ಇದು ಗೋವಾದ ಅತಿದೊಡ್ಡ ಕೋಟೆ
ಫೋರ್ಟ್ 'ಅಗುವಾಡಾ' ಪೋರ್ಚುಗೀಸ್ ವಾಸ್ತುಶಿಲ್ಪ ಶೈಲಿಯಲ್ಲಿದೆ. 1609 - 1612ರ ಮಧ್ಯದ ಅವಧಿಯಲ್ಲಿ ನಿರ್ಮಾಣಗೊಂಡಿತು. ಇದು ಗೋವಾದಲ್ಲೇ ಅತಿ ದೊಡ್ಡ ಕೋಟೆ. ಮಾಂಡೋವಿ ನದಿಯ ಸಮೀಪದ ಬೆಟ್ಟದ ತುದಿಯಲ್ಲಿದೆ. ಪೋರ್ಚುಗೀಸ್ ಅಗುವಾಡಾ ಎನ್ನುವ ಹೆಸರಿನಿಂದಲೇ ಈ ಕೋಟೆಗೆ ಅಗುವಾಡಾ ಎಂಬ ಹೆಸರು ಬಂದಿದೆ.
- ವಾಣಿ ಮೈಸೂರು
ಬೇಸಗೆ ಬಿಸಿಲಲ್ಲಿ ಕಡಲನ್ನು ಹುಡುಕಿ ಹೋಗುವುದು ಒಂದು ಸುಂದರ ಅನುಭವ ನೀಡುತ್ತದೆ. ಹೀಗೆ ಹೊರಟ್ಟಿದ್ದು ಒಂದು ಸುಂದರ ಸ್ಥಳಕ್ಕೆ. ಅದರ ಹೆಸರು ಫೋರ್ಟ್ 'ಅಗುವಾಡಾ'.
ಫೋರ್ಟ್ 'ಅಗುವಾಡಾ', ಅದೊಂದು ಭವ್ಯ ಕೋಟೆ. ಅಲ್ಲಿ ನಿಂತು ನೋಡಿದರೆ ಸುತ್ತೆಲ್ಲಾ ಬೆಟ್ಟ, ಕಡಲ ತುದಿ, ಅಲೆಗಳ ಸಪ್ಪಳ- ಪ್ರಕೃತಿಯ ಮೌನ, ತಾಳೆ ಮರಗಳು, ಸಮುದ್ರ -ನದಿ, ಹಸಿರು ಬನಗಳು, ಮರಳಿನ ರಾಶಿ ವಿಹಂಗಮ ನೋಟದ ಜತೆಗೆ ಹತ್ತಿರವಿರುವ ಸಿಂಕ್ವೆರಿಮ್ ಬೀಚ್, ಸೂರ್ಯಾಸ್ತದ ನೋಟಗಳು ವಿಶೇಷವಾಗಿ ಮೋಡಿಮಾಡುತ್ತವೆ. ಈ ದೃಷ್ಯಗಳನ್ನು ಕಾಣುತ್ತಿದ್ದಂತೆ ಕಣ್ಮನ ಹರ್ಷದಿಂದ ನಲಿದಾಡುತ್ತವೆ. ಈ ಕೋಟೆ ಇರುವುದು ಗೋವಾದಲ್ಲಿ. ವಿಶೇಷವೆಂದರೆ ಇದು ಐತಿಹಾಸಿಕ ಸ್ಥಳವೆಂದೇ ಪ್ರಸಿದ್ಧವಾದ ಫೋರ್ಟ್.
ಇದನ್ನೂ ಓದಿ: ಈ ಗೋವಾ ಸುತ್ತೋಕೂ ಎಲ್ಲ ಗೊತ್ತಿರಬೇಕು
ಫೋರ್ಟ್ 'ಅಗುವಾಡಾ' ಪೋರ್ಚುಗೀಸ್ ವಾಸ್ತುಶಿಲ್ಪ ಶೈಲಿಯಲ್ಲಿದೆ. 1609 - 1612ರ ಮಧ್ಯದ ಅವಧಿಯಲ್ಲಿ ನಿರ್ಮಾಣಗೊಂಡಿತು. ಇದು ಗೋವಾದಲ್ಲೇ ಅತಿ ದೊಡ್ಡ ಕೋಟೆ. ಮಾಂಡೋವಿ ನದಿಯ ಸಮೀಪದ ಬೆಟ್ಟದ ತುದಿಯಲ್ಲಿದೆ. ಪೋರ್ಚುಗೀಸ್ ಅಗುವಾಡಾ ಎನ್ನುವ ಹೆಸರಿನಿಂದಲೇ ಈ ಕೋಟೆಗೆ ಅಗುವಾಡಾ ಎಂಬ ಹೆಸರು ಬಂದಿದೆ. ಕೋಟೆಯ ಪಶ್ಚಿಮದಲ್ಲಿರುವ ಬೆಟ್ಟದ ಮೇಲೆ ಅಗುವಾಡಾ ದೀಪಸ್ತಂಭವೊಂದು ಇದೆ. ಇದನ್ನು ಮಾಪುಸಾ ಮತ್ತು ಅಲ್ಡೋನಾದವರೆಗೆ ರಾತ್ರಿಯಲ್ಲಿ ಕಾಣಬಹುದು.

ಪಣಜಿಯಿಂದ 18 ಕಿಮೀ. ದೂರದಲ್ಲಿರುವ ಇದು, ಭದ್ರವಾದ ರಕ್ಷಣಾ ವ್ಯವಸ್ಥೆ ಹೊಂದಿದೆ. ಕೋಟೆಯ ಮಧ್ಯದಲ್ಲಿ ಹಲವು ಭೂಗತ ಕೋಣೆಗಳು ಇರುವ ಟ್ಯಾಂಕ್ ಇದೆ. ಅವುಗಳಿಗೆ ತಲುಪಲು ಸಣ್ಣ ಬಾಗಿಲಗಳು ಸಹ ಇವೆ. ಕಾಂಕ್ರೀಟ್ ಚಪ್ಪಡಿಗಳಿಂದ ಮುಚ್ಚಿದ ಈ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಗೋವಾದಲ್ಲಿ ಇರುವ ಅದ್ಭುತವಾದ ಮರಳಿನ ವಿಸ್ತಾರವನ್ನು ಹೊಂದಿರುವ ಸಿಂಕ್ವೆರಿಮ್ ಸಮುದ್ರವು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಹಚ್ಚ ಹಸಿರಿನ ವಾತಾವರಣ ಹಾಗೂ ತಾಳೆ ಮರಗಳ ಇಕ್ಕೆಲಗಳಿಂದ ಸಮುದ್ರ ತೀರದ ನಡಿಗೆಗಳಿಗೂ ಈ ತಾಣ ಜನಪ್ರಿಯತೆ ಪಡೆದಿದೆ. ಪ್ಯಾರಾಸೈಲಿಂಗ್, ಸ್ಕೂಬಾ ಡೈವಿಂಗ್, ವಾಟರ್ ಸ್ಕೀಯಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ. ಸಿಂಕ್ವೆರಿಮ್ ಬೀಚ್ನಲ್ಲಿ ಜಲ ಕ್ರೀಡೆಗಳನ್ನು ಆನಂದಿಸಬಹುದು.
ದಾರಿ ಹೇಗೆ?
ಪಣಜಿಯಿಂದ 18 ಕಿಮೀ. ದೂರದಲ್ಲಿ ಈ ಅಗುವಾಡಾ ಕೋಟೆಯಿದೆ. ಖಾಸಗಿ ಅಥವಾ ಸ್ಥಳೀಯ ವಾಹಗಳಲ್ಲಿ ತಲುಪಬಹುದು. ದ್ವಿಚಕ್ರ ವಾಹನಗಳೂ ಬಾಡಿಗೆಗೆ ಸಿಗುತ್ತವೆ.