ನಿಮ್ಮ ಪ್ರಕಾರ ಪ್ರವಾಸ ಎಂದರೇನು?

ನನಗೆ ಹೊಸ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್‌ ಮಾಡುವುದು ಬಹಳ ಇಷ್ಟ. ಹೊಸ ಹೊಸ ಆಹಾರದ ರುಚಿಯನ್ನು ಸವಿಯಲು ಇಷ್ಟ. ಯಾವ ಜಾಗಕ್ಕೆ ಹೋಗಿರುತ್ತೇವೋ ಅಲ್ಲಿನ ಸ್ಥಳೀಯ ಆಹಾರ ಸೇವಿಸುವುದು ಹೆಚ್ಚು ಖುಷಿ ನೀಡುತ್ತದೆ.

ಈ ಚಿತ್ರದಲ್ಲೂ ಟ್ರಾವೆಲ್‌ ಮಾಡ್ತಿದ್ದೀರಾ?

ಟ್ರಾವೆಲ್‌ ಇರುತ್ತೆ. ಆದರೆ, ಹಿಂದಿನ ಸಿನಿಮಾಗಳಿಗಿಂತ ಭಿನ್ನವಾದ ಟ್ರಾವೆಲ್‌ ಈ ಚಿತ್ರದಲ್ಲಿದೆ. ಹಿಂದಿನ ಎರಡು ಸಿನಿಮಾಗಳಲ್ಲೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಏನೋ ಹುಡುಕಿಕೊಂಡು ಹೋಗುವ ಪ್ರಯಾಣವಿತ್ತು. ಆದರೆ, ಇದರಲ್ಲಿ ಆ ರೀತಿಯಲ್ಲ.

ಹೊಸ ಜಾಗಗಳನ್ನು ತೋರಿಸ್ತೀರಾ?

New Project (10)

ಖಂಡಿತ. ಸುಂದರ ಜಾಗಗಳು ಹಾಗೂ ಹೊಸ ಜಾಗಗಳನ್ನು ಖಂಡಿತವಾಗಿಯೂ ತೋರಿಸುತ್ತೇವೆ. ಇದಕ್ಕಾಗಿಯೇ ಸಾಕಷ್ಟು ಸುತ್ತಾಡಿ ಹೊಸ ಜಾಗಗಳನ್ನು ಹುಡುಕಿದ್ದೇವೆ. ಅವೆಲ್ಲ ತೆರೆಯ ಮೇಲೆ ಕಾಣಲಿದೆ.

ಯಾವೆಲ್ಲ ಜಾಗಗಳಲ್ಲಿ ಶೂಟ್‌ ಮಾಡಿದ್ದೀರಿ?

ಜಪಾನ್‌ನಲ್ಲಿ ಹೆಮ್ಮೆಯ ಕನ್ನಡತಿ ಶ್ವೇತಾ ಆರಾಧ್ಯಾ

ಈ ಬಾರಿ ವಿಶೇಷವಾಗಿ ಅಂಡಮಾನ್-ನಿಕೊಬಾರ್‌ ದ್ವೀಪದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಜೈಪುರ, ರಾಜಸ್ಥಾನ, ಗುಜರಾತ್ ಹಾಗೂ ಜಾರ್ಜಿಯಾ ದೇಶಕ್ಕೆ ಹೋಗಿ ಶೂಟ್‌ ಮಾಡಿದ್ದೇವೆ. ಇದರ ಜತೆ ನಮ್ಮ ಬೆಂಗಳೂರು, ಮೈಸೂರ್‌ ಅಲ್ಲೂ ಶೂಟ್‌ ಮಾಡಿದ್ದೇವೆ.

ಹೇಗಿತ್ತುಈ ಜರ್ನಿ?

ಮೊದಲಿಗೆ ಗುಜರಾತ್‌ ಅಲ್ಲಿ ಶೂಟ್‌ ಮಾಡಲು ಹೋಗಿದ್ದೆವು. ಆದರೆ, ಏನೋ ಇನ್ನೂ ವಿಶೇಷವಾದ ಜಾಗ ಬೇಕು ಅಂತನಿಸುತ್ತಿತ್ತು. 10-20 ಸೆಕೆಂಡ್‌ ಬರುವ ದೃಶ್ಯವನ್ನು ಸೆರೆ ಹಿಡಿಯಲು ಸುಮಾರು 1000 ಕಿಮೀ ಕಾರ್‌ ಡ್ರೈವ್‌ ಅಲ್ಲೇ ಟ್ರಾವೆಲ್‌ ಮಾಡಿದ್ದೇವೆ. ಇಲ್ಲಿ ನಮಗೆ ಹೈವೇ ಅಲ್ಲಿ ಹೋಗುವಾಗ ಹೊಟೇಲ್‌, ಊಟ ಯಾವುದಕ್ಕೂ ಕೊರತೆ ಆಗುವುದಿಲ್ಲ. ಆದರೆ, ಅಲ್ಲಿ ಹಾಗಲ್ಲ. 100 ಕಿಮೀ ಹೋದರೂ ಏನೂ ಸಿಗದಂಥ ಪರಿಸ್ಥಿತಿ ಇತ್ತು. ಒಂದು ಟೀ ಅಂಗಡಿ ಕೂಡ ಸಿಕ್ಕಿಲ್ಲ. ನಮ್ಮ ದೇಶದಲ್ಲಿ ಅದರಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಟೇಲ್‌, ಊಟ, ತಿಂಡಿ ಸಿಗದ ಜಾಗಗಳೂ ಇವೆ ಎಂದು ಅರಿವಾಗಿದ್ದೇ ಆಗ.

ನಿಮಗೆ ಬೆಸ್ಟ್‌ ಅನಿಸಿದ ಟ್ರಾವೆಲ್‌ ಬಗ್ಗೆ ಹೇಳಿ?

ಈ ಬಾರಿಯೇ ವಿಶೇಷವಾಗಿತ್ತು. ಮಗಳು ಪರಿ ಜತೆ ಅಂಡಮಾನ್‌ ಹಾಗೂ ಜಾರ್ಜಿಯ ಹೋದಾಗ ಅದ್ಭುತ ಕ್ಷಣಗಳನ್ನು ಕಳೆಯಲು ಸಾಧ್ಯವಾಯಿತು. ಜಾರ್ಜಿಯಾದಲ್ಲಿ ಬಹಳ ಚಳಿ ವಾತಾವರಣವಿತ್ತು. -2, -5 ಟೆಂಪರೇಚರ್‌ ಇತ್ತು. ನಾವೆಲ್ಲ ಬೆಚ್ಚಗಿರಲು ಜಾಕೆಟ್‌, ಗ್ಲೌಸ್‌ ಎಲ್ಲ ಹಾಕಿಕೊಂಡು ಕುಳಿತಿದ್ದರೆ, ಪರಿ ಎಲ್ಲ ಜಾಕೆಟ್‌ ತೆಗೆದು ಆರಾಮವಾಗಿ ಆಟವಾಡುತ್ತಿದ್ದಳು. ಅವಳಿಗೆ ಚಳಿ ಆಗುತ್ತಿರಲಿಲ್ಲ.

ಪರಿ ಟ್ರಾವೆಲ್‌ ಎಂಜಾಯ್‌ ಮಾಡ್ತಾಳ?

New Project (8)

ಅವಳಿಗೆ ಮನೆಯಲ್ಲಿ ಇರಲು ಇಷ್ಟವಿಲ್ಲ. ಆಚೆ ಹೋಗುವುದು, ಸುತ್ತೋದು ಎಂದರೆ ಬಹಳ ಇಷ್ಟ. ಆಚೆ ಹೋದಾಗಲೂ ಬಹಳ ಎಂಜಾಯ್‌ ಮಾಡುತ್ತಾಳೆ.

ಟ್ರಾವೆಲ್‌ ಕಲಿಸಿದ ಪಾಠವೇನು?

‘ವರ್ಷ’ ಪೂರ್ತಿ ಸಫಾರಿಗೆ ರೆಡಿ ಎನ್ನುವ ‘ಇಶಿತಾ’!

ಹೊಸ ಜಾಗ, ಹೊಸ ಜನರನ್ನು ಭೇಟಿ ಮಾಡಿದಾಗ ಹೊಸ ಆಲೋಚನೆಗಳು ನಮ್ಮೊಳಗೆ ಬೆಳೆಯುತ್ತವೆ. ಮನೆಯಲ್ಲಿದ್ದಾಗ ಒಂದೇ ರೀತಿಯ ಜೀವನ, ಒಂದೇ ರೀತಿಯ ಯೋಚನೆಯಲ್ಲಿ ಮುಳುಗಿರುತ್ತೇವೆ. ಎಲ್ಲೋ ಸುತ್ತಾಡಲು ಹೋದಾಗ ಮಾತ್ರ ಹೊಸ ದೃಷ್ಟಿಕೋನ ತೆರೆದುಕೊಳ್ಳಲು ಸಾಧ್ಯ. ಒಂದು ವಿಷಯವನ್ನು ನಾವು ನೋಡುವ ಬಗೆಯೇ ಬದಲಾಗಬಹುದು. ವಿಸ್ತಾರವಾದ ಆಲೋಚನೆಗಳು ಜೀವನ ನೋಡುವ ನಮ್ಮ ದೃಷ್ಟಿಯನ್ನೇ ಬದಲಿಸಬಹುದು. ಪ್ರಯಾಣ ಹೋದಾಗ ತನ್ನಿಂತಾನೇ ಮನಸು ಹಗುರಾಗುತ್ತದೆ. ನಮ್ಮೊಳಗೆ ಒಂದು ಬದಲಾವಣೆ ಶುರುವಾಗುತ್ತದೆ. ಆ ಬದಲಾವಣೆ ಇನ್ಸ್‌ಟೆಂಟ್ ಅಥವಾ ಕೂಡಲೇ ಎದ್ದು ಕಾಣುವ ಬದಲಾವಣೆ ಆಗಿರಬೇಕಂತೇನಿಲ್ಲ. ಹಂತಹಂತವಾಗಿ ನಿಧಾನಕ್ಕೆ ಬದಲಾಗುತ್ತೇವೆ.

New Project (9)

ಟ್ರಾವೆಲ್‌ ಮಾರ್ಟ್‌ ಜತೆಗಿನ ಅನುಭವ ಹೇಗಿತ್ತು?

ಟ್ರಾವೆಲ್‌ ಮಾರ್ಟ್‌ ಜತೆ ಹೋದಾಗ ನಮಗೆ ಯಾವುದೇ ತಲೆ ಬಿಸಿ ಇರಲ್ಲ. ಶುರುವಿನಿಂದ ಕೊನೆಯವರೆಗೂ ಅವರೇ ನೋಡಿಕೊಳ್ಳುತ್ತಾರೆ. ಎಲ್ಲಿ ಹೋಗ್ಬೇಕು, ಏನು ಮಾಡ್ಬೇಕು, ಜತೆಗೆ ಬರುವ ಗಾಡಿಗಳು, ವ್ಯಕ್ತಿಗಳು ಎಲ್ಲ ವ್ಯವಸ್ಥೆಯನ್ನೂ ಮಾಡುತ್ತಾರೆ. ಹೀಗಾಗಿ ಅವರ ಜತೆ ಹೋದಾಗ ಪ್ರವಾಸ ಸೇಫ್‌ ಆಗಿರುತ್ತದೆ.

ಕೃಷ್ಣ ಪ್ಲಾನ್‌ ಇಲ್ಲದೆ ಟ್ರಿಪ್‌ಗೆ ಹೋಗ್ತಾರ?

ಸೇಫ್ ಟ್ರಾವೆಲ್‌ ಅಲ್ಲಿ ಯಾವುದೇ ಸರ್ಪರೈಸ್‌ ಇರಲ್ಲ. ಗೆಳೆಯರ ಜತೆ ಹೋಗುವುದಾದರೆ ಅಥವಾ ಸೋಲೋ ಟ್ರಾವೆಲ್‌ ಮಾಡುವಾಗ ಹೊಸ ಸಾಹಸಗಳನ್ನು ಮಾಡಲು ಹೆಚ್ಚು ಖುಷಿ ಹಾಗೂ ಸ್ವಾತಂತ್ರ್ಯ ಇರುತ್ತದೆ. ಅದೇ ಫ್ಯಾಮಿಲಿ ಜತೆ ಹೋಗುವಾಗ ಎಷ್ಟು ವ್ಯವಸ್ಥೆ ಇದ್ದರೂ ಕಡಿಮೆ. ಅಂಥ ಸಂದರ್ಭದಲ್ಲಿ ಎಲ್ಲವನ್ನೂ ಮೊದಲೇ ಪ್ಲಾನ್‌ ಮಾಡಿಕೊಂಡು ವ್ಯವಸ್ಥಿತ ಟ್ರಾವೆಲ್‌ ಮಾಡಬೇಕಾಗುತ್ತದೆ. ನಾನು ಎರಡನ್ನೂ ಎಂಜಾಯ್‌ ಮಾಡುತ್ತೇನೆ.