Tuesday, October 28, 2025
Tuesday, October 28, 2025

ಭಾರತೀಯರಿಲ್ಲದ ದೇಶಗಳು ಯಾವುದೆಂದು ನಿಮಗೆ ಗೊತ್ತಾ ?

ಪ್ರಪಂಚದಾದ್ಯಂತ ಭಾರತೀಯರೇ ಇಲ್ಲದ, ಇದ್ದರೂ ಬಹಳ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುವ ದೇಶಗಳು ಯಾವುದು ಎಂಬುದು ನಿಮಗೆ ಗೊತ್ತಾ? ನೀವು ಪ್ರವಾಸಕ್ಕೆ ಹೋಗಬಹುದಾದ ಆದರೆ ಅಲ್ಲಿ ನೆಲೆಸಲು ಸಾಧ್ಯವಾಗದ ದೇಶಗಳ ಬಗ್ಗೆ ತಿಳಿದುಕೊಳ್ಳಿ.

ಹೆಚ್ಚಿನ ವ್ಯಾಸಂಗ ಮಾಡುವುದಕ್ಕೆ, ಉದ್ಯೋಗದ ಕಾರಣದಿಂದ ಭಾರತದಿಂದ ಅನೇಕ ಮಂದಿ ಜಗತ್ತಿನ ನಾನಾ ದೇಶಗಳಿಗೆ ತೆರಳುತ್ತಾರೆ, ಅಲ್ಲಿಯೇ ನೆಲೆಯೂರುತ್ತಾರೆ. ಹೀಗೆ ಏಷ್ಯಾದಿಂದ ಯುರೋಪ್ ಮತ್ತು ಅಮೆರಿಕದವರೆಗೆ ಪ್ರಪಂಚದ ಅನೇಕ ಭಾಗಗಳಲ್ಲಿ ಭಾರತೀಯರು ವಾಸಿಸುತ್ತಾರೆ. ಆದರೆ ಕೆಲವು ನೀವು ದೇಶಗಳಲ್ಲಿ ಒಬ್ಬನೇ ಒಬ್ಬ ಭಾರತೀಯ ಕೂಡ ಕಾಣಸಿಗುವುದಿಲ್ಲ ಎಂದರೆ ನಂಬಲೇಬೇಕು. ಹೌದು, ವಿಶ್ವದ ಇನ್ನೂ ಕೆಲವು ದೇಶಗಳಲ್ಲಿ ಭಾರತೀಯರ ಸಂಖ್ಯೆ ಬಹಳ ಕಡಿಮೆ. ನೀವು ಈ ದೇಶಗಳಲ್ಲಿ ವಾಸಿಸುವ ಕನಸು ಕಾಣುತ್ತಿದ್ದರೆ, ಮೊದಲು ಈ ಮಾಹಿತಿಯನ್ನು ತಿಳಿದುಕೊಳ್ಳಿ.

ವ್ಯಾಟಿಕನ್ ಸಿಟಿ (Vatican City)

ಜಗತ್ತಿನ ಅತ್ಯಂತ ಚಿಕ್ಕ ದೇಶವಾಗಿರುವ ವ್ಯಾಟಿಕನ್ ಸಿಟಿ ರೋಮ್ ನ ಹೃದಯ ಭಾಗದಲ್ಲಿದೆ. ಇದು ಕ್ಯಾಥೊಲಿಕ್ ಧರ್ಮದ ಆಧ್ಯಾತ್ಮಿಕ ಕೇಂದ್ರವೂ ಆಗಿದ್ದು, ಇಲ್ಲಿನ ಪ್ರಸಿದ್ಧ ಸ್ಥಳಗಳ ಪೈಕಿ ಸೇಂಟ್ ಪೀಟರ್ಸ್ ಬೆಸಿಲಿಕಾ ಮತ್ತು ವ್ಯಾಟಿಕನ್ ವಸ್ತುಸಂಗ್ರಹಾಲಯಗಳು ಪ್ರಮುಖವಾದವು. ಭಾರತೀಯರು ಇಲ್ಲಿಗೆ ಪ್ರವಾಸಿಗರಾಗಿ ಹೋಗಬಹುದು, ಆದರೆ ಇಲ್ಲಿ ಭಾರತೀಯರು ಅಷ್ಟಾಗಿ ವಾಸಿಸುವುದಿಲ್ಲ.

Vatican City

ಸ್ಯಾನ್ ಮರಿನೋ (San Marino)

ಇಟಲಿಯ ಅಪೆನ್ನೈನ್ ಪರ್ವತಗಳಲ್ಲಿ ನೆಲೆಸಿರುವ ಸ್ಯಾನ್ ಮರಿನೋ, ಒಂದು ಪುಟ್ಟ ದೇಶ. ಭವ್ಯವಾದ ಕಟ್ಟಡಗಳು, ಸುಂದರ ಭೂದೃಶ್ಯಗಳು ಮತ್ತು ಹಚ್ಚ ಹಸಿರಿನ ಪರಕೃತಿಯ ಮಡಿಲಿನಲ್ಲಿರುವ ಈ ದೇಶವು ಹಳೆಯ ಸಂಪ್ರದಾಯಗಳಿಗೂ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇಲ್ಲಿ ಭಾರತೀಯರ ಜನಸಂಖ್ಯೆ ತೀರಾ ಕಡಿಮೆ.

ಬಲ್ಗೇರಿಯಾ (Bulgaria)

ಬಲ್ಗೇರಿಯಾ ಯುರೋಪಿನ ಅತ್ಯಂತ ಸುಂದರವಾದ ದೇಶವಾಗಿದ್ದು, ಅಲ್ಲಿ ನೀವು ಕಡಲತೀರಗಳು, ಕಪ್ಪು ಸಮುದ್ರ ಮತ್ತು ಬಾಲ್ಕನ್ ಪರ್ವತಗಳನ್ನು ನೋಡಬಹುದು. ಆದರೆ ಇಷ್ಟೊಂದು ಸುಂದರವಾದ ಪರಿಸರವನ್ನು ಹೊಂದಿದ್ದರೂ ಇಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಬಹಳ ಕಡಿಮೆ. ಅಂದರೆ ಇಲ್ಲಿಗೆ ಭೇಟಿಗೆಂದು ಬರುವವರಿದ್ದಾರೆಯೇ ಹೊರತು ಇಲ್ಲಿ ವಾಸ ಕಂಡುಕೊಳ್ಳುವ ಸಲುವಾಗಿ ಅಲ್ಲ.

Bulgaria

ಟುವಾಲು (Tuvalu)

ಪೆಸಿಫಿಕ್ ಮಹಾಸಾಗರದ ಮೂಲೆಯಲ್ಲಿರುವ ಅತ್ಯಂತ ಚಿಕ್ಕ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಟುವಾಲು. ಇದು 9 ಹವಳ ದ್ವೀಪಗಳಿಂd ಮಾಡಲ್ಪಟ್ಟಿದ್ದು, ಇಲ್ಲಿನ ಸಮುದ್ರಗಳ ಸೌಂದರ್ಯವಂತೂ ಅದ್ಭುತವಾಗಿದೆ. ಭಾರತೀಯರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಈ ದೇಶವು ಪ್ರಪಂಚದ ಇತರ ಭಾಗಗಳಿಂದ ಸಾಕಷ್ಟು ಪ್ರತ್ಯೇಕವಾಗಿರುವುದರಿಂದ ಯಾವುದೇ ಭಾರತೀಯರು ಇಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವುದಿಲ್ಲ.

ಗ್ರೀನ್‌ ಲ್ಯಾಂಡ್‌ (Greenland)

ಅತ್ಯಂತ ಶೀತ ಪರಿಸರವನ್ನು ಹೊಂದಿ, ಹಿಮದಿಂದ ಆವೃತವಾದ ದೇಶ ಗ್ರೀನ್‌ ಲ್ಯಾಂಡ್‌. ವಿಶ್ವದ ಅತಿದೊಡ್ಡ ದ್ವೀಪಗಳಲ್ಲಿ ಒಂದಾಗಿರುವ ಇದು,ಅತಿ ಕಡಿಮೆ ನಸಂಖ್ಯೆಯನ್ನು ಹೊಂದಿರುವುದಷ್ಟೇ ಅಲ್ಲದೆ ಶೀತಮಯ ಹವಾಮಾನ ಇಲ್ಲಿದೆ. ಭಾರತೀಯರು ಇಲ್ಲಿಗೆ ಭೇಟಿ ನೀಡಲು ಬರಬಹುದಾದರೂ, ಯಾವೊಬ್ಬ ಭಾರತೀಯನೂ ಗ್ರೀನ್‌ಲ್ಯಾಂಡ್‌ನಲ್ಲಿ ಶಾಶ್ವತವಾಗಿ ವಾಸಿಸುವುದಿಲ್ಲ.

Greenland

ಉತ್ತರ ಕೊರಿಯಾ (North Korea)

ಈ ದೇಶವು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರಿರುವುದಷ್ಟೇ ಅಲ್ಲದೆ, ಗಡಿ ಭಾಗಗಳು ಮತ್ತು ವಿಭಿನ್ನ ರೀತಿಯ ಆಡಳಿತ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಭಾರತೀಯರು ಪ್ರವಾಸಕ್ಕೆಂದೂ ಸಹ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಅಲ್ಲದೆ ಅಲ್ಲಿ ಶಾಶ್ವತವಾಗಿ ವಾಸಿಸುವ ಭಾರತೀಯರು ಯಾರೂ ಇಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...