ನೋಡಬನ್ನಿ ಜ್ಯೋತಿರ್ಲಿಂಗ- ಉತ್ತರಪ್ರದೇಶದ ಕೇದಾರನಾಥ
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.
ಭಾರತದಲ್ಲಿ ಹನ್ನೆರಡು ಪವಿತ್ರ ಶಿವಸ್ಥಾನಗಳಿವೆ. ಅದನ್ನು ಹನ್ನೆರಡು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಸಾಕಷ್ಟು ಶಿವನ ದೇಗುಲಗಳಿವೆ. ಆದರೆ ಈ ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆಯಿದೆ. ಶೈವ ಭಕ್ತರ ಪಾಲಿಗೆ ಅದು ಪರಮ ಪವಿತ್ರ ಕ್ಷೇತ್ರ. ಜ್ಯೋತಿರ್ಲಿಂಗದಲ್ಲಿ ನೆಲೆಸಿರುವ ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.
ಉತ್ತರಪ್ರದೇಶದ ಕೇದಾರನಾಥ
ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಇದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಪುರಾಣ ಪ್ರಸಿದ್ಧ ಶಿವನ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು. ಕೇದಾರನಾಥ ಶಿವಲಿಂಗವು 12 ಮಹಾ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಅತಿ ಎತ್ತರವಾಗಿದ್ದು, ಸರಿ ಸುಮಾರು 12 ಅಡಿ ಎತ್ತರದಲ್ಲಿದೆ. ಇದು ಶಂಕುವಿನಾಕಾರದ ಶಿಲಾ ರಚನೆಯನ್ನು ಹೊಂದಿರುವ ಏಕೈಕ ಶಿವಲಿಂಗವಾಗಿದೆ. ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಪ್ರಕಾರ, 10 ನೇ ಶತಮಾನದ ಆಸುಪಾಸಿನ ಹಿಮಯುಗದಲ್ಲಿ ಈ ದೇವಾಲಯವು 400 ವರ್ಷಗಳ ಕಾಲ ಹಿಮದ ಅಡಿಯಲ್ಲಿ ಹೂತುಹೋಗಿತ್ತು ಎನ್ನಲಾಗುತ್ತದೆ. ಕೇದಾರನಾಥ ದೇವಾಲಯದ ತ್ರಿಕೋನ ಕಲ್ಲಿನ ಕೋಶದಲ್ಲಿ ಮನುಷ್ಯನ ತಲೆಯ ರಚನೆಯನ್ನು ಹೋಲುವ ಶಿಲ್ಪವನ್ನು ಕೆತ್ತಲಾಗಿದೆ. ಅದರ ಗುರುತು ಈವರೆಗೆ ತಿಳಿದಿಲ್ಲ. ಪ್ರಸಿದ್ಧ ಹಿಂದೂ ವಿದ್ವಾಂಸರಾದ ಸ್ವಾಮಿ ಗಜಾನಂದ್ ಸರಸ್ವತಿ ಅವರು ಈ ದೇವಾಲಯವನ್ನು ಮೊದಲು 7,99,25,105 ವರ್ಷಗಳ ಹಿಂದೆ ನಿರ್ಮಿಸಲಾಯಿತು ಎಂದು ಹೇಳಿದ್ದಾರೆ. ದೇವಾಲಯ ಸಂಕೀರ್ಣದ ಮುಂದೆ, ಕಂಬಗಳ ಸಭಾಂಗಣವಿದ್ದು, ಅಲ್ಲಿ ಪಾರ್ವತಿ ಮತ್ತು ಐದು ಪಾಂಡವ ರಾಜಕುಮಾರರ ಸುಂದರವಾಗಿ ಕೆತ್ತಿದ ಚಿತ್ರಗಳನ್ನು ಕಾಣಬಹುದು. ಸಭಾಂಗಣದ ಒಳಗೆ ಶ್ರೀಕೃಷ್ಣ ಮತ್ತು ಇತರ ಹಿಂದೂ ದೇವತೆಗಳ ಚಿತ್ರಗಳಿವೆ.