Saturday, November 28, 2026
Saturday, November 28, 2026

ಅರಿಯದ ಊರಲ್ಲಿ ನೆರವಾದ ವೃದ್ಧ ದಂಪತಿ

ಪ್ಯಾರಿಸ್‌ನಲ್ಲಿ ದಾರಿ ತಿಳಿಯದೇ ಹೈರಾಣದ ನನಗೆ ಆ ಫ್ರೆಂಚ್ ದಂಪತಿ ಸಿಗದಿದ್ದರೆ ಶಾಮೋನಿಯ ಹಿಮಕಣಿವೆ ಕಾಣುವ ಕನಸು ನನ್ನ ಪಾಲಿಗೆ ಕನಸಾಗಿಯೇ ಉಳಿಯುತ್ತಿತ್ತು.

  • ಅನೂಷಾ ಆಚಾರ್ಯ

ಕಳೆದ ಜನವರಿಯಲ್ಲಿ ನಾನು ಯುರೋಪ್‌ನಲ್ಲಿ ಸೋಲೋ ಟ್ರಿಪ್ ಹೋಗಿದ್ದೆ. ಫ್ರಾನ್ಸ್, ನೆದರ್‌ಲ್ಯಾಂಡ್ಸ್‌ ಮತ್ತು ಸ್ಪೇನ್ ದೇಶಗಳನ್ನು ಸುತ್ತುತ್ತಾ ಆಲ್ಫ್ಸ್ ಪರ್ವತ ಶ್ರೇಣಿಯ ತಪ್ಪಲಲ್ಲಿರುವ ಶಾಮೋನಿ ಎಂಬ ಪುಟ್ಟ ಕಣಿವೆ ಊರಿಗೆ ಹೋಗಬೇಕಿತ್ತು. ಇದು ಫ್ರಾನ್ಸ್, ಇಟಲಿ, ಸ್ವಿಟ್ಜರ್‌ಲ್ಯಾಂಡ್ ದೇಶಗಳ ನಡುವಿನ ಅತ್ಯಂತ ರಮಣೀಯ ಸ್ಥಳ. ಪ್ಯಾರಿಸ್‌ನಿಂದ ಸುಮಾರು 800 ಕಿಮೀ ದೂರದಲ್ಲಿರುವ ಶಾಮೋನಿಗೆ ರಾತ್ರಿ 8 ಗಂಟೆಗೆ ಹೊರಡುವ ಬಸ್ಸಿನಲ್ಲಿ ಮೊದಲೇ ಟಿಕೆಟ್ ನಿಗದಿ ಪಡಿಸಿದ್ದೆ. ಆದರೆ, ನಾನು ತಂಗಿದ್ದ ಜಾಗದಿಂದ ಬಸ್‌ಸ್ಟಾಂಡ್‌ಗೆ ಹೋಗುವುದು ಹೇಗೆಂದು ಗೊತ್ತಿರಲಿಲ್ಲ. ಆಗಲೇ ರಾತ್ರಿ 7.00 ಗಂಟೆಯಾಗಿತ್ತು. ಜನ ಸಂಚಾರವೂ ಕಡಿಮೆ. ಜೋರು ಮಳೆ. ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ. ಹಾಗಾಗಿ ಗೂಗಲ್‌ನಲ್ಲಿ ಫ್ರೆಂಚ್‌ಗೆ ಅನುವಾದಿಸಿ, ಅದನ್ನು ತೋರಿಸಿ ತಿಳಿದುಕೊಳ್ಳಬೇಕಿತ್ತು. ಸಮಯ ಸರಿಯುತ್ತಿತ್ತು. ಬಸ್ ತಪ್ಪಿದರೆ ಶಾಮೋನಿ ತಪ್ಪಿದಂತೆ! ಹತ್ತಿರದ ಮೆಟ್ರೋದಲ್ಲಿ ಕೇಳಿದರೆ ಯಾವ ಸಹಾಯವೂ ಸಿಗಲಿಲ್ಲ. ಅಷ್ಟೊತ್ತಿಗೆ ಒಬ್ಬ ವೃದ್ಧ ಫ್ರೆಂಚ್ ದಂಪತಿ ಕಂಡರು. ಸ್ವಲ್ಪಮಟ್ಟಿಗೆ ಅವರಿಗೆ ಇಂಗ್ಲಿಷ್ ಅರ್ಥವಾಗುತ್ತಿತ್ತು. ಅವರಲ್ಲಿ ನನ್ನ ಕಷ್ಟ ಹೇಳಿಕೊಂಡೆ. ಮೆಟ್ರೋದಲ್ಲಿ ಹೇಗೆ ಹೋಗಬೇಕೆಂದು ಅವರು ವಿವರಿಸಿದರು. ನಂತರ ಅವರೇ ʻಬಹುಶಃ ವಿವರಿಸಿದರೆ ನಿನಗೆ ಅರ್ಥವಾಗದು. ನಾವೂ ಅತ್ತಕಡೆ ಹೋಗುತ್ತಿದ್ದೇವೆ. ಬನ್ನಿ ಜತೆಯಲ್ಲಿ ಹೋಗೋಣʼ ಎಂದರು. ಅವರ ಜತೆ ಮೆಟ್ರೋದಲ್ಲಿ ಹೊರಟೆ. ಅವರ ಸ್ಟೇಷನ್ ಬಂದರೂ ಇಳಿಯದೆ ನನಗೋಸ್ಕರ ಮುಂದಿನ ಸ್ಟೇಷನ್ ತನಕ ಬಂದರು. ಬಸ್‌ ನಿಲ್ದಾಣದವರೆಗೆ ಬಿಡಲು ಬಂದರು. ಅವರು ಅಲ್ಲಿಯವರೇ ಆದ್ದರಿಂದ ಎಲ್ಲಾ ಶಾರ್ಟ್‌ಕಟ್ ದಾರಿಗಳನ್ನು ತಿಳಿದಿದ್ದರು. ಬಸ್ ನಿಲ್ದಾಣಕ್ಕೆ ಬಂದು ನಿಗದಿತ ಪ್ಲಾಟ್‌ಫಾರ್ಮ್‌ಗೆ ಬಿಟ್ಟರು. ನನ್ನ ಬಸ್ ಅಲ್ಲಾಗಲೇ ಬಂದು ನಿಂತಿತ್ತು. ಆ ದಂಪತಿಗೆ ಹೃದಯ ಪೂರ್ವಕವಾಗಿ ನಾನು ವಂದಿಸಿದೆ.

ಇದನ್ನೂ ಓದಿ: ಭಗವಂತನಿಲ್ಲದ ಊರಿನಲ್ಲಿ ಸುತ್ತಾಟ

Untitled Design - 2026-11-28T145651.079

ಮರುದಿನ ಶಾಮೋನಿನಲ್ಲಿ ಇಳಿದಾಗ ಇನ್ನೂ ಬೆಳಗಿನಜಾವ ನಾಲ್ಕು ಗಂಟೆ. ಮುಂದೆ ಶಾಮೋನಿಯಲ್ಲಿ ನನಗಾಗಿದ್ದು ಅದ್ಭುತ ಅನುಭವಗಳ ಅನಾವರಣ. ಶಾಮೋನಿ ಕೇವಲ ರಮಣೀಯ ಮಾತ್ರವಲ್ಲ ; ಆಲ್ಫ್ಸ್ ಪರ್ವತ ಶ್ರೇಣಿಯ ಅಪೂರ್ವ ಸೌಂದರ್ಯವನ್ನು ಸವಿಯಲು ಸೂಕ್ತ ಸ್ಥಳವೂ ಆಗಿದೆ. ಅಲ್ಲಿನ ಮೌಂಟ್ ಬ್ಲಾಂಕ್ ಎಕ್ಸ್‌ಪ್ರೆಸ್ ಟ್ರೇನ್‌ನಲ್ಲಿ ಕ್ರಮಿಸುತ್ತಾ ಒಂದು ಅವಿಸ್ಮರಣೀಯ ಅನುಭವಕ್ಕೆ ಸಾಕ್ಷಿಯಾಗಿದ್ದೆ.

ಶಾಮೋನಿಯ ಮಂಜುಗಡ್ಡೆ ಗುಹೆಯಂತೂ ರುದ್ರ ರಮಣೀಯ. ನನ್ನ ಶಾಮೋನಿನ ಪ್ರವಾಸ ಅದ್ಭುತ! ರೋಚಕ! ವರ್ಣನೆಗೆ ನಿಲುಕದಂಥದ್ದು. ಆದರೆ, ಇವೆಲ್ಲಾ ಸಾಧ್ಯವಾದದ್ದು ಮಾತ್ರ ಪ್ಯಾರಿಸ್‌ನಲ್ಲಿ ನನ್ನ ಸಹಾಯಕ್ಕೆ ಬಂದ ಆ ವೃದ್ಧ ದಂಪತಿಗಳಿಂದಾಗಿ. ಅತ್ಯಂತ ಅಗತ್ಯ ಸಮಯದಲ್ಲಿ ದೇಶ, ಭಾಷೆ ಗೊತ್ತಿಲ್ಲದ ಅಪರಿಚಿತ ಪ್ರದೇಶದಲ್ಲಿ ತಮ್ಮ ಸಮಯವನ್ನೂ ಲೆಕ್ಕಿಸದೆ ನನಗೆ ಸಹಾಯ ಮಾಡಿದ ಆ ವೃದ್ಧ ದಂಪತಿಗಳ ನೆನಪು ನನ್ನಲ್ಲಿ ಸದಾ ಹಸಿರಾಗಿಯೇ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...