ಬೆಂಗಳೂರು ಸೌತ್‌ ಈಗ ಆಹಾರ ಪ್ರಿಯರಿಗೆ ಬಹಳ ಮೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಸೌತ್‌ ಇಂಡಿಯನ್‌, ನಾರ್ಥ್ ಇಂಡಿಯನ್‌, ಆಂಧ್ರ ಸ್ಟೈಲ್‌, ಚೈನೀಸ್‌, ಥಾಯ್‌ ಫುಡ್‌ ಹೀಗೆ ಎಲ್ಲ ಬಗೆಯ ಆಹಾರಗಳನ್ನು ಅರಸಿ ಬರುವವರಿಗೂ ಆಯ್ಕೆಗಳು ಹಲವಿದೆ. ಆದರೆ ಈ ಎಲ್ಲ ಬಗೆಯ ಆಹಾರಗಳೂ ಒಂದೇ ಕಡೆ ಸಿಗುವಂತಿದ್ದರೆ ಎಂದು ಯೋಚಿಸುವವರಿಗಾಗಿ ತಿಂಗಳ ಹಿಂದಷ್ಟೇ ಹೊಸ ಅಡ್ಡಾವೊಂದು ಅದ್ದೂರಿಯಾಗಿ ಶುಭಾರಂಭಗೊಂಡಿದೆ.

ಈಟ್‌, ಚಿಲ್‌, ರಿಪೀಟ್, ಇದು ಕಾವೊ ಸ್ಪೆಷಲ್‌

ಬನಶಂಕರಿ 6ನೇ ಹಂತದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಕಾವೊ ರೆಸ್ಟೋರೆಂಟ್‌ ಸದ್ಯ ಆಹಾರಪ್ರಿಯರ ಹೊಸ ತಾಣವಾಗಿಬಿಟ್ಟಿದೆ. ಸುಮಾರು 5000 ಚದರ ಅಡಿ ವಿಸ್ತೀರ್ಣವಿರುವ ಕಾವೊದಲ್ಲಿ ಏಕಕಾಲಕ್ಕೆ 200 ಮಂದಿ ಕುಳಿತು ತಿನ್ನಲು ಸ್ಥಳಾವಕಾಶವಿದೆ. ಆಂಬಿಯನ್ಸ್‌ ಪ್ರೀಮಿಯಂ ಆಗಿದ್ದು, ಸ್ಪೇಶಿಯಸ್‌ ಆಗಿರುವುದೇ ಕಾವೊದ ಪ್ಲಸ್‌ ಪಾಯಿಂಟ್.‌ ಡೈನ್‌ ಇನ್‌ ಹಾಗೂ ಟೇಕ್‌ ಅವೇ ಗೂ ಇಲ್ಲಿ ಅವಕಾಶವಿದ್ದು ಬೆವರೇಜಸ್‌ ಫ್ರೆಂಡ್ಲೀ ವಾತಾವರಣವಿದೆ. ವೆಜ್‌ ಹಾಗೂ ನಾನ್‌ ವೆಜ್‌ ಡಿಶ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಆಯ್ಕೆಗಳು ಇಲ್ಲಿವೆ.

ಎಸಿ ಡೈನಿಂಗ್‌ ಏರಿಯಾ, ಫ್ಯಾಮಿಲಿ ಫ್ರೆಂಡ್ಲಿ ಎನಿಸುವ ವಾತಾವರಣ, ಗ್ರೌಂಡ್‌ ಫ್ಲೋರ್‌ನಲ್ಲಿಯೇ ವೆಜ್‌ ಡೈನಿಂಗ್‌ ಸ್ಪೇಸ್‌ ಇದ್ದು, ಮಾಕ್‌ಟೇಲ್‌ ಲವರ್ಸ್‌ ವಿಸಿಟ್‌ ಮಾಡಲೇ ಬೇಕಿರುವ ಜಾಗವಿದು.

ಇಲ್ಲಿ ಸ್ಟಫ್ಡ್ ಮಶ್ರೂಮ್‌, ಪನೀರ್‌ ಪಸಂದ್‌, ಬಟರ್‌ ಗಾರ್ಲಿಕ್‌ ಮಶ್ರೂಮ್‌, ಕೊರಿಯನ್‌ ಫ್ರೈಡ್‌ ಪನೀರ್‌, ಗೊಲ್ಕೊಂಡಾ ಪನೀರ್‌, ಚೀಸ್‌ ಕಾರ್ನ್‌ ಡ್ರಾಪ್‌, ದಕ್ನೀ ಕಬಾಬ್‌ ಹೀಗೆ ಬಗೆಬಗೆಯ ಸ್ಟಾರ್ಟರ್ಸ್ ಲಭ್ಯವಿದ್ದು, ತಂದೂರಿ ಸ್ಟಾರ್ಟರ್ಸ್‌ ಬಹು ಬೇಡಿಕೆಯನ್ನು ಪಡೆದುಕೊಂಡಿದೆ.

ಕಾವೊ ಮಾಕ್‌ಟೇಲ್‌ ಸ್ಪೆಷಲ್‌

ಬ್ಲೂ ಏಂಜಲ್‌

ಬನಾರಸಿ ಪಾನ್‌

ಕಡಲ್ಸ್‌ ಆನ್‌ ದಿ ಬೀಚ್‌

ಹರಿಕೇನ್‌ ಬ್ಲಾಸ್ಟ್‌

Cavo live music

ವೀಕೆಂಡ್‌ ಲೈವ್‌ ಮ್ಯೂಸಿಕ್‌

ಫ್ರೆಂಡ್ಸ್‌, ಫ್ಯಾಮಿಲಿ ಜತೆಗೆ ಇಲ್ಲಿಗೆ ಭೇಟಿ ಕೊಟ್ಟರೆ ಆಹಾರದ ಜತೆಗೆ ಹಾಳು ಹರಟೆಯಂತೂ ಇದ್ದೇ ಇರುತ್ತೆ. ಆದರೆ ಕಾವೊದಲ್ಲಿ ಸ್ಪೆಷಲ್‌ ಆಫರ್‌ ಎಂಬಂತೆ ಆಹಾರ, ಹರಟೆಯ ಜತೆಗೆ ಲೈವ್‌ ಮ್ಯೂಸಿಕ್‌ ಬ್ಯಾಂಡ್‌ ನಿಮಗೆ ಜತೆಯಾಗಲಿದೆ. ವೀಕೆಂಡ್‌ ಇಲ್ಲಿ ಲೈವ್‌ ಬ್ಯಾಂಡ್‌ಗಳ ಪರ್ಫಾರ್ಮೆನ್ಸ್‌ ಇರಲಿದ್ದು, ಫುಡ್‌ ಆಂಡ್‌ ಮ್ಯೂಸಿಕ್‌ ಪ್ರಿಯರು ಎಂಜಾಯ್‌ ಮಾಡುವ ಈ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ.

ಮ್ಯಾಚ್‌ ಸ್ಕ್ರೀನಿಂಗ್‌

ಇನ್ನು ಸ್ಪೋರ್ಟ್ಸ್‌ ಲವರ್ಸ್‌ ಮಿಸ್‌ ಮಾಡದೇ ಹೋಗಬೇಕಿರುವ ಡೈನಿಂಗ್‌ ಸ್ಪಾಟ್‌ ಇದು. ಕ್ರಿಕೆಟ್‌ ನೋಡುವುದನ್ನು ಮಿಸ್ ಮಾಡಲು ಸಾಧ್ಯವೇ ಇಲ್ಲ. ಇಲ್ಲಿ ಕ್ರಿಕೆಟ್‌ ಲೈವ್‌ ಸ್ಟ್ರೀಮಿಂಗ್‌ ಇರಲಿದ್ದು, ಫುಡ್‌ ಆಂಡ್‌ ಮ್ಯಾಚ್‌ ಈಸ್‌ ಆಲ್ವೇಸ್‌ ಬೆಸ್ಟ್‌ ಕಾಂಬಿನೇಷನ್.‌ ಏನಂತೀರಿ ?

Cavo Restaurant (1)

ಶೂಟಿಂಗ್‌ ಸ್ಪಾಟ್‌

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ ಕೆಲವು ಭಾಗದ ಚಿತ್ರೀಕರಣ ಇದೇ ಕಾವೊ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಅದಷ್ಟೇ ಅಲ್ಲದೆ ಕಿರುತೆರೆ, ಬೆಳ್ಳಿತೆರೆಯ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳ ಚಿತ್ರೀಕರಣವೂ ಇಲ್ಲಿ ಸದ್ದಿಲ್ಲದೆ ನಡೆದಿದ್ದು ನಟ-ನಟಿಯರು, ತಂತ್ರಜ್ಞರಿಗೂ ಈ ರೆಸ್ಟೋರೆಂಟ್‌ ಬೆಸ್ಟ್‌ ಎನಿಸಿದೆ.

ಶೂಟಿಂಗ್‌ಗಾಗಿ ಕಾವೊ ರೆಸ್ಟೊರೆಂಟ್‌ಗೆ ಮೊದಲ ಬಾರಿ ವಿಸಿಟ್‌ ಮಾಡಿದ್ದೆವು. ಬಹಳ ಒಳ್ಳೆಯ ಆಂಬಿಯನ್ಸ್‌ ಇಲ್ಲಿತ್ತು. ಹಾಸ್ಪಿಟಾಲಿಟಿಯಂತೂ ಇನ್ನೂ ಉತ್ತಮವಾಗಿತ್ತು. ಟೇಸ್ಟೀ ಫುಡ್ ಸವಿದ ಮೇಲಂತೂ ಮತ್ತೆ ಮತ್ತೆ ಬರಬೇಕು ಎನಿಸಿಬಿಟ್ಟಿದೆ. ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಬರುವವರಿಗೆ ಇದೊಂದು ಬೆಸ್ಟ್‌ ಪ್ಲೇಸ್.‌
- ರಾಜೇಶ್‌ ನಟರಂಗ