Wednesday, February 4, 2026
Wednesday, February 4, 2026

ಹೊಸ ದಾಖಲೆ ಬರೆಯಲು ಸಜ್ಜಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇಶೀಯ ಮಟ್ಟದಲ್ಲಿ ಸದ್ಯ ಎರಡನೆಯ ಸ್ಥಾನದಲ್ಲಿರುವ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಧ್ಯ ದಾಪುಗಾಲಿಡುತ್ತಿದೆ. ಅಂತಾರಾಷ್ಟೀಯ ವಿಮಾನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುತ್ತಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದ ಮತ್ತು ಅಂತಾರಾಷ್ಟ್ರೀಯ ಹೊಸ ಮಾರ್ಗಗಳು ಸೇರಿ ಒಟ್ಟು 100 ತಾಣಗಳಿಗೆ ಸಂಪರ್ಕ ಕಲ್ಪಿಸಿಕೊಟ್ಟು, ಸುಸಜ್ಜಿತ ಮೂಲ ಸೌಕರ್ಯಗಳನ್ನು ನೀಡಿ, 2026ರಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಮತ್ತು ಸರಕು ಬೇಡಿಕೆ ಹೆಚ್ಚಿಸಿಕೊಳ್ಳಲು ಸಜ್ಜಾಗಿದೆ.

ಕಳೆದ ವರ್ಷ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡಿದವರ ಸಂಖ್ಯೆ 4.3 ಕೋಟಿಗಿಂತ ಹೆಚ್ಚಾಗಿತ್ತು. 2025ರಲ್ಲಿ ಪ್ರಯಾಣಕ್ಕೆ ಹೊಸ ಮಾರ್ಗಗಗಳನ್ನು, ಅಗತ್ಯ ಸೌಕರ್ಯವನ್ನು ಕಲ್ಪಿಸಿದ್ದು, ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಒಂದೇ ದಿನದಲ್ಲಿ ಒಂದು ಲಕ್ಷ ಜನರು ಪ್ರಯಾಣಿ ಮಾಡಿದ್ದು ದಾಖಲಾಗಿವೆ.

ಇದನ್ನೂಓದಿ: ಯಮುನಾ ನದಿಯಲ್ಲಿ ಕ್ರೂಸ್‌ ಕಲರವ

ದೇಶೀಯ ಮಟ್ಟದಲ್ಲಿ ಸಧ್ಯ ಎರಡನೆಯ ಸ್ಥಾನದಲ್ಲಿರುವ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಧ್ಯ ದಾಪುಗಾಲಿಡುತ್ತಿದೆ. ಅಂತಾರಾಷ್ಟೀಯ ವಿಮಾನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುತ್ತಿದೆ.

airport 11

ಬೆಂಗಳೂರು ವಿಮಾನ ನಿಲ್ದಾಣದಿಂದ ಸರಕು ಸಾಗಣೆಯಲ್ಲೂ ಏರಿಕೆ ಕಂಡು ಬಂದಿದೆ. ಕೃಷಿ ಉತ್ಪನ್ನಗಳು, ಔಷದಗಳು ಸೇರಿ ಹಲವು ಸರಕುಗಳ ದೇಶ- ವಿದೇಶಗಳಿಗೆ ಸಾಗಾಣೆಯಾಗಿವೆ. ಇದಕ್ಕೆ ಸರಕು ನಿರ್ವಹಣೆಯಲ್ಲಿ ಹೆಚ್ಚಿನ ಸಾಮರ್ಥ್ಯ ತುಂಬಲು, ಹೊಸ ಗೋದಾಮುಗಳನ್ನು, ಹೊಸ ಸರಕು ಟರ್ಮಿನಲ್‌ಗಳನ್ನು ನಿರ್ಮಿಸಿದ್ದು ಕಾರಣ ಎನ್ನಬಹುದು.

ಒಟ್ಟಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುತ್ತಾ, ಸರಕು ಸಾಗಣೆಯಲ್ಲೂ ಹೊಸ ದಾಖಲೆಗಗಳನ್ನು ನಿರ್ಮಿಸುತ್ತಿದ್ದು, 2026ರಲ್ಲಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...