Saturday, October 17, 2026
Saturday, October 17, 2026

ಕ್ಯಾಮೆರಾ & ಛಾಯಾಗ್ರಹಣ ಒಂದು ಹಿನ್ನೋಟ

ಒಂದು ಕಾಲದಲ್ಲಿ ಕ್ಷಣವೊಂದನ್ನು ಸೆರೆಹಿಡಿಯುವುದೇ ದೊಡ್ಡ ಸಾಹಸವಾಗಿತ್ತು. ಕ್ಯಾಮೆರಾದಿಂದ ಫಿಲ್ಮ್‌ವರೆಗೆ, ಸೆಲ್ಫೀಯಿಂದ ಡಿಜಿಟಲ್‌ ತಂತ್ರಜ್ಞಾನವರೆಗೆ ಛಾಯಾಗ್ರಹಣದ ಪಯಣ ಕುತೂಹಲಕರವಾಗಿದೆ. ಕಾಲದೊಂದಿಗೆ ಬದಲಾಗುತ್ತ ಬಂದ ಕ್ಯಾಮೆರಾಗಳ ಈ ರೋಚಕ ಪಯಣವನ್ನು ನೋಡೋಣ.

  • ಅನಂತ್‌ ಹರಿತ್ಸ

ಒಮ್ಮೆ ಕ್ಷಣವನ್ನು ಸೆರೆಹಿಡಿಯಲು ಭಾರವಾದ ಉಪಕರಣಗಳು ಮತ್ತು ಸಂಕೀರ್ಣ ಪ್ರಕ್ರಿಯೆಗಳ ಅಗತ್ಯವಿತ್ತು. ವೆಟ್‌ ಪ್ಲೇಟ್‌ ಕ್ಯಾಮೆರಾದಿಂದ ಆರಂಭವಾದ ಛಾಯಾಗ್ರಹಣದ ಪಯಣ, ಕೊಡಾಕ್‌, ಎಸ್‌ಎಲ್‌ಆರ್‌, ಡಿಎಸ್‌ಎಲ್‌ಆರ್‌ ಮೂಲಕ ಇಂದು ಮಿರರ್‌ಲೆಸ್‌ ಕ್ಯಾಮೆರಾಗಳವರೆಗೆ ಸಾಗಿದೆ. ತಂತ್ರಜ್ಞಾನದ ಈ ಬೆಳವಣಿಗೆ ಛಾಯಾಗ್ರಹಣವನ್ನು ಸರಳಗೊಳಿಸುವುದರ ಜತೆಗೆ, ನಮ್ಮ ನೆನಪುಗಳನ್ನು ದಾಖಲಿಸುವ ವಿಧಾನವನ್ನೇ ಬದಲಿಸಿದೆ.

ಇದನ್ನೂ ಓದಿ: ಸೆಲ್ಫೀ ಟ್ರೆಂಡ್‌ ಹೇಗೆ ಶುರುವಾಯಿತು ಗೊತ್ತಾ?

ಕೊಡಾಕ್‌ ಮತ್ತು ಸೆಲ್ಯೂಲಾಯ್ಡ್‌ ಫಿಲ್ಮ್‌

ನ್ಯೂಯಾರ್ಕ್‌ನ ಜಾರ್ಜ್ ಈಸ್ಟಮನ್ ಛಾಯಾಗ್ರಹಣವನ್ನು ಸರಳಗೊಳಿಸುವ ಪ್ರಯತ್ನ ಮಾಡಿದರು. 1871ರಲ್ಲಿ ರಿಚರ್ಡ್ ಲೀಚ್ ಮ್ಯಾಡಾಕ್ಸ್ ಜಿಲೆಟಿನ್ ಡ್ರೈ ಪ್ಲೇಟ್‌ ಅಭಿವೃದ್ಧಿಪಡಿಸಿದ ನಂತರ, ಈಸ್ಟಮನ್ ಡ್ರೈ ಪ್ಲೇಟ್‌ಗಳ ತಯಾರಿಕೆಗೆ ಮುಂದಾದರು. ನಂತರ ಅವರ ಕಂಪನಿಯ ಹೆನ್ರಿ ರೈಚೆನ್‌ಬ್ಯಾಕ್ ಸೆಲ್ಯೂಲಾಯ್ಡ್ ಫಿಲ್ಮ್‌ ರೋಲ್ ಅಭಿವೃದ್ಧಿಪಡಿಸಿದರು. ನೈಟ್ರೋಸೆಲ್ಯುಲೋಸ್, ಕ್ಯಾಂಫರ್ ಮತ್ತು ಆಲ್ಕೊಹಾಲ್‌ನಿಂದ ತಯಾರಾಗುತ್ತಿದ್ದ ಈ ಹೊಂದಿಕೊಳ್ಳುವ ಫಿಲ್ಮ್‌ ಛಾಯಾಗ್ರಹಣದ ಹೊಸ ಯುಗಕ್ಕೆ ದಾರಿ ಮಾಡಿಕೊಟ್ಟಿತು.

1888ರಲ್ಲಿ ಈಸ್ಟಮನ್ ‘ಕೊಡಾಕ್’ ಕ್ಯಾಮೆರಾವನ್ನು ಪರಿಚಯಿಸಿದರು. ಇದರಲ್ಲಿ ಸುಮಾರು 100 ಚಿತ್ರಗಳನ್ನು ತೆಗೆಯಬಹುದಾಗಿತ್ತು. ಫಿಲ್ಮ್‌ ಮುಗಿದ ಬಳಿಕ ಸಂಪೂರ್ಣ ಕ್ಯಾಮೆರಾವನ್ನೇ ಕಂಪನಿಗೆ ಕಳುಹಿಸಿ ಸಂಸ್ಕರಣೆ ಮಾಡಿಸಬೇಕಾಗಿತ್ತು. ಇದರ ಫೇಮಸ್‌ ಸ್ಲೋಗನ್‌, ‘You press the button, we do the rest.ʼ ನಂತರ ಬಂದ Kodak Brownieಯಲ್ಲಿ ಫಿಲ್ಮ್‌ ರೋಲನ್ನು ಮಾತ್ರ ಸಂಸ್ಕರಣೆಗೆ ಕಳುಹಿಸುವ ವ್ಯವಸ್ಥೆ ಇದ್ದುದರಿಂದ ಅದು ಅಪಾರ ಜನಪ್ರಿಯವಾಯಿತು.

Untitled design - 2026-10-17T185850.965

ಭಾರತದ ಕ್ಯಾಮೆರಾ ಮತ್ತು ಸೆಲ್ಪೀ

ಕೇರಳಂನ ಅಲೆಪ್ಪೆಯ ಕರುಣಾಕರನ್ ನಾಯರ್ 1946ರಲ್ಲಿ ತೇಗದ ಮರ, ಚರ್ಮದ ಬೆಲ್ಲೋ ಮತ್ತು ಜರ್ಮನ್ ಮಸೂರ ಬಳಸಿ ‘ವಾಗೀಶ್ವರಿ’ ಎಂಬ ಕ್ಯಾಮೆರಾವನ್ನು ತಯಾರಿಸಿದರು. ಇದು ದೇಶ-ವಿದೇಶಗಳಲ್ಲಿ ಗಮನ ಸೆಳೆಯಿತು.

1839ರಲ್ಲಿ ಅಮೆರಿಕದ ರಾಬರ್ಟ್ ಕಾರ್ನೇಲಿಯಸ್ ತೆಗೆದ ಸ್ವಯಂ ಭಾವಚಿತ್ರವನ್ನು ಪ್ರಾರಂಭಿಕ ಸೆಲ್ಫೀಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 1914ರಲ್ಲಿ ರಷ್ಯಾದ ಅನಸ್ತೇಷಿಯಾ ನಿಕೊಲಾಯೆವ್ನಾ ಕನ್ನಡಿಯ ಮುಂದೆ ತೆಗೆದುಕೊಂಡ ಚಿತ್ರ ಆರಂಭಿಕ ಮಿರರ್ ಸೆಲ್ಫೀಗಳಲ್ಲಿ ಪ್ರಸಿದ್ಧವಾಗಿದೆ. ಭಾರತದಲ್ಲಿ ತ್ರಿಪುರದ ಮಹಾರಾಜ ಬೀರ್ ಚಂದ್ರ ಮಾಣಿಕ್ಯ ಮತ್ತು ರಾಣಿ ಮನಮೋಹಿನಿ ದೇವಿಯ ಸ್ವಯಂ ಭಾವಚಿತ್ರವೂ ಐತಿಹಾಸಿಕವಾಗಿದೆ.

Untitled design - 2026-10-17T185856.459

ಮಸೂರದಿಂದ ಮಿರರ್‌ಲೆಸ್‌ವರೆಗೆ

ಫ್ರಾನ್ಸ್‌ನ ಚಾರ್ಲ್ಸ್ ಶೆವೆಲಿಯರ್ ಸೇರಿದಂತೆ ಹಲವು ವಿಜ್ಞಾನಿಗಳು ಕ್ಯಾಮೆರಾ ಮಸೂರಗಳ ಅಭಿವೃದ್ಧಿಗೆ ಕೊಡುಗೆ ನೀಡಿದರು. ನಂತರ ಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ಕನ್ನಡಿಯ ಮೂಲಕ ಮಸೂರದಿಂದ ಬರುವ ದೃಶ್ಯವನ್ನು ಚಿತ್ರದರ್ಶಕದಲ್ಲಿ ನೋಡಬಹುದಾಯಿತು. ಟಿಎಲ್‌ಆರ್‌ ಕ್ಯಾಮೆರಾಗಳಲ್ಲಿ ಎರಡು ಮಸೂರಗಳಿದ್ದವು.

ತಕ್ಷಣವೇ ಚಿತ್ರ ದೊರೆಯುವ ವ್ಯವಸ್ಥೆಯಿಂದ Polaroid ಕ್ಯಾಮೆರಾಗಳು ಜನಪ್ರಿಯವಾದವು. ನಂತರ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ಎಲೆಕ್ಟ್ರಾನಿಕ್ ಸಂವೇದಕ ಮತ್ತು ಡಿಜಿಟಲ್ ಸಂಗ್ರಹಣೆ ಬಂದಿತು. ಇತ್ತೀಚಿನ ಮಿರರ್‌ಲೆಸ್‌ ಕ್ಯಾಮೆರಾಗಳಲ್ಲಿ ಕನ್ನಡಿ ಇಲ್ಲದೆ ಸಂವೇದಕದ ಮೂಲಕ ದೃಶ್ಯವನ್ನು ಚಿತ್ರದರ್ಶಕದಲ್ಲಿ ನೋಡಬಹುದು.

ಇಂದು ಆ್ಯಕ್ಷನ್ ಕ್ಯಾಮೆರಾ, ಡ್ರೋನ್ ಕ್ಯಾಮೆರಾ, ಸಿಸಿಟಿವಿ ಮತ್ತು ವೈದ್ಯಕೀಯ ಕ್ಯಾಮೆರಾಗಳವರೆಗೆ ಛಾಯಾಗ್ರಹಣದ ತಂತ್ರಜ್ಞಾನ ನಮ್ಮ ಜೀವನದ ಹಲವು ಕ್ಷೇತ್ರಗಳ ಅವಿಭಾಜ್ಯ ಭಾಗವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?