Friday, May 22, 2026
Friday, May 22, 2026

ಪ್ರವಾಸಿಗರ ಸ್ವರ್ಗ ಫಿನ್‌ಲ್ಯಾಂಡ್‌

ಆರ್ಕ್ಟಿಕ್ ವೃತ್ತದ ಹೆಚ್ಚೂಕಮ್ಮಿ ಎಲ್ಲ ಸ್ಥಳಗಳಲ್ಲಿ ಈಗಲೂ ಗಾಜಿನ ಹಿಗ್ಲೂಗಳಿವೆ. ಇವು ಪ್ರವಾಸಿಗರಿಗೆ ಅರೋರಾ ಬೊರಿಯಾಲಿಸ್‌ ಅಥವಾ ನಾರ್ದನ್‌ ಲೈಟ್ಸ್‌ ಅನ್ನು ಕಣ್ತುಂಬಿಕೊಳ್ಳ ಅವಕಾಶ ನೀಡುತ್ತವೆ. ಹಿಮ ಸಾರಂಗಗಳ ಹಿಂಡು ಹಿಂಡೆ ನೋಡಬಹುದು. ಹಸ್ಕಿ ಸಫಾರಿ ಹಾಗೂ ಹಿಮಸಾರಂಗಗಳು ಎಳೆಯುವ ಪುಟ್ಟ ಗಾಡಿಗಳಲ್ಲಿ ಸಂಚರಿಸಲೂಬಹುದು.

  • ರಾಜೇಂದ್ರ ನಾಡಗೌಡ

ಒಮ್ಮೆ ಆರ್ಕ್ಟಿಕ್‌ ವೃತ್ತದ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಒದಗಿ ಬಂದಿತ್ತು. ನನ್ನ ಪುತ್ರ ಫಿನ್‌ಲ್ಯಾಂಡಿನ ನಿವಾಸಿ. ನನ್ನ ಷಷ್ಠಿಪೂರ್ತಿ ಸಮಾರಂಭಕ್ಕೆ ಬಂದಾಗ ಮಗ ಮತ್ತು ಸೊಸೆ ನಮಗೂ ಹೆಲ್ಸಂಕಿಗೆ ಬರಲು ಆಮಂತ್ರಣ ನೀಡಿದ್ದರು. ಫಿನ್‌ಲ್ಯಾಂಡ್‌ಗೆ ಹೋಗುವ ತವಕ ನಮಗೂ ಇತ್ತು. ನಾವು ಬೇಸಗೆಯ ದಿನಗಳನ್ನೇ ಫಿನ್‌ಲ್ಯಾಂಡ್‌ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡೆವು. ಫಿನ್‌ಲ್ಯಾಂಡ್‌, ಸ್ವೀಡನ್ ಮತ್ತು ನಾರ್ವೆ ದೇಶದಲ್ಲಿಯೂ ಆರು ತಿಂಗಳು ಹಗಲು ಆರು ತಿಂಗಳು ರಾತ್ರಿ ಇರುತ್ತದೆ. ನನ್ನ ಮಗ ನಿತಿನಕುಮಾರ ನಾವೆಲ್ಲ ಲ್ಯಾಪ್‌ಲ್ಯಾಂಡ್‌ ನೋಡಲು ಹೋಗೋಣ ಎಂದ. ಇದು ವಿಶಾಲ ಅರಣ್ಯ ಪ್ರದೇಶ. ಇಲ್ಲಿ ಫಿನ್‌ಲ್ಯಾಂಡ್‌, ಸ್ವೀಡನ್, ನಾರ್ವೆ ಮತ್ತು ರಷ್ಯಾ ದೇಶಗಳು ಗಡಿಯನ್ನು ಹಂಚಿಕೊಂಡಿವೆ. ಇಲ್ಲಿ ಆರ್ಕ್ಟಿಕ್‌ ವೃತ್ತದ ಕೆಲವು ಭಾಗಗಳು ಫಿನಲ್ಯಾಂಡ್‌ ದೇಶಕ್ಕೆ ಸೇರಿವೆ.

ಇದನ್ನೂ ಓದಿ: ಇದು ಫಿನ್ಲೆಂಡ್ ಸ್ಪೆಶಲ್..

ರೋವನೇಮಿಯಿಂದ ಸುಮಾರು 250 ಕಿಮೀ ದೂರದಲ್ಲಿ ಸಾರಿಸಿಲ್ಕಾ ಇದೆ. ಇದು ಒಂದು ಸುಂದರವಾದ ರೆಸಾರ್ಟ್‌ ಹಳ್ಳಿ. ಅವನಿಗೆ ಇಲ್ಲಿ ಉಳಿಯಲು ವ್ಯವಸ್ಥೆಯಾಗಿತ್ತು. ಇಲ್ಲಿಯ ಮನೆಗಳ ನಿರ್ಮಾಣ ಮರದ ತಂಡುಗಳಿಂದ ಮಾಡಿರುತ್ತಾರೆ. ಯಾಕೆಂದರೆ ಆರ್ಕ್ಟಿಕ್‌ ಮತ್ತು ಫಿನ್‌ಲ್ಯಾಂಡಿನಲ್ಲೂ ಆರು ತಿಂಗಳು ಚಳಿಗಾಲದಲ್ಲಿ ಹಿಮ ಬೀಳುತ್ತದೆ. ಹಾಗಾಗಿ ಪೂರ್ತಿ ಗೋಡೆ, ಮೇಲ್ಛಾವಣಿ, ಕೆಳಹಾಸು ಕೂಡ ಮರದಲ್ಲಿಯೇ ಮಾಡಿರುತ್ತಾರೆ. ಆರ್ಕ್ಟಿಕ್ ವೃತ್ತದ ಹೆಚ್ಚೂಕಮ್ಮಿ ಎಲ್ಲ ಸ್ಥಳಗಳಲ್ಲಿ ಈಗಲೂ ಗಾಜಿನ ಹಿಗ್ಲೂಗಳಿವೆ. ಇವು ಪ್ರವಾಸಿಗರಿಗೆ ಅರೋರಾ ಬೊರಿಯಾಲಿಸ್‌ ಅಥವಾ ನಾರ್ದನ್‌ ಲೈಟ್ಸ್‌ ಅನ್ನು ಕಣ್ತುಂಬಿಕೊಳ್ಳ ಅವಕಾಶ ನೀಡುತ್ತವೆ. ಹಿಮ ಸಾರಂಗಗಳ ಹಿಂಡು ಹಿಂಡೆ ನೋಡಬಹುದು. ಹಸ್ಕಿ ಸಫಾರಿ ಹಾಗೂ ಹಿಮಸಾರಂಗಗಳು ಎಳೆಯುವ ಪುಟ್ಟ ಗಾಡಿಗಳಲ್ಲಿ ಸಂಚರಿಸಲೂಬಹುದು. ಇವುಗಳಿಗೆ ವಿವಿಧ ದರದ ಟಿಕೆಟ್‌ಗಳಿರುತ್ತವೆ. ಆ ಕಾಡಿನ ಹಿಮದಲ್ಲಿ ಸ್ಕೇಟಿಂಗ ಮತ್ತು ಸ್ಕೀಯಿಂಗ ಆಡಲು ಸಾಕಷ್ಟು ಪ್ರವಾಸಿಗರು ಬರುತ್ತಾರೆ.

New Project (30)

ರೋವನೇಮಿ ಅತ್ಯಂತ ಸುಂದರವಾದ ನಗರ. ಇಲ್ಲಿನ ವಸ್ತು ಸಂಗ್ರಹಾಲಯ ವಿಶಾಲವಾಗಿದೆ. ಆರ್ಕ್ಟಿಕ್‌ ವೃತ್ತದ ಬಗ್ಗೆ ಕುತೂಹಲ ವಿಷಯಗಳು ಮತ್ತು ಸ್ಲೈಡ್‌ ಶೋಗಳನ್ನು ನೋಡಬಹುದು. ಹಿಂದೆ ಕಾಡು ಜನರು ಬಳಸುತ್ತಿದ್ದ ವಸ್ತುಗಳು, ಬಟ್ಟೆಗಳು, ಪ್ರಾಣಿಗಳ ಮೂಳೆ ಇತ್ಯಾದಿಗಳನ್ನು ಇಲ್ಲಿ ಇಟ್ಟಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಮುಖ ಸ್ಥಾನ. ನಾವು ಊಲಿದುಕೊಂಡಿದ್ದ ಹೊಟೇಲ್‌ನಿಂದ ನಡೆದುಕೊಂಡೇ ಮ್ಯೂಸಿಯಮ್‌ಗೆ ಹೋಗಿದ್ದೆವು. ಸಮಯ ಕಮ್ಮಿ ಇತ್ತು. ಹಾಗಾಗಿ ಪೂರ್ಣವಾಗಿ ನೋಡಲಾಗಲಿಲ್ಲ. ಆಗ ಅಲ್ಲಿಯ ಸಿಬ್ಬಂದಿ ಇದೇ ಟಿಕೆಟ್ ತೆಗೆದುಕೊಂಡು ಮಾರನೆಯ ದಿನ ಬಂದು ನೋಡಿರಿ ಎಂದು ಹೇಳಿದರು. ಇದನ್ನು ಕೇಳಿ ನಮ್ಮ ಸಂತೋಷಕ್ಕೆ ಪಾರವೆ ಇರಲಿಲ್ಲ. ಯಾವ ದೇಶದಲ್ಲೂ ಇಂಥ ಸೌಲಭ್ಯ ನೀಡುವುದನ್ನು ನಾನು ಕಂಡಿಲ್ಲ.

New Project (31)

ಆರ್ಕ್ಟಿಕ್‌ ವೃತ್ತ ನೋಡಲು ಹೋಗಲು ನಾನು, ನನ್ನ ಪತ್ನಿ ಮತ್ತು ಮಗಳು ಹೆಲ್ಸಂಕಿಯಿಂದ ರೋವನೇಮಿಗೆ ಟ್ರೇನ್‌ನಲ್ಲಿ ತೆರಳಿದೆವು. ಫಿನ್‌ಲ್ಯಾಂಡಿನ ಆರ್ಕ್ಟಿಕ್ ವೃತ್ತದ ಕೊನೆಯ ರೇಲ್ವೆ ನಿಲ್ದಾಣ ರೋವನೇಮಿ. ಹೆಲ್ಸಂಕಿಯಿಂದ ಸುಮಾರು 800 ಕಿಮೀ ದೂರದಲ್ಲಿದೆ. ಮಗ ಮತ್ತವನ ಕುಟುಂಬ ಹೆಲ್ಸಂಕಿಯಿಂದ ರೋವನೇಮಿಗೆ ಕಾರಿನಲ್ಲಿ ಬಂದರು. ಪ್ರವಾಸಿಗರು ಆರ್ಕ್ಟಿಕ್ ವೃತ್ತದಲ್ಲಿ ಬೇಸಗೆಯ ಮಧ್ಯರಾತ್ರಿ ಸೂರ್ಯನನ್ನು ನೋಡಲು ಬಂದರೆ, ಚಳಿಗಾಲದ ಮಧ್ಯರಾತ್ರಿಯಲ್ಲಿ ನಾರ್ದರ್ನ್‌ ಲೈಟ್ಸ್‌ ನೋಡಲು ಬರುತ್ತಾರೆ. ರೋವನೇಮಿಯಿಂದ ಸುಮಾರು 8 ಕಿಮೀ ದೂರದಲ್ಲಿ ಸಾಂತಾ ವಿಲೇಜ್ ಇದೆ. ಇದೂ ಒಂದು ಟೂರಿಸ್ಟ್‌ ಸ್ಪಾಟ್‌. ಇಲ್ಲಿ ಸಾಂತಾ ಕ್ಲಾಸ್ ವಾಸಿಸುತ್ತಾರೆ. ಸಾಂತಾ ಕೆಫೆ ಇಲ್ಲಿದೆ. ಇಲ್ಲಿಯ ಪೋಸ್ಟ್‌ ಆಫೀಸ್ ಕೂಡ ನೋಡವಂಥದ್ದು. ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಪೋಸ್ಟ್‌ ಕಾರ್ಡ್‌ಗಳನ್ನು ಇಲ್ಲಿ ಖರೀದಿಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ, ಮನೆಯ ಹಿರಿಯರಿಗೆ ಪೋಸ್ಟ್‌ ಕಾರ್ಡ್‌ಗಳನ್ನು ಬರೆದು ಹಾಕುತ್ತಾರೆ. ಇದು ಕೂಡ ಒಂದು ಸುಂದರ ಅನುಭವ.

1856ರಲ್ಲಿ ಆರ್ಕ್ಟಿಕ್‌ ವೃತ್ತದಲ್ಲಿ ಒಂದು ಗೆರೆಯನ್ನು ಎಳೆದಿದ್ದಾರೆ. ಇದರ ವೈಶಿಷ್ಟ್ಯವೆಂದರೆ ವೃತ್ತದ ಒಳಗೆ ನಿಂತರೆ ಚಳಿ, ಹೊರಗಡೆ ಕೊಂಚ ಶಾಖದ ಅನುಭವವಾಗುತ್ತದೆ. ಇದು ಇಲ್ಲಿಯ ಫೊಟೋ ಸ್ಪಾಟ್‌ ಎಂದೂ ಕರೆಯಬಹುದು. ಮಧ್ಯರಾತ್ರಿ ಮಂದ ಸೂರ್ಯನ ಬೆಳಕಿನ ಮಧ್ಯೆ ಕಿಟಕಿಯ ಪರದೆಗಳನ್ನು ಹಾಕಿಕೊಂಡು, ಮನೆಯ ಲೈಟ್‌ಗಳನ್ನು ಆಫ್‌ಮಾಡಿ ಕತ್ತಲೆಯನ್ನು ಅನುಭವಿಸಬೇಕು. ಇದು ಒಮ್ಮೆಯಾದರೂ ಅನುಭವಿಸಬೇಕಾದ ಸಂಗತಿ.

(ಮಾಜಿ ಯೋಧ, ಬೆಂಗಳೂರು)

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...