ಬಾವಿಗೆ ತಳ್ಳುವ ಪ್ರಭಾವಿಗಳು
ಈಗೆಲ್ಲ ಡಿಜಿಟಲ್ ಮೀಡಿಯಾದ್ದೇ ಹವಾ. ರೀಲ್ಸ್ ನಿಂದಾನೇ ನಿಮಗೆ ಬ್ಯುಸಿನೆಸ್‌ಸಿಗೋದು ಎಂದು ನಂಬಿಸಿ ಎರಡು ದಿನ ಮಜಾ ಮಾಡಿ ಅಲ್ಲಿಂದ ಹೊರಡುತ್ತಾರೆ. ಮರುದಿನವೇ ರೀಲ್ಸ್ ಬರುತ್ತದೆ. ಆದರೆ ಆ ರೀಲ್ಸ್ ತುಂಬಾ ಇರೋದು ಹೀರೋಯಿಸಂ.. ಕೋತಿಯಾಟ ಅಷ್ಟೆ.
ಇನ್ ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್, ಯೂಟ್ಯೂಬರ್ ಎಂದು ರೆಸಾರ್ಟ್ ಓನರ್ ಗಳನ್ನು ಮತ್ತು ಟೂರ್ ಆಪರೇಟರ್ ಗಳನ್ನು ಯಾಮಾರಿಸುವ ಟ್ರೆಂಡೊಂದು ಇದೀಗ ಶುರುವಾಗಿದೆ. ಡಿಜಿಟಲ್ ಮಾಧ್ಯಮಗಳಲ್ಲಿ ಫೇಕ್ ಫಾಲೋವರ್ ಗಳನ್ನು ಕೊಂಡುಕೊಂಡು ಪೋಸ್ಟ್ ಗಳನ್ನು ಬೂಸ್ಟ್ ಮಾಡಿಕೊಂಡು ಲಕ್ಷ ಲಕ್ಷ ವೀಕ್ಷಣೆ ಕಾಣುವಂತೆ ಮಾಡಿಕೊಳ್ಳುವುದು ಇವರ ಮೊದಲ ಹೆಜ್ಜೆ. ನಂತರ ತಮ್ಮನ್ನು ಕೊಲ್ಯಾಬ್ ಗಾಗಿ ಸಂಪರ್ಕಿಸಿ, ಇನ್ ಫ್ಲುಯೆನ್ಸ್ ಗಾಗಿ ಕಾಂಟ್ಯಾಕ್ಟ್ ಮಾಡಿ ಎಂದು ಡಿಸ್ಕ್ರಿಪ್ಶನ್ ನಲ್ಲಿ ಹಾಕಿಕೊಳ್ಳುತ್ತಾರೆ.

ಮೊದಲಿಗೆ ಕೆಲವು ಜಾಗಗಳಿಗೆ ತಾವು ಹೋಗಿ ಅಲ್ಲಿ ಚಿತ್ರವಿಚಿತ್ರ ರೀಲ್ಸ್ ಮಾಡಿ ಹಾಕಿಕೊಂಡು ಅದಕ್ಕೆ ನಕಲಿ ವೀಕ್ಷಣೆ ತರುತ್ತಾರೆ. ಆನಂತರ ಅದನ್ನು ತೋರಿಸಿ ಮಾರ್ಕೆಟಿಂಗ್ ಶುರುವಿಟ್ಟುಕೊಳ್ಳುತ್ತಾರೆ. ರೆಸಾರ್ಟ್ ಗಳವರ ಎದುರು ತಮ್ಮ ನಕಲೀ ಹವಾ ತೋರಿಸಿ ವ್ಯವಹಾರಕ್ಕೆ ಇಳಿಯುವ ಇವರು ಲಕ್ಷ ರುಪಾಯಿಯಿಂದ ಡೀಲ್ ಶುರುಮಾಡುತ್ತಾರೆ. ನಂತರ ಐದು ಆರು ಸಾವಿರ ರುಪಾಯಿಗೆ ಇಳಿಯುತ್ತಾರೆ. ಕೊನೆಗೆ ಅದಕ್ಕೂ ಬರಲಿಲ್ಲವೆಂದರೆ, ಫ್ರೀ ರೆಸಾರ್ಟ್ ಸ್ಟೇ ಕೊಟ್ಟುಬಿಡಿ, ಊಟ ತಿಂಡಿ ಕೊಡಿ.. ನಿಮ್ಮ ರೆಸಾರ್ಟ್ ಗೆ ನಾಳೆ ನನ್ನ ರೀಲ್ಸ್ ರಿಲೀಸಾದ ಮೇಲೆ ಹೇಗಿರುತ್ತೆ ಡಿಮ್ಯಾಂಡ್ ಅಂತ ನೋಡಿ ಅಂತಾರೆ. ರೆಸಾರ್ಟ್‌ನವರು ಬಣ್ಣದ ಮಾತಿಗೆ ಮರುಳಾಗಿಬಿಡ್ತಾರೆ.
ಈಗೆಲ್ಲ ಡಿಜಿಟಲ್ ಮೀಡಿಯಾದ್ದೇ ಹವಾ. ರೀಲ್ಸ್ ನಿಂದಾನೇ ನಿಮಗೆ ಬ್ಯುಸಿನೆಸ್‌ಸಿಗೋದು ಎಂದು ನಂಬಿಸಿ ಎರಡು ದಿನ ಮಜಾ ಮಾಡಿ ಅಲ್ಲಿಂದ ಹೊರಡುತ್ತಾರೆ. ಮರುದಿನವೇ ರೀಲ್ಸ್ ಬರುತ್ತದೆ. ಆದರೆ ಆ ರೀಲ್ಸ್ ತುಂಬಾ ಇರೋದು ಹೀರೋಯಿಸಂ.. ಕೋತಿಯಾಟ ಅಷ್ಟೆ. ಅದರಲ್ಲಿ ಹುಡುಕಿದರೂ ರೆಸಾರ್ಟ್‌ಬಗ್ಗೆ ವಿವರ ಕಾಣುವುದಿಲ್ಲ. ಯಾವ ರೆಸಾರ್ಟ್ ಬಗ್ಗೆ ರೀಲ್ಸ್ ಅಂತಾನೂ ಗೊತ್ತಾಗುವುದಿಲ್ಲ. ಅಲ್ಲಿರೋದೆಲ್ಲ ರೀಲ್ಸ್‌ಶೂರನ ಕ್ಲೋಸಪ್ ಹೊರತು ರೆಸಾರ್ಟ್ ನ ಕಿಂಚಿತ್ತು ಪರಿಚಯವೂ ಇರುವುದಿಲ್ಲ. ಏನಪ್ಪಾ ನಿನ್ನ ರೀಲ್ಸ್ ಬಂದಮೇಲೆ ಪವಾಡ ನಡೆಯುತ್ತೆ ಅಂತ ಅಂದಿದ್ದೆ. ನಮಗೊಂದೇಒಂದು ಕಾಲ್ ಕೂಡ ಬಂದಿಲ್ಲವಲ್ಲ ಅಂತ ಕೇಳಿದರೆ, ಈ ರೀಲ್ಸ್‌ನಿಂದ ನಂಗೆ ಸಾವಿರ ಫಾಲೋವರ್ಸ್ ಜಾಸ್ತಿ ಆಗಿದಾರೆ ಸಾರ್ ಅಂತಾನೆ ಶೂರ. ನಮಗೇನು ಲಾಭ ಅದರಿಂದ ಅಂತ ರೆಸಾರ್ಟ್ ಮಾಲೀಕ ಗದರಿದರೆ, ಸಾರ್ ನೀವು ನಾನು ಹೇಳಿದ ಅಮೌಂಟ್ ಗೆ ಒಪ್ಪಿದ್ದಿದ್ರೆ ರೆಸಾರ್ಟಿನ ವಿಡಿಯೋ ಮಾಡಿರ್ತಿದ್ದೆ. ನೀವು ಫ್ರೀ ಸ್ಟೇ ಮತ್ತು ಊಟ ತಿಂಡಿ ಮಾತ್ರ ಕೊಟ್ಟಿರಿ. ಆ ಪ್ಯಾಕೇಜಲ್ಲಿ ಇಷ್ಟೇ ಮಾಡೋದು ನಾವು. ಇರ್ಲಿ ನಂಗೆ ಡಿಎಂ ಮಾಡಿ ಸಾವಿರಾರು ಜನ ಈ ರೆಸಾರ್ಟ್ ಬಗ್ಗೆ ವಿಚಾರಿಸಿದ್ದಾರೆ. ನಿಮಗೂ ಫೋನ್ ಬರಬಹುದು ಕಾಯಿರಿ ಎನ್ನುತ್ತಾನೆ.

ಡಿಜಿಟಲ್ ದಗಾ ಯಾವಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಇದು ನೈಜಘಟನೆ. ರೆಸಾರ್ಟ್ ಓನರ್ ಒಬ್ಬ ಮೋಸ ಹೋದಕಥೆ. ಅಫ್ ಕೋರ್ಸ್ ಆತನಿಗೇನೂ ಭಾರಿ ನಷ್ಟವೇನಾಗಿಲ್ಲ. ಆದರೆ ಇಂಥ ಕೆಲಸಕ್ಕೆ ಬಾರದ ವ್ಲಾಗರ್ ಹಾವಳಿಯಿಂದ ಜೆನ್ಯೂನ್ ಮಾಧ್ಯಮಗಳಿಗೆ ಜಾಹೀರಾತು ಸಿಗದಂತಾಗಿದೆ. ನಿಜವಾಗಲೂ ಪ್ರಭಾವವಿರುವ ಯೂಟ್ಯೂಬರ್ಸ್ ಮತ್ತು ಇನ್ ಸ್ಟಾ ಇನ್ ಫ್ಲುಯೆನ್ಸರ್ ಗಳನ್ನು ಅನುಮಾನದಿಂದ ನೋಡುವಂತಾಗಿದೆ. ನಕಲಿ ವ್ಲಾಗರ್ ಗಳ ಹಾವಳಿ ಎಂದು ನಿಲ್ಲುತ್ತದೋ ಗೊತ್ತಿಲ್ಲ. ಡಿಜಿಟಲ್ ಮಾಧ್ಯಮವನ್ನು ಇವರು ಹಾಳುಗೆಡವುತ್ತಿರುವುದಂತೂ ಹೌದು.