Tuesday, October 28, 2025
Tuesday, October 28, 2025

ವಿಶ್ವದಲ್ಲೇ ಅತ್ಯಂತ ದುಬಾರಿ ಖಾದ್ಯಗಳನ್ನು ಒಮ್ಮೆಯಾದರೂ ಟೇಸ್ಟ್‌ ಮಾಡಿ

ನೀವು ಅಂತರರಾಷ್ಟ್ರೀಯ ಪ್ರವಾಸ ಮಾಡಬೇಕು ಅಂದುಕೊಂಡಿದ್ದೀರಾ..? ಅಲ್ಲಿನ ಸ್ಥಳೀಯ ಖಾದ್ಯಗಳನ್ನು ಟೇಸ್ಟ್‌ ಮಾಡಬೇಕು ಅಂಧುಕೊಂಡಿದ್ದರೆ ಈ ಮಾಃಇತಿ ತಿಳಿದುಕೊಳ್ಳಿ.ರೆಸ್ಟೋರೆಂಟ್‌ ಗೆ ತೆರಳಿ, ಬೆಲೆ ನೋಡದೆಯೇ ಖಾದ್ಯಗಳನ್ನು ಆರ್ಡರ್‌ ಮಾಡಿದರೆ, ಕೈಸುಟ್ಟುಕೊಳ್ಳುವುದು ಗ್ಯಾರೆಂಟಿ...

ದೇಶ, ವಿದೇಶಗಳ ಪ್ರವಾಸವನ್ನು ಕೈಗೊಳ್ಳುವ ಮಂದಿ, ಆ ಪರಿಸರ ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ಮಾತ್ರವಲ್ಲದೆ ಆಹಾರ ಪದ್ಧತಿಯನ್ನು ತಿಳಿದು, ಸ್ಥಳೀಯ ಖಾದ್ಯಗಳನ್ನು ಸವಿಯಬೇಕು ಎಂದುಕೊಳ್ಳುವುದು ಸಹಜ. ಆದರೆ ಪ್ರವಾಸಿ ಸ್ಥಳಗಳಲ್ಲಿನ ಪ್ರಮುಖ ಆಹಾರ ಪದಾರ್ಥಗಳು ನಗರಗಳಿಗಿಂತ ಹೆಚ್ಚು ದುಬಾರಿಯಾಗಿರುತ್ತದೆ. ಅವುಗಳನ್ನು ಕೊಂಡುಕೊಳ್ಳುವ ಮುನ್ನ ವಿಶ್ವದ ಅತ್ಯಂತ ದುಬಾರಿ ಆಹಾರವನ್ನು ಪೂರೈಸುವ ದೇಶಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಜಪಾನ್‌

ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುವ ತಾಣಗಳ ಪೈಕಿ ಜಪಾನ್ ಪ್ರಮುಖವಾದುದು. ಪ್ರವಾಸಕ್ಕೆ ಈ ದೇಶ ಸೂಕ್ತವಾದರೂ, ಆಹಾರದ ವಿಚಾರದಲ್ಲಿ ಬಲು ದುಬಾರಿಯಾಗಿದೆ. ಕೋಬ್ ಬೀಫ್, ಬ್ಲೂಫಿನ್ ಟ್ಯೂನ, ಯುಬಾರಿ ಕಿಂಗ್ ಹೀಗೆ ವಿಭಿನ್ನವಾಗಿರುವ ಅಲ್ಲಿನ ಖಾದ್ಯಗಳನ್ನು ಕೊಂಡುಕೊಳ್ಳಬೇಕಾದರೆ ಭಾರತೀಯ ರೂಪಾಯಿಗಳಲ್ಲಿ, ಒಂದು ಖಾದ್ಯದ ಬೆಲೆ ಸಾವಿರಾರು ರೂಪಾಯಿಗಳಿಂದ ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ರೆಸ್ಟೋರೆಂಟ್‌ಗಳಲ್ಲಿ ಆರ್ಡರ್‌ ಕೊಡಲು ಕಷ್ಟಪಡಬೇಕಾಗುವಂಥ ಹೆಸರುಗಳಿರುವ ಈ ಖಾದ್ಯಗಳನ್ನು ನೀವು ಒಮ್ಮೆಯಾದರೂ ಟೇಸ್ಟ್‌ ಮಾಡಲೇಬೇಕು.

japan food

ಫ್ರಾನ್ಸ್

ದೇಶ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಪ್ರವಾಸಿಗರು ಫ್ರಾನ್ಸ್‌ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿನ ಖಾದ್ಯಗಳಂತೂ ಬಲು ದುಬಾರಿ. ಅದರಲ್ಲೂ ಇಲ್ಲಿನ ಹೆಸರಾಂತ ಫೊಯ್ ಗ್ರಾಸ್ ಟೇಸ್ಟ್‌ ಮಾಡಲು ಬಯಸುವ ಪ್ರವಾಸಿಗರು, ಆಹಾರ ಪ್ರಿಯರು ದುಡ್ಡಿನ ಮುಖ ನೋಡುವಂತೆಯೇ ಇಲ್ಲ.

ಸ್ಪೇನ್‌

ಸ್ಪೇನ್ ಸುಂದರ ತಾಣಗಳಿಗೆ ಮಾರುಹೋಗದ ಪ್ರವಾಸಿಗರಿಲ್ಲ. ದೇಶ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಐಷಾರಾಮಿ ಜೀವನಶೈಲಿಯನ್ನು ಪ್ರವಾಸದ ವೇಳೆ ಆನಂದಿಸುತ್ತಾರೆ. ವಿಶ್ವದ ಅತ್ಯಂತ ದುಬಾರಿ ಖಾದ್ಯಗಳನ್ನು ಸವಿಯಲು ಇಲ್ಲಿ ಅವಕಾಶವಿದ್ದು, ಸ್ಪ್ಯಾನಿಷ್ ಖಾದ್ಯ ಐಬೆರಿಕೊ ಹ್ಯಾಮ್ ಗೆ ಇಲ್ಲಿ ಬಲು ಬೇಡಿಕೆಯಿದೆ.

spain (1)

ಸ್ವಿಟ್ಜರ್ಲೆಂಡ್

ಸ್ವಿಟ್ಜರ್ಲೆಂಡ್ ಗೆ ಭೇಟಿ ನೀಡುವ ಕನಸು ಕಾಣದವರು ಯಾರೂ ಇರಲಾರರು. ಈ ದೇಶವು ಪ್ರಪಂಚದಾದ್ಯಂತ ಸುಂದರವಾದ ಕಣಿವೆಗಳಿಗೆ ಹೆಸರುವಾಸಿಯಾಗಿದ್ದರೂ, ಈ ದೇಶದಲ್ಲಿ ಆಹಾರಕ್ಕೆ ದುಬಾರಿ ವೆಚ್ಚವನ್ನು ತೆರಲೇಬೇಕು. ಕೇವಲ ಒಂದೋ ಎರಡೋ ಅಲ್ಲ, ಇಲ್ಲಿನ ಅನೇಕ ಭಕ್ಷ್ಯಗಳು ಅತ್ಯಂತ ದುಬಾರಿಯಾಗಿವೆ. ಒಸಿಯೆಟ್ರಾ ಕ್ಯಾವಿಯರ್‌ನೊಂದಿಗೆ ಸೀ ಬಾಸ್, ಟ್ರಫಲ್ಸ್‌ನೊಂದಿಗೆ ರಿಬ್ ಸ್ಟೀಕ್ ಇಂತಹ ಅನೇಕ ಕಾಂಬಿನೇಶನ್‌ ಗಳ ಬೆಲೆ ಕೇಳಿದರೆ ಅದನ್ನು ಸೇವಿಸುವುದಕ್ಕೂ ಮುನ್ನ ಯೋಚಿಸುವಂತೆ ಮಾಡುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...