Thursday, June 12, 2025
Thursday, June 12, 2025

ಭಾರತದ 5 ಅತ್ಯುತ್ತಮ ಬಂಜೀ ಜಂಪಿಂಗ್ ಸ್ಥಳಗಳು

ಬಂಜೀ ಜಂಪಿಂಗ್‌ನ ಅನುಭವ ಅನೇಕರಿಗೆ ರೋಮಾಂಚಕವೆನ್ನಿಸಿದರೆ ಮತ್ತು ಹಲವರಲ್ಲಿ ಭಯವನ್ನು ಹುಟ್ಟುಹಾಕುತ್ತದೆ. ಆದರೂ ಲೈಫ್‌ ನಲ್ಲಿ ಒಂದು ಬಾರಿಯಾದರೂ ಟ್ರೈ ಮಾಡಲೇಬೇಕಾದ ಬಂಜೀ ಜಂಪಿಂಗ್ ತಾಣಗಳ ಮಾಹಿತಿ ಇಲ್ಲಿವೆ.

ಭಾರತದ ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವಾಸಿಗರಿಗೆ ಸಾಕಷ್ಟು ಅವಕಾಶಗಳಿದ್ದು, ಬಂಜೀ ಜಂಪಿಂಗ್ ಎಲ್ಲದರಲ್ಲೂ ವಿಭಿನ್ನವೆನ್ನಿಸಿಕೊಂಡಿದೆ. ಹೌದು, ಬಂಜೀ ಜಂಪಿಂಗ್ ಕೇವಲ ರೋಮಾಂಚನವಲ್ಲ ಉಂಟುಮಾಡುದಷ್ಟೇ ಅಲ್ಲ, ಬದಲಾಗಿ ಇದು ಅಜ್ಞಾತಕ್ಕೆ ಜಿಗಿತ, ಗುರುತ್ವಾಕರ್ಷಣೆ ಮತ್ತು ಮನದೊಳಗೆ ಮೂಡುವ ಭಯಕ್ಕೆ ಸವಾಲು ಹಾಕುವುದೆಂದರು ತಪ್ಪಾಗಲಾರದು. ಋಷಿಕೇಶದ ಪ್ರಶಾಂತ ನದಿ ತೀರದ ಬಂಡೆಗಳಿಂದ ಹಿಡಿದು ಗೋವಾದ ಕರಾವಳಿ ಬಯಲು ಪ್ರದೇಶದ ಮೇಲೆ ಕ್ರೇನ್ ಜಿಗಿತಗಳವರೆಗೆ ಪ್ರಮಾಣೀಕೃತ ಮತ್ತು ಸುರಕ್ಷಿತ ಅನುಭವವನ್ನು ನೀಡುವ ಭಾರತದ ಪ್ರಮುಖ ಬಂಜೀ ಜಂಪಿಂಗ್ ಸ್ಥಳಗಳು ಇಲ್ಲಿವೆ.

bungee jump

ಭಾರತದಲ್ಲಿ ಜನಪ್ರಿಯ ಬಂಜೀ ಜಂಪಿಂಗ್ ತಾಣಗಳು

ಜಂಪಿನ್ ಹೈಟ್ಸ್, ರಿಷಿಕೇಶ್:

ಭಾರತದ ಅತಿ ಎತ್ತರದ ಬಂಜೀ ಜಂಪಿಂಗ್‌ ತಾಣವಿರುವುದು ಋಷಿಕೇಶ್ ಬಳಿ, ಮೋಹನ್ ಚಟ್ಟಿ ಎಂಬ ಸಣ್ಣ ಹಳ್ಳಿಯಲ್ಲಿ. ಅನೇಕ ಜನರು ಬಂಜೀ ಜಂಪಿಂಗ್‌ ಮೂಲಕ ಒತ್ತಡದಿಂದ ಹೊರಬಂದು, ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಶಿವಾಲಿಕ್ ಶ್ರೇಣಿಯ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಜಂಪಿನ್ ಹೈಟ್ಸ್ ಭಾರತದ ಅತಿ ಎತ್ತರದ ಮತ್ತು ಅತ್ಯಂತ ವೃತ್ತಿಪರ ಬಂಜೀ ಜಂಪಿಂಗ್ ತಾಣವಾಗಿದೆ. ಮಾಜಿ ಸೇನಾ ಅಧಿಕಾರಿಗಳಿಂದ ನಿರ್ವಹಿಸಲ್ಪಟ್ಟು, ಪ್ರವಾಸೋದ್ಯಮ ಸಚಿವಾಲಯದಿಂದ ಪ್ರಮಾಣೀಕರಿಸಲ್ಪಟ್ಟ ಬಂಜೀ ಜಂಪಿಂಗ್‌ ಪ್ಲಾಟ್‌ಫಾರ್ಮ್ ಸುರಕ್ಷತೆಯ ಅನುಭವವನ್ನೂ ನೀಡುತ್ತದೆ. ಜೊತೆಗೆ ನಿಮ್ಮ ಅನುಭವಕ್ಕಾಗಿ ಪ್ರಮಾಣಪತ್ರ ಮತ್ತು ವೀಡಿಯೊವನ್ನು ಪಡೆಯುತ್ತೀರಿ.

ಸ್ಥಳ: ಮೋಹನ್ ಚಟ್ಟಿ, ರಿಷಿಕೇಶ್, ಉತ್ತರಾಖಂಡ್

ಎತ್ತರ: 83 ಮೀ

bungee-jumping-

ಡೆಲ್ಲಾ ಅಡ್ವೆಂಚರ್ ಪಾರ್ಕ್, ಲೋನಾವಾಲ:

ಪಶ್ಚಿಮ ಭಾರತದ ಸಾಹಸ ರಾಜಧಾನಿ ಎಂದೇ ಕರೆಯಲ್ಪಡುವ ಡೆಲ್ಲಾ ಅಡ್ವೆಂಚರ್ಸ್ ಪುಣೆಯ ಹೊರವಲಯದಲ್ಲಿರುವ ಲೋನಾವಾಲ ಎಂಬ ಒಂದು ಸಣ್ಣ ಹಳ್ಳಿಯ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 1,250 ಅಡಿ ಎತ್ತರದಲ್ಲಿರುವ ಈ ತಾಣದಲ್ಲಿ ಅನೇಕ ತಜ್ಞರು ನಿಮ್ಮೊಂದಿದ್ದು ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪರಿಶೀಲಿಸುತ್ತಾರೆ. ನೀವು ಫಿಸಿಕಲಿ ಫಿಟ್‌ ಎಂದು ಅನಿಸಿದ ನಂತರವಷ್ಟೇ ಬಂಜೀ ಜಂಪಿಂಗ್‌ ಗೆ ಅನುವು ಮಾಡುತ್ತಾರೆ. ಅಲ್ಲದೆ ನಿಮ್ಮ ಅನುಭವಕ್ಕೆ ಪ್ರಮಾಣಪತ್ರವನ್ನು ನೀಡುತ್ತಾರೆ.

ಸ್ಥಳ: ಲೋನಾವಾಲ, ಮಹಾರಾಷ್ಟ್ರ

ಎತ್ತರ: 45 ಮೀ

ವಾಂಡರ್‌ಲಸ್ಟ್ ಎಕ್ಸ್‌ಟ್ರೀಮ್ ಅಡ್ವೆಂಚರ್ಸ್, ನವದೆಹಲಿ:

ದೆಹಲಿಯ ಮೊದಲ ಅಧಿಕೃತ ಬಂಜೀ ಜಂಪಿಂಗ್ ಅನುಭವ ಕೇಂದ್ರವು ಸಾಕೇತ್‌ನ ಗಾರ್ಡನ್ ಆಫ್ ಫೈವ್ ಸೆನ್ಸಸ್‌ನಲ್ಲಿದೆ. ವಾಂಡರ್‌ಲಸ್ಟ್ ಸಂಸ್ಥೆಯು ದೆಹಲಿ ಪ್ರವಾಸೋದ್ಯಮದೊಂದಿಗೆ ಜೊತೆಗೂಡಿ ಸಾಹಸಿ ಪ್ರವಾಸಿಗರಿಗಾಗಿ ಈ ಅವಕಾಶವನ್ನು ಕಲ್ಪಿಸಿದೆ. ಜರ್ಮನ್ ಸುರಕ್ಷತೆ ಮತ್ತು ಜಪಾನೀಸ್ ತಂತ್ರಜ್ಞಾನದ ಮಾನದಂಡಗಳ ಪ್ರಕಾರ ಸುಮಾರು 130 ಅಡಿ ಎತ್ತರದ ಕ್ರೇನ್‌ಗೆ ಜೋಡಿಸಲಾದ ಉಪಕರಣದೊಂದಿಗೆ ನಿರ್ಮಿಸಲಾಗಿದೆ.

ಸ್ಥಳ: ಗಾರ್ಡನ್ ಆಫ್ ಫೈವ್ ಸೆನ್ಸಸ್, ಸಾಕೇತ್, ದೆಹಲಿ

ಎತ್ತರ: 52 ಮೀ

bungee-jumping1

ಗ್ರಾವಿಟಿ ಅಡ್ವೆಂಚರ್ ಝೋನ್, ಗೋವಾ:

ಬೀಚ್‌ಸೈಡ್ ಬಂಜೀ ಫನ್ ಇಷ್ಟಪಡುವವರಿಗೆ ಗೋವಾದ ಗ್ರಾವಿಟಿ ಅಡ್ವೆಂಚರ್ ಝೋನ್ ಮೊದಲ ಆಯ್ಕೆಯಾಗಿರುತ್ತದೆ. ಗಾತ್ರದಲ್ಲಿ ಚಿಕ್ಕದಾದರೂ, ಇದು ನೀಡುವ ನೋಟಗಳು ಅದ್ಭುತವಾಗಿದೆ. ಹೌದು, ಅಂಜುನಾ ಬೀಚ್‌ನಿಂದ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವ ಗ್ರಾವಿಟಿ ಅಡ್ವೆಂಚರ್ ಝೋನ್, ಬಹು ಬೇಡಿಕೆ ಬಂಜೀ ಜಂಪಿಂಗ್‌ ತಾಣವಾಗಿದೆ.

ಸ್ಥಳ: ಅಂಜುನಾ ಬೀಚ್ ಹತ್ತಿರ, ಗೋವಾ

ಎತ್ತರ: 25 ಮೀ

ಓಝೋನ್ ಅಡ್ವೆಂಚರ್ಸ್, ಬೆಂಗಳೂರು:

ದಕ್ಷಿಣ ಭಾರತದ ಮೊದಲ ಕ್ರೇನ್ ಜಂಪ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನ ಓಝೋನ್ ಅಡ್ವೆಂಚರ್ಸ್‌ನಲ್ಲಿ ಬಂಜೀ ಜಂಪಿಂಗ್, ನೆಲದಿಂದ ಸುಮಾರು 60 ಮೀಟರ್ ಎತ್ತರದಲ್ಲಿದೆ. ಎತ್ತರ ಅಷ್ಟಾಗಿ ಇಲ್ಲವಾದರೂ ಕಡಿಮೆ ದರದಲ್ಲಿ ಬಂಜೀ ಜಂಪಿಂಗ್‌ ಅನುಭವ ಪಡೆಯಲು ಬಯಸುವ ನಗರವಾಸಿಗಳಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಆದರೆ ಇಲ್ಲಿಗೆ ತೆರಳುವ ಮುನ್ನವೇ ಪ್ರಿ ಬುಕ್ಕಿಂಗ್‌ ಮಾಡಿ ಹೋಗುವುದು ಮಾತ್ರ ಅತೀ ಅಗತ್ಯ.

ಸ್ಥಳ: ಬೆಂಗಳೂರು

ಎತ್ತರ: 25 ಮೀ

bungee jumping new

ಸಿಂಕಿಂನ ಸಿಂಗಶೋರ್ ಸೇತುವೆ:

2025ರಲ್ಲಿ ಪ್ರಾರಂಭವಾದ ಸಿಕ್ಕಿಂನ ಐಕಾನಿಕ್ ಸಿಂಗ್ಶೋರ್ ಸೇತುವೆಯ ಬಳಿಯ ಮೊದಲ ಬಂಜೀ ಜಂಪ್ ವಿಶೇಷವಾದ ಪರ್ವತ ನೋಟಗಳ ಜೊತೆಗೆ ಹೊಸ ಅನುಭವವನ್ನು ಸಾಹಸ ಪ್ರಿಯರಿಗೆ ನೀಡುತ್ತದೆ.

ಸ್ಥಳ: ಪಶ್ಚಿಮ ಸಿಕ್ಕಿಂ

ಎತ್ತರ: 100 ಮೀ

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..