Tuesday, October 14, 2025
Tuesday, October 14, 2025

ಅಲ್ಲಿದ್ದೂ ಊಟದ ವಿಷಯದಲ್ಲಿ ಅವರಂತಾಗದೆ ಇದ್ದ ಕಥೆ

ನನ್ನ ಪುಟ್ಟ ಮಗಳು ಅನನ್ಯಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಮಗು ಸಣ್ಣಗಿದೆ ಎಂದರು. ಅನ್ನಿಯನ್ನು ಸ್ಕಾಟ್ಲೆಂಡ್ ಟ್ರಿಪ್ಗೆ ಕರೆದುಕೊಂಡು ಹೋಗಿದ್ದೆವು. ಹೀಗಾಗಿ ಪ್ರಯಾಣದಲ್ಲಿ ಅವಳು ತೂಕ ಕಳೆದುಕೊಂಡಿದ್ದಳು. ಮಗುವಿನ ಡಯಟ್ ಸ್ವಲ್ಪ ಹೇಳಿ ಎಂದರು. ಹೇಳಿದೆವು. ಸಾವಧಾನವಾಗಿ ನಾನು ಹೇಳಿದ್ದನ್ನು ಕೇಳಿಸಿಕೊಂಡ ಡಾಕ್ಟರ್ ಮಹಾಶಯ ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿಗಳು ಓಕೆ. ಬಟ್ ನಿನ್ನ ಮಗಳು?ಈ ನೆಲದ ಕಾನೂನಿನ ಪ್ರಕಾರ ಎಲ್ಲ ತಿನ್ನಲು ಆರ್ಹಳು. ಅವಳಿಗೆ ಬುದ್ಧಿ ತಿಳಿದ ಮೇಲೆ ಸಸ್ಯಾಹಾರಿಯಾಗಿ ಬದಲಾಗಬೇಕು ಎಂದು ಆಕೆಗೆ ಅನ್ನಿಸಿದರೆ ಅದು ಓಕೆ.ನೀವು ಮಗುವಿನ ಹಕ್ಕು ಕಿತ್ತು ಕೊಂಡಿದ್ದೀರಿ ಎಂದರು.

-ರಂಗಸ್ವಾಮಿ ಮೂಕನಹಳ್ಳಿ

ಇಂದಿಗೆ ಸ್ಪೇನ್ ಕ್ಯಾಥೊಲಿಕ್ ದೇಶ, 711ನೇ ಇಸವಿಯಲ್ಲಿ ಮುಸ್ಲಿಂ ಸುಲ್ತಾನರು ಸ್ಪೇನ್ ದೇಶವನ್ನು ಆಕ್ರಮಿಸಿದರು. 1491ರ ತನಕ ಸ್ಪೇನ್ ಮುಸ್ಲಿಂ ಸುಲ್ತಾನರ ಕಂಟ್ರೋಲ್‌ನಲ್ಲಿ ಇತ್ತು. ಕೊನೆಗೆ ಗೆರ್ರಾ ಸಾಂತ (guerra santa, ಅಂದರೆ holywar) ನಡೆದು, ಮುಸ್ಲಿಂ ದೊರೆಗಳಿಂದ ಸ್ಪೇನ್ ಸ್ವತಂತ್ರ ಪಡೆಯಿತು , ಭಾರತದಂತೆ ಡೆಮಾಕ್ರಸಿ ಇದೆ ಆದರೆ ರಾಜ, ಇಂದಿಗೂ ಸೂಪರ್ ಪವರ್, ಅದಕ್ಕೆ ಕಿಂಗ್ ಡಮ್ ಆಫ್ ಸ್ಪೇನ್ ಎಂದೇ ಜಗತ್ತಿನಲ್ಲಿ ಕರೆಯಲಾಗುತ್ತದೆ .

ಮುಸ್ಲಿಂ ಆಳ್ವಿಕೆಯ ದ್ಯೋತಕವಾಗಿ, ಅಂದಲುಸಿಯಾ ರಾಜ್ಯದ ಗ್ರನಡ (granda) ಎಂಬ ನಗರದಲ್ಲಿ Alhambra ಎನ್ನುವ ಸುಂದರ ಅರಮನೆ ಇದೆ. ಯುನೆಸ್ಕೋದಿಂದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಮಾನ್ಯತೆ ಪಡೆದಿದೆ. al hamara ಎನ್ನುವ ಅರಬ್ಬೀ ಪದದಿಂದ ಇದು alhambra ಎಂದು ಸ್ಪ್ಯಾನಿಷ್ ಜನರ ಬಾಯಿಯಲ್ಲಿ ರೂಪಾಂತರಗೊಂಡಿದೆ. al hamara ಎಂದರೆ ಕೆಂಪು ಎನ್ನುವ ಅರ್ಥ ಅರಬ್ಬಿಯಲ್ಲಿ, el rojo ಸ್ಪ್ಯಾನಿಷ್ ಸಮಾನಾರ್ಥಕ ಪದ.

Spain

ಇಂಥ ಸ್ಪೇನ್ ನಲ್ಲಿ ಮೆಜಾರಿಟಿ ಜನ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಉಪಯೋಗಿಸುತ್ತಾರೆ. ಕಾರನ್ನು ಕೆಲಸಕ್ಕೆ ಹೋಗಲು ಬಳಸುವವರ ಸಂಖ್ಯೆ ಕೂಡ ಬಹಳಷ್ಟಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ತುಂಬಾ ನಿಖರ. ಫ್ರಾನ್ಸ್, ಸ್ವಿಸ್, ಜರ್ಮನಿ, ಇಂಗ್ಲೆಂಡ್‌ನಲ್ಲಿ ಕೂಡ 1/2 ನಿಮಿಷ ಹೇಳಿದ ಟೈಮ್‌ಗಿಂತ ಲೇಟ್ ಆಗಿ ಬಂದ ಉದಾಹರಣೆ ಕಂಡಿದ್ದೇನೆ. ಸ್ಪೇನ್‌ನ ಎಲ್ಲ ಜನರೂ ಈ ರೀತಿ ಅಂತ ಅಲ್ಲ. ಸಾಮಾನ್ಯ ಜನ ಮೆತಾಡಿಕಾಲ್. ತಮಗೆ ಒಪ್ಪಿಸಿದ ಕೆಲಸ ಶ್ರದ್ದೆಯಿಂದ ಮಾಡುತ್ತಾರೆ.

ಮಾರ್ಚ್ ತಿಂಗಳ ಕೊನೆಯ ಶನಿವಾರ ರಾತ್ರಿ ಒಂದು ಗಂಟೆ ಮುಂದಕ್ಕೆ ಹಾಕುತ್ತಾರೆ. ಅಂದರೆ ಗಮನಿಸಿ ಭಾನುವಾರ ಬೆಳಗ್ಗೆ ಎದ್ದಾಗ ನಿಮ್ಮ ಮೊಬೈಲ್ 7 ಗಂಟೆ ಎಂದು ತೋರಿಸುತ್ತದೆ. ಆದರೆ ನಿಮ್ಮ ಕೈ ಗಡಿಯಾರ 6 ಗಂಟೆ ಎಂದು ತೋರಿಸುತ್ತದೆ. ಸೆಪ್ಟೆಂಬರ್ ತಿಂಗಳ ಕೊನೆಯ ಶನಿವಾರ ಒಂದು ಗಂಟೆ ಹಿಂದಕ್ಕೆ ಹಾಕುತ್ತಾರೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ನಲ್ಲಿ ಭಾರತ-ಸ್ಪೇನ್ ನಡುವಿನ ವೇಳೆಯ ಅಂತರ ಮೂರೂವರೆ ಗಂಟೆ. ಅಕ್ಟೋಬರ್‌ನಿಂದ ಮಾರ್ಚ್, ನಾಲ್ಕೂವರೆ ಗಂಟೆ. ಈ ಕ್ರಿಯೆಗೆ ಡೇ ಲೈಟ್ ಸೇವಿಂಗ್ ಎನ್ನುತ್ತಾರೆ.

ಇಂಗ್ಲೆಂಡ್ ಮತ್ತು ಪೋರ್ಚುಗಲ್ ದೇಶಗಳ ವೇಳೆಯ ವ್ಯತ್ಯಾಸ ಭಾರತಕ್ಕೆ ಕ್ರಮವಾಗಿ ನಾಲ್ಕೂವರೆ ಗಂಟೆ ಹಾಗೂ ಐದೂವರೆ ಗಂಟೆ. ಹಾಗೆ ನೋಡಿದರೆ ಭೂಪಟದಲ್ಲಿ, ಸ್ಪೇನ್ ಕೂಡ ಇಂಗ್ಲೆಂಡ್, ಪೋರ್ಚುಗಲ್ ಗೆರೆಯಲ್ಲೇ ಇದೆ. ವಸ್ತುಸ್ಥಿತಿ ಹೀಗಿದ್ದೂ ಸ್ಪ್ಯಾನಿಷರು ಜರ್ಮನಿ ವೇಳೆಯನ್ನು ಏಕೆ ಫಾಲೋ ಮಾಡ್ತಾ ಇದ್ದಾರೆ? ಈ ಪ್ರಶ್ನೆಗೆ ಉತ್ತರ ಇತಿಹಾಸದಲ್ಲಿ ಅಡಗಿದೆ.

ಹಿಟ್ಲರ್ ಅಂದ ತಕ್ಷಣ ನೊಣದ ಮೀಸೆ, ಚಾರ್ಲಿಚಾಪ್ಲಿನ್ ದೇಹ, ಸ್ವಸ್ತಿಕ್ ಚಿಹ್ನೆ, ಜ್ಞಾಪಕ ಬಂತು ಅಲ್ವಾ? ಆದರೆ ನಿಮಗೆ ಜನರಲ್ ಫ್ರಾಂಕ್ ಹೆಸರು ಕೇಳಿ ಏನಾದರೂ ನೆನಪಿಗೆ ಬಂತಾ? ಬಹಳ ಜನರಿಗೆ ಗೊತ್ತಿಲ್ಲ ಜನೆರಲ್ ಫ್ರಾಂಕ್ 1939 ರಿಂದ 1975 ಆತನ ಸಾವಿನವರೆಗೆ ಸ್ಪೇನ್‌ನ ಸರ್ವಾಧಿಕಾರಿ ಆಗಿದ್ದ. ಫ್ರಾನ್ಸಿಸ್ಕೋ ಫ್ರಾಂಕೋ ಪೂರ್ಣ ಹೆಸರು.

ಫ್ರಾಂಕೋ, ಹಿಟ್ಲರ್‌ನೊಂದಿಗೆ ಬಹಳ ಒಳ್ಳೆಯ ಸ್ನೇಹವನ್ನು ಹೊಂದಿದ್ದ. ಇಬ್ಬರದೂ ಗಳಸ್ಯ -ಕಂಠಸ್ಯ ಎನ್ನುವಂಥ ಸ್ನೇಹ. ಹೀಗಾಗಿ ಜರ್ಮನಿ ಅನುಸರಿಸುತ್ತಿರುವ ವೇಳೆಯನ್ನ ಕಣ್ಣು ಮುಚ್ಚಿ ಅನುಸರಿಸಲು ಹೇಳುತ್ತಾನೆ. ಹೇಳಿಕೇಳಿ ಸರ್ವಾಧಿಕಾರಿ, ಇವನ ಮಾತನ್ನು ಮೀರುವುದುಂಟೆ? ಅಂದಿನಿಂದ ಇಂದಿನವರೆಗೂ ಅವೈಜ್ಞಾನಿಕವಾಗಿ ಪ್ರಕೃತಿಯ ಮಾತು ಕೇಳದೆ ಜರ್ಮನಿಯ ವೇಳೆ ವ್ಯತ್ಯಾಸದ ನಿಯಮವನ್ನೇ ಪಾಲಿಸುತ್ತಾ ಬಂದಿದ್ದಾರೆ. ಕೇವಲ ಒಂದು ಗಂಟೆ ಅತ್ತಿತ್ತ ಮಾಡುವುದರಿಂದ ಅದೇನು ಮಹಾ ವ್ಯತ್ಯಾಸವಾಗುತ್ತದೆ ಎಂದು ನೀವು ಕೇಳಬಹದು. ಗಮನಿಸಿ ಈ ಒಂದು ಗಂಟೆ ವ್ಯತ್ಯಾಸ ಜನರ ಬದುಕುವ ರೀತಿಯನ್ನೇ ಬದಲಿಸಿ ಬಿಟ್ಟಿತು! ಇಂಗ್ಲೆಂಡ್‌ನಲ್ಲಿ ಬೆಳಗ್ಗೆ 8 ರಿಂದ 9 ಅಥವಾ 9 ರಿಂದ 4 ರವರೆಗೆ ಕೆಲಸ ಮಾಡುತ್ತಾರೆ. ಆದರೆ ಸ್ಪೇನ್ ನಲ್ಲಿ ಬಹುತೇಕರು 9 ರಿಂದ 1.30 ಅನಂತರ 4 ರಿಂದ 7.30 ರ ಸಾಯಂಕಾಲದವರೆಗೆ ಕೆಲಸ ಮಾಡುತ್ತಾರೆ. ಅಂದರೆ ಮಧ್ಯಾಹ್ನ ಒಂದೂವರೆಯಿಂದ ನಾಲ್ಕು ಗಂಟೆಯ ಸಮಯದಲ್ಲಿ ಊಟ ಮಾಡಿ ಒಂದು ಸಣ್ಣ ನಿದ್ದೆ ಮಾಡುವುದು ಇಲ್ಲಿನ ಜನರಿಗೆ ಅಭ್ಯಾಸವಾಗಿದೆ. ಇದಕ್ಕೆ ಇಲ್ಲಿ ಸಿಯಾಸ್ತ ಎನ್ನುತ್ತಾರೆ. ಸ್ಪ್ಯಾನಿಷ್ ಸಿಯಾಸ್ತ ಎಂದು ಯುರೋಪಿನಲ್ಲಿ, ಅಮೇರಿಕಾದಲ್ಲಿ ಇವರ ಈ ಅಭ್ಯಾಸ ಹೆಸರು ಪಡೆದಿದೆ. ತೀರಾ ಇತ್ತೀಚಿಗೆ ನಾವು ಪಾಲಿಸುತ್ತಿರುವ ವೇಳೆ ವ್ಯತ್ಯಾಸ ವೈಜ್ಞಾನಿಕವಲ್ಲ, ನಾವು ಕೂಡ ಇಂಗ್ಲೆಂಡ್ ಮತ್ತು ಪೋರ್ಚುಗಲ್ ದೇಶಗಳ ಸಮಯವನ್ನು ಅನುಸರಿಸಬೇಕು ಎಂದು ಚಿಂತಕರ ಚಾವಡಿಯಲ್ಲಿ ಒಂದು ಸಣ್ಣ ಕೂಗು ಎದ್ದಿದೆ. ಹತ್ತಾರು ವರ್ಷಗಳಿಂದ ಜನರಿಗೆ ಹೊಂದಿಕೆಯಾಗಿರುವ ಈ ವ್ಯವಸ್ಥೆಯನ್ನು ಬದಲಾಯಿಸಲು ಮಾತ್ರ ಯಾವ ಸರಕಾರವೂ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ.

Spain Square

ಸ್ಪೇನ್ ಇತರ ಯುರೋಪಿನ ದೇಶಗಳಿಗಿಂತ ಬಹಳಷ್ಟು ಭಿನ್ನ. ಇಂಥ ಒಂದಷ್ಟು ವಿಶೇಷತೆಗಳ ಬಗ್ಗೆ ಒಂದಷ್ಟು ನಿಮಗೆ ಹೇಳುವೆ.

ಪೂರಾ ಯುರೋಪ್‌ನಲ್ಲಿ ಅತೀ ಹೆಚ್ಚು ಸಮಯ ಬಾರ್/ರೆಸ್ಟೋರೆಂಟ್‌ನಲ್ಲಿ ಕಳೆಯುವವರು ಯಾರು? ನಿಮ್ಮ ಉತ್ತರ ಸರಿಯಾಗಿದೆ. ಸ್ಪ್ಯಾನಿಷರು. ಹೌದು, ಇಲ್ಲಿನ ಜನರು ಬದುಕಲು ದುಡಿಯುತ್ತಾರೆ. ದುಡಿಯಲೆಂದೇ ಬದುಕುವುದಿಲ್ಲ. ಪಕ್ಕದಲ್ಲೇ ಇರುವ ಇಂಗ್ಲೆಂಡ್, ಜರ್ಮನಿ, ಫ್ರೆಂಚರು ಈ ವಿಷಯದಲ್ಲಿ ನತದೃಷ್ಟರು ಎಂದು ಹೇಳಬಹುದು. ರಜ ಕೂಡ ಬಹಳ, ಸೇಮ್ ಭಾರತದಲ್ಲಿ ಇದ್ದಂತೆ ಬಹಳಷ್ಟು ಹಬ್ಬಗಳ ಹೆಸರೇಳಿ ರಜಾ ನೀಡುವುದು ಸಾಮಾನ್ಯ.

ಪಯಯ್ಯ (paella) (ಡಬ್ಬಲ್ ಎಲ್ ಇಲ್ಲಿ ʼಯʼ ಎಂದು ಉಚ್ಚಾರಣೆ ಮಾಡುತ್ತಾರೆ) ಇಲ್ಲಿನ ಆಹಾರಗಳ ರಾಜ. ಸ್ಪೇನ್‌ಗೆ ಬಂದು ಪಯಯ್ಯ ತಿನ್ನದೇ ಹೋದರೆ ದೇವಸ್ಥಾನಕ್ಕೆ ಹೋಗಿ ಭಗವಂತನ ದರ್ಶನ ಪಡೆಯದೆ ಮರಳಿದಂತೆ! ಇಂತಿಪ್ಪ ಪಯಯ್ಯ ಸಾಮಾನ್ಯವಾಗಿ ಸಮುದ್ರ ತರಕಾರಿಯನ್ನು ಹಾಕಿ ಮಾಡುತ್ತಾರೆ. ಹಾಗೆಂದು ಸಸ್ಯಾಹಾರಿಗಳು ನಿರಾಸೆ ಹೊಂದಬೇಕಿಲ್ಲ. ವೆಜಿಟೇರಿಯನ್ ಪಯಯ್ಯ ಕೂಡ ಸಿಗುತ್ತದೆ. ಈ ಪಯಯ್ಯ, ನಮ್ಮ ಪಲಾವ್ / ಬಿರಿಯಾನಿ ಅಣ್ಣನೋ, ತಮ್ಮನೋ ಎನ್ನುವ ಶಂಕೆ ಬರುವುದು ಸಹಜ. ಏಕೆಂದರೆ ಇದು ಮುಖ್ಯವಾಗಿ ಅನ್ನದಿಂದ ತಯಾರಾದ ಖಾದ್ಯ.

ಸ್ಪೇನ್‌ನಲ್ಲಿ ಮಸೀದಿ ಕಟ್ಟುವ ಹಾಗಿಲ್ಲ. ಹಾಗಾಗಿ ಮೈಕು ಹಾಕುವ ಪ್ರಶ್ನೆ ಉದ್ಭವ ಆಗುವುದೇ ಇಲ್ಲ. ಪಕ್ಕದ ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನಿಯನ್ನು ಪಾಕಿ ಎಂದು ಕರೆಯುವುದು ಅಪರಾಧ. ಆದರೆ ತಮ್ಮ ಮನೆಯಲ್ಲಿ ಅಥವಾ ಬಾಡಿಗೆಗೆ ಎಂದು ಪಡೆದ ಜಾಗದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪೂರೈಸಲು ಅಡ್ಡಿಯಿಲ್ಲ.

ಕಳೆದ ಹತ್ತು ವರ್ಷಗಳ ಹಿಂದಿನ ತನಕ ಮಗು ಹೆತ್ತರೆ ಯುರೋ 2500 /- ಸರಕಾರ ಇನಾಮು ಕೊಡುತ್ತಿತ್ತು. ಕಾರಣ ಇಲ್ಲಿನ ಜನಸಂಖ್ಯೆ ದಕ್ಷಿಣದತ್ತ ಮುಖ ಮಾಡಿದೆ. ಅಲ್ಲದೆ ಸ್ಪೇನ್ ನಲ್ಲಿ ಸೆಕ್ಸ್ ಮಿನಿಸ್ಟರಿ ಇದೆ. ಅದಕ್ಕೆ ಎಂದು ಮಿನಿಸ್ಟರ್ ಹುದ್ದೆ ಕೂಡ ಇದೆ. ಇವರ ಕೆಲಸ ಸ್ಪೇನ್ ಜನಸಂಖ್ಯೆ ಹೆಚ್ಚುವಂತೆ ನೋಡಿಕೊಳ್ಳುವುದು.

ಪಕ್ಕದ ಮನೆಯವರು ದಿನ ವೈಲಿನ್ ನುಡಿಸುವ ಶಬ್ದ ಅಸಹನೀಯ ಎಂದು ಕೇಸು ಹಾಕುತ್ತಾರೆ. ಇಲ್ಲಿನ ಕೋರ್ಟು, ವೈಲಿನ್ ವಾದಕನಿಗೆ 18 ವರ್ಷ ಶಿಕ್ಷೆ ವಿಧಿಸುತ್ತದೆ. ಡ್ರಗ್ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದ ನೈಜಿರಿಯನ್ ಪ್ರಜೆ 48 ಗಂಟೆಗಳಲ್ಲಿ ತನ್ನ ಇಷ್ಟದ ಸಿಗರೇಟು ಸೇದುತ್ತಾ ಹೋಗುತ್ತಾನೆ. ಹಾಲೆಂಡ್ ನಂತರ ಸ್ಪೇನ್ ದೇಶದಲ್ಲಿ ಮಾದಕ ದ್ರವ್ಯ ಕಾನೂನು ಇಷ್ಟೊಂದು ಸಡಿಲವಿದೆ.

ನನ್ನ ಪುಟ್ಟ ಮಗಳು ಅನನ್ಯಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಮಗು ಸಣ್ಣಗಿದೆ ಎಂದರು. ಅನ್ನಿಯನ್ನು ಸ್ಕಾಟ್ಲೆಂಡ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದೆವು. ಹೀಗಾಗಿ ಪ್ರಯಾಣದಲ್ಲಿ ಅವಳು 300/400 ಗ್ರಾಂ ತೂಕ ಕಳೆದುಕೊಂಡಿದ್ದಳು. ಮಗುವಿನ ಡಯಟ್ ಸ್ವಲ್ಪ ಹೇಳಿ ಎಂದರು. ಹೇಳಿದೆವು. ಸಾವಧಾನವಾಗಿ ನಾನು ಹೇಳಿದ್ದನ್ನು ಕೇಳಿಸಿಕೊಂಡ ಡಾಕ್ಟರ್ ಮಹಾಶಯ ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿಗಳು ಓಕೆ. ಬಟ್ ನಿನ್ನ ಮಗಳು? ಈ ನೆಲದ ಕಾನೂನಿನ ಪ್ರಕಾರ ಎಲ್ಲ ತಿನ್ನಲು ಅರ್ಹಳು. ಅವಳಿಗೆ ಬುದ್ದಿ ತಿಳಿದ ಮೇಲೆ ಸಸ್ಯಾಹಾರಿಯಾಗಿ ಬದಲಾಗಬೇಕು ಎಂದು ಆಕೆಗೆ ಅನ್ನಿಸಿದರೆ ಅದು ಓಕೆ. ನೀವು ಮಗುವಿನ ಹಕ್ಕು ಕಿತ್ತುಕೊಂಡಿದ್ದೀರಿ. ನಾನು ನಿಮ್ಮ ಮೇಲೆ ದಾವೆ ಹೂಡಬಹುದು ಎಂದನಾತ. ಇಲ್ಲ ಮಹಾಸ್ವಾಮಿ ತಪ್ಪಾಯಿತು. ಅದೇನು ಮಾಡಬೇಕು ತಿಳಿಸಿ, ನಿಮ್ಮಾಜ್ಞೆಯನ್ನ ಶಿರಸಾವಹಿಸಿ ಪಾಲಿಸುತ್ತೇವೆ ಎಂದು ನಾನು ಮತ್ತು ರಮ್ಯ ಇಬ್ಬರೂ ಒಕ್ಕೊರಲಿನಿಂದ ಹೇಳಿದೆವು. ಆತ ಅದ್ಯಾವುದೋ ಚಿಕನ್ ಸೂಪ್, ಇತ್ಯಾದಿಗಳನ್ನು ಬರೆದು ಕೊಟ್ಟ. ಅವೆಲ್ಲವೂ ಮೆಡಿಕಲ್ ಸ್ಟೋರ್ ನಲ್ಲಿ ಸಿಕ್ಕವು. ತಂದು ಮೂಗು ಮುಚ್ಚಿಕೊಂಡು ಅದರಲ್ಲಿ ಹೇಳಿದ ವಿಧಾನದ ಪ್ರಕಾರ ಮಾಡಿ ಅನ್ನಿಯ ಬಾಯಿಗೆ ಇಟ್ಟರೆ 'ತುಪುಕ್' ಅಂತ ಉಗಿಯುತ್ತಿದ್ದಳು. ತುಂಬಾ ಬಲವಂತ ಮಾಡಿದರೆ ಒಂದರ್ಧ ಗಂಟೆಯಲ್ಲಿ ವಾಂತಿ ಮಾಡಿ ಬಿಡುತ್ತಿದ್ದಳು. ನಾವು ಜೆನಿಟಿಕಲಿ ಕೋಡೆಡ್ ಮಾಂಸಾಹಾರ ನಮ್ಮದಲ್ಲ ಎಂದು ಆ ವೈದ್ಯನಿಗೆ ತಿಳಿಸಿ ಹೇಳುವುದಾದರೂ ಹೇಗೆ? ಕೊನೆಗೆ ನಮ್ಮ ಕೈ ಹಿಡಿದಿದ್ದು ಅಮ್ಮ ಭಾರತದಿಂದ ಮಾಡಿ ಕಳಿಸಿದ್ದ ರಾಗಿ ಸರ್ರಿ. ಮುಂದಿನ ತಪಾಸಣೆ ವೇಳೆಗೆ ಅನ್ನಿ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದಳು. ಡಾಕ್ಟರ್ ಮಹಾಶಯ ನಾನು ಹೇಳಿದ್ದು ಪಾಲಿಸಿದಿರಾ? ಎಂದು ಕೇಳಿದ. ಹೌದೆಂದು ತಲೆಯಾಡಿಸಿದೆವು. ಅದಕ್ಕೆ ನೋಡಿ ಮಗುವಿನ ತೂಕ ಹೆಚ್ಚಾಗಿದೆ ಎಂದನಾತ. ನಾನು ರಮ್ಯ ಮುಖ ನೋಡಿಕೊಂಡು ಕಣ್ಣಲ್ಲೇ ನಕ್ಕೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...