ಯುಪಿ ಬಜೆಟ್‌ನಲ್ಲಿ ಸ್ಪಿರಿಚ್ಯುವಲ್ ಸರ್ಕ್ಯೂಟ್ ಅಭಿವೃದ್ಧಿಗೆ ಒತ್ತು!
ಕಳೆದ ವರ್ಷ ಜನವರಿ ತಿಂಗಳಿನಿಂದ ಜುಲೈ ವರೆಗೆ ಅಯೋಧ್ಯೆ ಮತ್ತು ಮತ್ತಿತರ ಕ್ಷೇತ್ರಗಳಿಗೆ 122 ಕೋಟಿಗೂ ಅಧಿಕ ಯಾತ್ರಿಗಳು ಆಗಮಿಸಿದ್ದಾರೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿರಿಸಿ, ಅಯೋಧ್ಯೆಯ ಮೂಲಸೌಕರ್ಯವನ್ನು ಮತ್ತಷ್ಟು ವೃದ್ಧಿಸಲು ಸರಕಾರ ಪ್ರವಾಸಿ ಕ್ಷೇತ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ.
ಉತ್ತರ ಪ್ರದೇಶ ಸರಕಾರ ಅಯೋಧ್ಯೆಯ ಅಭಿವೃದ್ದಿಗೆ 500 ಕೋಟಿ ರು. ಮೀಸಲಿಡಲು ನಿರ್ಧರಿಸಿದೆ. 2026-27 ನೇ ಸಾಲಿನ ಬಜೆಟ್ ನಲ್ಲಿ, ’ಮುಖ್ಯಮಂತ್ರಿ ಪ್ರವಾಸಿ ಕ್ಷೇತ್ರ ಅಭಿವೃದ್ಧಿ’ ಯೋಜನೆಯಡಿಯಲ್ಲಿ, ಅಯೋಧ್ಯೆಯ ಅಭಿವೃದ್ದಿಗೆ ಮುಂದಾಗಿದೆ. ಬಜೆಟ್ ಮಂಡನೆ ಮಾಡಿದ ಉತ್ತರ ಪ್ರದೇಶದ ವಿತ್ತ ಸಚಿವ ಸುರೇಶ್ ಖನ್ನಾ, ರಾಜ್ಯದ ತೀರ್ಥಕ್ಷೇತ್ರದ ಸರ್ಕ್ಯೂಟ್‌ಗಳ ಅಭಿವೃದ್ಧಿಗೆ ಒತ್ತು ನೀಡಿ ಬಜೆಟ್ ಮಂಡನೆ ಮಾಡಲಾಗಿದೆ. ಸ್ಪಿರಿಚ್ಯುಯಲ್ ಟೂರಿಸಂ ಹಬ್ ಆಗಿ ಮುನ್ನುಗ್ಗುತ್ತಿರುವ ಉತ್ತರ ಪ್ರದೇಶದ ಎಲ್ಲಾ ತೀರ್ಥ ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ಸರಕಾರ ಶ್ರಮಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿ ತಿಂಗಳಿನಿಂದ ಜುಲೈ ವರೆಗೆ ಅಯೋಧ್ಯೆ ಮತ್ತು ಮತ್ತಿತರ ಕ್ಷೇತ್ರಗಳಿಗೆ 122 ಕೋಟಿಗೂ ಅಧಿಕ ಯಾತ್ರಿಗಳು ಆಗಮಿಸಿದ್ದಾರೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿರಿಸಿ, ಅಯೋಧ್ಯೆಯ ಮೂಲಸೌಕರ್ಯವನ್ನು ಮತ್ತಷ್ಟು ವೃದ್ಧಿಸಲು ಸರಕಾರ ಪ್ರವಾಸಿ ಕ್ಷೇತ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ರಾಮ ಜನ್ಮಭೂಮಿಯ ರಾಮ ಪಥ, ವೇದಿಕ್ ವೆಲ್ನೆಸ್ ಸಿಟಿ ಮುಂತಾದ ಭಾಗಗಳ ಮೂಲಸೌಕರ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸರಕಾರ ಮುಂದಾಗಿದೆ.