Tuesday, March 10, 2026
Tuesday, March 10, 2026

ಏರ್ ಇಂಡಿಯಾ ವಿಮಾನದಲ್ಲಿ ನಾಯಿಗಳಿವೆ ಎಚ್ಚರಿಕೆ!

ಏರ್ ಇಂಡಿಯಾ ಪಾವ್ಸ್ ಆನ್ ದ ಬೋರ್ಡ್ ಎಂಬ ಆಫರ್ ಘೋಷಿಸಿದೆ. ಇದು ಏರ್ ಇಂಡಿಯಾದ ಮಹತ್ವದ ಹೆಜ್ಜೆ ಎಂದೆನ್ನಬಹುದು. ಪ್ರಯಾಣ ಅಂದರೆ ಈಗ ಮನುಷ್ಯರಿಗಷ್ಟೇ ಸೀಮಿತ ಅಲ್ಲ. ಮುದ್ದುಪ್ರಾಣಿಗಳೂ ಕುಟುಂಬದ ಅವಿಭಾಜ್ಯ ಅಂಗಗಳು ಎಂಬಂತಾಗಿ ಹೋಗಿದೆ. ಬೆಕ್ಕು ನಾಯಿಗಳನ್ನು ಮನೆಯಲ್ಲೋ ಕೆನೆಲ್ ನಲ್ಲೋ ಬಿಟ್ಟು ದೂರ ಪ್ರಯಾಣ ಮಾಡುವ ಸಂಕಟ ಸಾಕಿದವರಿಗಷ್ಟೇ ಗೊತ್ತು. ಈ ಸಮಸ್ಯೆಗೆ ಈಗ ಏರ್ ಇಂಡಿಯಾದಿಂದಲೂ ಪರಿಹಾರ ಸಿಕ್ಕಿದೆ.

ಹೆಡ್ ಲೈನ್ ನೋಡಿ ಗಾಬರಿ ಆಗಬೇಡಿ, ಕನ್ ಫ್ಯೂಸ್ ಕೂಡ ಆಗಬೇಡಿ. ಇದು ಖುಷಿ ಕೊಡುವ ಮಾಹಿತಿ. ಇತ್ತೀಚೆಗೆ ಅಕಾಸಾ ಏರ್ ಒಂದು ಡೇಟಾ ಬಿಡುಗಡೆ ಮಾಡಿತು. ಪೆಟ್ಸ್ ಆನ್ ಬೋರ್ಡ್ ಎಂಬ ಆಫರ್ ಕೊಟ್ಟಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ಹತ್ತು ಸಾವಿರ ಮುದ್ದುಪ್ರಾಣಿಗಳು ವಿಮಾನ ಯಾನ ಮಾಡಿವೆ ಅಂತ. ಹೌದು ಪೆಟ್ ಫ್ರೆಂಡ್ಲಿ ಪ್ರವಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗ್ತಾ ಇದೆ. ತಮ್ಮ ಸಾಕುಪ್ರಾಣಿಗಳೊಂದಿಗೆ, ಅಂದ್ರೆ ನಾಯಿ ಮತ್ತು ಬೆಕ್ಕುಗಳೊಂದಿಗೆ ಪ್ರವಾಸ ಮಾಡುವುದು ಎಲ್ಲರಿಗೂ ಇಷ್ಟವೇ. ಆದರೆ ವಿಮಾನದಲ್ಲಿ ಹಲವಾರು ಕಾರಣಗಳಿಂದಾಗಿ ಈ ಸೌಲಭ್ಯ ಒದಗಿಸಲಾಗ್ತಾ ಇರಲಿಲ್ಲ. ತಮ್ಮ ಸಾಕುಪ್ರಾಣಿಯನ್ನು ಕರೆದೊಯ್ಯಲು ಸಾಧ್ಯವಿತ್ತು. ಆದರೆ ಜತೆಯಲ್ಲಿ ವಿಮಾನದಲ್ಲಿ ತಮ್ಮೊಂದಿಗೆ ಕರೆದೊಯ್ಯುವ ಅವಕಾಶ ಇರಲಿಲ್ಲ. ಸಾಕುಪ್ರಾಣಿಗಳು ಪ್ರತ್ಯೇಕವಾಗಿ ಬರಬೇಕಾಗುತ್ತಿತ್ತು. ಆದರೆ ಪಾವ್ಸ್ ಆನ್ ಬೋರ್ಡ್, ಪೆಟ್ಸ್ ಆನ್ ಬೋರ್ಡ್ ಎಂಬ ಹೊಸ ಹೊಸ ಅವಕಾಶಗಳು ತೆರೆದುಕೊಂಡಿರುವುದರಿಂದ ಈಗ ಪೆಟ್ ಪ್ರಿಯರು ತಮ್ಮ ಮುದ್ದುಪ್ರಾಣಿಗಳನ್ನು ಜತೆಯಲ್ಲೆ ಕರೆದೊಯ್ಯಬಹುದಾಗಿದೆ.

ಇದನ್ನೂ ಓದಿ: ವಿದೇಶ ಪ್ರವಾಸ ಸಸ್ಯಾಹಾರಿಗಳಿಗೆ ಸಾಹಸ

ಕಳೆದ ತಿಂಗಳು ಏರ್ ಇಂಡಿಯಾ ಪಾವ್ಸ್ ಆನ್ ದ ಬೋರ್ಡ್ ಎಂಬ ಆಫರ್ ಘೋಷಿಸಿದೆ. ಇದು ಏರ್ ಇಂಡಿಯಾದ ಮಹತ್ವದ ಹೆಜ್ಜೆ ಎಂದೆನ್ನಬಹುದು. ಪ್ರಯಾಣ ಅಂದರೆ ಈಗ ಮನುಷ್ಯರಿಗಷ್ಟೇ ಸೀಮಿತ ಅಲ್ಲ. ಮುದ್ದುಪ್ರಾಣಿಗಳೂ ಕುಟುಂಬದ ಅವಿಭಾಜ್ಯ ಅಂಗಗಳು ಎಂಬಂತಾಗಿ ಹೋಗಿದೆ. ಬೆಕ್ಕು ನಾಯಿಗಳನ್ನು ಮನೆಯಲ್ಲೋ ಕೆನೆಲ್ ನಲ್ಲೋ ಬಿಟ್ಟು ದೂರ ಪ್ರಯಾಣ ಮಾಡುವ ಸಂಕಟ ಸಾಕಿದವರಿಗಷ್ಟೇ ಗೊತ್ತು. ಈ ಸಮಸ್ಯೆಗೆ ಈಗ ಏರ್ ಇಂಡಿಯಾದಿಂದಲೂ ಪರಿಹಾರ ಸಿಕ್ಕಿದೆ.

ಕ್ಯಾಬಿನ್‌ನಲ್ಲೇ ಕರೆದೊಯ್ಯಿರಿ!

New Project (34)

ಈ ಹೊಸ ಯೋಜನೆಯ ಅಡಿಯಲ್ಲಿ, 10 ಕೆಜಿ ವರೆಗೆ (ಕ್ಯಾರಿಯರ್ ಸಹಿತ) ತೂಕ ಹೊಂದಿರುವ ನಾಯಿಗಳು ಮತ್ತು ಬೆಕ್ಕುಗಳನ್ನು ಪ್ರಯಾಣಿಕರ ಜತೆಗೆ ವಿಮಾನದ ಕ್ಯಾಬಿನ್‌ನಲ್ಲೇ ಕರೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಪೆಟ್‌ಗಳನ್ನು ಕಾರ್ಗೋದಲ್ಲಿ ಪ್ರತ್ಯೇಕವಾಗಿ ಕಳಿಸುವಾಗ ಆಗುತ್ತಿದ್ದ ಆತಂಕಗಳು ಅಂತ್ಯವಾಗಿದೆ. ಗಮನಿಸಬೇಕಾದ ಅಂಶವೇನೆಂದರೆ, ವಿಮಾನ ಪ್ರಯಾಣದ ವೇಳೆ ಈ ಮುದ್ದುಪ್ರಾಣಿಗಳು ತಮ್ಮದೇ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ಯಾರಿಯರ್‌ಗಳೊಳಗೇ ಇರಬೇಕು. ಪ್ರಯಾಣಿಕರ ಆಸನದ ಕೆಳಗೆ ಈ ಕ್ಯಾರಿಯರ್‌ಗಳನ್ನು ಇರಿಸುವುದು ಕಡ್ಡಾಯ.

48 ಗಂಟೆಗಳಲ್ಲಿ ಬುಕಿಂಗ್

ಈ ಮೊದಲು ಪ್ರಾಣಿಗಳೊಂದಿಗೆ ಪ್ರಯಾಣಿಸಲು ಕನಿಷ್ಠ 72 ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವ ನಿಯಮವಿತ್ತು. ಆದರೆ ‘Paws on the Board’ ಯೋಜನೆಯಡಿ, 48 ಗಂಟೆಗಳ ಮುಂಚಿತವಾಗಿ ಬುಕ್ ಮಾಡಿದರೂ ಸಾಕು. ಇದು ತುರ್ತು ಪ್ರಯಾಣ ಅಥವಾ ಕೊನೆಯ ಕ್ಷಣದ ಯೋಜನೆಗಳಿಗೆ ದೊಡ್ಡ ಅನುಕೂಲವಾಗಿದೆ.

New Project (35)

80ಕ್ಕೂ ಹೆಚ್ಚು ಮಾರ್ಗಗಳಲ್ಲಿ ಸೌಲಭ್ಯ

ಈ ಯೋಜನೆ ಕೇವಲ ದೇಶೀಯ ಮಾರ್ಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ 80ಕ್ಕೂ ಹೆಚ್ಚು ದೇಶೀಯ ಮತ್ತು ಕೆಲವು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಈ ಸೇವೆ ಲಭ್ಯವಿದೆ. ಏಷ್ಯಾ, ಪಶ್ಚಿಮ ಏಷ್ಯಾ, ಯುರೋಪ್ ಹಾಗೂ ಉತ್ತರ ಅಮೆರಿಕದ ಕೆಲವು ಮಾರ್ಗಗಳಲ್ಲೂ ಪೆಟ್ ಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಭಾರತದಿಂದ ವಿದೇಶಕ್ಕೆ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ paws on the board ನಿಜಕ್ಕೂ ಸಿಹಿಸುದ್ದಿ ಎಂದೇ ಹೇಳಬಹುದು. ಏರ್ ಇಂಡಿಯಾದ ಈ ಹೆಜ್ಜೆ, ಮುಂದಿನ ದಿನಗಳಲ್ಲಿ ಇತರ ವಿಮಾನ ಸಂಸ್ಥೆಗಳಿಗೂ ಮಾದರಿಯಾಗುವ ಸಾಧ್ಯತೆ ಇದೆ. ಪೆಟ್ ಪ್ರೇಮಿಗಳಿಗೂ ಇದು ಸಂತಸದ ವಿಷಯ. ಅದೇ ರೀತಿ ಪ್ರವಾಸೋದ್ಯಮದ ಉನ್ನತಿಗೂ ಇದು ಪೂರಕ.

ವಯಸ್ಸು, ಆರೋಗ್ಯ ಮತ್ತು ದಾಖಲೆಗಳ ನಿಯಮ

ಏರ್ ಇಂಡಿಯಾ ನಿಗದಿಪಡಿಸಿರುವ ನಿಯಮಗಳ ಪ್ರಕಾರ

  • ಪ್ರಾಣಿಗಳ ವಯಸ್ಸು ಕನಿಷ್ಠ 8 ವಾರಗಳಿರಬೇಕು
  • ಎಲ್ಲಾ ಅಗತ್ಯ ಲಸಿಕೆ ಪ್ರಮಾಣಪತ್ರಗಳು ಕಡ್ಡಾಯ
  • ಅಸ್ವಸ್ಥ, ಗರ್ಭಿಣಿ ಅಥವಾ ಅಪಾಯಕಾರಿ ಆರೋಗ್ಯ ಸ್ಥಿತಿಯಲ್ಲಿರುವ ಪ್ರಾಣಿಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ

ಈ ನಿಯಮಗಳು ಪಶುಗಳ ಮತ್ತು ಸಹಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ರೂಪಿಸಲಾಗಿದೆ.

ಕ್ಯಾರಿಯರ್ ಗಾತ್ರ ಮತ್ತು ಸುರಕ್ಷತೆ

ಕ್ಯಾಬಿನ್‌ನಲ್ಲಿ ಪ್ರಯಾಣಿಸುವ ಪ್ರಾಣಿಗಳಿಗಾಗಿ ಬಳಸುವ ಕ್ಯಾರಿಯರ್

  • ಸರಿಯಾದ ಗಾಳಿಚಲನೆ ಹೊಂದಿರಬೇಕು
  • ಮೃಗಗಳು ನಿಂತುಕೊಳ್ಳಲು, ತಿರುಗಲು ಸಾಧ್ಯವಾಗುವಷ್ಟು ಜಾಗ ಇರಬೇಕು
  • ಸಾಮಾನ್ಯವಾಗಿ 17 × 10 × 9 ಇಂಚು ಗಾತ್ರದ ಒಳಗೆ ಇರಬೇಕು

10 ಕೆಜಿಗಿಂತ ಹೆಚ್ಚು ತೂಕವಿರುವ ಪಶುಗಳನ್ನು checked baggage ಅಥವಾ ಕಾರ್ಗೋ ಮೂಲಕ ಕಳುಹಿಸುವ ವ್ಯವಸ್ಥೆಯೂ ಲಭ್ಯ.

ಪ್ರಯಾಣ ವೆಚ್ಚ ಎಷ್ಟು?

ಪ್ರಾಣಿಗಳೊಂದಿಗೆ ಪ್ರಯಾಣಕ್ಕೆ ವಿಧಿಸುವ ಶುಲ್ಕ ಈ ರೀತಿ ಇದೆ

  • ದೇಶೀಯ ವಿಮಾನಗಳು: ₹7,500
  • ಕಿರುದೂರದ ಅಂತಾರಾಷ್ಟ್ರೀಯ ಪ್ರಯಾಣ: 140 ಡಾಲರ್
  • ಮಧ್ಯಮ ದೂರ ಅಂತಾರಾಷ್ಟ್ರೀಯ ಪ್ರಯಾಣ: 160 ಡಾಲರ್

ಕಾರ್ಗೋ ಅಥವಾ ಚೆಕ್ಡ್ ಬ್ಯಾಗೇಜ್ ಮೂಲಕ ಕಳುಹಿಸಿದರೆ ತೂಕ ಮತ್ತು ದೂರದ ಆಧಾರದ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!