ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(ಕೆಎಸ್‌ಟಿಡಿಸಿ) ಹೊಸ ಹುರುಪಿನೊಂದಿಗೆ ರಾಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ನೇಪಥ್ಯಕ್ಕೆ ಸರಿದಿದ್ದ ಪ್ರವಾಸಿ ತಾಣಗಳಿಗೂ ಕಾಯಕಲ್ಪ ಒದಗಿಸಿಕೊಡುತ್ತಿದೆ. ಮಧ್ಯಮ ವರ್ಗದ ಜನರ ಪ್ರವಾಸ ಆಸೆಯನ್ನು ಈಡೇರಿಸುತ್ತಾ ವಿಶ್ವಾಸ ಗಳಿಸುತ್ತಿದೆ. ಕೆಎಸ್‌ಟಿಡಿಸಿ ಒಂದೇ ಸೂರಿನಡಿ ಪ್ರವಾಸ, ಸಾರಿಗೆ, ವಾಸ್ತವ್ಯ ಮತ್ತು ಆತಿಥ್ಯವನ್ನು ನೀಡುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ತನ್ನ ಹೆಜ್ಜೆ ಗುರುತುಗಳನ್ನು ಕರ್ನಾಟಕದಲ್ಲಿ ಮಾತ್ರ ಸೀಮಿತಗೊಳಿಸದೆ, ಹೊರ ರಾಜ್ಯಗಳಿಗೂ ಮುಂದುವರಿಸಿದೆ. ನಾಲ್ಕಾರು ತಲೆಮಾರಿನ ಮಕ್ಕಳಿಗೆ ಹೇಳಿದರೂ ಮುಗಿಯದಷ್ಟು ವೈಭವದ ಇತಿಹಾಸ ಕರ್ನಾಟಕಕ್ಕಿದೆ. ಇದನ್ನು ಪುಸ್ತಕದ ಪುಟಗಳಿಗೆ ಮಾತ್ರ ಸೀಮಿತವಾಗಿರಿಸದೆ, ಜನರನ್ನು ಸುತ್ತಿಸಿ ಪ್ರವಾಸದಲ್ಲಿನ ಸಾರ ಸತ್ವವನ್ನು ಹಂಚಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ ಕೆಎಸ್‌ಟಿಡಿಸಿ. ಇಡೀ ರಾಜ್ಯವನ್ನು ಸುತ್ತಿಸುವ ಮನೋಬಯಕೆ ಹೊಂದಿರುವ ಕೆಎಸ್‌ಟಿಡಿಸಿ ಇದೀಗ ಪ್ರವಾಸಿಗರನ್ನು ರಾಜಧಾನಿ ಬೆಂಗಳೂರಿನತ್ತ ಕೊಂಡೊಯ್ಯುತ್ತಿದೆ. ಒಂದು ದಿನದ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ. ಪ್ರತಿ ಪ್ರವಾಸವೂ ಯಶವಂತಪುರದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರಿನಿಂದಲೇ ಪ್ರಾರಂಭವಾಗುತ್ತದೆ. ಕೆಎಸ್‌ಟಿಡಿಸಿ ಕಚೇರಿಯಿಂದ ಆರಂಭವಾಗುವ ಪ್ರವಾಸವು, ಪ್ರವಾಸಿಗರನ್ನು ಅದ್ಭುತ ತಾಣಗಳಿಗೆ ಕರೆದೊಯ್ಯಲಿದೆ. ಬಹುಮುಖ್ಯವಾಗಿ ಬೆಂಗಳೂರಿನ ಸುತ್ತಮುತ್ತಲೇ ಇರುವ ಜಾಗಗಳನ್ನು ತೋರಿಸಲು ಮುಂದಾಗಿದೆ. ಬೆಂಗಳೂರು ಸಿಟಿ ಟೂರ್ ಎಂಬ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ಯಾಕೇಜ್‌ನಡಿ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ಬೆಂಗಳೂರು ಸಿಟಿ ತೋರಿಸಲಾಗುತ್ತದೆ. ಪ್ರಸಿದ್ಧ ಇಸ್ಕಾನ್ ಟೆಂಪಲ್, ರಾಜರಾಜೇಶ್ವರಿ ದೇವಸ್ಥಾನ, ಬನ್ನೇರುಘಟ್ಟ, ಸಫಾರಿ ಮತ್ತು ತಾರಾಲಯ ವೀಕ್ಷಣೆ ಹೀಗೆ ಪ್ರವಾಸಿಗರಿಗೆ ಖುಷಿ ಕೊಡುವಂಥ ಜಾಗಗಳಿಗೆ ಕರೆದುಕೊಂಡು ಹೋಗುತ್ತಾರೆ. ಇತ್ತ ಪ್ರವಾಸಿಗರ ಹೊಟ್ಟೆ ತಣಿಸಲು ಮಯೂರ ಹೊಟೇಲ್‌ನಲ್ಲಿ ರುಚಿಕರವಾದ ಊಟ ಕೊಡಿಸುತ್ತಾರೆ. ಪ್ರತಿ ಪ್ರವಾಸವೂ ಮಜವಾದ ಅನುಭವವನ್ನು ನೀಡುತ್ತದೆ. ಮನೆಯಲ್ಲೇ ಕೂತು ಬೇಸರಗೊಂಡಿರುವವರು ಕೆಎಸ್‌ಟಿಡಿಸಿ ಮೂಲಕ ಒಂದು ದಿನ ಬೆಂಗಳೂರು ಸುತ್ತಬಹುದು. ಅಂದಹಾಗೆ ದೇಶಿ ಮತ್ತು ವಿದೇಶಿ ಪ್ರವಾಸವೆಂಬ ಆಯ್ಕೆಯೂ ಇದೆ. ವಿದೇಶದಿಂದ ಬರುವ ಪ್ರವಾಸಿಗರಿಗೂ ಕೆಎಸ್‌ಟಿಡಿಸಿ ವಿಶೇಷವಾದ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಹೊಸದಾಗಿ ಬೆಂಗಳೂರಿಗೆ ಬರುವವರಿಗೆ ಇದು ಒಳ್ಳೆಯ ಅವಕಾಶ. ಬೆಂಗಳೂರಿನ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಈ ಪ್ರವಾಸದ ಮೂಲಕ ಬೆಂಗಳೂರು ಏನೆಂಬ ಅಂದಾಜು ಸಿಗುತ್ತದೆ. ಅದರಲ್ಲೂ ದೇವಾಲಯಗಳು ಹೆಚ್ಚಿನವರಿಗೆ ಖುಷಿಕೊಡುತ್ತವೆ. ಮಕ್ಕಳು ಮತ್ತು ಯುವ ಜನತೆಗೆ ಬನ್ನೇರುಘಟ್ಟ ಭೇಟಿ, ಸಫಾರಿ ವೀಕ್ಷಣೆ ಮತ್ತು ಬರ್ಡ್ ವಾಚಿಂಗ್‌ನಿಂದ ಮುದಗೊಳ್ಳಬಹುದು. ಈ ಮೂಲಕ ಬೆಂಗಳೂರು ಪ್ರವಾಸೋದ್ಯಮಕ್ಕೂ ಪ್ರಾಶಸ್ತ್ಯ ಸಿಗಲಿದೆ. ಬೆಂಗಳೂರು ನಗರದ ನಿರ್ಮಾಣದ ಕಥೆಯೇ ರೋಚಕವಾಗಿದೆ ಎಂದಮೇಲೆ ಬೆಂಗಳೂರು ಪ್ರವಾಸ ಹೇಗಿರುತ್ತದೆ ಎಂಬುದನ್ನು ಊಹಿಸಿ. ಈ ನಿಟ್ಟಿನಲ್ಲಿ ಕೆಎಸ್‌ಟಿಡಿಸಿ ಕೆಲಸ ಶ್ಲಾಘನಾರ್ಹ. ಕೆಎಸ್‌ಟಿಡಿಸಿ ರಾಜರಥ ಹೊರಟಿದೆ.ಬೇಗ ಬೇಗ ಹತ್ತಿ ನಿಮ್ಮ ಸೀಟುಗಳನ್ನು ಖಾತರಿಪಡಿಸಿಕೊಳ್ಳಿ.

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಆಪ್ತ ಸಂಗಾತಿ. ಈಗಲೇ ಬುಕ್ ಮಾಡಿ. ನೀವು ಹೋಗ ಬೇಕೆನಿಸಿದ ಜಾಗಗಳಿಗೆಲ್ಲ ಕೆಎಸ್‌ಟಿಡಿಸಿ ಜತೆಯಾಗುತ್ತದೆ.

iscon

ಬೆಂಗಳೂರು ಸಿಟಿ ಟೂರ್

ದಿನ-1

ಬೆಳಗ್ಗೆ 7:30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ.

ಬೆಳಗ್ಗೆ 7:45ಕ್ಕೆ ಇಸ್ಕಾನ್‌ ಟೆಂಪಲ್‌ಗೆ ಭೇಟಿ

ಬೆಳಗ್ಗೆ 7:45 - 8:45ಕ್ಕೆ ಇಸ್ಕಾನ್ ಭಗವಾನ್ ಶ್ರೀ ಕೃಷ್ಣ ದರ್ಶನ

ಬೆಳಗ್ಗೆ 8:45- 9:15ಕ್ಕೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ

ಬೆಳಗ್ಗೆ 9:15ಕ್ಕೆ ರಾಜರಾಜೇಶ್ವರಿ ದೇವಸ್ಥಾನದಿಂದ ಹೊರಡುವುದು

ಬೆಳಗ್ಗೆ 10:30ಕ್ಕೆ ಬನ್ನೇರುಘಟ್ಟಕ್ಕೆ ಭೇಟಿ

ಬೆಳಗ್ಗೆ 10:30- 1:00ಕ್ಕೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿ

ಮಧ್ಯಾಹ್ನ 1:00- 1:30ಕ್ಕೆ ಬನ್ನೇರುಘಟ್ಟದ ಹೋಟೆಲ್ ಮಯೂರ ವನಶ್ರೀಯಲ್ಲಿ ಊಟ

ಮಧ್ಯಾಹ್ನ 1:30ಕ್ಕೆ ಬನ್ನೇರುಘಟ್ಟದಿಂದ ಹೊರಡುವುದು

ಸಂಜೆ 4.30- 5:15 ತಾರಾಲಯ ಭೇಟಿ

ಸಂಜೆ 6:30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರಕ್ಕೆ ಹೊರಡುವುದು.

Bannerughatta national park (1)

ಮುತ್ಯಾಲ ಮಡುವಿನಲ್ಲಿ ಮಯೂರ ರಾಜಾತಿಥ್ಯ!

ಆತಿಥ್ಯಕ್ಕೆ ಹೇಳಿ ಮಾಡಿಸಿದ ಹೊಟೇಲ್ ಎಂದರೆ ಅದು ಮಯೂರ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರ ಹೊಟೇಲ್ ಇದೆ. ಆತಿಥ್ಯವೆಂದರೆ ಮಯೂರ ಎಂಬಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಪ್ರವಾಸಿಗರ ಆಯ್ಕೆಯೂ ಮಯೂರ. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಅಲ್ಲಿನ ಸಿಬ್ಬಂದಿ, ಹಿತವಾದ ವಾತಾವರಣ, ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಎಸ್‌ಟಿಡಿಸಿ ಪ್ಯಾಕೇಜ್ ನಡಿ ಪ್ರವಾಸಕ್ಕೆ ಹೊರಡುವ ಪ್ರವಾಸಿಗರಿಗೆಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ಒದಗಿಸಿಕೊಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಮಯೂರವೆಂದರೆ ಅಲ್ಲಿ ಗುಣಮಟ್ಟದ ಮತ್ತು ಆತ್ಮೀಯವಾದ ಆತಿಥ್ಯ ಇದ್ದೇ ಇರುತ್ತದೆ. ಮಯೂರ ತನ್ನ ಗ್ರಾಹಕರನ್ನು ಅದ್ಭುತವಾಗಿ ಉಪಚರಿಸುತ್ತದೆ. ಸೇವೆ ನೀಡುವುದರಲ್ಲಿ ಯಾವುದೇ ರಾಜಿಯಿಲ್ಲ. ಪ್ರವಾಸಿಗನಿಗೆ ಮನೆಯ ವಾತಾವರಣವನ್ನು ಮಯೂರ ಹೊಟೇಲ್ ನಿರ್ಮಿಸಿಕೊಡುತ್ತದೆ. ಹೊಟೇಲ್‌ನ ಪ್ರತಿ ಸಿಬ್ಬಂದಿಯೂ ಆಪ್ತವಾಗಿ ಮಾತಿಗಿಳಿಯುತ್ತಾ ವಾಸ್ತವ್ಯವಿರುವ ಅಷ್ಟು ಘಳಿಗೆಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವು ಆನೇಕಲ್ ಸುತ್ತಮುತ್ತಲಿನ ತಾಣಗಳನ್ನು ನೋಡಲು ಹೋದರೆ ಮರೆಯದೆ ಮಯೂರ ನಿಸರ್ಗ ಪರ್ಲ್‌ ವ್ಯಾಲಿಯಲ್ಲಿ ಉಳಿದುಕೊಳ್ಳಿ. ಮುತ್ಯಾಲ ಮಡುವಿನ ಬಳಿ ಈ ಮಯೂರ ಹೊಟೇಲ್ ಇದೆ. ವ್ಯಾಲಿಯಿಂದ ನೀರು ಮುತ್ತುಗಳಂತೆ ಬೀಳುವುದನ್ನು ಕಂಡು ಸಂಭ್ರಮಿಸಬಹುದು. ಮ್ಯೂಸಿಕ್ ಫೌಂಟೇನ್ ಬಂಡೆಗಳ ಮೇಲೆ ಚಿಮ್ಮುವುದನ್ನು ನೋಡಿದಾಗ ಮಜವೆನಿಸುತ್ತದೆ. ಸುಂದರ ದೃಶ್ಯ ವೈಭವವನ್ನು ಕಂಡು ಪ್ರವಾಸಿಗರು ಮುದಗೊಳ್ಳಬಹುದು.ರಾಜಧಾನಿ ಬೆಂಗಳೂರಿನಿಂದ ಕೇವಲ 40 ಕಿಮೀ ದೂರದಲ್ಲಿರುವ ಆನೇಕಲ್ ಬಳಿಯ ಮುತ್ಯಾಲ ಮಡುವಿನಲ್ಲಿರುವ ಮಯೂರದಲ್ಲಿ ನೀವು ನಿಮ್ಮ ಕುಟುಂಬ ಅಥವಾ ಗೆಳೆಯರೊಂದಿಗೆ ವಾಸ್ತವ್ಯ ಹೂಡಲೇಬೇಕು. ಮನೆಯಲ್ಲಿದ್ದೇನೆ ಎಂಬ ಭಾವ ಖಂಡಿತ ಮೂಡುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಎಷ್ಟು ದಿನ ಅಂತ ಬಂಧಿತರಾಗುತ್ತೀರಿ? ಜಗತ್ತು ವಿಶಾಲವಾಗಿದೆ. ನಿಮ್ಮ ಬದುಕನ್ನೂ ವಿಶಾಲಗೊಳಿಸಿಕೊಳ್ಳಿ.

Mayura nisarga

ದಾರಿ ಹೇಗೆ?

ಹೊಟೇಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ, ಮುತ್ಯಾಲ ಮಡುವಿಗೆ ಹತ್ತಿರದಲ್ಲಿದೆ. ಆನೇಕಲ್‌ನಿಂದ 5 ಕಿಮೀ ದೂರದಲ್ಲಿದೆ. ಈ ಚಿಕ್ಕ, ಫ್ರೆಂಡ್ಲಿ ಹೊಟೇಲ್‌ನಲ್ಲಿ 5 ಡಬಲ್ ಬೆಡ್ ರೂಮ್‌ಗಳು, ರೆಸ್ಟೋರೆಂಟ್ ಇದೆ. ಮನೆಯಲ್ಲಿ ಕೂತಿದ್ದರೆ ಕೂತೇ ಇರುತ್ತೀರಿ. ಮನೆಯಲ್ಲಿ ಸಿಗುವ ವಾತಾವರಣ ಹೊಟೇಲ್ ಮಯೂರದಲ್ಲಿಯೂ ಸಿಗುತ್ತದೆ. ಆದರೆ ಅಲ್ಲಿನ ವಾತಾವರಣ ಹಿತವಾಗಿರುತ್ತದೆ. ಹೊಸತನವೂ ಇರುತ್ತದೆ. ಉಳಿದುಕೊಳ್ಳೋದಕ್ಕೇನು ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು ಎನ್ನಬೇಡಿ. ಕೆಲವೊಮ್ಮೆ ಸ್ಟೇಯಿಂಗ್ ಕೂಡ ಒಳ್ಳೆಯ ವೈಬ್ ಕೊಡುತ್ತದೆ.

ಸಂಪರ್ಕ:

ಶ್ರೀ ಎಸ್. ಶ್ರೀನಿವಾಸ್

ಮುತ್ಯಾಲಮಡುವು, ಆನೇಕಲ್

PIN: 562106

9606987813, 080 27859303

nisarga@karnatakaholidays.net