ಪ್ರವಾಸ ಒಂದು ತಾಣವನ್ನು ವೈವಿಧ್ಯ ದೃಷ್ಟಿಕೋನಗಳಲ್ಲಿ ಅರ್ಥೈಸಿಕೊಳ್ಳಲು ಇರುವ ಅವಕಾಶ. ಪುಸ್ತಕದಲ್ಲಿ ಎಷ್ಟನ್ನು ಓದಬಹುದೋ ಅದಕ್ಕಿಂತ ಹೆಚ್ಚಿನದನ್ನು ಅಥವಾ ಅದಕ್ಕೆ ಸಮನಾದ ಅರಿವನ್ನು ಒಂದು ಪ್ರವಾಸ ನೀಡಬಹುದು. ವಿವಿಧ ಭಕ್ಷ್ಯಗಳ ಸ್ವಾದವನ್ನು ಸವಿಯಬಹುದು, ತಿರುಗಿಸಿ ಅರಗಿಸಲೂಬಹುದು. ಇತಿಹಾಸ, ವನಸಂಚಾರ, ವನಸಂಸಾರ, ಜನ-ಮನ, ಇಷ್ಟ-ಕಷ್ಟ ಎಲ್ಲವನ್ನೂ ಒಂದು ಪುಸ್ತಕದಲ್ಲಿ ಎಷ್ಟಂತ ಓದುವುದು. ಒಂದಷ್ಟು ಓಡಾಡಿಯೂ ನೋಡಬೇಕು. ʼದೇಶ ಸುತ್ತು ಕೋಶ ಓದುʼ ಎನ್ನುತ್ತಾರೆ. ಏಕೆಂದರೆ ಈ ಎರಡೂ ಕಾರ್ಯಗಳು ವ್ಯಕ್ತಿಯನ್ನು ವಿಶ್ವ ಮಾನವನನ್ನಾಗಿ ಮಾಡುತ್ತವೆ. ದೇಶ, ಬಾಷೆ, ವೈವಿಧ್ಯ ಭಾವಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತವೆ. ಹಾಗಾಗಿ ಎಲ್ಲ ಕಡೆಯೂ ತಿರುಗಾಡಬೇಕು. ಪ್ರವಾಸದ ಪೂರ್ಣ ಅನುಭವ ಸ್ಥಳೀಯವಾಗಿ ಬೆರೆಯುವುದರಲ್ಲೂ ಇದೆ. ಸರೀ ಕಣಯ್ಯ, ಆ ಅನುಭವ ಹೇಗಿರುತ್ತದೆ ನಾನು ನೋಡಬೇಕು ಈ ಬಾರಿ ಪ್ರವಾಸ ಹೋಗ್ತೀನಿ ಎನ್ನಬೇಡಿ. ಈ ಸ್ಥಳಗಳಲ್ಲಿ ನಿಮಗೆ ಉತ್ತಮ ಮಾರ್ಗಸೂಚಿ, ಸಮಯ ಪಾಲನೆ, ವಾಸ್ತವ್ಯದ ತಾಣಗಳು, ಮರೆಯಲ್ಲಿನ ಮಾಣಿಕ್ಯದಂಥ ತಾಣಗಳು ಎಲ್ಲವನ್ನು ಒದಗಿಸಿಕೊಳ್ಳುವುದು ಅಗತ್ಯ. ಪ್ರಬುದ್ಧ ಪಯಣಿಗನಂತೆ ಖರ್ಚು ಮಾಡುವುದೂ ಅತಿಮುಖ್ಯ ವಿಷಯ. ಹಾಗಾಗಿ ನಿಮಗೊಬ್ಬ ಅನುಭವಿ ಮಾರ್ಗದರ್ಶಿ ಬೇಕು. ಇದರಿಂದಲೇ ಎಲ್ಲಾ ಸ್ಥಳೀಯತೆಯ ಸ್ವಾದ ನಿಮಗೆ ಸಿಗಬಲ್ಲದು. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತ ನಿಮ್ಮನ್ನು ಸುತ್ತಿಸಿ, ಆಯಾಸ ಮರೆಸಲು ಅತ್ಯಾಪ್ತವೆನಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ…

ಇದು ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ರಥ. ಹೀಗೆಂದ ಮೇಲೆ ಇನ್ನೂ ಹೇಳುವ ಅವಶ್ಯಕತೆಯಿಲ್ಲ. ರಾಜ್ಯದಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ ನಿಮ್ಮ ಕೈಹಿಡಿದು ನಡೆಸುತ್ತಾನೆ ಎಂದಮೇಲೆ ಮತ್ತೆ ಕಾಯುವುದೇಕೆ? ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ತೋರಿಸದ ತಾಣವಿಲ್ಲ. ಪ್ರವಾಸಿ ತಾಣಗಳ ನೈಜ ಸ್ಥಳೀಯತೆಯ ಸ್ವಾದವನ್ನು ತನ್ನ ಜತೆಗೆ ಪ್ರವಾಸಕ್ಕೆ ಬರುವ ಪಯಣಿಗನಿಗೆ ನೀಡಬೇಕು ಎನ್ನುವ ತವಕ ಅದರದ್ದು.

ಹಾಗಾಗಿ ಹಲವು ಟೂರ್‌ಗಳನ್ನು ನಿತ್ಯವೂ ಈ ನಿಗಮ ಮಾಡುತ್ತಲೇ ಇರುತ್ತದೆ. ಈ ಬಾರಿ ಮೈಸೂರಿನಿಂದ ಹೊರನಾಡು, ಕುಕ್ಕೆ, ಧರ್ಮಸ್ಥಳ, ಕದ್ರಿ, ಕಟೀಲು ದೇವಸ್ಥಾನಗಳು ಮುರುಡೇಶ್ವರ, ಮಲ್ಪೆ ಕಡಲ ಕಿನಾರೆಗಳು ಸೇರಿ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳತ್ತ ಸಹ ಪಯಣಿಗನನ್ನು ಹೊತ್ತು ಸಾಗಲು ವಿಶೇಷ ಪ್ರವಾಸಿ ಪ್ಯಾಕೇಜ್‌ ಹೊರತಂದಿದೆ. ಒಟ್ಟು ಐದು ದಿನಗಳ ಪ್ರವಾಸದಲ್ಲಿ ಐನೂರಕ್ಕೂ ಹೆಚ್ಚು ನೆನಪುಗಳನ್ನು ಕೂಡಿಕೊಳ್ಳಬಹುದು. ಮನುಷ್ಯ ಎಂದಿಗೂ ಶಾಶ್ವತವಲ್ಲ ನೆನಪುಗಳೇ ಶಾಶ್ವತ. ಹಾಗಾಗಿ ನಿಮ್ಮ ಆತ್ಮೀಯರ ಜತೆಗೆ ಐದು ದಿನಗಳ ಈ ಪ್ರವಾಸ ನಿಜಕ್ಕೂ ಮರೆಯದ ಕ್ಷಣವಾಗಿ ರೂಪಿಸಬಲ್ಲದು.

Untitled design (54)

ಮುರುಡೇಶ್ವರ

ಹಿಂದೂ ಪೌರಾಣಿಕ ಕತೆಗಳಲ್ಲಿ ಮಹತ್ತರ ಸ್ಥಾನ ಪಡೆದಿರುವ ಮುರುಡೇಶ್ವರ, ಶಿವನಿಗೆ ಸಮರ್ಪಿತ ದೇವಸ್ಥಾನದಿಂದ ಹೆಸರು ಪಡೆದಿದೆ. ಪೌರಾಣಿಕ ಕತೆಗಳ ಪ್ರಕಾರ ಶಿವನ ಆತ್ಮಲಿಂಗವನ್ನು ರಾವಣನ ಪಾಲಾಗುವುದನ್ನು ತಪ್ಪಿಸಲು ಗಣೇಶ ಉಪಾಯ ಮಾಡಿ ಗೋಕರ್ಣದಲ್ಲಿ ಇರಿಸಿದ. ಆಗ ಆ ಆತ್ಮಲಿಂಗವನ್ನು ನೆಲದಿಂದ ಮೇಲೆತ್ತಲು ತನ್ನೆಲ್ಲಾ ಶಕ್ತಿಯನ್ನು ರಾವಣ ಉಪಯೋಗಿಸಿದ ರಭಸಕ್ಕೆ ಆತ್ಮಲಿಂಗದ ವಸ್ತ್ರಗಳು ಮುರುಡೇಶ್ವರದಲ್ಲಿ ಬಂದು ಬಿದ್ದವು ಎನ್ನಲಾಗಿದೆ. ಹಾಗಾಗಿ ಈ ಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಕಡಲ ಕಿನಾರೆಯೂ ಆಗಿರುವುದರಿಂದ ಧಾರ್ಮಿಕ ಪ್ರವಾಸ ಬಂದರೂ ಸರಿ, ಮೋಜು ಮಸ್ತಿಗೆ ಬಂದರೂ ಸರಿ ಮುರುಡೇಶ್ವರ ಉತ್ತಮ ತಾಣ. ಇಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಶಿವನ ಮೂರ್ತಿಯಿದೆ. ಏಷ್ಯಾದ ಅತಿ ಎತ್ತರದ ಗೋಪುರಗಳಲ್ಲಿ ಒಂದಾದ 20 ಅಂತಸ್ತುಗಳ ರಾಜ ಗೋಪುರವಿದೆ. ಕಡಲ ಕಿನಾರೆಯ ರಮಣೀಯ ನೋಟದ ಜತೆಗೆ ವಿರಾಟ ರೂಪದ ಶಿವನ ದರ್ಶಕ್ಕೆ ಮುರುಡೇಶ್ವರನ ಸನ್ನಿಧಿಯ ದರ್ಶನ ಮಾತ್ರ ಸಾಕಾಗಬಹುದು.

ಕುಕ್ಕೆ ಸುಬ್ರಹ್ಮಣ್ಯ

ಶಿವಸುತ ಕಾರ್ತಿಕೇಯ (ಸುಬ್ರಹ್ಮಣ್ಯ) ತಾರಕಾಸುರನನ್ನು ವಧೆಮಾಡಿದ ನಂತರ ಇಲ್ಲಿ ಬಂದು ದೇವರಾಜ ಇಂದ್ರನ ಮಗಳು ದೇವಸೇನೆಯನ್ನು ವಿವಾಹವಾದ ಎನ್ನಲಾಗಿದೆ. ಜತೆಗೆ ಗರುಡನಿಂದ ಹೆದರಿ ವಾಸುಕಿಯು ಇಲ್ಲಿನ ಬಿಲದಲ್ಲಿ ಅಡಗಿ ಕುಳಿತಿದ್ದಾಗ ಸುಬ್ರಹ್ಮಣ್ಯ ದೇವರು ವಾಸುಕಿಗೆ ಅಭಯ ನೀಡಿದರು ಮತ್ತು ತನ್ನೊಂದಿಗೆ ಇಲ್ಲಿಯೇ ನೆಲೆಸಲು ಹೇಳಿದರು ಎನ್ನಲಾಗಿದ್ದು, ಇಂದಿಗೂ ಇಲ್ಲಿ ಸುಬ್ರಹ್ಮಣ್ಯನಿಗೆ ನೆರವೇರುವ ಪೂಜೆಗಳೆಲ್ಲವೂ ವಾಸುಕಿಗೂ ಸಲ್ಲುತ್ತವೆ ಎನ್ನಲಾಗಿದೆ. ನಾಗದೋಷ ಪರಿಹಾರಕ್ಕಾಗಿ ಇಲ್ಲಿಗೆ ಸಾಕಷ್ಟು ಜನರು ಬರುತ್ತಾರೆ. ಪೂಜೆಗಳನ್ನು ಮಾಡಿಸುತ್ತಾರೆ. ಇಲ್ಲಿನ ಕುಮಾರ ಪರ್ವತ ಚಾರಣವೂ ಪ್ರಸಿದ್ಧವಾಗಿದ್ದು, ವರ್ಷದ ಆರು ತಿಂಗಳುಗಳ ಸಮಯ ಮಾತ್ರ ಚಾರಣಕ್ಕೆ ಇಲ್ಲಿ ಅವಕಾಶವಿರುತ್ತದೆ.

ಪ್ಯಾಕೇಜ್


ದಿನ : 1

ರಾತ್ರಿ 9.00 ಗಂಟೆಗೆ ಮೈಸೂರಿನ ಹೋಟೆಲ್ ಮಯೂರ ಯಾತ್ರಿ ನಿವಾಸದ ಕೆಎಸ್‌ಟಿಡಿಸಿ ಕಚೇರಿಯಿಂದ ಪ್ರವಾಸ ಆರಂಭ

Untitled design (56)

ದಿನ : 2
ಬೆಳಗ್ಗೆ 4.30 ಗಂಟೆಗೆ ಹೊರನಾಡು ಹೋಟೆಲ್‌ನಲ್ಲಿ ಫ್ರೆಶ್ ಅಪ್, ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ಮತ್ತು ಉಪಾಹಾರ.

ಬೆಳಗ್ಗೆ 8.00 ಗಂಟೆಗೆ ಹೊರನಾಡಿನಿಂದ ನಿರ್ಗಮನ
ಬೆಳಗ್ಗೆ 8.20 – 8.40ರವರೆಗೆ ಕಳಸದಲ್ಲಿನ ಶ್ರೀ ಕಳಸೇಶ್ವರ ದೇವಸ್ಥಾನಕ್ಕೆ ಭೇಟಿ
ಬೆಳಗ್ಗೆ 11.30– 1.40ರವರೆಗೆ ಶೃಂಗೇರಿ, ಶ್ರೀ ಶಾರದಾ ದೇವಿ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇವಸ್ಥಾನ ದರ್ಶನ ಮತ್ತು ಮತ್ತು ಊಟ

ಸಂಜೆ 6.00 ಗಂಟೆಗೆ ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಭೇಟಿ, ಭೋಜನ ಮತ್ತು ಕೊಲ್ಲೂರಿನಲ್ಲಿ ರಾತ್ರಿ ವಿರಾಮ.

ದಿನ: 3

ಬೆಳಗ್ಗೆ 6.00 ಗಂಟೆಗೆ ಕೊಲ್ಲೂರಿನಿಂದ ನಿರ್ಗಮನ, ಮಾರ್ಗಮಧ್ಯೆ ಉಪಾಹಾರ

ಬೆಳಗ್ಗೆ 8.00-9.30ರವರೆಗೆ ಮುರುಡೇಶ್ವರ, ಶ್ರೀ ಮುರುಡೇಶ್ವರ ದೇವಸ್ಥಾನ ಮತ್ತು ಕಡಲತೀರಕ್ಕೆ ಭೇಟಿ

ಬೆಳಗ್ಗೆ 11.15-11.35ರವರೆಗೆ ಆನೆಗುಡ್ಡ, ಕುಂದಾಪುರ, ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ

ಮಧ್ಯಾಹ್ನ 2.30-3.00 ಉಡುಪಿ, ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ, ಮತ್ತು ಊಟ

ಮಧ್ಯಾಹ್ನ 3.30-4.30ರವರೆಗೆ ಮಲ್ಪೆ ಬೀಚ್‌ಗೆ ಭೇಟಿ

ಸಂಜೆ 5.30-7.00 ಕಟೀಲು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ
ರಾತ್ರಿ 8.00 ಮಂಗಳೂರಿನಲ್ಲಿ ಹಾಲ್ಟ್

ದಿನ:4

ಬೆಳಗ್ಗೆ 5.30 ಗಂಟೆಗೆ ಮಂಗಳೂರಿನಿಂದ ನಿರ್ಗಮನ

ಬೆಳಗ್ಗೆ 6.00-7.00ರವರೆಗೆ ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ

ಬೆಳಗ್ಗೆ 7.15-8.15ರವರೆಗೆ ಮಂಗಳಾದೇವಿ, ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ಮತ್ತು ಉಪಾಹಾರ

ಬೆಳಗ್ಗೆ 10.30-1.30ರವರೆಗೆ ಧರ್ಮಸ್ಥಳ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ಊಟ

ಸಂಜೆ 4.30-ರಾತ್ರಿ 9.00ರವರೆಗೆ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಮತ್ತು ಭೋಜನ

ದಿನ:5

ಬೆಳಗ್ಗೆ 5.00 ಗಂಟೆಗೆ ಪ್ರವಾಸವು ಮೈಸೂರಿನ ಹೊಟೇಲ್ ಮಯೂರ ಯಾತ್ರಿನಿವಾಸದ ಕೆಎಸ್‌ಟಿಡಿಸಿ ಕಚೇರಿಯಲ್ಲಿ ಕೊನೆಗೊಳ್ಳುತ್ತದೆ.

mayura kstdc

ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೆ ಯೋಚನೆ ಮಾಡದಿರಿ. ಕೆಎಸ್‌ಟಿಡಿಸಿ ನಿಮ್ಮ ಪ್ರವಾಸದ ಉತ್ತಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ನಮ್ಮ ನಾಡಲ್ಲೇ ಕಾಣುವುದು ಸಾಕಷ್ಟಿದೆ.

Untitled design (55)

ಪಿಲಿಕುಳದಲ್ಲಿ ಮಯೂರ ಫಲ್ಗುಣಿ ರಿವರ್ ರೆಸಾರ್ಟ್

ಕನ್ನಡದ ಅರಸ ಮಯೂರ ವರ್ಮನ ಹೆಸರಿನ ಹೊಟೇಲ್‌ ಮಯೂರ ಹೆಸರಿಗೆ ತಕ್ಕಂತ ಅದ್ಭುತ ಹೊಟೇಲ್‌. ದೇಶ-ವಿದೇಶಗಳಿಂದ ಕರ್ನಾಟಕ ಪ್ರವಾಸ ಬರುವ ಜನರಿಗೂ ಮಯೂರ ಎಂದರೆ ಅಚ್ಚುಮೆಚ್ಚಾಗುವಷ್ಟು ಹೆಸರು ಮಾಡಿದೆ. ಊಟ, ವಾಸ್ತವ್ಯ ಎಲ್ಲ ಹೊಟೇಲ್‌ಗಳಲ್ಲೂ ದೊರೆಯುತ್ತದೆ. ಆದರೆ, ಅಚ್ಚುಮೆಚ್ಚಿನ ಆತಿಥ್ಯ? ಅದು ಸಿಗುವುದು ಬೆರಳೆಣಿಕೆ ಹೊಟೇಲ್‌ಗಳಲ್ಲಿ ಮಾತ್ರ. ಅವುಗಳಲ್ಲಿ ಮಯೂರಕ್ಕೆ ಅಗ್ರಸ್ಥಾನವಿದೆ. ಸುಂದರ ಅನುಭವ, ಅಚ್ಚಳಿಯದ ನೆನಪುಗಳ ಗಂಟನ್ನು ಉಡುಗೊರೆಯಾಗಿ ನೀಡಿ ಪ್ರವಾಸಿಗನನ್ನು ತೃಪ್ತರನ್ನಾಗಿಸಲು, ಹೊಟೇಲ್‌ ಮಯೂರಕ್ಕಿರುವ ಅನುಭವವೇ ಕಾರಣ. ರಾಜ್ಯದ ಎಲ್ಲಾ ಹವಾಮಾನ ಜನರ ಇಷ್ಟ-ಕಷ್ಟಗಳನ್ನು ಈ ಹೊಟೇಲ್‌ ಚೆನ್ನಾಗಿ ಬಲ್ಲದು.‌ ಯಾವ ಸ್ಥಳಗಳಲ್ಲಿ ಅತಿಥಿಗಳ, ಪ್ರವಾಸಿಗಳ ನೀರಿಕ್ಷೆ ಏನಿರುತ್ತದೆ ಎನ್ನುವುದನ್ನು ವರ್ಷಗಳಿಂದ ಕಂಡು, ಅವುಗಳನ್ನು ಪೂರೈಸಿಯೂ ಮಯೂರ ಅನುಭವ ಗಳಿಸಿದೆ. ಆದ್ದರಿಂದಲೇ ಪ್ರತಿ ಪ್ರವಾಸಿ ತಾಣದಲ್ಲೂ ಅನುಭವಿ ಪಯಣಿಗನ ವಾಸ್ತವ್ಯ ಹೊಟೇಲ್‌ ಮಯೂರದಲ್ಲೇ ಆಗಿರುತ್ತದೆ. ಕೆಎಸ್‌ಟಿಡಿಸಿ, ಪ್ರವಾಸದಲ್ಲಿ ನಿಮ್ಮ ಆಯ್ಕೆಯಾಗಿದ್ದರೆ, ನಿಮಗೂ ಈ ಆತಿಥ್ಯದ ಅನುಭವವಾಗುತ್ತದೆ. ಈ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲರಿಗೂ ಹೊಟೇಲ್ ಮಯೂರ ಉತ್ತಮ ಆಯ್ಕೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಇದು ಮಯೂರದ ಆತಿಥ್ಯದ ಹೆಗ್ಗುರುತು. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಸಿಬ್ಬಂದಿಯೂ ಸ್ನೇಹಪರರಾಗಿರುತ್ತಾರೆ. ನಿಮ್ಮನ್ನು ನಗುಮೊಗದಿಂದಲೇ ಉಪಚರಿಸುತ್ತಾರೆ.

ಇವುಗಳ ಜತೆಗೆ ನಮಗೆ ರೆಸಾರ್ಟ್‌ ವಾಸ್ತವ್ಯ ಬೇಕು ಎನ್ನುವವರಿಗೆ ಮಯೂರ ಫಲ್ಗುಣಿ ರಿವರ್ ರೆಸಾರ್ಟ್, ಪಿಲಿಕುಳ ದಿ ಬೆಸ್ಟ್‌ ಆಯ್ಕೆ. ಒಂದೇ ಪ್ಯಾಕೇಜ್‌ನಲ್ಲಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸೋಮೇಶ್ವರ, ಸುಲ್ತಾನ್ ಬತ್ತೇರಿ, ಸಸಿಹಿತ್ಲು ಕಡಲ ತೀರಗಳು. ಶಿವರಾಮ ಕಾರಂತರು ಪಿಲಿಕುಳ ಜೈವಿಕ ಉದ್ಯಾನವನ, ಮಾನಸ ವಾಟರ್ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್, ಗುತ್ತು ಮನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಹತೋಭಾರ ಮಂಗಳಾದೇವಿ, ಸೂರ್ಯನಾರಾಯಣ, ಮರೋಳಿ, ಕಟೀಲು ದುರ್ಗಾಪಾಮೇಶ್ವರಿ, ಕುಡುಪ ಅನಂತಪದ್ಮನಾಭ ದೇವಸ್ಥಾನ, ಕಾರಿಂಜೇಶ್ವರ, ಕದ್ರಿ ಮಂಜುನಾಥ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಗಳು. ಅಲೋಶಿಯಸ್, ಮಿಲಾಗ್ರಿಸ್, ಶಿಶು ಯೇಸು ದೇಗುಲ ಕಾರ್ಮೆಲ್ ಬೆಟ್ಟ, ರೊಸಾರಿಯೋ ಕ್ಯಾಥೆಡ್ರಲ್ ಚರ್ಚ್‌ಗಳು. ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ನೋಡಲೂ ಅವಕಾಶ ಸಿಗುತ್ತದೆ? ಪಿಲಿಕುಳದ ಮಯೂರ ಫಲ್ಗುಣಿ ರಿವರ್ ರೆಸಾರ್ಟ್‌ನಲ್ಲಿ ಈ ಅವಕಾಶವಿದೆ. ಈ ರೆಸಾರ್ಟ್‌ನಲ್ಲಿ ನದಿಯ ರಮಣೀಯ ನೋಟ ನೀಡುವ, ಸೂಟ್, ಕಾಟೇಜ್‌ಗಳು, ಡಿಲಕ್ಸ್‌ ಎಸಿ ಮತ್ತು ಆಯುರ್ವೇದ ಚಿಕಿತ್ಸಾ ಕಾಟೇಜ್‌ಗಳಂಥ ವಿವಿಧ ರೀತಿಯ ಕೊಠಡಿಗಳ ಆಯ್ಕೆಗಳಿವೆ.

ಸಂಪರ್ಕ :

Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan|Race Cource Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org