ಕೊರೋನಾ ಕಾಲ ಅದೆಷ್ಟೋ ಮಂದಿಯ ಜೀವವನ್ನೇ ಬಲಿತೆಗೆದುಕೊಂಡಿದೆ. ಮತ್ತದೆಷ್ಟೋ ಜನರ ಜೀವನದ ದಾರಿಯನ್ನೇ ಕಸಿದುಕೊಂಡಿದೆ. ಆದರೆ ಇನ್ನೊಂದಷ್ಟು ಮಂದಿಯ ಬದುಕಿಗೆ ಹೊಸ ದಾರಿಯನ್ನೇ ತೋರಿಸಿದೆ, ಬೆಳಕನ್ನು ನೀಡಿದೆ. ಅಂಥವರ ಪೈಕಿ ಬೆಂಗಳೂರಿಗರೇ ಆಗಿರುವ ಸುನಿಲ್‌ ಹಾಗೂ ಸುಷ್ಮಾ ಅವರ ಈ ಸಾಹಸ ಯಾನದ ಬಗ್ಗೆ ತಿಳಿಯಲೇ ಬೇಕು.

ಚಿಕ್ಕಂದಿನಿಂದಲೂ ಸುತ್ತಾಡಬೇಕೆಂಬ ಮಹದಾಸೆ. ಆದರೆ ವಿದ್ಯಾಭ್ಯಾಸದ ನಂತರ ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಸಿಕ್ಕಿ ಇವೆಲ್ಲದಕ್ಕೂ ಕಡಿವಾಣ ಹಾಕಿದಂತಾಗಿತ್ತು. ವರ್ಷಗಳ ಕಾಲ ಪ್ರೀತಿಸಿ ಆಯ್ಕೆ ಮಾಡಿಕೊಂಡ ಜೀವನ ಸಂಗಾತಿ ಸುನಿಲ್‌, ಯುಪಿಎಸ್‌ಸಿ ಪರೀಕ್ಷೆಗಾಗಿ ಸಿದ್ಧರಾಗ್ತಿದ್ದ ವೇಳೆಯದು. ಆದರೆ ಕೊರೋನಾ ಇವರಿಬ್ಬರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಸಮಾಜದೊಂದಿಗೆ ಬೆರೆಯುವುದಕ್ಕಾಗದೇ, ಮನೆಯಲ್ಲೇ ಬಂಧಿಯಾದಾಗ ಪ್ರಾರಂಭವಾದ ಚಾರಣ, ಬೆಟ್ಟದ ಮೇಲೇರಿ ಬ್ರೇಕ್‌ ಫಾಸ್ಟ್‌ ಮಾಡುವ ಅಭ್ಯಾಸ ಕೆಲವೇ ತಿಂಗಳುಗಳಲ್ಲಿ ಜೀವನ ನಡೆಸಲಿರುವ ಉದ್ಯಮವಾಗಿ ರೂಪುಗೊಂಡಿತು.

2019ರ ಜುಲೈ ತಿಂಗಳಿನಲ್ಲಿ ಸುನಿಲ್‌ ಹಾಗೂ ಸುಷ್ಮಾ ಚಿಕ್ಕದಾಗಿ ಪ್ರಾರಂಭಿಸಿದ್ದ ಸು-ಯಾನ ಎಂಬ ಪ್ರಯಾಣ ಸಂಸ್ಥೆ ಜೀವ ಪಡೆದುಕೊಂಡಿದ್ದೇ ಕೊರೋನಾ ಸಂದರ್ಭದಲ್ಲಿ. ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರಲು ಬಯಸುತ್ತಿದ್ದ ಮಂದಿ, ಸು-ಯಾನ ಮೊರೆ ಹೊಗುವುದಕ್ಕೆ ಪ್ರಾರಂಭಿಸಿದ್ದರು. ವಾರಾಂತ್ಯವನ್ನು ಬರಿಯ ಪಬ್‌, ಪಾರ್ಟಿ, ಚಾಟ್‌ ಸ್ಟ್ರೀಟ್‌, ಶಾಪಿಂಗ್‌ ಎಂದು ಕಳೆಯುವ ಬದಲು ಆರೋಗ್ಯಕರವಾದ ಅಭ್ಯಾಸಗಳಿಗೆ ಬೆಂಗಳೂರಿಗರನ್ನು ಹುರಿದುಂಬಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ ಬಹು ಬೇಡಿಕೆಯನ್ನು ಪಡೆದುಕೊಂಡಿದೆ.

Happy customers of Suyana

ಬೆಟ್ಟದ ಮೇಲೆ ಬ್ರೇಕ್‌ಫಾಸ್ಟ್‌

ಮನೆ, ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಬೆಳಗಿನ ಉಪಾಹಾರವನ್ನು ಸವಿದಿರುತ್ತೀರಿ. ಆದರೆ ಬೆಟ್ಟದ ಮೇಲೆ ಕುಳಿತು ಎಂದಾದರೂ ಬ್ರೇಕ್‌ಫಾಸ್ಟ್‌ ಮಾಡಿದ್ದೀರಾ? ಸು-ಯಾನ ಇಂಥ ವಿಶೇಷ ಅವಕಾಶವನ್ನು ಬೆಂಗಳೂರಿಗರಿಗೆ ನೀಡುತ್ತಿದೆ. ಶನಿವಾರ ಹಾಗೂ ಭಾನುವಾರಗಳಲ್ಲಿ ಮಾತ್ರ ದೊಡ್ಡಬಳ್ಳಾಪುರದ ಹುಲುಕುಡಿ ಬೆಟ್ಟ ಸೇರಿದಂತೆ ಒಂದಷ್ಟು ಸುಂದರ ಗಿರಿಧಾಮಗಳನ್ನು ಆಯ್ಕೆ ಮಾಡಿಕೊಂಡಿರುವ ಸು-ಯಾನ ತಂಡ, ಚಾರಣದ ವಿಶೇಷ ಅನುಭವವನ್ನೂ ಜನರಿಗೆ ನೀಡುತ್ತಲೇ ಬಂದಿದೆ.

Suyana breakfast

ಈ ಟ್ರಾವೆಲ್‌ನಲ್ಲಿ ಸು-ಯಾನದ ಸಾರಿಗೆಯನ್ನು ಬಳಕೆ ಮಾಡಲಿಚ್ಛಿಸದವರು ತಮ್ಮ ಸ್ವಂತ ವಾಹನವನ್ನೂ ಬಳಸಿ ಗುಂಪಿನ ಜತೆ ಸೇರಿಕೊಳ್ಳಬಹುದು. ಚಾರಣ ಪ್ರಾರಂಭಕ್ಕೂ ಮುನ್ನ ಮಲ್ಟಿ ಸೀಡ್‌ ಮಾಲ್ಟ್‌ನೊಂದಿಗೆ ಪ್ರಾರಂಭವಾಗುವ ದಿನ, ಬೆಟ್ಟವನ್ನೇರಿದ ನಂತರ ನೀರ್‌ ದೋಸೆ, ರಸಾಯನ, ತಾಜಾ ಹಣ್ಣುಗಳು, ವೆಜಿಟೆಬಲ್‌ ಸಲಾಡ್‌ ಹೀಗೆ ಬಗೆ ಬಗೆಯ ರುಚಿಕರ ಹಾಗೂ ಆರೋಗ್ಯಕರ ಬ್ರೇಕ್‌ಫಾಸ್ಟ್‌ನೊಂದಿಗೆ ಮುಂದುವರಿಯುತ್ತದೆ. ಹೀಗೆ ಗುರುತು ಪರಿಚಯವಿಲ್ಲದಿದ್ದರೂ ಈ ಚಾರಣದ ಮೂಲಕ ಜತೆಯಾಗುವ, ಸ್ನೇಹಿತರಾಗುವವರೊಂದಿಗೆ ಬೆಟ್ಟದ ಮೇಲೆ ಒಂದಷ್ಟು ಹರಟೆ, ಯೋಗ, ವ್ಯಾಯಾಮ ಹೀಗೆ ಅನೇಕ ಚಟುವಟಿಕೆಗಳನ್ನು ಸುಯಾನ ತಂಡ ಮಾಡಿಸುತ್ತದೆ. ಆಹಾರ- ವಿಹಾರವನ್ನು ಮುಗಿಸಿ ಸುಂದರ ನೆನಪುಗಳೊಂದಿಗೆ ಮಧ್ಯಾಹ್ನದ ವೇಳೆಗೆ ಮನೆಗೆ ವಾಪಸಾಗಬಹುದು.

ದಕ್ಷಿಣ ಕನ್ನಡದ ಹಸಿರು, ಜಲಪಾತಗಳ ನಡುವೆ ಕಾಲ ಕಳೆಯಲು ಬಯಸುವವರಿಗಾಗಿ ಸು-ಯಾನ ದಿಡುಪ್ಪೆ ಸಂಪದ ಎಂಬ ವಿಶೇಷ ಪ್ಯಾಕೇಜ್‌ ಸಿದ್ಧಪಡಿಸಿದೆ. ದಿಡುಪ್ಪೆ ವಾಟರ್‌ ಫಾಲ್ಸ್‌, ಎರ್ಮಾಯಿ ಜಲಪಾತ, ಮಡ್‌ ಗೇಮ್ಸ್‌, ಅಥೆಂಟಿಕ್‌ ತುಳುನಾಡ ಆಹಾರ, ಶೇರ್ಡ್‌ ಅಕಾಮುಡೇಶನ್‌, ಆಫ್‌ ರೋಡ್‌ ಜೀಪ್‌ ರೈಡ್‌ ಹೀಗೆ ಪೈಸಾ ವಸೂಲ್‌ ಆಫರ್‌ಗಳನ್ನು ಪ್ರಯಾಣ ಪ್ರಿಯರಿಗಾಗಿ ನೀಡಿರುವುದು ವಿಶೇಷ. ಇದಷ್ಟೇ ಅಲ್ಲದೆ ಇನ್ನೂ ಅನೇಕ ಬೆಸ್ಟ್‌ ಪ್ಯಾಕೇಜ್‌ಗಳನ್ನು ಸು-ಯಾನ ಪ್ರವಾಸಿ ಪ್ರಿಯರಿಗಾಗಿ ನೀಡುತ್ತಲೇ ಬಂದಿದೆ.

Suyana waterfall trekking

ಸು-ಯಾನ ಪ್ಯಾಕೇಜಸ್‌

ಬೆಟ್ಟದ ಮೇಲೆ ಬ್ರೇಕ್‌ಫಾಸ್ಟ್‌

ದಿಡುಪ್ಪೆ ಸಂಪದ

ವನ ವಿಹಾರ

ಆಗುಂಬೆ ವಿಸ್ಮಯ

ಹಳೆಮನೆ ರೆಸಾರ್ಟ್‌ - 90ರ ದಿನಗಳು

ಐಟಿ ಉದ್ಯೋಗದಿಂದ ಒಳ್ಳೆಯ ಹಣ ಸಿಗುತ್ತಿತ್ತಾದರೂ ಖುಷಿ ಸಿಕ್ಕಿರಲಿಲ್ಲ. ಉದ್ಯೋಗದ ತೃಪ್ತಿ ಅಥವಾ ಸಮಾಧಾನ ಸಿಕ್ಕಿರಲಿಲ್ಲ. ನಾನು ವೃತ್ತಿ ಜೀವನ ಶುರು ಮಾಡಿದಾಗಿನಿಂದಲೂ ಹೆಚ್ಚು ಟ್ರಾವೆಲ್‌ ಮಾಡುವುದಕ್ಕೆ ಇಷ್ಟಪಡುತ್ತಿದ್ದೆ. ಫ್ರೆಂಡ್ಸ್‌ಗೆ ಫ್ರೀ ಆಗಿ ಟ್ರಿಪ್‌ ಪ್ಲಾನ್‌ ಮಾಡಿಕೊಡುತ್ತಿದ್ದೆ. ಆಗಲೇ ನಮ್ಮಲ್ಲಿರುವ ಸಂಘಟನಾ ಕಲೆಯ ಬಗ್ಗೆ ನಮಗೆ ಗೊತ್ತಾಗಿದ್ದು. ಅದಕ್ಕಿಂತ ಹೆಚ್ಚಾಗಿ ಜನರಿಗೆ ಹೊರ ಜಗತ್ತನ್ನು ಪರಿಚಯಿಸುವ ಪ್ರಯತ್ನ ಮಾಡಬೇಕೆನಿಸಿತು. ಈ ಯೋಚನೆಯ ಬಗ್ಗೆ ಪತಿಯೊಂದಿಗೆ ಹಂಚಿಕೊಂಡಿದ್ದೆ. ಆಗ ಅವರೂ ನನ್ನ ಜತೆಯಾದರು. ಯುಪಿಎಸ್‌ಸಿಗೆ ಶ್ರಮದ ಜತೆಗೆ ಹಣವೂ ಬೇಕಾಗುವುದರಿಂದ ಅದನ್ನು ಅರ್ಧಕ್ಕೇ ಕೈ ಬಿಟ್ಟ ಅವರು, ಸು-ಯಾನದ ಜತೆಯಾದರು.
- ಸುಷ್ಮಾ ಬಿ ವಿ, ಸು-ಯಾನ ಸಂಸ್ಥೆ

ಸಂಪರ್ಕ : 7406648322

ಇಮೇಲ್:‌ Heyy.suyana@gmail.com