Friday, July 4, 2025
Friday, July 4, 2025

ವಿಮಾನದಲ್ಲಿ ಏರ್‌ ಕಂಡಿಷನಿಂಗ್

ವಿಮಾನದ ಏರ್ ಕಂಡಿಷನಿಂಗ್ ವ್ಯವಸ್ಥೆಯು ಪರಿಸರ ನಿಯಂತ್ರಣ ವ್ಯವಸ್ಥೆ (Environmental Control System-ECS)ಯ ಭಾಗ. ಇದರ ಮುಖ್ಯ ಉದ್ದೇಶ ತಾಪಮಾನವನ್ನು ನಿಯಂತ್ರಿಸುವುದು, ಒಳಗಿರುವ ಗಾಳಿಯನ್ನು ಶುದ್ಧೀಕರಿಸುವುದು, ತಾಜಾ ಆಮ್ಲಜನಕ ಒದಗಿಸುವುದು ಮತ್ತು ಗಾಳಿಯ ಒತ್ತಡವನ್ನು ಸಮತೋಲನಗೊಳಿಸುವುದು.

ವಿಮಾನ ಪ್ರಯಾಣ ವಿಜ್ಞಾನದ ಅತ್ಯಂತ ಎತ್ತರದ ಸಾಧನೆಗಳಲ್ಲಿ ಒಂದು. ಆಕಾಶದಲ್ಲಿ ಸಾವಿರಾರು ಅಡಿಗಳ ಎತ್ತರದಲ್ಲಿ ಹಾರುವ ವಿಮಾನದ ಒಳಭಾಗ ವಾತಾವರಣ ಅನುಕೂಲಕರವಾಗಿ ಇರಿಸುವುದು ನಿಜಕ್ಕೂ ಒಂದು ದೊಡ್ಡ ಸವಾಲು. ವಿಮಾನದ ಏರ್ ಕಂಡಿಷನಿಂಗ್ ಸಿಸ್ಟಮ್, ವಿಮಾನದ ಒಳಭಾಗದ ತಾಪಮಾನ, ತೇವಾಂಶ, ಆಮ್ಲಜನಕ ಪ್ರಮಾಣ,‌ ಗಾಳಿಯ ಚಲನೆಯ ನಿಯಂತ್ರಣ ಮತ್ತು ಒತ್ತಡ ನಿಯಂತ್ರಣಗಳನ್ನು ಒಳಗೊಂಡಿರುವುದು ಗಮನಾರ್ಹ.

ವಿಮಾನದ ಏರ್ ಕಂಡಿಷನಿಂಗ್ ವ್ಯವಸ್ಥೆಯು ಪರಿಸರ ನಿಯಂತ್ರಣ ವ್ಯವಸ್ಥೆ (Environmental Control System-ECS)ಯ ಭಾಗ. ಇದರ ಮುಖ್ಯ ಉದ್ದೇಶ ತಾಪಮಾನವನ್ನು ನಿಯಂತ್ರಿಸುವುದು, ಒಳಗಿರುವ ಗಾಳಿಯನ್ನು ಶುದ್ಧೀಕರಿಸುವುದು, ತಾಜಾ ಆಮ್ಲಜನಕ ಒದಗಿಸುವುದು ಮತ್ತು ಗಾಳಿಯ ಒತ್ತಡವನ್ನು ಸಮತೋಲನಗೊಳಿಸುವುದು.

ಇದನ್ನೂ ಓದಿ: ವಿಮಾನದ ಬಾಗಿಲುಗಳ ಮಹತ್ವ

ಎಂಜಿನ್ ನಿಂದ ನೇರವಾಗಿ ಬರುವ ಬ್ಲೀಡ್ ಏರ್ ( Bleed Air) ಅಥವಾ ಕೆಲವು ವಿಮಾನಗಳಲ್ಲಿ ಎಲೆಕ್ಟ್ರಿಕ್ ಕಂಪ್ರೆಸರ್ ಬಳಸಿ ECS ಯು ಕಾರ್ಯನಿರ್ವಹಿಸುತ್ತದೆ. ಎಂಜಿನ್ ನಿಂದ ಗಾಳಿ ಪಡೆಯುವುದು ಒಂದು ಮುಖ್ಯ ಪ್ರಕ್ರಿಯೆ. ಅಧಿಕ ಶಕ್ತಿಯುಳ್ಳ ಜೆಟ್ ಎಂಜಿನ್‌ಗಳು ಶಕ್ತಿಯ ಹೊರತಾಗಿಯೂ ಹೆಚ್ಚಿನ ಬಿಸಿಯಾದ ಗಾಳಿಯನ್ನು ಉಳಿತಾಯವಾಗಿರಿಸುತ್ತವೆ. ಈ ಗಾಳಿಯನ್ನು ‘ಬ್ಲೀಡ್ ಏರ್’ ಎಂದು ಕರೆಯಲಾಗುತ್ತದೆ.

ಎತ್ತರದ ಒತ್ತಡದಲ್ಲಿ ಹಾಗೂ 200 ಡಿಗ್ರಿ ಸೆಂಟಿಗ್ರೇಡ್ 250 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇದು ಹೊರಬರುತ್ತದೆ. ಇದನ್ನು ತಕ್ಷಣದ ತಾಪಮಾನದಲ್ಲಿ ಬಳಸಲಾಗದು. ಗಾಳಿಯ ತಾಪಮಾನವನ್ನು ಕಡಿಮೆ ಮಾಡಲು ‘ಪ್ಯಾಕ್’ ( PACK-Pneumatic Air Conditioning Kit) ಎಂಬ ತಂತ್ರಜ್ಞಾನ ಬಳಸಲಾಗುತ್ತದೆ. ಹಾಗಾದ್ರೆ ‘ಪ್ಯಾಕ್’ ಹೇಗೆ ಕೆಲಸ ಮಾಡುತ್ತದೆ? ಬ್ಲೀಡ್ ಏರ್‌ನ ತಾಪಮಾನ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

air condition

ತಂಪಾದ ಮತ್ತು ಶುದ್ಧ ಗಾಳಿಯನ್ನು ಎಂಜಿನ್ ಗೆ ಕಳುಹಿಸುತ್ತದೆ ಮತ್ತು ಗಾಳಿಯ ಹರಿವು ಮತ್ತು ಹರಡುವ ದಿಕ್ಕುಗಳನ್ನು ನಿಯಂತ್ರಿಸುತ್ತದೆ. ಪ್ರತಿಯೊಂದು ವಿಮಾನದಲ್ಲಿ ಸಾಮಾನ್ಯವಾಗಿ ಎರಡು ಅಥವಾ ಹೆಚ್ಚು ಪ್ಯಾಕ್ ಗಳು ಇರುತ್ತವೆ. ಒಂದು ಹಾಳಾದರೂ ಇನ್ನೊಂದು ಕಾರ್ಯನಿರ್ವಹಿಸುತ್ತದೆ.

ವಿಮಾನ 35 ಸಾವಿರ ಅಡಿಗಳ ಎತ್ತರದಲ್ಲಿ ಹಾರುತ್ತಿರುವಾಗ ಹೊರಗಿನ ಗಾಳಿಯ ಒತ್ತಡ ತುಂಬಾ ಕಡಿಮೆಯಾಗಿರುತ್ತದೆ. ಇದು ಪ್ರಯಾಣಿಕರ ಉಸಿರಾಟಕ್ಕೆ ಅಪಾಯಕಾರಿ. ಆದ್ದರಿಂದ ಕಚ್ಚಾ ಗಾಳಿಯನ್ನು ಬ್ಲೀಡ್ ಏರ್ ಮೂಲಕ ಒಳಗೆ ತರಲಾಗುತ್ತದೆ. ಅದರ ಒತ್ತಡವನ್ನು ಕಂಪ್ರೆಸರ್ ಮೂಲಕ ಸಾಮಾನ್ಯವಾಗಿ 6,0008,000 ಅಡಿಗಳ ಎತ್ತರಕ್ಕೆ ಸಮವಾಗಿರುವಂತೆ ಹಿತಗೊಳಿಸಲಾಗುತ್ತದೆ.

ಇದರಿಂದ ಪ್ರಯಾಣಿಕರು ತಲೆಭಾರ, ಕಿರಿಕಿರಿ ಅಥವಾ ಆಮ್ಲಜನಕ ಕೊರತೆಯಿಂದ ತಪ್ಪಿಸಿಕೊಳ್ಳುತ್ತಾರೆ. ವಿಮಾನದ ಏರ್ ಕಂಡಿಷನಿಂಗ್ ವ್ಯವಸ್ಥೆಯಲ್ಲಿ ಹೆಚ್‌ಇಪಿಎ (HEPA-High Efficiency Particulate Air) ಫಿಲ್ಟರ್ ಬಳಸಲಾಗುತ್ತದೆ. ಇದು ಶೇ.99.97 ರಷ್ಟು ಮಾಲಿನ್ಯಕಾರಕ ಧೂಳಿನ ಕಣ, ಬ್ಯಾಕ್ಟೀರಿಯಾ, ವೈರಸ್ ನ್ನು ನಿಯಂತ್ರಿಸುತ್ತದೆ.

ಇದರಿಂದ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ. ವಿಮಾನದ ವಿವಿಧ ಭಾಗಗಳಲ್ಲಿ ಬೇರೆಬೇರೆ ತಾಪಮಾನ ಇಡುವ ವ್ಯವಸ್ಥೆ ಇರುತ್ತದೆ. ಕಾಕ್ ಪಿಟ್ (ಪೈಲಟ್ ಸ್ಥಳ), ಬಿಜಿನೆಸ್ ಕ್ಲಾಸ್, ಎಕಾನಮಿ ಕ್ಲಾಸ್, ಕಾರ್ಗೋ ವಿಭಾಗ ಹೀಗೆ ಪ್ರತಿಯೊಂದು ವಿಭಾಗಕ್ಕೂ ತಾಪಮಾನ ನಿಯಂತ್ರಣ ವ್ಯವಸ್ಥೆ ಇರುವುದು ವಿಶೇಷ.

ಗಾಳಿಯ ಹರಿವಿಗೆ ಸೆನ್ಸಾರ್‌ಗಳು ಇರುತ್ತವೆ, ಅವು ತಾಪಮಾನವನ್ನು ನಿಖರವಾಗಿ ಹದಮಾಡುತ್ತವೆ. ವಿಮಾನ ನೆಲದ ಮೇಲೆ ನಿಂತಿರುವಾಗ, ಎಂಜಿನ್‌ಗಳು ಆನ್ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಗ್ರೌಂಡ್ ಪವರ್ ಯುನಿಟ್ (GPU) ಅಥವಾ External Air Conditioning Cart ಬಳಸಿ ಗಾಳಿಯನ್ನು ತಂಪಾಗಿಸುತ್ತಾರೆ.

air condition (1)

ಇದರಿಂದ ಇಂಧನ ಉಳಿತಾಯ ಆಗುತ್ತದೆ. ಎಂಜಿನ್ ಆನ್ ಮಾಡುವ ಮೊದಲು ತಾಪಮಾನವನ್ನು ಸಮತೋಲನದಲ್ಲಿ ಇಡಲಾಗುತ್ತದೆ. ಹಾಲಿ ವಿಮಾನಗಳಲ್ಲಿ ಎಲೆಕ್ಟ್ರಿಕ್ ಪ್ಯಾಕ್ ಸಿಸ್ಟಂ ( Electric PACK system) ಅನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಬ್ಲೀಡ್ ಏರ್ ಬೇಕಾಗದು. ಇದಕ್ಕೆ ಬೋಯಿಂಗ್ 787 ಡ್ರೀಮ್ ಲೈನರ್ ಇದಕ್ಕೆ ಉದಾಹರಣೆ. ಕೆಲವೊಮ್ಮೆ ಏರ್ ಕಂಡಿಷನಿಂಗ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ, ತುಂಬಾ ತಂಪು ಅಥವಾ ಬಿಸಿ ಆಗಬಹುದು.

ತಲೆ ನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹೈ ಅಲ್ಟಿಟ್ಯೂಡ್ ಸಿಕ್‌ನೆಸ್ ಅನುಭವಕ್ಕೆ ಬರಬಹುದು. ಆದರೂ, ಕೆಲವು ಪ್ರಯಾಣಿಕರಿಗೆ ಒಣಹವೆ (dry air) ಸಮಸ್ಯೆ ಉಂಟಾಗಬಹುದು. ಇದನ್ನು ತಡೆಯಲು ಹೆಚ್ಚಿನ ನೀರು ಕುಡಿಯಬಹುದು, ಐಡ್ರಾಪ್ಸ್ ಅಥವಾ ಮಾಯಿಶ್ಚರೈಜರ್ ಬಳಸಬಹುದು ಹಾಗೂ ಅತಿಯಾದ ಕಾಫಿ, ಮದ್ಯ ಸೇವನೆ ತಪ್ಪಿಸಬಹುದು.

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!