Thursday, June 12, 2025
Thursday, June 12, 2025

ವಿಶ್ವದ ಅತಿದೊಡ್ಡ ದ್ವೀಪಗಳ ಪರಿಚಯ ನಿಮಗಿದೆಯಾ ?

ದ್ವೀಪಗಳೆಂದರೆ ಮೊದಲು ನೆನಪಾಗುವುದೇ ಶಾಂತವಾದ ಕಡಲತೀರ, ತೂಗಾಡುವ ತಾಳೆ ಮರಗಳು, ವಿಶೇಷವಾದ ಅನುಭವ ಕೊಡಲು ಬೋಟ್ ಪ್ರಯಾಣ..ಆದರೆ ಕೆಲವು ದ್ವೀಪಗಳು ಇಂತಹ ಯೋಜನೆಗಳಿಂದಾಚೆಗೆ ಹೊಸ ಲೋಕವನ್ನೇ ಪ್ರವಾಸಿಗರಿಗೆ ಪರಿಚಯಿಸುತ್ತದೆ. ಜಗತ್ತಿನಾದ್ಯಂತವಿರುವ ಅಂತಹ ವಿಶೇಷ ದ್ವೀಪಗಳ ಪರಿಚಯ ಇಲ್ಲಿದೆ.

ಕರ್ನಾಟಕ ಸೈಂಟ್‌ ಮೇರೀಸ್‌ ದ್ವೀಪವನ್ನು ನೋಡಿರುವ ಪ್ರವಾಸಿರು, ದ್ವೀಪವೆಂದರೆ ಹೀಗಿರುತ್ತಾ ಎಂದು ಬೆರಗುಗಣ್ಣಿನಿಂದ ನೋಡುತ್ತಾರೆ. ಆದರೆ ದ್ವೀಪವೆಂದರೆ ಇಷ್ಟೇ ಅಲ್ಲ, ಒಂದು ದೇಶವನ್ನು ಹರಡಿಕೊಂಡಿರುವಷ್ಟು ಬೃಹದಾಕಾರದಲ್ಲೂ ದ್ವೀಪಗಳಿರುತ್ತವೆ. ಇವು ಸಾಗರದಲ್ಲಿನ ದೂರದ ಚುಕ್ಕೆಗಳಲ್ಲ; ಅವು ಶ್ರೀಮಂತ ಸಂಸ್ಕೃತಿಗಳು, ಅನನ್ಯ ವನ್ಯಜೀವಿಗಳು ಮತ್ತು ಕರಾವಳಿಯ ಅದ್ಭುತ ದೃಶ್ಯಗಳಿಂದ ತುಂಬಿರುವ ವಿಶಾಲ, ವೈವಿಧ್ಯಮಯ ಭೂಮಿಗಳಾಗಿವೆ. ಜಗತ್ತಿನಾದ್ಯಂತ ನೀವು ಭೇಟಿ ಕೊಡಲೇಬೇಕಿರುವ ವಿಶೇಷವಾದ ದ್ವೀಪಗಳ ಮಾಹಿತಿ ಇಲ್ಲಿದೆ.

ಜಗತ್ತಿನ ಅತೀ ದೊಡ್ಡ ದ್ವೀಪಗಳಿವು:

ಗ್ರೀನ್‌ಲ್ಯಾಂಡ್ (Greenland)- 2,166,086 ಚದರ ಕಿ.ಮೀ

Greenland ದ

ಕೆನಡಾದ ಭಾಗವಲ್ಲ - ಗ್ರೀನ್‌ಲ್ಯಾಂಡ್ ಖಂಡವಲ್ಲದ ವಿಶ್ವದ ಅತಿದೊಡ್ಡ ಈ ದ್ವೀಪವಿದು. ರಾಜಕೀಯವಾಗಿ ಡೆನ್ಮಾರ್ಕ್‌ಗೆ ಸಂಬಂಧಿಸಿದ್ದರೂ ಭೌಗೋಳಿಕವಾಗಿ ಉತ್ತರ ಅಮೆರಿಕದ ಭಾಗವಾಗಿರುವ ಗ್ರೀನ್‌ಲ್ಯಾಂಡ್ 80% ಮಂಜುಗಡ್ಡೆಯಿಂದ ಆವೃತವಾಗಿದೆ. ಆದರೂ, ದ್ವೀಪದ ಕರಾವಳಿಯು ಕಿರಿದಾದ ಪಟ್ಟಣಗಳಿಂದ ಕೂಡಿದೆ. ಹಂಪ್‌ಬ್ಯಾಕ್ ತಿಮಿಂಗಿಲಗಳನ್ನು ನೋಡಬಯಸುವ ಪ್ರವಾಸಿಗರಿಗಿದು ಸೂಕ್ತ ತಾಣ. ಒಂದು ಕಾಲದಲ್ಲಿ ಈ ದ್ವೀಪಕ್ಕೆ ಪ್ರವೇಶಿಸುವುದಕ್ಕೂ ಅವಕಾಶವಿಲ್ಲದಾಗಿತ್ತು, ಸದ್ಯ ದ್ವೀಪದ ಕೆಲವು ಭಾಗಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಗ್ರೀನ್‌ಲ್ಯಾಂಡ್‌ನ ಸುಮಾರು 15% ಮಾತ್ರ ಹಸಿರು ಭಾಗವಾಗಿದ್ದು, ಬಹುಪಾಲು ಮಂಜುಗಡ್ಡೆಯಿಂದ ಆವೃತವಾಗಿದೆ.

ನ್ಯೂ ಗಿನಿಯಾ (New Guinea) -785,753 ಚದರ ಕಿಮೀ

New Guinea

ಪೂರ್ವದಲ್ಲಿ ಪಪುವಾ ನ್ಯೂಗಿನಿಯಾ ಮತ್ತು ಪಶ್ಚಿಮದಲ್ಲಿ ಇಂಡೋನೇಷ್ಯಾ ನಡುವೆ ಹಂಚಿಕೊಂಡಿರುವ ನ್ಯೂಗಿನಿಯಾ ಜಾಗತಿಕವಾಗಿ ಎರಡನೇ ಅತಿದೊಡ್ಡ ದ್ವೀಪವಾಗಿದೆ. ಅಲ್ಲದೆ ಭೂಮಿಯ ಮೇಲಿನ ಅತ್ಯಂತ ಜೀವವೈವಿಧ್ಯವಿರುವ ಸ್ಥಳಗಳಲ್ಲಿ ಒಂದಾಗಿದ್ದು, ವಿಶ್ವದ ಜೀವವೈವಿಧ್ಯದ 5% ಕ್ಕಿಂತ ಹೆಚ್ಚು ಪಾಲು ಇಲ್ಲಿ ಕಂಡುಬರುತ್ತದೆ. ಪ್ರಾಚೀನ ಸಂಪ್ರದಾಯಗಳನ್ನು ಇನ್ನೂ ಪಾಲಿಸುತ್ತಿರುವ ಬುಡಕಟ್ಟು ಜನಾಂಗಗಳೂ ಇಲ್ಲಿವೆ.

ಬೊರ್ನಿಯೊ (Borneo) -748,168 ಚದರ ಕಿಮೀ

Borneo

ಮೂರನೇ ಅತಿದೊಡ್ಡ ದ್ವೀಪವಾದ ಬೊರ್ನಿಯೊ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಬ್ರೂನಿಗಳ ಗಡಿಭಾಗದಲ್ಲಿದೆ. ಇದು ವಿಶ್ವದಲ್ಲೇ 130 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಮಳೆಕಾಡುಗಳಿಗೆ ನೆಲೆಯಾಗಿದೆ.

ಮಡಗಾಸ್ಕರ್ (Madagascar) -587,041 ಚದರ ಕಿಮೀ

Madagascar

ಆಫ್ರಿಕಾದ ಆಗ್ನೇಯ ಕರಾವಳಿಯಿಂದ ತೇಲುತ್ತಿರುವ ಮಡಗಾಸ್ಕರ್ ಸುಮಾರು 90% ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಇಲ್ಲಿ ಕಾಲ್ಪನಿಕ ಚಿತ್ರದ ಸೆಟ್‌ನಂತೆ ಕಾಣುವ ಮುಳ್ಳು ಕಾಡುಗಳು ಮತ್ತು ವಿಶೇಷವಾದ ಶಿಲಾ ರಚನೆಗಳೆಲ್ಲವೂ ಮೋಡಿ ಮಾಡುತ್ತವೆ. ಐಷಾರಾಮಿ ಮೂಲಸೌಕರ್ಯವನ್ನು ಎಲ್ಲ ಕಡೆಯಲ್ಲೂ ಕಾಣದಿರಬಹುದು, ಸುತ್ತಾಡುವುದು ಕಷ್ಟಕರವಾಗಬಹುದು, ಆದರೆ ಅದರಿಂದ ಸಿಗುವ ಅನುಭವ ಬಹಳ ವಿಶೇಷವಾಗಿರುತ್ತದೆ. ಏಪ್ರಿಲ್ ಮತ್ತು ನವೆಂಬರ್ ನಡುವೆ ಮಡಗಾಸ್ಕರ್‌ಗೆ ಭೇಟಿ ನೀಡುವುದು ಉತ್ತಮ.

ಬ್ಯಾಫಿನ್ ದ್ವೀಪ (Baffin Island) - 507,451 ಚದರ ಕಿ.ಮೀ

Baffin Island

ಕೆನಡಾದ ನುನಾವುಟ್ ಪ್ರದೇಶದಲ್ಲಿರುವ ಬ್ಯಾಫಿನ್ ದ್ವೀಪವು ಭೂಮಿಯ ಮೇಲಿನ ಐದನೇ ಅತಿದೊಡ್ಡ ದ್ವೀಪ ಎನಿಸಿಕೊಂಡಿದೆ. ಸಾಹಸ ಪ್ರಯಾಣವನ್ನು ಮೆಚ್ಚಿಕೊಳ್ಳುವವರು ಇಲ್ಲಿಗೆ ಭೇಟಿ ನೀಡುವುದು ರೂಢಿ. ಆರ್ಕ್ಟಿಕ್ ಸಫಾರಿಗಳು, ಹೆಪ್ಪುಗಟ್ಟಿದ ಪರಿಸರದ ನಡುವೆ ಸ್ನೋಮೊಬೈಲಿಂಗ್ ಅಥವಾ ಆಯುಯಿಟ್ಟುಕ್ ರಾಷ್ಟ್ರೀಯ ಉದ್ಯಾನವನದಲ್ಲಿ ಗ್ರಾನೈಟ್ ಬಂಡೆಗಳನ್ನು ಹತ್ತುವುದು ಇಂತಹ ಸಾಹಸಗಳನ್ನು ಮೆಚ್ಚಿಕೊಳ್ಳುವವರು ನೀವಾದರೆ ಬ್ಯಾಫಿನ್ ದ್ವೀಪಕ್ಕೆ ತಪ್ಪದೆ ಭೇಟಿಕೊಡಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..