Monday, November 10, 2025
Monday, November 10, 2025

ಖ್ಯಾತ ಸಿತಾರ ವಾದಕಿ ಅನುಷ್ಕಾ ಶಂಕರ್ ಜತೆ ಮಧ್ಯಪ್ರದೇಶ ಪ್ರವಾಸೋದ್ಯಮ ಸಹಯೋಗ

ಈ ಚಿತ್ರವು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಖಜುರಾಹೋ, ಓರ್ಚ್ಹಾ, ಮಂಧವ್, ಮಹೇಶ್ವರ, ಸಾಂಚಿ, ಜಬಲಪುರ ಮತ್ತು ಬಂಧವಗಢದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸೌಂದರ್ಯವನ್ನು ಸಂಗೀತದ ಮೂಲಕ ವಿಶ್ವದಾದ್ಯಂತ ತಲುಪಿಸುವ ಉದ್ದೇಶವನ್ನು ಹೊಂದಿದೆ. ಅನುಷ್ಕಾ ಶಂಕರ್ ಅವರ ಸಿತರ ನಾದ, ವಿಶಾಲ್ ಭಾರದ್ವಾಜ್ ಅವರ ಸಂಗೀತ ನಿರ್ದೇಶನ ಮತ್ತು ರವಿ ಜೈನ್ ಅವರ ದೃಶ್ಯ ನಿರ್ದೇಶನದ ಸಂಯೋಜನೆ ಈ ಯೋಜನೆಗೆ ವಿಶಿಷ್ಟ ಮೆರುಗನ್ನು ನೀಡಿದೆ.

ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆ ರಾಜ್ಯದ ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯವನ್ನು ವಿಭಿನ್ನ ಕಲಾತ್ಮಕ ಶೈಲಿಯಲ್ಲಿ ಜಗತ್ತಿಗೆ ತಲುಪಿಸಲು ಖ್ಯಾತ ಸಿತಾರ ವಾದಕಿ ಅನುಷ್ಕಾ ಶಂಕರ್ ಅವರೊಂದಿಗೆ ಕೈಜೋಡಿಸಿದೆ. ಈ ಸಹಯೋಗದ ಫಲವಾಗಿ ರಾಜ್ಯದ ವೈಭವವನ್ನು ಪ್ರತಿಬಿಂಬಿಸುವ ಮ್ಯೂಸಿಕಲ್ ಟ್ರಿಬ್ಯೂಟ್ ಚಿತ್ರವನ್ನು ಬಿಡುಗಡೆ ಮಾಡಿದೆ.

MP tourism


ಈ ಚಿತ್ರವು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಖಜುರಾಹೋ, ಓರ್ಚ್ಹಾ, ಮಂಧವ್, ಮಹೇಶ್ವರ, ಸಾಂಚಿ, ಜಬಲಪುರ ಮತ್ತು ಬಂಧವಗಢದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸೌಂದರ್ಯವನ್ನು ಸಂಗೀತದ ಮೂಲಕ ವಿಶ್ವದಾದ್ಯಂತ ತಲುಪಿಸುವ ಉದ್ದೇಶವನ್ನು ಹೊಂದಿದೆ. ಅನುಷ್ಕಾ ಶಂಕರ್ ಅವರ ಸಿತಾರ ನಾದ, ವಿಶಾಲ್ ಭಾರದ್ವಾಜ್ ಅವರ ಸಂಗೀತ ನಿರ್ದೇಶನ ಮತ್ತು ರವಿ ಜೈನ್ ಅವರ ದೃಶ್ಯ ನಿರ್ದೇಶನದ ಸಂಯೋಜನೆ ಈ ಯೋಜನೆಗೆ ವಿಶಿಷ್ಟ ಮೆರುಗನ್ನು ನೀಡಿದೆ.

Span Communications ಮತ್ತು Venus Productions ಸಂಸ್ಥೆಗಳು ಈ ಚಿತ್ರವನ್ನು ನಿರ್ಮಿಸಿದ್ದು, ಮಧ್ಯಪ್ರದೇಶ ಪ್ರವಾಸೋದ್ಯಮ ಮಂಡಳಿ ಈ ಯೋಜನೆಯ ರೂವಾರಿಯಾಗಿದೆ. ಸಂಗೀತ ಮತ್ತು ಸಂಸ್ಕೃತಿಯ ಸಮ್ಮಿಲನದ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರಯತ್ನಿಸುತ್ತಿರುವ ಇಲಾಖೆಯ ಈ ಕಾರ್ಯ ದೇಶದ ಇತರ ರಾಜ್ಯಗಳಿಗೆ ಮಾದರಿ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!