ವಾಲಿಕುಂಜ, ನರಸಿಂಹಪರ್ವತ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ
ನವೆಂಬರ್ 17ರಿಂದ ನವೆಂಬರ್ 19ರವರೆಗೆ ಪ್ರವಾಸಿಗರಿಗೆ ಈ ಎರಡೂ ಚಾರಣ ಮಾರ್ಗಗಳಿಗೆ ಪ್ರವೇಶ ಅವಕಾಶ ಇರುವುದಿಲ್ಲ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಜನಪ್ರಿಯ ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣ ಮಾರ್ಗಗಳ ಪ್ರವೇಶಕ್ಕೆ ಕಾಡಾನೆಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾದ ನಿರ್ಬಂಧವನ್ನು ಹೇರಲಾಗಿದೆ.
ನವೆಂಬರ್ 17ರಿಂದ ನವೆಂಬರ್ 19ರವರೆಗೆ ಪ್ರವಾಸಿಗರಿಗೆ ಈ ಎರಡೂ ಚಾರಣ ಮಾರ್ಗಗಳಿಗೆ ಪ್ರವೇಶ ಅವಕಾಶ ಇರುವುದಿಲ್ಲ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣಗಳು ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯ ಮಾರ್ಗಗಳು, ಕಾಡಿನ ಜೀವ ವೈವಿಧ್ಯವನ್ನು ಸಮೀಪದಿಂದ ಪ್ರವಾಸಿಗರು ಅನುಭವಿಸಲು ಅವಕಾಶ ಮಾಡಿಕೊಡುತ್ತವೆ, ಈ ಕಾರಣದಿಂದ ಇವು ಚಾರಣಿಗರ ಮೆಚ್ಚಿನ ತಾಣಗಳಾಗಿವೆ.
ನರಸಿಂಹಪರ್ವತ ಶಿಖರದಿಂದ ಕಾಣುವ ಪಶ್ಚಿಮಘಟ್ಟದ ದೃಶ್ಯ ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಹಾಗೆಯೇ, ವಾಲಿಕುಂಜ ಮಾರ್ಗದಲ್ಲಿನ ದಟ್ಟ ಕಾಡು, ನೀರಿನ ಹರಿವು, ಹಸಿರಾದ ನಿಸರ್ಗ ಪ್ರವಾಸಾಸಕ್ತರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧವನ್ನು ವಿಧಿಸಲಾಗಿದೆ.