Tuesday, November 3, 2026
Tuesday, November 3, 2026

ಅಮೆರಿಕ ಪ್ರವಾಸಕ್ಕೆ ವೀಸಾ ಹೇಗೆ ಪಡೆಯುವುದು?

ಅಮೆರಿಕ ಪ್ರವಾಸದ ಕನಸು ಕಂಡಾಗ, ಕೈಯಲ್ಲಿರುವ ಪಾಸ್‌ಪೋರ್ಟ್‌ ಮಾತ್ರ ಸಾಕಾಗುವುದಿಲ್ಲ, ಸರಿಯಾದ ವೀಸಾ ಅಗತ್ಯ. ಪ್ರವಾಸವಾಗಲಿ, ಬಂಧು-ಬಳಗದ ಭೇಟಿಯಾಗಲಿ ಅಥವಾ ಬ್ಯುಸಿನೆಸ್‌ ಉದ್ದೇಶವಾಗಲಿ, ವೀಸಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಮುಖ್ಯ. ಹಾಗಾದರೆ ಅಮೆರಿಕದ B-1, B-2 ಅಥವಾ B-1/B-2 ವೀಸಾಗೆ ಅರ್ಜಿ ಸಲ್ಲಿಸುವುದು ಹೇಗೆ?

- ನಂದಿನಿ ಪಟೇಲ್‌

ಅಮೆರಿಕ ಪ್ರವಾಸದ ಕನಸು ಹಲವರದ್ದೇ. ಕುಟುಂಬದೊಂದಿಗೆ ಪ್ರವಾಸ, ಸ್ನೇಹಿತರ ಭೇಟಿ ಇರಲಿ ಅಥವಾ ವ್ಯಾಪಾರ ಸಭೆ, ಸಮ್ಮೇಳನ, ಬ್ಯುಸಿನೆಸ್‌ ಚರ್ಚೆ ಇರಲಿ ಸರಿಯಾದ ವೀಸಾ ಪಡೆಯುವುದು ಮೊದಲ ಹೆಜ್ಜೆ. ಅಮೆರಿಕಕ್ಕೆ ಪ್ರವಾಸ ಅಥವಾ ವ್ಯವಹಾರ ಉದ್ದೇಶದಿಂದ ತೆರಳುವ ಭಾರತೀಯರಿಗೆ ಸಾಮಾನ್ಯವಾಗಿ B-1 (Business), B-2 (Tourism) ಅಥವಾ B-1/B-2 ಸಂಯೋಜಿತ ವೀಸಾ ಅನ್ವಯಿಸುತ್ತದೆ.

ಇದನ್ನೂ ಓದಿ: ವೀಸಾ ಉಚಿತ ಹಿಡನ್ ಚಾರ್ಜ್ ಖಚಿತ!

ಯಾವ ವೀಸಾ ಯಾವುದಕ್ಕೆ?

B-1 ವೀಸಾದಲ್ಲಿ ವ್ಯಾಪಾರ ಪಾಲುದಾರರೊಂದಿಗೆ ಸಭೆ, ವೃತ್ತಿಪರ ಸಮ್ಮೇಳನ, ಒಪ್ಪಂದದ ಮಾತುಕತೆ ಮುಂತಾದ ಚಟುವಟಿಕೆಗಳನ್ನು ಮಾಡಬಹುದು. B-2 ವೀಸಾ ಪ್ರವಾಸ, ರಜೆ, ಸ್ನೇಹಿತರು ಅಥವಾ ಸಂಬಂಧಿಕರ ಭೇಟಿ ಹಾಗೂ ಕೆಲವು ವೈದ್ಯಕೀಯ ಉದ್ದೇಶಗಳಿಗೆ ಬಳಸಬಹುದು. ಎರಡೂ ಉದ್ದೇಶಗಳಿದ್ದರೆ B-1/B-2 ವೀಸಾ ಅನ್ವಯಿಸಬಹುದು. ಆದರೆ, ಈ ವೀಸಾದಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡುವುದು ಅಥವಾ ಸಂಬಳ ಪಡೆಯುವ ಕೆಲಸ ಮಾಡುವುದು ಅನುಮತಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ಮೊದಲ ಹೆಜ್ಜೆ DS-160

ಮೊದಲು ಆನ್‌ಲೈನ್‌ನಲ್ಲಿ DS-160 Nonimmigrant Visa Application ಅರ್ಜಿಯನ್ನು ಭರ್ತಿ ಮಾಡಬೇಕು. ಪಾಸ್‌ಪೋರ್ಟ್‌, ಪ್ರಯಾಣದ ವಿವರಗಳು, ಹಿಂದಿನ ಅಂತಾರಾಷ್ಟ್ರೀಯ ಪ್ರವಾಸ, ಶಿಕ್ಷಣ ಮತ್ತು ಉದ್ಯೋಗದ ಮಾಹಿತಿಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉಪಯುಕ್ತ. ಅರ್ಜಿ ಪೂರ್ಣಗೊಳಿಸಿದ ಬಳಿಕ confirmation page ಅನ್ನು ಉಳಿಸಿ ಅಥವಾ ಪ್ರಿಂಟ್‌ ತೆಗೆದುಕೊಳ್ಳಬೇಕು.

Untitled design - 2026-11-02T154416.286

ವೀಸಾ ಶುಲ್ಕ ಮತ್ತು ಸಂದರ್ಶನ

B-1/B-2 ಸೇರಿದಂತೆ ಹೆಚ್ಚಿನ non-immigrant visa ಅರ್ಜಿಗಳಿಗೆ ಪ್ರಸ್ತುತ ಅರ್ಜಿ ಶುಲ್ಕ 185 ಅಮೆರಿಕನ್ ಡಾಲರ್ ಆಗಿದೆ. ಶುಲ್ಕ ಮರುಪಾವತಿ ಯಾಗುವುದಿಲ್ಲ. ನಂತರ ಅಧಿಕೃತ ವೀಸಾ ಅಪಾಯಿಂಟ್‌ಮೆಂಟ್ ವ್ಯವಸ್ಥೆಯ ಮೂಲಕ ಸಂದರ್ಶನಕ್ಕೆ ಸಮಯ ಕಾಯ್ದಿರಿಸಬೇಕು. ಭಾರತದಲ್ಲಿ ಅರ್ಜಿ ಸಲ್ಲಿಸುವವರು ತಮ್ಮ ರಾಷ್ಟ್ರೀಯತೆ ಅಥವಾ ವಾಸಸ್ಥಳಕ್ಕೆ ಸಂಬಂಧಿಸಿದ ಅಮೆರಿಕ ರಾಯಭಾರ ಕಾನ್ಸುಲೇಟ್‌ನಲ್ಲಿ ಅರ್ಜಿ ಪ್ರಕ್ರಿಯೆ ನಡೆಸುವುದು ಪ್ರಸ್ತುತ ಮಾರ್ಗಸೂಚಿಯಾಗಿದೆ.

ಯಾವ ದಾಖಲೆಗಳು ಬೇಕು?

ಮಾನ್ಯ ಪಾಸ್‌ಪೋರ್ಟ್‌, DS-160 confirmation page, ಶುಲ್ಕ ಪಾವತಿ ದಾಖಲೆ ಮತ್ತು ಅಗತ್ಯವಿದ್ದರೆ ಫೊಟೋ ಮುಖ್ಯ ದಾಖಲೆಗಳು. ಪ್ರವಾಸದ ಉದ್ದೇಶ, ಪ್ರಯಾಣದ ವೆಚ್ಚ ಭರಿಸುವ ಸಾಮರ್ಥ್ಯ ಹಾಗೂ ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಉದ್ದೇಶವನ್ನು ತೋರಿಸುವ ದಾಖಲೆಗಳನ್ನು ಹೆಚ್ಚುವರಿಯಾಗಿ ಕೇಳಬಹುದು. ಉದ್ಯೋಗ, ಕುಟುಂಬ ಸಂಬಂಧಗಳು, ಹಣಕಾಸಿನ ದಾಖಲೆಗಳು ಮತ್ತು ಬ್ಯುಸಿನೆಸ್‌ ಪ್ರಯಾಣವಾದರೆ ಸಂಬಂಧಿತ ವ್ಯಾಪಾರ ದಾಖಲೆಗಳು ಸಹಾಯಕವಾಗಬಹುದು.

ಅಮೆರಿಕ ವೀಸಾ ಇಂಟರ್‌ವ್ಯೂ ಟಿಪ್ಸ್

ಸಂದರ್ಶನದಲ್ಲಿ ನಿಮ್ಮ ಪ್ರಯಾಣದ ಉದ್ದೇಶ, ಅಮೆರಿಕದಲ್ಲಿ ಉಳಿಯುವ ಅವಧಿ, ಪ್ರವಾಸದ ವೆಚ್ಚವನ್ನು ಯಾರು ಭರಿಸುತ್ತಾರೆ ಮತ್ತು ಭಾರತದಲ್ಲಿರುವ ನಿಮ್ಮ ಉದ್ಯೋಗ ಅಥವಾ ಇತರ ಬದ್ಧತೆಗಳ ಕುರಿತು ಪ್ರಶ್ನಿಸಬಹುದು. ದಾಖಲೆಗಳಿಗೆ ಹೊಂದುವಂತೆ, ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರಿಸುವುದು ಮುಖ್ಯ. ವೀಸಾ ಮಂಜೂರಾದರೂ, ಅಮೆರಿಕ ಪ್ರವೇಶಕ್ಕೆ ಅಂತಿಮ ಅನುಮತಿ ನೀಡುವ ಅಧಿಕಾರ ಗಡಿ ತಪಾಸಣಾ ಅಧಿಕಾರಿಗಳಿಗಿರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...