ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತೊಂದು ಹೆಮ್ಮೆಯ ಗರಿ
ಏರ್‌ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ವರ್ಲ್ಡ್ ವಿಶ್ವದ ಆರು ನಿಲ್ಡಾಣಗಳನ್ನು ಸೇವಾ ಗುಣಮಟ್ಟದ ಕ್ಯಾಟಗರಿಯಲ್ಲಿ ಗುರುತಿಸಿದ್ದು, ಕರಾವಳಿ ಭಾಗದ ಹೆಮ್ಮೆಯ ಮಂಗಳೂರು ಅಗ್ರಸ್ಥಾನದಲ್ಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ, ಇಸ್ತಾನ್ ಬುಲ್‌ನಲ್ಲಿ ನಡೆಯಲಿರುವ ಏರ್‌ಪೋರ್ಟ್ ಎಕ್ಸ್ಪೀರಿಯನ್ಸ್ ಸಮಿಟ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಲಭ್ಯವಾಗಲಿದೆ.
ಮಂಗಳೂರಿನ ವಿಮಾನ ನಿಲ್ಡಾಣ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏರ್‌ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ವರ್ಲ್ಡ್‌ನಿಂದ ಈ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ವಿಮಾನ ನಿಲ್ದಾಣ ಸೇವಾ ಗುಣಮಟ್ಟಕ್ಕಾಗಿ ಈ ಪ್ರಶಸ್ತಿಯನ್ನು ಮಂಗಳೂರು ವಿಮಾನ ನಿಲ್ಡಾಣ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಈ ಪ್ರಶಸ್ತಿ ತನ್ನದಾಗಿಸಿಕೊಂಡು ರಾಜ್ಯಕ್ಕೆ ಹೆಮ್ಮೆ ತಂದಿದೆ.

ಕರಾವಳಿ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕರ್ನಾಟಕ ಸರಕಾರ ಯೋಜನೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದು, ಈ ಬೆಳವಣಿಗೆ ಅಭಿವೃದ್ಧಿಯ ಹಾದಿಗೆ ಸಾಥ್ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ವರ್ಲ್ಡ್ ವಿಶ್ವದ ಆರು ನಿಲ್ಡಾಣಗಳನ್ನು ಸೇವಾ ಗುಣಮಟ್ಟದ ಕ್ಯಾಟಗರಿಯಲ್ಲಿ ಗುರುತಿಸಿದ್ದು, ಕರಾವಳಿ ಭಾಗದ ಹೆಮ್ಮೆಯ ಮಂಗಳೂರು ಅಗ್ರಸ್ಥಾನದಲ್ಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ, ಇಸ್ತಾನ್ ಬುಲ್‌ನಲ್ಲಿ ನಡೆಯಲಿರುವ ಏರ್‌ಪೋರ್ಟ್ ಎಕ್ಸ್ಪೀರಿಯನ್ಸ್ ಸಮಿಟ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದೇವೆ ಎಂದು ಮಂಗಳೂರಿನ ಏರ್‌ಪೋರ್ಟ್ ಅಥಾರಿಟಿ ತಿಳಿಸಿದೆ.