ಲಡಕಾ ಬೇಕೋ ಲಡಕೀ ಬೇಕೋ?
ಜಗತ್ತಿನಲ್ಲಿ ಉಳಿದಿರುವ ಕೊನೆಯ ಶುದ್ಧ ಆರ್ಯರು ಎಂದು ಕರೆಯಲ್ಪಡುವ ಇವರ ಕಟ್ಟುಮಸ್ತಾದ ದೇಹದಿಂದ ನಿಜಕ್ಕೂ ಆಕರ್ಷಕ. ಇಂಥ ವಿಶೇಷ ದೇಹಪ್ರಕೃತಿ ಹೊಂದಿರುವ ಪುರುಷರಿಂದ ಮಗುವನ್ನು ಪಡೆಯಬೇಕೆಂಬುದು ವಿದೇಶಿ ಮಹಿಳೆಯರ ಹಂಬಲ. ಈ ಬಯಕೆಯನ್ನು ಹೊತ್ತು ಸಾಕಷ್ಟು ವಿದೇಶಿ ಮಹಿಳೆಯರು ಇಲ್ಲಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ.
-ಬಿ ಎಂ ಬಸೀರ
ಭಾರತದ ಶ್ರೀಮಂತ ಸಂಪ್ರದಾಯ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ಪ್ರತಿ ವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. ಹಿಂದೂ ಪುರಾತನ ದೇವಾಲಯ, ವಿವಿಧ ವಾಸ್ತು ಶಿಲ್ಪಗಳು ವಿದೇಶಿಗರನ್ನು ಭಾರತದತ್ತ ಆಕರ್ಷಿಸುತ್ತಿದೆ. ಸನಾತನ ಧರ್ಮದ ತತ್ತ್ವಗಳನ್ನು ಅರಿತು, ಅದನ್ನು ಸ್ವೀಕರಿಸಿ ಭಾರತದಲ್ಲೇ ನೆಲೆಸಿದ ಅನೇಕ ವಿದೇಶಿಗರೂ ಇದ್ದಾರೆ. ಆದರೆ ಇದರ ಹೊರತಾಗಿ ಗರ್ಭ ಧರಿಸಲೆಂದೇ ಭಾರತಕ್ಕೆ ಬರುವ ವಿದೇಶಿ ಮಹಿಳೆಯರ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು ಭಾರತದ ಒಂದು ವಿಶೇಷ ಹಳ್ಳಿಯ ಪುರುಷರಿಂದ ಮಗುವನ್ನು ಪಡೆಯಲು ಯುರೋಪಿನ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಅಷ್ಟಕ್ಕೂ ಈ ಹಳ್ಳಿ ಎಲ್ಲಿದೆ, ಗರ್ಭ ಧರಿಸಲು ಇಲ್ಲಿಗೆಯೇ ಬರಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಈ ಲೇಖನ ಕೊನೆಯತನಕ ಓದಿ.
ಈ ಹಳ್ಳಿ ಇರುವುದೆಲ್ಲಿ?
ಉತ್ತರ ಭಾರತದ ಕಾರ್ಗಿಲ್ ನಿಂದ 70 ಕಿ.ಮೀ ದೂರದಲ್ಲಿರುವ ಲಡಾಖ್ ನ ಬಗ್ಗೆಯೇ ಇಲ್ಲಿ ನಾವು ಹೇಳುತ್ತಿರುವುದು. ಹೌದು ವಿದೇಶಗಳಿಂದ, ವಿಶೇಷವಾಗಿ ಯುರೋಪಿಯನ್ ದೇಶಗಳ ಮಹಿಳೆಯರು ಇಲ್ಲಿನ ಪುರುಷರಿಂದ ಗರ್ಭ ಧರಿಸಲು ಈ ಸ್ಥಳಕ್ಕೆ ಬರುತ್ತಾರೆ. ಅಷ್ಟೇ ಅಲ್ಲ, ಗರ್ಭಿಣಿಯಾದರೆ ಇಲ್ಲಿನ ಪುರುಷರಿಗೆ ಅವರು ಹೇಳಿದಷ್ಟು ದುಡ್ಡು ಕೂಡ ಕೊಡುತ್ತಾರೆ. ಈ ಗ್ರಾಮವನ್ನು ಆರ್ಯ ಘಾಟಿ ಎಂದೂ ಕರೆಯಲಾಗುತ್ತದೆ. ಇದು ಗರ್ಭಧಾರಣೆಯ ಪ್ರವಾಸೋದ್ಯಮವೆಂದೇ ಖ್ಯಾತಿ ಪಡೆದಿದೆ.
ಲಡಾಖ್ ರಾಜಧಾನಿ ಲೇಹ್‌ನಿಂದ ಸುಮಾರು 160 ಕಿ.ಮೀ ದೂರದಲ್ಲಿ, ಬಿಯಾಮಾ, ದಹ್, ಹನು, ಗಾರ್ಕಾನ್, ಡಾರ್ಚಿಕ್ ಎಂಬ ಕೆಲವು ಹಳ್ಳಿಗಳಿವೆ. ಸುಮಾರು 5,000 ಜನರು ವಾಸಿಸುವ ಈ ವಿಶೇಷ ಸಮುದಾಯವನ್ನು ಬ್ರೋಕ್ಪಾ ಸಮುದಾಯ ಎಂದು ಕರೆಯಲಾಗುತ್ತದೆ.ಈ ಜನರು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರಾಗಿದ್ದು, ಜಗತ್ತಿನಲ್ಲಿ ಉಳಿದಿರುವ ಕೊನೆಯ ಶುದ್ಧ ಆರ್ಯರು ಎಂದು ಹೇಳಲಾಗುತ್ತದೆ. ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು ತೊರೆಯುವಾಗ, ಅವನ ಸೈನ್ಯದ ಕೆಲವು ಭಾಗವು ಭಾರತದಲ್ಲಿಯೇ ಇತ್ತು ಮತ್ತು ಅವರ ವಂಶಸ್ಥರು ಇನ್ನೂ ಭಾರತದಲ್ಲಿದ್ದಾರೆ ಎಂದು ಹೇಳಲಾಗುತ್ತದೆ.

ಅಲೆಕ್ಸಾಂಡರ್ ಭಾರತಕ್ಕೆ ಬಂದಾಗ, ಅವನ ಸೈನ್ಯದ ಕೆಲವು ಸೈನಿಕರು ಸಿಂಧೂ ಕಣಿವೆಯಲ್ಲಿಯೇ ಇದ್ದರು. ಅವರನ್ನು ಮಾಸ್ಟರ್ ರೇಸ್ ಎಂದೂ ಕರೆಯುತ್ತಾರೆ. ಲಡಾಖ್‌ನ ಇತರ ಜನರಂತೆ, ಅವರ ರಚನೆಯು ಸಂಪೂರ್ಣವಾಗಿ ವಿಭಿನ್ನವಾಗಿದೆ. ಅವರು ಮಂಗೋಲರು ಮತ್ತು ಟಿಬೆಟಿಯನ್ನರಂತೆ ಕಾಣುವುದಿಲ್ಲ. ಅವರು ಎತ್ತರ, ಬಿಳಿ ಚರ್ಮ, ಉದ್ದ ಕೂದಲು ಮತ್ತು ತಿಳಿ ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ.
ಜಗತ್ತಿನಲ್ಲಿ ಉಳಿದಿರುವ ಕೊನೆಯ ಶುದ್ಧ ಆರ್ಯರು ಎಂದು ಕರೆಯಲ್ಪಡುವ ಇವರ ಕಟ್ಟುಮಸ್ತಾದ ದೇಹದಿಂದ ನಿಜಕ್ಕೂ ಆಕರ್ಷಕ. ಇಂಥ ವಿಶೇಷ ದೇಹಪ್ರಕೃತಿ ಹೊಂದಿರುವ ಪುರುಷರಿಂದ ಮಗುವನ್ನು ಪಡೆಯಬೇಕೆಂಬುದು ವಿದೇಶಿ ಮಹಿಳೆಯರ ಹಂಬಲ. ಈ ಬಯಕೆಯನ್ನು ಹೊತ್ತು ಸಾಕಷ್ಟು ವಿದೇಶಿ ಮಹಿಳೆಯರು ಇಲ್ಲಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಈ ಸಮುದಾಯದ ಜನರಲ್ಲಿ ಮೊದಲು ಇದರ ಬಗ್ಗೆ ಹೆಚ್ಚಿನ ವ್ಯಾಮೋಹ ಇರಲಿಲ್ಲ, ಆದರೆ ಅಂತರ್ಜಾಲದಲ್ಲಿ ಪ್ರಚಾರದ ನಂತರ ವಿದೇಶಿ ಮಹಿಳೆಯರ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು. ಇದಲ್ಲದೇ ಗರ್ಭಧಾರಣೆಗೆ ಇಲ್ಲಿಗೆ ಬಂದ ವಿದೇಶಿ ಮಹಿಳೆಯರು ಈ ಪುರುಷರಿಗೆ ದೊಡ್ಡ ಮೊತ್ತದ ಹಣವನ್ನು ಕೂಡಾ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ.

ಆಶ್ಚರ್ಯಕರ ವಿಷಯವೇನೆಂದರೆ, ಈ ಸಮುದಾಯದ ಜನರು ಶುದ್ಧ ಆರ್ಯರು ಎಂದು ಸಾಬೀತುಪಡಿಸಲು ಇಲ್ಲಿಯವರೆಗೆ ಯಾವುದೇ ಸಂಶೋಧನೆ ನಡೆದಿಲ್ಲ, ಅವರ ಮೇಲೆ ಯಾವುದೇ ಡಿಎನ್ಎ ಪರೀಕ್ಷೆಯನ್ನು ನಡೆಸಲಾಗಿಲ್ಲ ಅಥವಾ ಯಾವುದೇ ವೈಜ್ಞಾನಿಕ ತನಿಖೆಯನ್ನು ಮಾಡಲಾಗಿಲ್ಲ. ಇದರ ಹೊರತಾಗಿಯೂ, ಜರ್ಮನಿ ಸೇರಿದಂತೆ ಇತರ ಯುರೋಪಿಯನ್ ದೇಶಗಳ ಮಹಿಳೆಯರು ಇಲ್ಲಿಗೆ ಬರುತ್ತಿದ್ದಾರೆ. ಅವರು ಇಲ್ಲಿಗೆ ಬರುವುದು ಶುದ್ಧ ಆರ್ಯರಿಂದ ಮಗುವನ್ನು ಪಡೆಯಲು. ಈ ಜನಾಂಗದ ಪುರುಷರಿಂದ ಗರ್ಭ ಧರಿಸಿದರೆ ಉತ್ತಮ ಮೈಕಟ್ಟು ಹಾಗೂ ಶಾರೀರಿಕ ರಚನೆ, ನೀಲಿ ಕಣ್ಣುಗಳು ಹಾಗೂ ಸುದೃಢ ದೇಹದ ಮಗು ಜನಿಸುತ್ತದೆ ಎಂಬುದು ಯುರೋಪ್ ಮಹಿಳೆಯರ ನಂಬಿಕೆ. ಇದೇ ಕಾರಣಕ್ಕೆ ಯುರೋಪಿನ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಗರ್ಭಿಣಿಯಾದ ನಂತರ, ವಿದೇಶಿ ಮಹಿಳೆಯರು ತಮ್ಮ ದೇಶಕ್ಕೆ ಮರಳುತ್ತಾರೆ.