• ಪಿ. ಶ್ರೀಧರ್ ನಾಯಕ್

ನಿಮ್ಮಲ್ಲಿ ಸುಸ್ಥಿತಿಯಲ್ಲಿ ಇರುವ ಹಳೆಯ ಮಂಚದ ಬದಲು ಇಬ್ಬರು ಮಲಗುವ ಹೊಸ ಮಂಚ ಖರೀದಿಗೆ ಹೋದಾಗ 'ನಿಮ್ಮ ಹಳೆಯ ಮಂಚ ಕೊಟ್ಟು ಹೊಸದನ್ನು ಖರೀದಿಸಿ. ರಿಯಾಯಿತಿ ನೀಡುತ್ತೇವೆ' ಎನ್ನುವ ಮಾತು ಕೇಳಿ ಅದಕ್ಕೆ ಒಪ್ಪಿಗೆ ಕೊಡುತ್ತೀರಿ. ಹೊಸ ಮಂಚ ತಂದುಕೊಡುವ ಟೆಂಪೋ ಚಾಲಕನಿಗೆ 'ಈ ಹಳೇ ಮಂಚ ಏನು ಮಾಡುತ್ತೀರಿ?' ಎಂದು ಕೇಳಿ. ತಕ್ಷಣ ಸಿಗುವ ಉತ್ತರ 'ಒಲೆಗೆ ಹಾಕುತ್ತೇವೆ'. ಇದೇರೀತಿ ಮರದ ಕುರ್ಚಿ, ಸೋಫಾ ಕೊಂಡೊಯ್ಯುವವರು ಉತ್ತರಿಸುತ್ತಾರೆ. ಇಷ್ಟು ದಿನ ಇವನ್ನು ಬಳಸಿ ಇಂಥ ವ್ಯಕ್ತಿಗೆ ಕೊಟ್ಟೆವಲ್ಲ ಎಂದು ನೋವಾಗುವುದು ಸಹಜ. ಈಗ ಮರದ ಪುಡಿಯಿಂದ ಕಪಾಟು, ಮಂಚ ತಯಾರಿಸುವ ದಿನಗಳು ಬಂದಿವೆ. ಬಳಸಿದ ಪೀಠೋಪಕರಣಗಳನ್ನು ಯಾರಿಗಾದರೂ ಕೊಡೋಣ ಎಂದರೆ ಖರೀದಿಸುವವರನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಎಂಬ ಪ್ರಶ್ನೆ ಮೂಡುತ್ತದೆ.

ಇದನ್ನೂ ಓದಿ: ಕಲ್ಲು ಕಲ್ಲೆನುತಾವ್‌ ಹೆಜ್ಜೆ..

ಬ್ರಿಟಿಷ್ ಹಾರ್ಟ್ ಫೌಂಡೇಷನ್ ಇಂಗ್ಲೆಂಡ್

ಬ್ರಿಟನ್‌ನ ʻಬ್ರಿಟಿಷ್ ಹಾರ್ಟ್ ಫೌಂಡೇಷನ್ ಇಂಗ್ಲೆಂಡ್ʼ, ವೆಲ್ಸ್ ಮತ್ತು ಸ್ಕಾಟ್‌ಲ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಒಂದು ಸ್ವಯಂ ಸೇವಾ ಸಂಸ್ಥೆ. ಜನರು ತಾವು ಬಳಸಿದ ವಸ್ತುಗಳನ್ನು ಇಲ್ಲಿಗೆ ತಂದು ಉಚಿತವಾಗಿ ಕೊಡುತ್ತಾರೆ. ಬಟ್ಟೆಬರೆ, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ, ಮನೆಯಲ್ಲಿ ಮಕ್ಕಳು ಬಳಸಿದ ಆಟಿಕೆಗಳು, ಪೀಠೋಪಕರಣ ಮತ್ತು ಗೊಂಬೆಗಳು ಹೀಗೆ ಮರದ ವಸ್ತುಗಳನ್ನು ಕೊಟ್ಟು ಹೋಗುತ್ತಾರೆ.

Untitled design (66)

ಬ್ರಿಟನ್‌ನಲ್ಲಿ ʻಬ್ರಿಟಿಷ್ ಹಾರ್ಟ್ ಫೌಂಡೇಷನ್ ಇಂಗ್ಲೆಂಡ್ʼನ ಸುಮಾರು 270 ಅಂಗಡಿಗಳಿವೆ. ಇಲ್ಲಿಗೆ ಜನರು ನೀಡಿದ ವಸ್ತುಗಳನ್ನು ಬಡವರು, ಮಧ್ಯಮ ವರ್ಗದ ಜನರು ಬಂದು ಖರೀದಿಸುತ್ತಾರೆ. ಇಲ್ಲಿ ಗಿರಾಕಿಗಳು ನಮೂದಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ರೀತಿ ಗಳಿಸಿದ ಹಣವನ್ನು ಹೃದಯ ಸಂಬಂಧಿ ಕಾಯಿಲೆಗಳ ಸಂಶೋಧನೆಗೆ, ರೋಗಿಗಳ ಚಿಕಿತ್ಸೆಗೆ ಸಂಸ್ಥೆ ನೀಡುತ್ತದೆ. ಕೆಲವರು ಹೊಸ ಬಟ್ಟೆಬರೆ ಖರೀದಿಸಿ ಇಲ್ಲಿಗೆ ಬಂದು ಉಚಿತವಾಗಿ ಕೊಡುತ್ತಾರೆ. ಅಗತ್ಯ ಇದ್ದವರು ಕಡಿಮೆ ಬೆಲೆಗೆ ಅವುಗಳನ್ನು ಕೊಳ್ಳುತ್ತಾರೆ.

ಪೀಠೋಪಕರಣ, ವಿದ್ಯುತ್ ಸಾಧನಗಳನ್ನು ಫೌಂಡೇಷನ್‌ನ ಸಿಬ್ಬಂದಿ ತಾವೇ ವಾಹನಗಳ ಮೂಲಕ ತಂದುಕೊಳ್ಳುತ್ತಾರೆ. ಇದಕ್ಕೆ ಮನೆಯವರು ಸಾಗಣೆ ವೆಚ್ಚ ಕೊಡಬೇಕಾಗಿಲ್ಲ. ಮನೆಗೆ ಅವರು ಬರುವ ದಿನಾಂಕವನ್ನು ಮೊದಲೇ ವೆಬ್‌ಸೈಟ್‌ನಲ್ಲಿ ತಿಳಿಸುತ್ತಾರೆ.

ಗ್ಯಾರೇಜ್ ಸೇಲ್

`ಗ್ಯಾರೇಜ್ ಸೇಲ್’ ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿದೆ. ಇದು ಬಳಸಿದ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಖರೀದಿ ಮಾಡುವ ಒಂದು ವಿಧಾನ. ಇದಕ್ಕೆ ಕಾರಣವೂ ವಿಭಿನ್ನವಾಗಿದೆ. ಈ ಮೂಲಕ ಮನೆಯ ಗ್ಯಾರೇಜ್‌ನಲ್ಲಿ ಮನೆಗೆ ಸೇರಿದ ಅಲಂಕಾರಿಕ ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ಮಾರಾಟಕ್ಕೆ ಇಟ್ಟು, ಮನೆಯ ಮಾಲೀಕರೇ ನಿಂತು ಮಾರಾಟ ಮಾಡುತ್ತಾರೆ. ಹಳೆಯವಾದರೂ ಆ ವಸ್ತುಗಳು ಮರು ಬಳಸಬಹುದಾದ ಸ್ಥಿತಿಯಲ್ಲಿರುತ್ತವೆ. ಜನರು ತಮ್ಮ ಮನೆ ಬದಲಿಸಲು ಅಥವಾ ಸ್ಥಳಾಂತರವಾಗಲು ನಿರ್ಧರಿಸಿದಾಗ ಹೆಚ್ಚುವರಿ ವಸ್ತುಗಳನ್ನು ಖರ್ಚು ಸರಿದೂಗಿಸಲು, ಹೊಸ ವಸ್ತುಗಳಿಗೆ ಜಾಗ ಹೊಂದಿಸಲು ಹೀಗೆ ನಾನಾ ಕಾರಣಗಳಿಗೆ ಅವುಗಳನ್ನು ಮಾರಾಟ ಮಾಡುತ್ತಾರೆ. ಮಕ್ಕಳು ದೊಡ್ಡವರಾದ ಬಳಿಕ ಅವರ ಆಟಿಕೆಗಳನ್ನೂ ಮಾರಾಟ ಮಾಡುತ್ತಾರೆ. ಮಾರುಕಟ್ಟೆಗೆ ಹೊಸ ವಿನ್ಯಾಸದ ಉಡುಪುಗಳು ಬರುತ್ತಿದ್ದಂತೆ ವಾರ್ಡ್ ರೋಬ್‌ನಲ್ಲಿನ ಹಳೆಯ ವಿನ್ಯಾಸದ ಉಡುಪುಗಳು ಗ್ಯಾರೇಜ್ ಸೇಲ್‌ಗೆ ಬರುತ್ತವೆ.

ಪ್ರಚಾರ ಹೇಗೆ?

ಕೆಲವರು ತಮ್ಮ ಮನೆಯ ಗ್ಯಾರೇಜ್ ಮಾತ್ರವಲ್ಲ, ಮನೆ ಮುಂದಿನ ಜಾಗ, ಕಾರು ಪಾರ್ಕಿಂಗ್ ಜಾಗದಲ್ಲಿ ವಸ್ತುಗಳನ್ನು ಮಾರಾಟಕ್ಕೆ ಇಡುತ್ತಾರೆ. ಮಾರಾಟ ಮಾಡುವವರು ಮೊದಲೇ ಪ್ರಚಾರ ಮಾಡುತ್ತಾರೆ. ದೂರವಾಣಿ ಸಂದೇಶ, ಫಲಕ, ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಸ್ಥಳೀಯ ಟಿವಿ ವಾಹಿನಿಗಳೂ ಈ ಮಾರಾಟವನ್ನು ಪ್ರಸಾರ ಮಾಡುತ್ತವೆ.

ಗ್ಯಾರೇಜ್ ಮಾರಾಟಗಳು ಸಾಮಾನ್ಯವಾಗಿ ಬೆಳಗ್ಗೆ ಗ್ರಾಮೀಣ ಮತ್ತು ಉಪನಗರ ಪ್ರದೇಶಗಳಲ್ಲಿ (ಉತ್ತಮ ಹವಾಮಾನ ಇರುವ ವಾರಾಂತ್ಯಗಳಲ್ಲಿ) ಹೆಚ್ಚು ನಡೆಯುತ್ತವೆ. ಕೆಲವರು ವ್ಯಾಪಾರಿ ಉದ್ದೇಶದಿಂದ ಬರುತ್ತಾರೆ. ಖರೀದಿಸಿದ ವಸ್ತುಗಳನ್ನು ಅಗತ್ಯ ಇದ್ದಲ್ಲಿ ದುರಸ್ತಿ ಮಾಡಿ, ಬಳಕೆ ಮಾಡುವ ಸ್ಥಿತಿಯಲ್ಲಿದ್ದರೆ ಮರು ಮಾರಾಟ ಮಾಡುತ್ತಾರೆ. ಇದರಿಂದ ದುಪ್ಪಟ್ಟು ಲಾಭ ಗಳಿಸುವವರೂ ಇದ್ದಾರೆ.

Untitled design (65)

ಕಾರ್ ಬೂಟ್ ಸೆಲ್, ಇಂಗ್ಲೆಂಡ್

ಇಂಗ್ಲೆಂಡ್‌ನಲ್ಲಿ ವಾರಾಂತ್ಯದಲ್ಲಿ ಮನೆಯಲ್ಲಿ ಬಳಸಿದ ವಸ್ತುಗಳನ್ನು ಕಾರಿನಲ್ಲಿ ತಂದು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ ಎಂಟೂವರೆಗೆ ಆರಂಭವಾದರೆ ಮಧ್ಯಾಹ್ನ ಒಂದು ಗಂಟೆಗೆ ಅಥವಾ ಅದಕ್ಕೆ ಮೊದಲೇ ಮುಕ್ತಾಯಗೊಳಿಸುತ್ತಾರೆ. ಇಲ್ಲಿ ಪ್ರವೇಶ ಶುಲ್ಕ ಇದೆ. ಕೆಲವು ಅಮೂಲ್ಯ ವಸ್ತುಗಳನ್ನು ಇಲ್ಲಿ ಮಾರಾಟಕ್ಕೆ ಇಡುವುದಿದೆ. ಮಾರಾಟದ ಆರಂಭಿಕ ಸಮಯದಲ್ಲಿ ಇಲ್ಲಿಗೆ ಬಂದರೆ ಇವು ಕೈಗೆಟುಕುವ ಬೆಲೆಗೆ ಸಿಗುತ್ತವೆ. ಗ್ರೀಕ್ ಶಿಲ್ಪಗಳ ಮಾದರಿ, ರತ್ನಕಂಬಳಿ, ಸುಂದರ ಚಿತ್ತಾರ ಇರುವ ಪಿಂಗಾಣಿ ಪಾತ್ರೆ, ತೈಲಚಿತ್ರ, ಹೂಕುಂಡ, ಅದೃಷ್ಟ ಇದ್ದರೆ ನಮ್ಮ ದೇಶದ ದೇವಾನುದೇವತೆಗಳ ಲೋಹದ ಶಿಲ್ಪಗಳು ಕಡಿಮೆ ಬೆಲೆಗೆ ಸಿಗುತ್ತವೆ. ಚೌಕಾಶಿಗೂ ಅವಕಾಶವಿದೆ.

ನಮ್ಮ ದೇಶದಲ್ಲಿ ಹಳೇ ವಸ್ತುಗಳು ಗುಜರಿ ಅಂಗಡಿ ಸೇರುವುದು ಜಾಸ್ತಿ. ಫ್ರಿಜ್ ಗುಜರಿ ಅಂಗಡಿ ಸೇರುತ್ತವೆ. ಮಧ್ಯಮ ವರ್ಗಕ್ಕೆ ಸೇರಿದ ಒಂದು ಕುಟುಂಬ ಬಳಸಿದ ವಸ್ತುವನ್ನು ಇನ್ನೊಂದು ಕುಟುಂಬದವರು ಬಳಸುವುದು ಕಡಿಮೆ. ದಾಕ್ಷಿಣ್ಯಕ್ಕೆ ಕೊಂಡೊಯ್ದು ಮೂಲೆಗೆ ಬಿಸಾಕುವವರೇ ಜಾಸ್ತಿ.

ಹಿಂದೊಮ್ಮೆ ಫುಡ್ ವರ್ಲ್ಡ್ ಹೆಸರಿನ ಬಹುವಸ್ತು ಮಳಿಗೆ, ಡಿಟರ್ಜೆಂಟ್ ತಯಾರಿಸುವ ಇನ್ನೊಂದು ಉದ್ಯಮದ ನೆರವಿನಿಂದ ಬೆಂಗಳೂರಿನ ಕೆಲವೆಡೆ ಪುಡ್ ವರ್ಲ್ಡ್ ಮಳಿಗೆಗಳ ಹೊರಗೆ ದೊಡ್ಡ ಡ್ರಮ್ ಇರಿಸಿ ಬಳಸಿದ ಬಟ್ಟೆಬರೆಗಳನ್ನು ತಂದು ಹಾಕುವಂತೆ ಜನರಲ್ಲಿ ವಿನಂತಿಸಿತ್ತು. ಈ ರೀತಿ ಸಂಗ್ರಹಿಸಿದ ಬಟ್ಟೆಗಳನ್ನು ತೊಳೆದು ನಿರ್ಗತಿಕರಿಗೆ ಉಚಿತವಾಗಿ ನೀಡಿದ್ದುಂಟು. ಆದರೆ ಈ ಕೆಲಸ ಕೇವಲ ಒಂದೇ ವರ್ಷ ನಡೆಯಿತು. ನಂತರ ಈ ಆದರ್ಶವನ್ನು ಈ ಸಂಸ್ಥೆಗಳು ಆಗಲೀ ಇತರರು ಆಗಲೀ ಯಾರೂ ಪಾಲಿಸಲಿಲ್ಲ.

ಹಳೇ ವಸ್ತುಗಳ ಬಗ್ಗೆ ನಮ್ಮಲ್ಲಿ ಎಲ್ಲರಿಗೂ ಅಲರ್ಜಿ ಇದೆ ಎನ್ನುವಂತಿಲ್ಲ. ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ಹಳೇ ವಸ್ತುಗಳನ್ನು ಮಾರಾಟಕ್ಕೆ ಇಡುವುದಿದೆ. ಇಲ್ಲಿ ಹಳೆಯ ಟಿವಿ, ರೇಡಿಯೋ, ಬಟ್ಟೆಬರೆ, ತಾಮ್ರ ಮತ್ತು ಕಂಚಿನ ಪಾತ್ರೆ, ದೇವರ ವಿಗ್ರಹ, ಘಂಟೆ, ಪ್ರಾಚೀನ ನಾಣ್ಯ, ಟೀ ಕಪ್ ಮುಂತಾದವುಗಳನ್ನು ಮಾರಾಟಕ್ಕೆ ಇಡುವುದಿದೆ. ಆದರೆ ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಾರೆ. ಆ ದೇಶಗಳಲ್ಲಿ ಜನರು ಮತ್ತು ಫೌಂಡೇಷನ್‌ಗಳು ಮಾರಾಟ ಮಾಡುತ್ತ