ಬಟ್ಟೆ ತೊಟ್ಟರೆ ಇಲ್ಲಿ ನೋ ಎಂಟ್ರಿ
ಸಾಮಾನ್ಯರಂತೆ ಈ ಗ್ರಾಮದ ಜನರೂ ಕ್ಲಬ್, ಪಬ್, ಈಜುಕೊಳಗಳನ್ನು ಬಳಸುತ್ತಾರೆ. ಆದರೆ ಬಟ್ಟೆ ಮಾತ್ರ ಖರೀದಿಸುವುದಿಲ್ಲ ಮತ್ತು ಧರಿಸುವುದಿಲ್ಲ. ತಮ್ಮ ಹಳ್ಳಿಯನ್ನು ಬಿಟ್ಟು ಪಟ್ಟಣಗಳಿಗೆ ಹೋಗುವಾಗ ಬಟ್ಟೆ ಧರಿಸುತ್ತಾರೆ. ಮರಳಿದ ನಂತರ ಮತ್ತದೆ ನಗ್ನತೆ.
- ಸಂತೋಷ್‌ರಾವ್ ಪೆರ್ಮುಡ
ಬಟ್ಟೆಗಳನ್ನು ತೊಡುವ ಸಂಸ್ಕೃತಿ ಬಹು ಪುರಾತನವಾಗಿ ನಮಗೆ ಬಂದುದು. ಮರದ ತೊಗಟೆ, ಪ್ರಾಣಿಗಳ ಚರ್ಮ ಮತ್ತು ಎಲೆಗಳೇ ಮನುಷ್ಯನ ಮೊದಲ ಉಡುಗೆಗಳಾಗಿದ್ದವು. ನಾಗರಿಕತೆಗಳು ಬೆಳೆದಂತೆ ಮನುಷ್ಯನ ಸಭ್ಯತೆಯಾಗಿದ್ದ ಬಟ್ಟೆಗಳು ಆಡಂಬರ ಮತ್ತು ಸೌದರ್ಯವನ್ನು ತೋರ್ಪಡಿಸುವ ವಸ್ತುಗಳಾಗಿವೆ.
ಆದರೆ ಬ್ರಿಟನ್‌ನ ಒಂದು ರಹಸ್ಯ ಗ್ರಾಮದಲ್ಲಿ ಜನರು ಸಾಕಷ್ಟು ಹಣ ಮತ್ತು ಐಷಾರಾಮಿ ಜೀವನಶೈಲಿ ಇದ್ದರೂ ಹಲವಾರು ವರ್ಷಗಳಿಂದ ಬಟ್ಟೆಯನ್ನೇ ಧರಿಸದೇ ಬದುಕುತ್ತಿದ್ದಾರೆ. ಯುರೋಪಿಯನ್ನರು ಮೊದಲು ನಾಗರೀಕರಾದರು, ನಂತರ ಅವರನ್ನು ನೋಡಿ ಜಗತ್ತು ನಾಗರೀಕವಾಯಿತು ಎಂದು ಇತಿಹಾಸ ಹೇಳುತ್ತದೆ. ಆದರೆ ಯುರೋಪಿನ ಈ ಒಂದು ಗ್ರಾಮದ ಜನರು ಆಫ್ರಿಕಾದ ಕೆಲವು ಬುಡಕಟ್ಟು ಜನರಂತೆ ಬೆತ್ತಲೆಯಾಗಿ ವಾಸಿಸುತ್ತಾರೆ. ಬ್ರಿಟನ್ ಹರ್ಟ್ ಫೋರ್ಡ್ ಶೈರ್ ಕೌಂಟಿಯ ಸ್ಪೀಲ್‌ಪ್ಲಾಟ್ಜ್ ಗ್ರಾಮದ ಜನರು ವರ್ಷಪೂರ್ತಿ ಬಟ್ಟೆ ಧರಿಸದೆಯೇ ನಗ್ನರಾಗಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ತೊಂಬತ್ತು ವರ್ಷಗಳಿಂದ ಈ ವಿಚಿತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಈ ಹಳ್ಳಿಯ ಜನರು ಜರಾವಾ, ಹಿಂಬಾ ಮತ್ತು ಸೆಂಟಿನೆಲ್ ಎನ್ನುವ ಬುಡಕಟ್ಟು ಜನರು. ಇದು ಈ ಊರಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ನಮ್ಮ ದೇಶದಲ್ಲಿ ವರ್ಷಕ್ಕೆ 5 ದಿನ ಮಹಿಳೆಯರು ಬಟ್ಟೆ ಧರಿಸದ ಗ್ರಾಮವೊಂದಿದೆ. ಅದು ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮ. ಈ ಪದ್ಧತಿಯನ್ನು ಶ್ರಾವಣ ಮಾಸದಲ್ಲಿ ಅನುಸರಿಸುತ್ತಾರೆ. ಈ ಅವಧಿಯಲ್ಲಿ ಮಹಿಳೆಯರು ಪುರುಷರ ಮುಂದೆ ಬರುವುದಿಲ್ಲ, ಮನೆಗೆ ಬೀಗ ಹಾಕುವುದಿಲ್ಲ ಮತ್ತು ಯಾರನ್ನು ನೋಡಿಯೂ ಮುಗುಳ್ನಗೆ ಬೀರುವುದಿಲ್ಲ.
ಇಲ್ಲಿ ಶ್ರೀಮಂತ-ಬಡವ, ಗಂಡು-ಹೆಣ್ಣು, ಮೇಲ್ಜಾತಿ-ಕೆಳಜಾತಿ ಎನ್ನುವ ಭೇದವಿಲ್ಲದೇ ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ನಗ್ನರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಜನರು ಉತ್ತಮ ಜ್ಞಾನಿಗಳು ಮತ್ತು ಸಿರಿವಂತರು ಆಗಿದ್ದು, ಸಾಮಾನ್ಯರಂತೆ ಈ ಗ್ರಾಮದ ಜನರೂ ಕ್ಲಬ್, ಪಬ್, ಈಜುಕೊಳಗಳನ್ನು ಬಳಸುತ್ತಾರೆ. ಆದರೆ ಬಟ್ಟೆ ಮಾತ್ರ ಖರೀದಿಸುವುದಿಲ್ಲ ಮತ್ತು ಧರಿಸುವುದಿಲ್ಲ. ತಮ್ಮ ಹಳ್ಳಿಯನ್ನು ಬಿಟ್ಟು ಪಟ್ಟಣಗಳಿಗೆ ಹೋಗುವಾಗ ಬಟ್ಟೆ ಧರಿಸುತ್ತಾರೆ. ಮರಳಿದ ನಂತರ ಮತ್ತದೆ ನಗ್ನತೆ.
ಬಂಧನಗಳಿಂದ ಮುಕ್ತವಾಗಿ ಹಾಯಾಗಿ ಬದುಕಲು ಈ ರೀತಿ ಮಾಡುತ್ತಿದ್ದಾರೆ. ಈ ಹಳ್ಳಿಯ ಜನರು ಪರಸ್ಪರ ಒಬ್ಬರಿಗೊಬ್ಬರು ಬೆರೆಯುತ್ತಾರೆ. ಪ್ರಾರಂಭಿಕ ದಿನಗಳಲ್ಲಿ ಈ ಹಳ್ಳಿಗರ ವಿಚಿತ್ರ ಪದ್ಧತಿಯ ಅನುಸರಣೆ ಮತ್ತು ಸಂಪ್ರದಾಯವನ್ನು ಕೆಲವು ಸಾಮಾಜಿಕ ಸಂಘಟನೆಗಳು ವಿರೋಧ ಮಾಡುತ್ತಿದ್ದವು. ಆದರೆ ಈಗ ಆ ಯಾವ ವಿರೋಧಗಳು ಇಲ್ಲಿಲ್ಲ. ತೀರಾ ಚಳಿಯಲ್ಲಿ ಬಟ್ಟೆಯನ್ನು ಧರಿಸಬಹುದು. ಯಾವುದಕ್ಕೂ ಇಲ್ಲಿ ಅಡೆತಡೆಗಳಿಲ್ಲ. ಅದು ಅವರವರ ಇಚ್ಛೆ. ಭೇಟಿಗೆಂದು ಹೋದ ಪ್ರವಾಸಿಗರು ಅಲ್ಲಿಯೇ ತಂಗಬೇಕಾದಲ್ಲಿ ಅವರೂ ನಗ್ನರಾಗಿಯೇ ಇರಬೇಕು ಎನ್ನುವ ನಿಯಮವಿದೆ.
ಬ್ರಿಟನ್‌ನ ಇತರ ಭಾಗಗಳಂತೆ ಇದೂ ಮುಂದುವರಿದಿದೆ. ಇಲ್ಲಿನ ಪ್ರತಿಯೊಂದು ಮನೆಗಳು ಎರಡು ಬೆಡ್ ರೂಂ ಮನೆಗಳಾಗಿದ್ದು, ಇದರ ಬೆಲೆ ಕನಿಷ್ಟ 85,000 ಯುರೋಪಿಯನ್ ಪೌಂಡ್‌ಗಿಂತಲೂ ಹೆಚ್ಚಿದೆ ಎಂದು ದಿ ಮಿರರ್ ಉಲ್ಲೇಖಿಸಿದೆ. ಇಲ್ಲಿನ ಮನೆಗಳು ಒಂದಕ್ಕಿಂತ ಒಂದು ಭವ್ಯ ಮತ್ತು ಐಷಾರಾಮಿಯಾಗಿವೆ. ಈ ಗ್ರಾಮದಲ್ಲಿ ಬಾರ್ ಕೂಡ ಇದೆ. ಸ್ಪೀಲ್‌ಪ್ಲಾಟ್ಜ್ ಗ್ರಾಮವು ಸದಾ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಹೊರ ಪ್ರದೇಶದ ಜನರು ಇಲ್ಲಿಗೆ ಬಂದು ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನೂ ಮಾಡಿದ್ದಾರೆ. ಈ ಗ್ರಾಮದ ಹೆಸರಾದ ಸ್ಪೀಲ್‌ಪ್ಲಾಟ್ಜ್ ಇದರ ಅರ್ಥ ‘ಆಟದ ಮೈದಾನ’.

ಜಗತ್ತಿನ ವಿವಿಧ ದೇಶಗಳ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಪೋಸ್ಟ್ ಮ್ಯಾನ್‌ಗಳು, ಡೆಲಿವರಿ ಬಾಯ್‌ಗಳೂ ಇಲ್ಲಿಗೆ ಬರುತ್ತಾರೆ. ಈ ಗ್ರಾಮವು ಬ್ರಿಟನ್‌ನ ಅತ್ಯಂತ ಹಳೆಯ ವಸಾಹತು. ಇಲ್ಲಿ ಎಲ್ಲರೂ ಸಾಮಾನ್ಯರಂತೆ ಜೀವನವನ್ನು ನಡೆಸುತ್ತಾರೆ, ಈ ಹಳ್ಳಿಗೆ ಪ್ರತಿದಿನ ಹಾಲಿನವನು ಹಾಲು ಹಾಕುತ್ತಾನೆ, ಮತ್ತು ಪೇಪರ್ ಬಾಯ್ ಪೇಪರ್ ಹಾಕುತ್ತಾನೆ. ಅಂಚೆಯವನು ಮತ್ತು ವ್ಯಾಪಾರಿಗಳು ಈ ಹಳ್ಳಿಯ ಬಗ್ಗೆ ತಿಳಿದಿದ್ದು, ಇಲ್ಲಿ ವ್ಯವಹಾರವನ್ನು ಮಾಡುತ್ತಾರೆ ಅಲ್ಲದೇ ಇಲ್ಲಿನ ಪದ್ಧತಿಯನ್ನು ಕಂಡು ವಿಚಲಿತರಾಗುವುದಿಲ್ಲ. 1929ರಲ್ಲಿ 500 ಪೌಂಡ್‌ಗೆ 12 ಎಕರೆ ನಿವೇಶನವನ್ನು ಖರೀದಿಸಿದ್ದ ಚಾರ್ಲ್ಸ್ ಮಕಾಸ್ಕಿ ಈ ಗ್ರಾಮವನ್ನು ಸ್ಥಾಪಿಸಿದರು. ಇಲ್ಲಿ ಸುಮಾರು 34 ಮಂದಿ ಮಾಲೀಕರ ಸ್ಮಾರ್ಟ್ ಬಂಗಲೆಗಳಿದ್ದು, ಬೇಸಿಗೆಯಲ್ಲಿ ಇಲ್ಲಿಗೆ ಆಗಮಿಸುವ ಸಂದರ್ಶಕರಿಗೆ 24 ಬಾಡಿಗೆ ಮನೆಗಳೂ ಇವೆ. ಇಲ್ಲಿನ ಮನೆಗಳು ಎರಡು ಬೆಡ್ ರೂಂ ಮನೆಗಳಾಗಿದ್ದು, ವಿದ್ಯುತ್ ಸಂಪರ್ಕ, ನೀರು ಮತ್ತು ಒಳಚರಂಡಿ ಮುಂತಾದ ವ್ಯವಸ್ಥೆಗಳಿವೆ. ಹಳ್ಳಿಯ ಮುಖ್ಯಭಾಗದಲ್ಲಿ ಕ್ಲಬ್ ಹೌಸ್ ಇದ್ದು, ಇಲ್ಲಿ ಇಲ್ಲಿನ ನಿವಾಸಿಗಳು ಡಿಸ್ಕೋ, ಕ್ಯಾರಿಯೋಕೆ ಸೆಷನ್‌ಗಳು, ರಸಪ್ರಶ್ನೆ ಮತ್ತು ಪೂಲ್ ಪಂದ್ಯಗಳಿಗೆ ಸೇರುತ್ತಾರೆ. ಇಲ್ಲಿನ ರಸ್ತೆಗಳು ಸಾಲು ಮರಗಳಿಂದ ಕೂಡಿವೆ.
ಇಲ್ಲಿ ಮನೆಗಳನ್ನು ಖರೀದಿಸಲು ಇತರರಿಗೂ ಅವಕಾಶವಿದ್ದು, ಜೀವನ ಮಾಡಬೇಕೆಂದರೆ ಎಲ್ಲರೂ ನಗ್ನರಾಗಿಯೇ ಇರಬೇಕು ಎನ್ನುವ ನಿಯಮವಿದೆ. ಇದು ಅಚ್ಚರಿ ಮತ್ತು ಕುತೂಹಲದ ವಿಚಾರ.