Monday, March 2, 2026
Monday, March 2, 2026

ಮಾನವ ವನ್ಯಜೀವಿಗಳ ಸಂಘರ್ಷವನ್ನು ಹತ್ತಿಕ್ಕಲು ಸರಕಾರದ ಹೊಸ ಅಸ್ತ್ರ

ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಿ.ಎಸ್‌.ಬೆಟ್ಟ ವಲಯದಲ್ಲಿ ಎಐ ತಂತ್ರಜ್ಞಾನ ಆಧಾರಿತ ಥರ್ಮಲ್ ಕ್ಯಾಮೆರಾ ಅಳವಡಿಕೆಗೆ ಸರ್ಕಾರ ಮುಂದಾಗಿದೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಿರುವ ಬಂಡೀಪುರವ ಇತರ ವಲಯಗಳಿಗೂ ಈ ತಂತ್ರಜ್ಞಾನ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆ ಯಶಸ್ವಿಯಾದರೆ ರಾಜ್ಯದಲ್ಲಿರುವ ಮಾನವ-ವನ್ಯಜೀವ ಸಂಘರ್ಷ ಕಡಿಮೆಯಾಗುವುದು ಖಚಿತ.

ಮಾನವ ಹಾಗೂ ವನ್ಯಜೀವಿಗಳ ಸಂಘರ್ಷವನ್ನು ಹತ್ತಿಕ್ಕಲು, ಕರ್ನಾಟಕ ಸರಕಾರ ಸಫಾರಿಗಳನ್ನು ನಿಷೇಧಿಸಿತ್ತು. ಆದರೆ ಪ್ರವಾಸೋದ್ಯಮ ಮತ್ತು ಅವಲಂಬಿತರಿಗೆ ಆದ ನಷ್ಟದ ಕುರಿತು ಪರಿಶೀಲಿಸಿ ಈಗ ಹಂತ ಹಂತವಾಗಿ ಸಫಾರಿಗಳನ್ನು ಪ್ರಾರಂಭಿಸಲು ಮುಂದಾಗಿದೆ. ಆದರೆ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಸಂಪೂರ್ಣ ನಿಲ್ಲುತ್ತಾ? ಎಂಬ ಪ್ರಶ್ನೆ ಮಾತ್ರ ರಾಜ್ಯದಾದ್ಯಂತ ಪ್ರತಿಧ್ವನಿಸುತ್ತಲೇ ಇತ್ತು. ಇದೀಗ ಈ ಪ್ರಶ್ನೆಗೆ ಉತ್ತರವನ್ನು ಸರಕಾರ ನೀಡಿದೆ. ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳ ಮೇಲೆ ನಿಗಾವಹಿಸಲು, ರಾಜ್ಯ ಸರಕಾರ ಎಐ ತಂತ್ರಜ್ಞಾನ ಆಧಾರಿತ ಥರ್ಮಲ್ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯವು 2,800ಕಿಮೀ ವಿಸ್ತಾರದಲ್ಲಿ ಹರಡಿಕೊಂಡಿದ್ದು, ಪ್ರಾಯೋಗಿಕವಾಗಿ ಜಿ.ಎಸ್‌ ಬೆಟ್ಟ ವಲಯದ ಎತ್ತರದ ಪ್ರದೇಶದಲ್ಲಿ ಈ ನೂತನ ಕ್ಯಾಮರಾ ಅಳವಡಿಸಲಾಗಿದೆ.

ಇದನ್ನೂ ಓದಿ: ಮಧುಗಿರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಮನವಿ

ದೇಶದಲ್ಲೇ ಪ್ರಪ್ರಥಮ ಬಾರಿಗೆ ಈ ಪ್ರಯೋಗ ನಡೆಸಲಾಗುತ್ತಿದ್ದು, ಜಿ.ಎಸ್‌.ಬೆಟ್ಟ ವಲಯದಲ್ಲಿ ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಬಂಡೀಪುರವ ಇತರ ವಲಯಗಳಿಗೂ ಈ ತಂತ್ರಜ್ಞಾನ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಪ್ರಭಾಕರ್ ಅವರು ತಿಳಿಸಿದ್ದಾರೆ. ಈ ವ್ಯವಸ್ಥೆ ಯಶಸ್ವಿಯಾದರೆೆ ರಾಜ್ಯದಲ್ಲಿರುವ ಮಾನವ-ವನ್ಯಜೀವ ಸಂಘರ್ಷ ಕಡಿಮೆಯಾಗುವುದು ಖಚಿತ.

Forest Department Command & Control UnitWatching live CCTV feeds from five check postsMonitorin

ಈ ಕ್ಯಾಮೆರಾಗಳು ನಾಡಿಗೆ ಬರುವ ಪ್ರಾಣಿಗಳನ್ನು 10 ಕಿಮೀ. ದೂರದಿಂದಲೇ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಾಣಿಗಳು ಕ್ಯಾಮೆರಾ ಕಣ್ಗಾಗಲಿಗೆ ಬಿದ್ದ ಕೂಡಲೇ, ಲೊಕೇಶನ್ ಮತ್ತು ಚಿತ್ರದ ಸಮೇತ ಸಂದೇಶವನ್ನು ಕಮಾಂಡ್ ಸೆಂಟರ್ ಗೆ ರವಾನಿಸಲಿದೆ. 360 ಡಿಗ್ರಿ ವ್ಯೂ ಕ್ಯಾಮೆರಾಗಳು ಇದಾಗಿದ್ದು, ರಾತ್ರಿ ವೇಳೆಯಲ್ಲೂ ನಿಖರ ಮಾಹಿತಿಯನ್ನು ನೀಡಲಿದೆ. ಅಲ್ಲದೆ ಹುಲಿ, ಚಿರತೆ, ಸಿಂಹ, ಆನೆ ಸೇರಿದಂತೆ ಕಾಡುಪ್ರಾಣಿಗಳನ್ನು ಸೆರೆ ಹಿಡಿಯಲು ಇದು ಸಹಕಾರಿಯಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat