಿಗುವ ನೀಲ ಕುರಂಜಿ ಹೂವುಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರಿಂದ ಈ ಬೆಟ್ಟ ಪ್ರದೇಶಕ್ಕೆ ನೀಲಗಿರಿ(ಊಟಿ)ಎನ್ನುವ ಹೆಸರು ಬಂದಿದೆ. ಅದರಂತೆ ಈ ನೀಲಗಿರಿ ಪರ್ವತ ಅತಿ ಎತ್ತರದ ಶಿಖರವಾಗಿದ್ದರಿಂದ ಈ ಬೆಟ್ಟಕ್ಕೆ ದೊಡ್ಡಬೆಟ್ಟ ಎನ್ನುವ ಹೆಸರು ಬಂದಿದೆ. ಹಲವು ಸಿನಿಮಾಗಳಲ್ಲಿ ಈ ಪ್ರದೇಶ ಕಾಣಿಸಿಕೊಂಡಿದ್ದು, ಜನಪ್ರಿಯ ಪ್ರವಾಸಿ ತಾಣವಾಗಿದೆ. ನಾವಿದನ್ನು ಯಾಕೆ ಹೇಳಿದೆವೆಂದರೆ ಇಲ್ಲಿ ಪ್ರವಾಸ ಬರುವವರಲ್ಲಿ ನವವಿವಾಹಿತರೇ ಹೆಚ್ಚು. ಹಿಮಪಾತವೂ ಆಗುತ್ತದೆ.

ಮೈಸೂರು ಮೃಗಾಲಯ
ಈ ಪ್ರವಾಸದಲ್ಲಿ ನಿಮಗೆ ಮೃಗ-ಖಗಗಳನ್ನು ನೋಡುವುದೂ ಒಂದು ಪರಿಪೂರ್ಣತೆಯನ್ನು ನೀಡುತ್ತದೆ. ಈ ಪರಿಪೂರ್ಣತೆಗೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಉತ್ತಮ ಆಯ್ಕೆ ಎಂದರೆ ತಪ್ಪಾಗದು, ಇದನ್ನು 1892ರಲ್ಲಿ ಮೈಸೂರಿನ ಅಂದಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಬಹದ್ದೂರ್ ಅವರು ಸ್ಥಾಪಿಸಿದರು. ಮೊದಲಿಗೆ ಅರಮನೆಯ ಒಡೆತನದ ಖಾಸಗಿ ಮೃಗಾಲಯವಾಗಿದ್ದ ಇದು, 1902ರಲ್ಲಿ ಸಾರ್ವಜನಿಕರ ಭೇಟಿಗೂ ಅವಕಾಶ ಕಲ್ಪಿಸಲಾಯಿತು. ಹುಲಿ, ಸಿಂಹ, ಚಿರತೆಗಳಂಥ ಮಾಂಸಾಹಾರಿ, ದಡೂತಿ ದೇಹದ ಆನೆ, ಘೇಂಡಾಮೃಗ, ನೀರಾನೆಗಳು, ಎತ್ತರದ ಜಿರಾಫೆ ಅದಕ್ಕಿಂತಲೂ ಎತ್ತರದಲ್ಲಿ ಹಾರುವ ಅದೆಷ್ಟೋ ವೈವಿಧ್ಯ ಪಕ್ಷಿಗಳನ್ನು ನೀವು ಇಲ್ಲಿ ನೋಡಬಹುದು. ಎಷ್ಟು ಸುತ್ತಿದರೂ ಎಲ್ಲವನ್ನೂ ನೋಡಿಬರಲು ಒಂದು ದಿನದ ಭೇಟಿಯಲ್ಲಿ ಆಗುವುದಿಲ್ಲ. ಬಿಡುವು ಮಾಡಿಕೊಂಡು ಮತ್ತೊಮ್ಮೆ ಯಾವಾಗಲಾದರೂ ಬನ್ನಿ.
ದಿನ : 1
ಬೆಳಗ್ಗೆ 6:30 - ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಹೊರಡುವುದು
ಬೆಳಗ್ಗೆ 8:30 – 9:00 ಮಾರ್ಗಮಧ್ಯೆ ಉಪಾಹಾರ
ಬೆಳಗ್ಗೆ 10:00 - 11:30 ಶ್ರೀರಂಗಪಟ್ಟಣದ ಕೋಟೆ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಬೇಸಿಗೆ ಅರಮನೆಗೆ ಭೇಟಿ
ಬೆಳಗ್ಗೆ 12:00 - ಮಧ್ಯಾಹ್ನ 12:20 ಮೈಸೂರಿನ ಸಂತ ಫಿಲೋಮಿನ್ಸ್ ಚರ್ಚ್‌ಗೆ ಭೇಟಿ
ಮಧ್ಯಾಹ್ನ 1:00 – 1:30 ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ
ಮಧ್ಯಾಹ್ನ 2:15 – 3:00 ಮೈಸೂರಿನ ಮಯೂರ ಹೊಯ್ಸಳ ಹೊಟೇಲ್‌ನಲ್ಲಿ ಊಟ
ಮಧ್ಯಾಹ್ನ 3:15 – 4:15 ಮೈಸೂರು ಅರಮನೆಗೆ ಭೇಟಿ
ಸಂಜೆ 5:15 - ರಾತ್ರಿ 8:00 ಬೃಂದಾವನ ಗಾರ್ಡನ್‌ಗೆ ಭೇಟಿ ಮತ್ತು ಹೊಟೇಲ್ ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿ ವಾಸ್ತವ್ಯ
ದಿನ : 2
ಬೆಳಗ್ಗೆ 6:00 ಹೊಟೇಲ್ ಮಯೂರ ಕಾವೇರಿಯಿಂದ ಹೊರಡುವುದು
ಬೆಳಗ್ಗೆ 7:00 - 7:30 ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ
ಬೆಳಗ್ಗೆ 8:30 ಗುಂಡ್ಲುಪೇಟೆಯಲ್ಲಿ ಉಪಾಹಾರ
ಬೆಳಗ್ಗೆ 9:00 - ಮಧ್ಯಾಹ್ನ 12:30 ಬಂಡೀಪುರ ಮತ್ತು ಮುದುಮಲೈ ಅರಣ್ಯದ ಮೂಲಕ ಊಟಿ ಸರೋವರಕ್ಕೆ ಹೊರಡುವುದು
ಮಧ್ಯಾಹ್ನ 12:30 – 1:50 ಊಟಿ ಸರೋವರಕ್ಕೆ ಭೇಟಿ
ಮಧ್ಯಾಹ್ನ 1:50 – 2:30 ಊಟಿಯ ಹೊಟೇಲ್‌ನಲ್ಲಿ ಊಟ
ಮಧ್ಯಾಹ್ನ 3:15 – 4:00 ದೊಡ್ಡಬೆಟ್ಟ ಶಿಖರ ವೀಕ್ಷಣಾ ಕೇಂದ್ರಕ್ಕೆ ಭೇಟಿ
ಸಂಜೆ 4:30 – 6:30 ಬೊಟಾನಿಕಲ್ ಗಾರ್ಡನ್‌ಗೆ ಭೇಟಿ
ಸಂಜೆ 7:00 ಊಟಿಯಲ್ಲಿರುವ ಹೊಟೇಲ್‌ನಲ್ಲಿ ವಸತಿ
ದಿನ : 3
ಬೆಳಗ್ಗೆ 8:00 ಹೊಟೇಲ್‌ನಿಂದ ಹೊರಡುವುದು (ಉಪಾಹಾರದ ನಂತರ)
ಬೆಳಗ್ಗೆ 8:40 – 10:00 ಫಿಲ್ಮ್ ಶೂಟಿಂಗ್ ಪಾಯಿಂಟ್, ಪೈನ್ ಟ್ರೀ ಫಾರೆಸ್ಟ್ ಮತ್ತು 7ನೇ ಮೈಲಿ ಬೆಟ್ಟದ ನೋಟ
ಮಧ್ಯಾಹ್ನ 1:30 – 2:15 ಗುಂಡ್ಲುಪೇಟೆ, ಮಧ್ಯಾಹ್ನ ಊಟ
ಮಧ್ಯಾಹ್ನ 3:30 – 5:00 ಮೈಸೂರಿನಲ್ಲಿ ಮೃಗಾಲಯ ಭೇಟಿ
ಸಂಜೆ 6:30 ದಾರಿಯಲ್ಲಿ ಚಹಾ ವಿರಾಮ
ರಾತ್ರಿ 9:00 ಬೆಂಗಳೂರಿನ ಕೆಎಸ್‌ಟಿಡಿಸಿ ಪ್ರಧಾನ ಕಚೇರಿಯಲ್ಲಿ ಪ್ರವಾಸ ಮುಕ್ತಾಯ.
ಪ್ಯಾಕೇಜ್
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿ ಆತಿಥ್ಯ
ಮಯೂರ ಹೊಟೇಲ್, ಇದು ಜಗತ್ತಿನ ಮೂಲೆ ಮೂಲೆಗಳಿಂದಲೂ ರಾಜ್ಯಕ್ಕೆ ಪ್ರವಾಸ ಬರುವ ಜನರ ಆಯ್ಕೆಯಾಗಿರುತ್ತದೆ. ಮಯೂರದ ಊಟ, ಉಪಚಾರ, ವಾಸ್ತವ್ಯ ಎಲ್ಲವೂ ಈಗಾಗಲೇ ಜನಮನ ಗೆದ್ದಿದೆ. ಇಲ್ಲಿಂದ ಮರಳುವಾಗ ಇಲ್ಲಿ ಆದ ಅನುಭವ, ಅಚ್ಚಳಿಯದ ನೆನಪುಗಳ ಗಂಟು ನಿಮ್ಮ ಹೆಗಲೇರಿರುತ್ತದೆ. ಅದು ಮಯೂರ ತನ್ನ ಅತಿಥಿಗೆ ನೀಡುವ ಉಡುಗೊರೆ. ಅಷ್ಟು ಚೆನ್ನಾಗಿ ಪ್ರವಾಸಿಗನ್ನು ಉಪಚರಿಸಿ ನೋಡಿಕೊಳ್ಳುವ ಇದು ಹೊಟೇಲ್ ಇಂಡಸ್ಟ್ರಿಯ ಬ್ರಾಂಡ್. ವರ್ಷಗಳಿಂದ ಅನೇಕ ಪ್ರವಾಸಿ ತಾಣಗಳಲ್ಲಿ ದೇಶಿ, ಪ್ರದೇಶಿ, ಪರದೇಶಿ ಪಯಣಿಗರನ್ನು ಈಗಾಗಲೇ ಉಪಚರಿಸಿರುವ ಅನುಭವಿ ಹೊಟೇಲ್ ಮಯೂರ. ತನ್ನ ಇಷ್ಟು ವರ್ಷಗಳ ಅನುಭವದಿಂದಲೇ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ಹೊಟೇಲ್ ಮಯೂರ ಪ್ರಸಿದ್ಧಿಗಳಿಸಿದೆ. ನಿಮ್ಮ ಪ್ರವಾಸದಲ್ಲಿ ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಿದ್ದರೆ, ಇದೇ ಪ್ಯಾಕೇಜ್‌ನಡಿ ಪ್ರವಾಸ ಹೊರಡುವ ಎಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ನೀಡುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಇದು ಗುಣಮಟ್ಟ ಮತ್ತು ಆತ್ಮೀಯವಾದ ಆತಿಥ್ಯದ ಹೆಗ್ಗುರುತು. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಅಲ್ಲಿನ ಸಿಬ್ಬಂದಿಯೂ ನಿಮ್ಮನ್ನು ಆತ್ಮೀಯವಾಗಿ ಉಪಚರಿಸುತ್ತಾರೆ.
ಇವುಗಳ ಜತೆಗೆ ʻಕನ್ನಡ ನಾಡಿನ ಜೀವನದಿ ಈ ಕಾವೇರಿʼ ಎಂದು ಕಾವೇರಿ ತಟದಲ್ಲೇ ಹಾಡುವ ಬಯಕೆ ನಿಮ್ಮದಾಗಿದ್ದರೆ, ದಿನವೆಲ್ಲ ಅಲ್ಲೇ ಕಳೆಯುವ, ಸುತ್ತಿ ಸುತ್ತಿ ಮಸ್ತ್ ಆಗುವ ಆಸೆಯೂ ನಿಮ್ಮಲ್ಲಿದ್ದರೆ, ಹೊಟೇಲ್ ಮಯೂರ ಕಾವೇರಿ ನಿಮ್ಮ ಆಯ್ಕೆಯಾಗಲಿ. ಇದು ಕೆಆರ್‌ಎಸ್ ಬದಿಯಲ್ಲೇ ನಿಮಗೆ ಸೂರು ನೀಡುತ್ತದೆ. ಬೃಂದಾವನ ಗಾರ್ಡನ್‌ನಲ್ಲೂ ನೀವು ಅಡ್ಡಾಡಬಹುದು. ಮುದ ನೀಡುವ ಚಳಿ, ಹಿತ ನೀಡುವ ಬನ, ಶಾಂತ ವಾತಾವರಣ, ಜಿಗಿದಾಡುವ ವಾಟರ್ ಫೌಂಟೇನ್ ಎವೆಲ್ಲವನ್ನು ಹೊಂದಿರುವ ಸುಂದರ ಉದ್ಯಾನವಿದು.
ಈ ಹೊಟೇಲ್ ಮಯೂರ ಕಾವೇರಿಯಲ್ಲಿ ಒಟ್ಟು 20ರೂಮ್‌ಗಳಿದ್ದು, ಅವುಗಳಲ್ಲಿ 5 ಹವಾನಿಯಂತ್ರಿತ ಡಬಲ್ ಬೆಡ್ ರೂಮ್‌ಗಳು, 15 ಸ್ಟಾಂಡರ್ಡ್ ಡಬಲ್ ಬೆಡ್‌ರೂಮ್‌ಗಳಿವೆ. ಬಾರ್ ಕೂಡ ಇದ್ದು, ಒಂದು ಪೆಗ್ಗಿನ ಕಥೆಯಿದು ಎಂದು ಗೆಳೆಯರೊಂದಿಗೆ ಹೇಳಲು ಒಂದು ಕಥೆ ಹುಟ್ಟಿಕೊಳ್ಳಬಹುದು. ಮನೆಯಲ್ಲಿ ಅದೆಷ್ಟೂ ಅಂತ ಕುಳಿತೇ ಇರುತ್ತೀರಿ? ಅಲ್ಲಿ ಇಲ್ಲಿ ಎಂದು ಸುತ್ತುತ್ತಿರಬೇಕು. ಹೊಸ ಊರು ಹೊಸ ಟೂರು ಎರಡೂ ಜೀವನದಲ್ಲಿ ಬಹುಮುಖ್ಯವಾಗುತ್ತವೆ. ಹೀಗೆ ತಿರುಗುವಾಗ ವಾಸ್ತವ್ಯಕ್ಕೆ ಇಲ್ಲಿಗೆ ಬಂದರೆ ಸ್ಥಳೀಯ ಸೇರಿ ಭಾರತೀಯ ವಿವಿಧ ಖಾದ್ಯಗಳನ್ನು ಸವಿಯಬಹುದು. ಕಸ್ಟಮೈಸ್ಡ್ ಲೋಕಲ್ ಟೂರ್‌ಗೆ ಮಾರ್ಗದರ್ಶಿಗಳನ್ನು ಮಯೂರ ನಿಮಗೆ ನೀಡುತ್ತದೆ. ಮನೆಯ ವಾತಾವರಣ ಹೊಟೇಲ್ ಮಯೂರ ಕಾವೇರಿಯಲ್ಲೂ ಸಿಗುತ್ತದೆ. ಆದರೆ ಇಲ್ಲಿನ ವಾತಾವರಣ ಮನೆಯಲ್ಲಿ ಅದರಲ್ಲೂ ಸಂಸಾರಿ ಮನೆಯಲ್ಲಿ ಸಿಗುವುದು ಕಷ್ಟ. ಹೊಸತನ ಹುಡುಕಾಡುವವರಿಗೆ ಇದಂತೂ ಹೇಳಿ ಮಾಡಿಸಿದ ವಾಸ್ತವ್ಯವಾಗುವುದು ಖಂಡಿತ.
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org