Wednesday, April 8, 2026
Wednesday, April 8, 2026

ದೆಹಲಿ ಮೆಟ್ರೋದಲ್ಲಿ ಅನಧಿಕೃತ ಮಾರಾಟಗಾರರಿಗೆ ಬ್ರೇಕ್

ದೆಹಲಿ ಮೆಟ್ರೋದಲ್ಲಿ ವ್ಯಾಪಾರ ಮಾಡುವ ಅನಧಿಕೃತ ಮಾರಾಟಗಾರರಿಗೆ ಇನ್ನು ಮುಂದೆ 5,000 ರು. ದಂಡ ಅನ್ವಯವಾಗಲಿದೆ.

ದೆಹಲಿ ಮೆಟ್ರೋ ರೈಲು ನಿಗಮ ಮೆಟ್ರೋ ಆವರಣದಲ್ಲಿ ಅನಧಿಕೃತವಾಗಿ ವಸ್ತುಗಳನ್ನು ಮಾರಾಟ ಮಾಡುವವರಿಗೆ ಬರೋಬ್ಬರಿ 5,000 ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ.

ಈ ಹಿಂದೆ ಅನಧಿಕೃತ ವ್ಯಾಪಾರಕ್ಕೆ ವಿಧಿಸಲಾಗುತ್ತಿದ್ದ ದಂಡವು ಕಡಿಮೆಯಿತ್ತು. ಆದರೆ ಈಗ ಡಿಎಂಆರ್‌ಸಿ ದೆಹಲಿ ಮೆಟ್ರೋ ರೈಲ್ವೆ ಕಾಯ್ದೆ ತಿದ್ದುಪಡಿ ತಂದಿದ್ದು, ದಂಡದ ಮೊತ್ತವನ್ನು 5,000 ರುಪಾಯಿಗೆ ಏರಿಸಿದೆ.

ಇದನ್ನೂ ಓದಿ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಏಪ್ರಿಲ್‌ನಲ್ಲಿ ಪ್ರಾರಂಭ

ರೈಲುಗಳ ಒಳಗೆ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಅನಧಿಕೃತ ವ್ಯಾಪಾರಸ್ಥರಿಂದ ಪ್ರಯಾಣಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿದ್ದವು. ದೆಹಲಿಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರಿಗೆ ಮೆಟ್ರೋ ಒಂದು ಪ್ರಮುಖ ಸಾರಿಗೆ ಸಂಪರ್ಕ. ನಿಲ್ದಾಣಗಳಲ್ಲಿ ಅನಧಿಕೃತ ವ್ಯಾಪಾರಸ್ಥರ ಕಿರಿಕಿರಿ ತಪ್ಪುವುದರಿಂದ ಪ್ರವಾಸಿಗರಿಗೆ ದೆಹಲಿ ಮೆಟ್ರೋ ಹೆಚ್ಚು ಸುರಕ್ಷಿತ ಮತ್ತು ವಿಶ್ವದರ್ಜೆಯ ಅನುಭವವನ್ನು ನೀಡಲಿದೆ ಎನ್ನಲಾಗಿದೆ.

ಈ ನಿಯಮವನ್ನು ಜಾರಿಗೆ ತರಲು ಡಿಎಂಆರ್‌ಸಿ ವಿಶೇಷ 'ಫ್ಲೈಯಿಂಗ್ ಸ್ಕ್ವಾಡ್' ತಂಡಗಳನ್ನು ರಚಿಸಿದೆ. ಇವರು ರೈಲುಗಳಲ್ಲಿ ಸಾಧಾರಣ ಉಡುಪಿನಲ್ಲಿ ಸಂಚರಿಸಲಿದ್ದು, ನಿಯಮ ಉಲ್ಲಂಘಿಸುವವರನ್ನು ಸ್ಥಳದಲ್ಲೇ ಪತ್ತೆಹಚ್ಚಿ ದಂಡ ವಿಧಿಸಲಿದ್ದಾರೆ. ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳ ಮೂಲಕವೂ ನಿರಂತರ ನಿಗಾ ಇಡಲಾಗುವುದು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ