ಬೆಂಗಳೂರು, ಮುಂಬೈಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಿಮಾನಗಳು ಬಂದ್!
ಏರ್ ಇಂಡಿಯಾ ಮಾರ್ಚ್ 1ರಿಂದ ಮುಂಬೈ ಮತ್ತು ಬೆಂಗಳೂರಿನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಇದ್ದ ನೇರ ವಿಮಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಇರುವ ಸೇವೆಯನ್ನು ವಿಸ್ತರಿಸಲಾಗಿದ್ದು, ವಿಮಾನ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗಿದೆ.

ಒಂದು ವಾರದಲ್ಲಿ ಇಲ್ಲಿಯವರೆಗೆ 7 ವಿಮಾನಗಳಿದ್ದವು, ಆದರೆ ಮಾರ್ಚ್‌ನಿಂದ 10 ವಿಮಾನಗಳಿಗೆ ಹೆಚ್ಚಿಸಲಾಗುವುದು. ಈ ಮೊದಲು ನವೆಂಬರ್ 22ರಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್, ವಾಯು ಪ್ರದೇಶ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದಾಗಿ ಅಮೆರಿಕಗೆ ಪ್ರಯಾಣದ ಬೇಡಿಕೆಯಲ್ಲಿ ಕಂಪೆನಿಗೆ ಕೆಲವು ಅಡೆತಡೆಗಳು ಆಗಿದ್ದವು, ಆದರೆ ಪರಿಸ್ಥಿತಿ ತಾತ್ಕಾಲಿಕವಾಗಿದ್ದು, ಮಾರುಕಟ್ಟೆಯ ದೀರ್ಘಕಾಲೀನ ನಿರೀಕ್ಷೆಗಳ ಬಗ್ಗೆ ವಿಮಾನಯಾನ ಸಂಸ್ಥೆಯು ಬಹಳ ವಿಶ್ವಾಸ ಹೊಂದಿದೆ ಎಂದು ತಿಳಿಸಿದ್ದರು.