ಕೂರ್ಗ್ಗಿಂತಲೂ ಈ ಜಾಗ ಫುಲ್ ಕೂಲ್!
ಪ್ರವಾಸಿಗರು ಕೂರ್ಗ್ ಮತ್ತು ಸಕಲೇಶಪುರವನ್ನು ಕರ್ನಾಟಕದ ತಂಪಾದ ತಾಣ ಎಂದು ಭಾವಿಸಿದ್ದಾರೆ. ಆದರೆ ಕರ್ನಾಟಕದ ಈ ತಾಣ ವರ್ಷದ ಅಷ್ಟು ದಿನವೂ ಕೂಲ್ ಆಗಿರುತ್ತದೆ.
ಪ್ರವಾಸಿಗರು ಕೂರ್ಗ್ ಮತ್ತು ಸಕಲೇಶಪುರವನ್ನು ಕರ್ನಾಟಕದ ತಂಪಾದ ತಾಣ(Coolest Place) ಎಂದು ಭಾವಿಸಿದ್ದಾರೆ. ಆದರೆ ಹೆಚ್ಚು ಪ್ರವಾಸಿಗರು ಭೇಟಿ ನೀಡದ ಕರ್ನಾಟಕದ ಈ ತಾಣವು ವರ್ಷದ ಅಷ್ಟು ದಿನವೂ ಕೂಲ್ ಕೂಲ್ ಆಗಿರುತ್ತದೆ. ಹಿತವಾದ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಷ್ಟಕ್ಕೂ ಆ ಜಾಗ ಯಾವುದು? ಈ ರಣ ಬಿಸಿಲಿನಲ್ಲಿ ತಂಪಾಗಿ ಬರಲು ಆ ಕೂಲ್ ಸ್ಪಾಟ್ಗೆ ನೀವು ಹೋಗಿಬರಲೇಬೇಕು. ಅಲ್ಲಿನ ಚುಮುಚುಮು ಚಳಿಯಲ್ಲಿ ಮೈಕೈ ಅರಳಿಸಿಕೊಂಡು ಕುಣಿಯಬಹುದು.
ಸಂಪಖಂಡ ಸದಾ ಕೂಲ್
ಹೆಚ್ಚಿನ ಪ್ರವಾಸಿಗರು ಸಂಪಖಂಡ ಎಂಬ ಹೆಸರನ್ನು ಕೇಳಿರಲಿಕ್ಕಿಲ್ಲ . ಸಂಪಖಂಡ ಪಶ್ಚಿಮ ಘಟ್ಟಗಳ ಗಿರಿಧಾಮವಾಗಿದ್ದು ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿದೆ. ಅದು ಅದ್ಭುತವಾದ ಗಿರಿಧಾಮವಾಗಿದೆ. ಬೇಸಿಗೆಯಲ್ಲಿ ಸಹ ಅಲ್ಲಿನ ತಾಪಮಾನವು ಸಾಮಾನ್ಯವಾಗಿ 15 °C ಗಿಂತ ಕಡಿಮೆಯಿರುತ್ತದೆ. ಇದು ಕರ್ನಾಟಕದ ಅತ್ಯಂತ ತಂಪಾದ ಸ್ಥಳ ಎಂದು ಕರೆಯಲಾಗುತ್ತದೆ. ಆದರೆ ಬಹುತೇಕರು ಕೂರ್ಗ್,ಚಿಕ್ಕಮಗಳೂರು ಮತ್ತು ಸಕಲೇಶಪುರವನ್ನು ತಂಪಾದ ಸ್ಥಳ ಎಂದು ಭಾವಿಸಿದ್ದಾರೆ.
ಸಂಪಖಂಡ ಎಲ್ಲಿದೆ?
ಉತ್ತರ ಕನ್ನಡದ ಶಿರಸಿಯಲ್ಲಿರುವ ಈ ಸ್ಥಳವು ರಾಜ್ಯ ಹೆದ್ದಾರಿ 69 ರ ಗ್ರಾಮದ ಮೂಲಕ ಹಾದುಹೋಗುತ್ತದೆ. ಇದು ದೇವಿಮನೆ ಘಾಟ್ನಿಂದ ಸರಿ ಸುಮಾರು 18 ಕಿಮೀ (11 ಮೈಲಿ) ದೂರ, ಶಿರಸಿ ಕೇಂದ್ರದಿಂದ 16 ಕಿಮೀ (9.9 ಮೈಲಿ) ದೂರದಲ್ಲಿದೆ. ಸಂಪಖಂಡವು ಬೇಸಿಗೆ ಕಾಲದಲ್ಲಿ ಕರ್ನಾಟಕದ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಜನರು ಹೆಚ್ಚಾಗಿ ಕೂಲ್ ಆಗಿ ಬರಲು ಕೂರ್ಗ್ಗೆ ಹೋಗುತ್ತಾರೆ. ಆದರೆ ಕೂರ್ಗ್ಗಿಂತ ಇನ್ನು ತಂಪಾದ ಸ್ಥಳ ಎಂದರೆ ಅದು ಸಂಪಖಂಡ. ಸಂಪಖಂಡವು ಕಾರವಾರದಿಂದ 102 ಕಿಮೀ ದೂರದಲ್ಲಿದೆ. ಶಿರಸಿಯು ಸಂಪಖಂಡಕ್ಕೆ ತೀರಾ ಹತ್ತಿರದ ಪಟ್ಟಣವಾಗಿದೆ. ಇದು ಸರಿಸುಮಾರು 18 ಕಿಮೀ ದೂರದಲ್ಲಿದೆ.

ಈ ಸುಂದರವಾದ ಗ್ರಾಮವು ಸೊಂಪಾದ ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಈ ಬಗೆಯ ಅರಣ್ಯವು ಕರ್ನಾಟಕ ಅರಣ್ಯ ಇಲಾಖೆ, ಶಿರಸಿ ವಿಭಾಗದ ಒಡೆತನದ ಉಷ್ಣವಲಯದ ನಿತ್ಯಹರಿದ್ವರ್ಣ ಅರಣ್ಯದ ಅಡಿಯಲ್ಲಿ ಬರುತ್ತದೆ. ಈ ಪ್ರದೇಶವು ಎತ್ತರದಲ್ಲಿದೆ. ಇಲ್ಲಿ ಸಾಕಷ್ಟು ವನ್ಯಜೀವಿಗಳು ವಾಸಿಸುತ್ತಿವೆ. ನೀವು ಈ ಬೇಸಿಗೆಯಲ್ಲಿ ಈ ಟ್ರ್ಯಾಪ್ ಪ್ಲ್ಯಾನ್ ಮಾಡಿದ್ದರೆ ತಪ್ಪದೇ ಸಂಪಖಂಡಕ್ಕೆ ಭೇಟಿಕೊಡಿ. ತಂಪು ತಂಪು ಕೂಲ್ ಕೂಲ್!