ಅಹಮದಾಬಾದ್‌ನಲ್ಲಿ ‘Food For Thought Fest 2025’
ಸಾಂಪ್ರದಾಯಿಕ ಮತ್ತು ಅಂತಾರಾಷ್ಟ್ರೀಯ ಪಾಕಶೈಲಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ್ದು ಈ ಬಾರಿಯ FFT Festನ ವೈಶಿಷ್ಟ್ಯವಾಗಿತ್ತು. “Taste of Luxury” ಹಾಗೂ “Regional Flavour” ಎಂಬ ಎರಡು ಮುಖ್ಯ ಆಹಾರ ವಿಭಾಗಗಳು, ಫೈನ್ ಡೈನಿಂಗ್‌ನಿಂದ ಹಿಡಿದು ಪ್ರಾದೇಶಿಕ ಸ್ಟ್ರೀಟ್ ಫುಡ್‌ವರೆಗೆ ವೈವಿಧ್ಯಮಯ ಪಾಕಗಳನ್ನು ಭೇಟಿ ನೀಡಿದ ಸಂದರ್ಶಕರಿಗೆ ಉಣಬಡಿಸಿದವು.
ಭಾರತದ ಆಹಾರ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಗುಜರಾತ್ ಸರಕಾರವು ಅಹಮದಾಬಾದ್‌ನಲ್ಲಿ “Food for Thought Fest 2025 (FFT Fest)” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿ ರಾಷ್ಟ್ರದ ಗಮನ ಸೆಳೆದಿದೆ. ನವೆಂಬರ್ 13ರಿಂದ 16ರ ವರೆಗೆ ಸಾಬರಮತಿ ರಿವರ್‌ಫ್ರಂಟ್ ಇವೆಂಟ್ ಸೆಂಟರ್‌ನಲ್ಲಿ ನಡೆದ ಈ ಉತ್ಸವವನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ಗ್ಯಾಸ್ಟ್ರೋನಮಿ (SAAG) ಜಂಟಿಯಾಗಿ ಆಯೋಜಿಸಿತ್ತು.
ಸಾಂಪ್ರದಾಯಿಕ ಮತ್ತು ಅಂತಾರಾಷ್ಟ್ರೀಯ ಪಾಕಶೈಲಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ್ದು ಈ ಬಾರಿಯ FFT Festನ ವೈಶಿಷ್ಟ್ಯವಾಗಿತ್ತು. “Taste of Luxury” ಹಾಗೂ “Regional Flavour” ಎಂಬ ಎರಡು ಮುಖ್ಯ ಆಹಾರ ವಿಭಾಗಗಳು, ಫೈನ್ ಡೈನಿಂಗ್‌ನಿಂದ ಹಿಡಿದು ಪ್ರಾದೇಶಿಕ ಸ್ಟ್ರೀಟ್ ಫುಡ್‌ವರೆಗೆ ವೈವಿಧ್ಯಮಯ ಖಾದ್ಯಗಳನ್ನು ಭೇಟಿ ನೀಡಿದ ಸಂದರ್ಶಕರಿಗೆ ಉಣಬಡಿಸಿದವು. ಜತೆಗೆ Luxury Pavilion, Spiritual Pavilion ಮತ್ತು Coffee Pavilion ಉತ್ಸವದ ವಿಶೇಷ ಆಕರ್ಷಣೆಗಳಾಗಿದ್ದು, ಪ್ರತಿ ಪೆವಿಲಿಯನ್ ತನ್ನದೇ ಆದ ಥೀಮ್ ಹೊಂದಿತ್ತು ಮತ್ತು ಭೇಟಿ ನೀಡಿದವರಿಗೆ ವಿಶಿಷ್ಟ ಅನುಭವವನ್ನು ನೀಡಿತು.

ಸ್ಪಿರಿಚ್ಯುವಲ್ ಪೆವಿಲಿಯನ್‌ನಲ್ಲಿ ಪುರಿ ಜಗನ್ನಾಥ ಮಂದಿರದ ಮಹಾಪ್ರಸಾದ ಸವಿಯುವ ಅವಕಾಶ ಸಂದರ್ಶಕರಿಗೆ ಮುದ ನೀಡಿದರೆ, ಕಾಫಿ ಪೆವಿಲಿಯನ್‌ನಲ್ಲಿ ಬ್ರೂಯಿಂಗ್ ತಂತ್ರ, ರೋಸ್ಟಿಂಗ್ ಪ್ರದರ್ಶನ ಮತ್ತು ಹೊಸ ಬಗೆಯ ಕಾಫಿ ಸಂಸ್ಕೃತಿಯ ಪರಿಚಯ ಹೆಚ್ಚು ಗಮನ ಸೆಳೆದವು. ಲಗ್ಸುರಿ ಪೆವಿಲಿಯನ್‌ನಲ್ಲಿ ನಡೆದ ಸ್ಟಾರ್ ಹೊಟೇಲ್‌ಗಳ ವಿಶಿಷ್ಟ ಪಾಕಪ್ರದರ್ಶನಗಳ ಫೈನ್ ಡೈನಿಂಗ್ ಅನುಭವ ನೆರೆದವರಿಗೆ ಖುಷಿ ನೀಡಿತು.
ಸ್ಪೇನ್, ನೆದರ್‌ಲ್ಯಾಂಡ್, ನೇಪಾಳ ಸೇರಿದಂತೆ ಹಲವು ದೇಶಗಳಿಂದ ಬಂದ ಅತಿಥಿ ಶೆಫ್‌ಗಳು ಹಾಗೂ ಭಾರತದ ಪ್ರಮುಖ ಪಾಕಶಾಸ್ತ್ರಜ್ಞರು ತಮ್ಮ ವಿಶಿಷ್ಟ ಪಾಕಶೈಲಿಯನ್ನು ಉತ್ಸವದಲ್ಲಿ ಪ್ರದರ್ಶಿಸಿದರು. ಅವರ ಮಾಸ್ಟರ್‌ಕ್ಲಾಸ್‌ಗಳು ಮತ್ತು ಲೈವ್ ಡೆಮೋಗಳು ಉತ್ಸವಕ್ಕೆ ವಿಶೇಷ ಮೆರುಗನ್ನು ನೀಡಿದವು.