ತತ್ಕಾಲ್‌ ಮೂಲಕ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಮಾಡುವ ಮುನ್ನ, ಭಾರತೀಯ ರೈಲ್ವೆ ಇಲಾಖೆ ಹೊರಡಿಸಿರುವ ಈ ಹೊಸ ನಿಯಮದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಜುಲೈ 15, 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಮೊದಲಿನಂತಿರುವುದಿಲ್ಲ. ನಕಲಿ ಬುಕಿಂಗ್‌ಗಳನ್ನು ತಡೆಯುವ ಮತ್ತು ನಿಜವಾದ ಪ್ರಯಾಣಿಕರಿಗೆ ಆದ್ಯತೆ ನೀಡುವ ಉದ್ದೇಶದಿಂದ, ಭಾರತೀಯ ರೈಲ್ವೆ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಪರಿಶೀಲನೆ ಕಡ್ಡಾಯಗೊಳಿಸಿದೆ.

ಇದನ್ನು ಓದಿ: ರೈಲಿನಲ್ಲಿ ಲಗೇಜ್ ಕಳುವಾದರೆ...? ಗಾಬರಿ ಬೇಡ.. ಇಲ್ಲಿದೆ ಪರಿಹಾರ!

ಒಟಿಪಿ ಆಧಾರಿತ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ತತ್ಕಾಲ್ ಟಿಕೆಟ್ ಪಡೆಯಲು ಬಯಸಿದ ಪ್ರಯಾಣಿಕರು, ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಆ ಸಂಖ್ಯೆಗೆ ರೈಲ್ವೆಯಿಂದ ಒಟಿಪಿ ಕಳುಹಿಸಲಾಗುತ್ತದೆ. ಪ್ರಯಾಣಿಕರು ಒಟಿಪಿಯನ್ನು ಸಿಸ್ಟಂನಲ್ಲಿ ನಮೂದಿಸುವವರೆಗೆ ಟಿಕೆಟ್ ಬುಕಿಂಗ್ ಪೂರ್ಣಗೊಳ್ಳುವುದಿಲ್ಲ. ಈ ಹೊಸ ವ್ಯವಸ್ಥೆಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ.

ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದ್ದು, ಇದರಿಂದ ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಯ ಹೆಸರಿನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್‌ ಸಾಧ್ಯ. ಬುಕಿಂಗ್ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ತಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ ಎಂದು ವಾಯುವ್ಯ ರೈಲ್ವೆ, ಜೋಧ್‌ಪುರದ ಡಿಆರ್‌ಎಂ ಅನುರಾಗ್ ತ್ರಿಪಾಠಿ ಹೇಳಿದ್ದಾರೆ.

ಎಸಿ ವರ್ಗದ ಟಿಕೆಟ್‌ಗಳು: ಏಜೆಂಟ್‌ಗಳು ಬೆಳಿಗ್ಗೆ 10:00 ರಿಂದ 10:30 ರವರೆಗೆ ಬುಕಿಂಗ್ ಮಾಡಲು ಸಾಧ್ಯವಿಲ್ಲ.

ಎಸಿ-ಅಲ್ಲದ ವರ್ಗದ ಟಿಕೆಟ್‌ಗಳು: ಏಜೆಂಟ್‌ಗಳು ಬೆಳಿಗ್ಗೆ 11:00 ರಿಂದ 11:30 ರವರೆಗೆ ಬುಕಿಂಗ್ ಮಾಡಲು ಸಾಧ್ಯವಿಲ್ಲ.

ಈ ಸಮಯವು ಸಾಮಾನ್ಯ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿರುತ್ತದೆ.