Friday, July 10, 2026
Friday, July 10, 2026

ಫ್ಲೋರಿಡಾದ ಅಟ್ಲಾಂಟಿಕ್ ಕರಾವಳಿಯಲ್ಲಿ ರಿಪ್ ಕರೆಂಟ್‌ಗಳ ಆತಂಕ – ಪ್ರವಾಸಿಗರಿಗೆ ಎಚ್ಚರಿಕೆ

ಮಿಯಾಮಿ, ಬೊಕಾ ರಾಟಾನ್, ವೆಸ್ಟ್ ಪಾಮ್ ಬೀಚ್, ಕೊರಲ್ ಸ್ಪ್ರಿಂಗ್ಸ್ ಮತ್ತು ಪಾಂಪಾನೋ ಬೀಚ್ ಸೇರಿದಂತೆ ದಕ್ಷಿಣ ಫ್ಲೋರಿಡಾದ ಕೆಲವು ಭಾಗಗಳು ‘ಹೈ-ರಿಸ್ಕ್’ ಜೋನ್ ಆಗಿ ಗುರುತಿಸಲ್ಪಟ್ಟಿವೆ. ಪೆನ್ಸಕೊಲಾ ಮತ್ತು ಟಲ್ಲಹಾಸಿ ಕೂಡ ಈ ಪಟ್ಟಿಯಲ್ಲಿ ಸೇರಿವೆ.

ಅಮೆರಿಕದ (America) ರಾಷ್ಟ್ರೀಯ ಹವಾಮಾನ ಸೇವೆ (NWS) ಫ್ಲೋರಿಡಾದ
(Florida) ಅಟ್ಲಾಂಟಿಕ್ ಕರಾವಳಿಯಲ್ಲಿ (Atlantic Coastline) ರಿಪ್ ಕರೆಂಟ್‌ಗಳ (rip current) ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಕಳೆದ ವಾರದಿಂದ ಹವಾಮಾನ ಇಲಾಖೆ ಈ ಬಗ್ಗೆ ಅಧಿಕೃತ ಎಚ್ಚರಿಕೆಯನ್ನು ನೀಡಿದ್ದು, ಈಗ ಎಚ್ಚರಿಕೆ ಹಿಂತೆಗೆದುಕೊಳ್ಳಲ್ಪಟ್ಟಿದ್ದರೂ ಕೆಲವು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಅಪಾಯವಿದೆ.

NWS ಪ್ರಕಾರ, ಮಿಯಾಮಿ, ಬೊಕಾ ರಾಟಾನ್, ವೆಸ್ಟ್ ಪಾಮ್ ಬೀಚ್, ಕೊರಲ್ ಸ್ಪ್ರಿಂಗ್ಸ್ ಮತ್ತು ಪಾಂಪಾನೋ ಬೀಚ್ ಸೇರಿದಂತೆ ದಕ್ಷಿಣ ಫ್ಲೋರಿಡಾದ ಕೆಲವು ಭಾಗಗಳು ‘ಹೈ-ರಿಸ್ಕ್’ ಜೋನ್ ಆಗಿ ಗುರುತಿಸಲ್ಪಟ್ಟಿವೆ. ಪೆನ್ಸಕೊಲಾ ಮತ್ತು ಟಲ್ಲಹಾಸಿ ಕೂಡ ಈ ಪಟ್ಟಿಯಲ್ಲಿ ಸೇರಿವೆ.

ಹವಾಮಾನ ಇಲಾಖೆಯ ವೆಬ್‌ಸೈಟ್‌ (weather.gov) ಪ್ರತಿದಿನ ಅಪ್ಡೇಟ್ ಆಗುತ್ತಿದ್ದು, ಪ್ರವಾಸಿಗರು ಲೈವ್ ಮಾಹಿತಿಗಾಗಿ ಇದನ್ನು ಪರಿಶೀಲಿಸಬಹುದು.

ರಿಪ್ ಕರೆಂಟ್ ಎಂದರೇನು?
ರಿಪ್ ಕರೆಂಟ್‌ಗಳು ಕರಾವಳಿಯಿಂದ ಸಾಗರದೊಳಗೆ ವೇಗವಾಗಿ ಹರಿಯುವ ನೀರಿನ ಕೊಳವೆಗಳು. ಈ ನೀರಿನ ಸೆಳೆತವು ತೀವ್ರವಾಗಿರುತ್ತದೆ ಮತ್ತು ಇತಕರು ದಡದಲ್ಲಿ ಈಜುವುದನ್ನು ಕಷ್ಟಗೊಳಿಸುತ್ತದೆ. ಪ್ರತಿವರ್ಷ ಟೋರ್ನಾಡೋ ಅಥವಾ ಚಂಡಮಾರುತಕ್ಕಿಂತ ಹೆಚ್ಚು ಜನರ ಮರಣಕ್ಕೆ ಕಾರಣವಾಗುತ್ತಿರುವುದು ರಿಪ್ ಕರೆಂಟ್‌ಗಳು.

“ಮಣ್ಣು ಸ್ಪರ್ಶಿಸುವ ಮೊದಲು ಎಚ್ಚರಿಕೆಯಿಂದಿರಿ!” ಎಂಬ ಸಂದೇಶವನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಗೆ ಹೋದಾಗ ಲೈಫ್‌ಗಾರ್ಡ್‌ ಇರುವ ಬೀಚ್‌ಗಳಲ್ಲಿಯೇ ಈಜುವುದನ್ನು ಪ್ರಾಧಾನ್ಯತೆ ನೀಡಬೇಕು.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..