Tuesday, October 28, 2025
Tuesday, October 28, 2025

ವಿಮಾನ ಸಂಖ್ಯೆ ಮತ್ತು ಕೋಡ್

UA 879 ಅಥವಾ EK 520. ಈ ಸಂಖ್ಯೆಗಳು ಯಾರೋ ಸುಮ್ಮನೆ ನೀಡಿದ ಅಂಕಿ ಗಳಲ್ಲ. ಅವು ವಿಮಾನದ ದಿಕ್ಕು, ಪ್ರಾಮುಖ್ಯ ಮತ್ತು ಭೌಗೋಳಿಕ ಪ್ರದೇಶದ ಬಗ್ಗೆ ಅನೇಕ ಸಂಗತಿ ಗಳನ್ನು ಹೇಳುತ್ತವೆ. ವಿಮಾನ ಸಂಖ್ಯೆಗಳು ಗುಪ್ತ ಅರ್ಥವನ್ನು ಹೊಂದಿವೆಯೇ ಎಂದರೆ, ಉತ್ತರ ಹೌದು ಮತ್ತು ಇಲ್ಲ. ವಿಮಾನ ಸಂಖ್ಯೆಗಳನ್ನು ನಿಗದಿಪಡಿಸುವಾಗ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಕೆಲವು ನಿಯಮ ಗಳನ್ನು ಅನುಸರಿಸುತ್ತವೆ.

ಪ್ರತಿ ವಿಮಾನಕ್ಕೂ ಅದರದ್ದೇ ಆದ ಸಂಖ್ಯೆ ಇರುವುದು ನಿಮಗೆ ಗೊತ್ತು. ಈ ಸಂಖ್ಯೆಗಳು ಎಲ್ಲಿಂದ ಬರುತ್ತವೆ? ಅವುಗಳ ಹಿಂದಿನ ಗುಪ್ತ ಅರ್ಥವೇನು? ಪ್ರಯಾಣಿಕರು ವಿಮಾನ ನಿಲ್ದಾಣದ ಬೋರ್ಡ್‌ ಗಳಲ್ಲಿ, ಟಿಕೆಟ್ ಗಳಲ್ಲಿ ಅಥವಾ ಬೋರ್ಡಿಂಗ್ ಪಾಸ್‌ಗಳಲ್ಲಿ ವಿಮಾನ ಸಂಖ್ಯೆಗಳನ್ನು ನೋಡುತ್ತಾರೆ.

ಉದಾಹರಣೆಗೆ, UA 879 ಅಥವಾ EK 520. ಈ ಸಂಖ್ಯೆಗಳು ಯಾರೋ ಸುಮ್ಮನೆ ನೀಡಿದ ಅಂಕಿಗಳಲ್ಲ. ಅವು ವಿಮಾನದ ದಿಕ್ಕು, ಪ್ರಾಮುಖ್ಯ ಮತ್ತು ಭೌಗೋಳಿಕ ಪ್ರದೇಶದ ಬಗ್ಗೆ ಅನೇಕ ಸಂಗತಿಗಳನ್ನು ಹೇಳುತ್ತವೆ. ವಿಮಾನ ಸಂಖ್ಯೆಗಳು ಗುಪ್ತ ಅರ್ಥವನ್ನು ಹೊಂದಿವೆಯೇ ಎಂದರೆ, ಉತ್ತರ ಹೌದು ಮತ್ತು ಇಲ್ಲ. ವಿಮಾನ ಸಂಖ್ಯೆಗಳನ್ನು ನಿಗದಿಪಡಿಸುವಾಗ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಕೆಲವು ನಿಯಮಗಳನ್ನು ಅನುಸರಿಸುತ್ತವೆ.

2

ಸಾಮಾನ್ಯವಾಗಿ, ಪೂರ್ವ ದಿಕ್ಕಿಗೆ (Eastbound) ಹೋಗುವ ವಿಮಾನಗಳಿಗೆ ಸಮ ಸಂಖ್ಯೆಗಳನ್ನು(Even Numbers) ನೀಡಲಾಗುತ್ತದೆ. ಉದಾಹರಣೆಗೆ, 420, 502, 114. ಅದೇ ರೀತಿ, ಪಶ್ಚಿಮ ದಿಕ್ಕಿಗೆ (Westbound) ಹೋಗುವ ವಿಮಾನಗಳಿಗೆ ಬೆಸ ಸಂಖ್ಯೆಗಳನ್ನು (Odd Numbers) ನೀಡಲಾಗುತ್ತದೆ. ಉದಾಹರಣೆಗೆ, 421, 503, 115. ವಿಮಾನಯಾನ ಸಂಸ್ಥೆಯು ಅತ್ಯಂತ ಪ್ರತಿಷ್ಠಿತ, ಬಹುಮುಖ್ಯ ಮತ್ತು ದೂರದ ಮಾರ್ಗಗಳಿಗೆ (Long-distance Routes) ಕಡಿಮೆ ಅಂಕಿಗಳ ಅಂದರೆ ಒಂದರಿಂದ ಎರಡು ಅಂಕಿಗಳ ಸಂಖ್ಯೆಗಳನ್ನು ನೀಡುವುದುಂಟು.

ಇದನ್ನೂ ಓದಿ: ಇಮ್ಮಿಡಿಯೇಟ್‌ ಟೇಕಾಫ್‌ ಅಂದ್ರೆ ಏನು ?

ಒಂದು ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯಲ್ಲಿ ವಿಮಾನ ಸಂಖ್ಯೆ ‘1’ ಇದ್ದರೆ, ಅದು ಸಾಮಾನ್ಯವಾಗಿ ಲಂಡನ್-ನ್ಯೂಯಾರ್ಕ್‌ನಂಥ ಪ್ರಮುಖ ಮಾರ್ಗಗಳಾಗಿರುತ್ತದೆ. ವಿಮಾನ ಸಂಖ್ಯೆಗಳನ್ನು ಪ್ರದೇಶ ಮತ್ತು ನಿರ್ದಿಷ್ಟ ಉದ್ದೇಶಗಳಿಗಾಗಿ ಗುಂಪು ಮಾಡಲಾಗುತ್ತದೆ. ಕೆಲವು ವಿಮಾನಯಾನ ಸಂಸ್ಥೆಗಳು ಭೌಗೋಳಿಕವಾಗಿ ಸಂಖ್ಯೆಗಳನ್ನು ನಿಗದಿಪಡಿಸುತ್ತವೆ.

ಉದಾಹರಣೆಗೆ, ಯುನೈಟೆಡ್ ಏರ್‌ಲೈನ್ಸ್‌ನಲ್ಲಿ, ಪೆಸಿಫಿಕ್ ಸಾಗರವನ್ನು ದಾಟುವ ವಿಮಾನಗಳಿಗೆ 8ರಿಂದ ಪ್ರಾರಂಭವಾಗುವ ಮೂರು-ಅಂಕಿಯ ಸಂಖ್ಯೆಗಳನ್ನು ನೀಡಲಾಗುತ್ತದೆ. ಏಷ್ಯಾದ ಕೆಲವು ಸಂಸ್ಕೃತಿಗಳಲ್ಲಿ 8 ಅನ್ನು ಅದೃಷ್ಟ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.

ನಾಲ್ಕು ಅಂಕಿಯ ಸಂಖ್ಯೆಗಳು, ವಿಶೇಷವಾಗಿ 3 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಗಳಿಂದ ಆರಂಭವಾಗುವ ಅನುಕ್ರಮಗಳು, ಹೆಚ್ಚಾಗಿ ಕೋಡ್-ಶೇರ್ ವಿಮಾನಗಳನ್ನು ಸೂಚಿಸುತ್ತವೆ. ಕೋಡ್-ಶೇರ್ ಎಂದರೆ ಒಂದು ವಿಮಾನಯಾನ ಸಂಸ್ಥೆಯು ವಿಮಾನವನ್ನು ಹಾರಿಸಿದರೂ, ಇನ್ನೊಂದು ಸಂಸ್ಥೆ ಯು ತನ್ನ ಹೆಸರಿನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದು.

ತಾಂತ್ರಿಕವಾಗಿ, ಒಂದು ವಿಮಾನ ಸಂಖ್ಯೆ ಎಂದರೆ ಕೇವಲ ಅಂಕಿಗಳಲ್ಲ, ಆದರೆ ವಿಮಾನಯಾನ ಸಂಸ್ಥೆಯ ಎರಡು-ಅಕ್ಷರಗಳ IATA ಕೋಡ್ ಜತೆಗೆ ಸಂಯೋಜಿಸಿದ ಅಂಕಿಗಳು ಮತ್ತು ಅಕ್ಷರಗಳ ಮಿಶ್ರಣವಾಗಿದೆ. ಪ್ರತಿಯೊಂದು ವಿಮಾನಯಾನ ಸಂಸ್ಥೆಗೆ ಒಂದು ವಿಶಿಷ್ಟವಾದ IATA ಕೋಡ್ ಇರುತ್ತದೆ. ಡೆಲ್ಟಾಗೆ DL , ಅಮೆರಿಕನ್‌ಗೆ AA , ಯುನೈಟೆಡ್‌ಗೆ UA , ಲುಫ್ತಾನ್ಸಾಗೆ LH ಮತ್ತು ಎಮಿರೇಟ್ಸ್‌ಗೆ EK ಈ ಕೋಡ್‌ಗಳನ್ನು ಬಳಸಲಾಗುತ್ತದೆ.

shutterstock_2290623553-edited-2000px

ಕೆಲವು ಕೋಡ್‌ಗಳು ಜೆಟ್‌ಬ್ಲೂನ B6 ನಂಥ ಅಕ್ಷರ ಸಂಖ್ಯಾತ್ಮಕವಾಗಿರಬಹುದು. ಈ ಕೋಡ್‌ಗಳ ಬಳಕೆಯು ಅಮೆರಿಕದಲ್ಲಿ ಕಡಿಮೆ ಇದ್ದರೂ, ಯುರೋಪ್ ಅಥವಾ ಏಷ್ಯಾದಲ್ಲಿ ಹೆಚ್ಚು ಸ್ಥಿರವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ವಿಮಾನ ನಿಲ್ದಾಣದ ನಿರ್ಗಮನ ಪರದೆಯಲ್ಲಿ CX105 (ಕ್ಯಾಥೆ ಪೆಸಿಫಿಕ್) ಅಥವಾ TG207 (ಥಾಯ್ ಏರ್‌ವೇಸ್) ಎಂದು ತೋರಿಸಬಹುದು. ಈ ವಿಮಾನಯಾನ ಕೋಡ್‌ಗಳು ಕೆಲವೊಮ್ಮೆ random ಆಗಿರಬಹುದು ಅಥವಾ ಯಾವುದೇ ಅರ್ಥವಿಲ್ಲದಿರಬಹುದು,

ಆದರೆ ಅರ್ಥವಿದ್ದಾಗ ಅವುಗಳನ್ನು ಡಿಕೋಡ್ ಮಾಡುವುದು ಆಸಕ್ತಿದಾಯಕವಾಗಿರುತ್ತದೆ. ಬ್ರಿಟಿಷ್ ಏರ್‌ವೇಸ್‌ಗೆ BA ಮತ್ತು ಏರೋಫ್ಲಾಟ್‌ಗೆ SU (ಹಳೆಯ ‘ಸೋವಿಯತ್ ಯೂನಿಯನ್’ನಿಂದ ಬಂದಿದ್ದು) ನಂಥ ಕೋಡ್ ಗಳು ನೇರ ಅರ್ಥವನ್ನು ನೀಡುತ್ತವೆ. ಈಜಿಏರ್‌ನ ( EgyptAir) MS ಕೋಡ್‌ಗೆ ಯಾವ ಅರ್ಥವಿದೆಯೋ ಗೊತ್ತಿಲ್ಲ. ಆದರೆ ಅರೇಬಿಕ್ ಭಾಷೆಯಲ್ಲಿ ಈಜಿಪ್ಟ್‌ಗೆ ‘ಮಿಸ್ (Misr)’ ಎಂಬ ಪದವಿದೆ. ಅದೇ ರೀತಿ, ಫಿನ್‌ಏರ್‌ನ (Finnair) AY ಕೋಡ್‌ನ ಅರ್ಥವನ್ನು ಅರ್ಥೈಸಿಕೊಳ್ಳುವುದು ಕಷ್ಟ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?