ಮಧ್ಯಪ್ರದೇಶಕ್ಕೆ ಅಡಿಗಾಸ್ ಯಾತ್ರಾ ಸ್ಪೆಶಲ್ ಪ್ರವಾಸ!
ಧಾರ್ಮಿಕ ಪ್ರವಾಸಕ್ಕೂ ಹೆಸರಾಗಿರುವ ಮಧ್ಯಪ್ರದೇಶದಲ್ಲಿ ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಎರಡು ಪ್ರಮುಖ ಕ್ಷೇತ್ರಗಳಿವೆ. ಉಜ್ಜಯಿನಿಯ ಭವ್ಯ ಮಹಾಕಾಳೇಶ್ವರ ಹಾಗೂ ನರ್ಮದಾ ನದಿಯ ತೀರದಲ್ಲಿರುವ ಓಂಕಾರೇಶ್ವರ ಕ್ಷೇತ್ರಗಳು ಭಕ್ತರಿಗೆ ದೈವಿಕ ಅನುಭೂತಿಯನ್ನು ನೀಡುತ್ತವೆ. ಭಾರತದ 'ಹುಲಿ ರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದಲ್ಲಿ ಕನ್ಹಾ, ಬಾಂದವಗಢ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳಿವೆ.
ʻಭಾರತದ ಹೃದಯʼವೆಂದೇ ಪ್ರಸಿದ್ಧವಾಗಿರುವ ಈ ರಾಜ್ಯಕ್ಕೆ ಅಡಿಗಾಸ್ ಯಾತ್ರಾ ವಿಶೇಷ ಪ್ಯಾಕೇಜನ್ನು ಘೋಷಿಸಿದೆ. ಶಿಲ್ಪಕಲೆಗೆ ಹೆಸರಾಗಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆನಿಸಿರುವ ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳು, ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಕಾಲದ ಸಂಚಿ ಸ್ತೂಪ, ಗ್ವಾಲಿಯರ್ ಕೋಟೆ, ಮಾಂಡು ಮತ್ತು ಓರ್ಚಾದ ಪ್ರಾಚೀನ ಅರಮನೆಗಳನ್ನು ಈ ಪ್ಯಾಕೇಜ್ ಮೂಲಕ ವೀಕ್ಷಿಸಿಬರಬಹುದು.
ಧಾರ್ಮಿಕ ಪ್ರವಾಸಕ್ಕೂ ಹೆಸರಾಗಿರುವ ಮಧ್ಯಪ್ರದೇಶದಲ್ಲಿ ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಎರಡು ಪ್ರಮುಖ ಕ್ಷೇತ್ರಗಳಿವೆ. ಉಜ್ಜಯಿನಿಯ ಭವ್ಯ ಮಹಾಕಾಳೇಶ್ವರ ಹಾಗೂ ನರ್ಮದಾ ನದಿಯ ತೀರದಲ್ಲಿರುವ ಓಂಕಾರೇಶ್ವರ ಕ್ಷೇತ್ರಗಳು ಭಕ್ತರಿಗೆ ದೈವಿಕ ಅನುಭೂತಿಯನ್ನು ನೀಡುತ್ತವೆ. ಭಾರತದ 'ಹುಲಿ ರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದಲ್ಲಿ ಕನ್ಹಾ, ಬಾಂದವಗಢ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳಿವೆ. 'ಸಾತ್ಪುರದ ರಾಣಿ' ಎಂದೇ ಖ್ಯಾತವಾಗಿರುವ ಪಚ್ಮರ್ಹಿ ಗಿರಿಧಾಮ, 'ಧೂಂಧರ್ ಜಲಪಾತ' ಸೇರಿ ವಿಭಿನ್ನ ಲೋಕವೇ ಸೃಷ್ಟಿಯಾಗಿದೆ. ಮಧ್ಯಪ್ರದೇಶ ಈ ಸುಂದರ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸಲು ಅಡಿಗಾಸ್ ಯಾತ್ರಾ ಸಜ್ಜಾಗಿದ್ದು, ಗ್ರೂಪ್ ಪ್ರವಾಸಗಳನ್ನು ಆಯ್ಕೆ ಮಾಡುವವರಿಗೆ ಸಸ್ಯಾಹಾರಿ ಊಟೋಪಹಾರ, ಲಕ್ಸುರಿ ಬಸ್ , ಡಿಲಕ್ಸ್ ವಸತಿ ಹಾಗೂ ಆನುಭವಿ ಟೂರ್ ಮ್ಯಾನೇಜರ್‌ನೊಂದಿಗೆ ಪ್ರವಾಸಕ್ಕೆ ಅವಕಾಶವಿದೆ. ಹೊರಡುವ ದಿನಾಂಕಕ್ಕೆ ಆಫೀಸನ್ನು ಸಂಪೇಕಿಸಬಹುದು.
ಇನ್ನು ಫಿಕ್ಸೆಡ್ ಡಿಪಾರ್ಚರ್ಸ್ ಇದ್ದು 4 ಸ್ಟಾರ್ ಹೋಟೆಲ್ ಗಳಲ್ಲಿ ಬ್ರೇಕ್ ಫಾಸ್ಟ್ ಮತ್ತು ಡಿನ್ನರ್, ವಿಮೆ, ಕಾದಿರಿಸಿದ ವಾಹನ ಸೇರಿದಂತೆ ಅಗತ್ಯವಿರುವ ಅನುಕೂಲಗಳನ್ನು ಒದಗಿಸಲಾಗುವುದು. ಹಾಗೂ ವಿವಿಧ್ಯಮಯ ಕಸ್ಟಮೈಸ್ಡ್ ಟೂರುಗಳು ಸಹ ಲಭ್ಯ.ನಿಮ್ಮ ಆಯ್ಕೆಯ ದಿನ ಮತ್ತು ಪ್ರವಾಸಗಳ ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಅಡಿಗಾಸ್ ಯಾತ್ರಾದ ಹುಬ್ಬಳ್ಳಿ, ಮತ್ತು ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ ಹಾಗೂ ರಾಜರಾಜೇಶ್ವರಿ ನಗರದ ಆಫೀಸುಗಳನ್ನುಸಂದರ್ಶಿಸಿ ಅಥವಾ ದೂರವಾಣಿ ಮುಖಾಂತರವೂ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥಾಪಕ ಕೆ ನಾಗರಾಜ ಅಡಿಗ ತಿಳಿಸಿದ್ದಾರೆ. ಅಡಿಗಾಸ್ ಯಾತ್ರಾದ ಗ್ರೂಪ್ ಟೂರ್‌ಗಳಲ್ಲಿ ಕರ್ನಾಟಕದ ಸವಿಯಾದ ಖಾದ್ಯಗಳನ್ನು ತಯಾರಿಸಿಕೊಡುತ್ತಾರೆ. ಹೀಗಾಗಿ ಕನ್ನಡಿಗರಿಗೆ ಎಲ್ಲಿಯೇ ಇದ್ದರೂ, ಊರಿನ ಊಟೋಪಚಾರಗಳನ್ನು ಆಸ್ವಾದಿಸಲು ಅನುಕೂಲವಾಗುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ದೂರವಾಣಿ: 080-26616678/ 7022259001 / 9449478944.
website: www.adigasyatra.com