ಇಳಿವಯಸ್ಸಿನಲ್ಲಿ ಯುರೋಪ್ ಸುತ್ತಿದ ಟ್ರಾವೆಲ್ ಸಿಸ್ಟರ್ಸ್
ಕೇರಳ ಮೂಲದ ಈ ಟ್ರಾವೆಲ್ ಅಚ್ಚರಿಗಳು, ತಮ್ಮ ಪ್ರವಾಸಿ ಜೀವನ ಆರಂಭಿಸಿದ್ದು 70ನೆಯ ವಯಸ್ಸಿನ ನಂತರ. ಮೊದಲಿಗೆ ಭಾರತದ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಂಡ ಈ ಭಲೇ ಜೋಡಿಗೆ ಅದರಿಂದ ಉತ್ಸಾಹ ಇಮ್ಮಡಿಯಾಗಿದೆ. ಆನಂತರ ಸಹೋದರಿಯರು ಯುರೋಪಿಗೆ ಪ್ರಯಾಣ ಬೆಳೆಸಿ ಅಲ್ಲಿನ ಪ್ರವಾಸಿ ತಾಣಗಳನ್ನು ಸುತ್ತಾಡಿಬಂದಿದ್ದಾರೆ.
ವರ್ಕ್ ಪ್ರೆಶರ್, ಆರೋಗ್ಯ ಸಮಸ್ಯೆ, ವಯಸ್ಸು ಇಂಥ ಎಷ್ಟೋ ಕಾರಣ ನೀಡಿ ಜನರು ಪ್ರವಾಸಿದಿಂದ ದೂರ ಉಳಿಯುತ್ತಾರೆ. ಇನ್ನೂ ಕೆಲವರಂತೂ ಪ್ರವಾಸವೆಂದರೆ ಸುಮ್ಮನೆ ದುಡ್ಡು ದಂಡ ಎನ್ನುತ್ತಾರೆ. ಅಂಥವರಿಗೆ ಈ ಟ್ರಾವೆಲ್ ಸಿಸ್ಟರ್ಸ್ ಕಥೆ ಬಹು ದೊಡ್ಡ ಪ್ರೇರಣೆಯಾಗಲಿದೆ. ವಲ್ಸಲಾ ಮತ್ತು ರಮಣಿ ಎಂಬ ಅಕ್ಕ ತಂಗಿಯರು ಒಂದೇ ತಿಂಗಳಿನಲ್ಲಿ ಯುರೋಪಿನ ಎಂಟು ದೇಶಗಳನ್ನು ಸುತ್ತಿದ್ದಾರೆ.

ಕೇರಳ ಮೂಲದ ಈ ಟ್ರಾವೆಲ್ ಅಚ್ಚರಿಗಳು, ತಮ್ಮ ಪ್ರವಾಸಿ ಜೀವನ ಆರಂಭಿಸಿದ್ದು 70ನೆಯ ವಯಸ್ಸಿನ ನಂತರ. ಮೊದಲಿಗೆ ಭಾರತದ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಂಡ ಈ ಭಲೇ ಜೋಡಿಗೆ ಅದರಿಂದ ಉತ್ಸಾಹ ಇಮ್ಮಡಿಯಾಗಿದೆ. ಆನಂತರ ಸಹೋದರಿಯರು ಯುರೋಪಿಗೆ ಪ್ರಯಾಣ ಬೆಳೆಸಿ ಅಲ್ಲಿನ ಪ್ರವಾಸಿ ತಾಣಗಳನ್ನು ಸುತ್ತಾಡಿಬಂದಿದ್ದಾರೆ. ಇವರ ಪ್ರಕಾರ ಪ್ರವಾಸಕ್ಕೆ ಮನಸ್ಸು ಬೇಕೇ ವಿನಃ ವಯಸ್ಸಲ್ಲವಂತೆ. ಪ್ರವಾಸದಿಂದ ದೂರ ಉಳಿಯಲು ಅನೇಕ ಕಾರಣಗಳನ್ನು ನೀಡುವ ಜನರಿಗೆ ಈ ಟ್ರಾವೆಲ್ ಸಿಸ್ಟರ್ಸ್ ನ ಕಥೆ ಸ್ಫೂರ್ತಿಯಾಗಲಿದೆ.