ಮಾರ್ಚ್ 19ರಿಂದ 36 ಹೆಚ್ಚುವರಿ ವಿಮಾನಗಳ ಹಾರಾಟ : ಏರ್ ಇಂಡಿಯಾ
ಏರ್ ಇಂಡಿಯಾ ಯೂರೋಪ್ ಮತ್ತು ಕೆನಾಡ ಭಾಗಕ್ಕೆ ಹೆಚ್ಚುವರಿಯಾಗಿ 36 ವಿಮಾನಗಳ ಹಾರಾಟ ಆರಂಭಿಸಲು ಸಜ್ಜಾಗಿದೆ. ಇದೇ ಮಾರ್ಚ್ 19ರಿಂದ ಈ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಮಾರ್ಚ್ 28ರವರೆಗೆ ಮುಂದುವರೆಯಲಿದೆ ಎಂದು ಏರ್ ಇಂಡಿಯಾ ಮಾಹಿತಿ ಹಂಚಿಕೊಂಡಿದೆ.
ಪಶ್ಚಿಮ ಏಷ್ಯಾ ಭಾಗದಲ್ಲಿನ ಯುದ್ಧ ವಾತಾವರಣದಿಂದಾಗಿ ಏರ್ ಇಂಡಿಯಾ ಒಂದೆಡೆ ದುಬೈನತ್ತ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇನ್ನೊಂದೆಡೆ ಯೂರೋಪ್ ಮತ್ತು ಕೆನಾಡ ಭಾಗಕ್ಕೆ ಹೆಚ್ಚುವರಿಯಾಗಿ 36 ವಿಮಾನಗಳ ಹಾರಾಟ ಆರಂಭಿಸಲು ಸಜ್ಜಾಗಿದೆ. ಇದೇ ಮಾರ್ಚ್ 19 ರಿಂದ ಈ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಮಾರ್ಚ್ 28ರವರೆಗೆ ಮುಂದುವರೆಯಲಿದೆ ಎಂದು ಏರ್ ಇಂಡಿಯಾ ಮಾಹಿತಿ ಹಂಚಿಕೊಂಡಿದೆ.
ಕಾರಣ ಏನು?
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಸಂದಿಗ್ದತೆ ಆವರಿಸಿದೆ. ಇದೇ ಕಾರಣಕ್ಕೆ ಅಲ್ಲಿನ ಪ್ರಯಾಣಿಕರ ಸಂಚಾರಕ್ಕೆ ಮಾರ್ಗಗಳ ಆಯ್ಕೆಗಳು ಸೀಮಿತವಾಗಿವೆ. ಏರ್ ಇಂಡಿಯಾ ಹೆಚ್ಚುವರಿ ವಿಮಾನಗಳ ಹಾರಾಟವನ್ನು ಘೋಷಿಸಿರುವ ಮಾರ್ಗಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅದರ ಪೂರೈಕೆಗಾಗಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ದುಬೈ ಪ್ರಯಾಣ ಮುಂದೂಡಿ: ಏರ್ ಇಂಡಿಯಾ
ವಿಮಾನಗಳ ಹಾರಾಟ ಎಲ್ಲಿಂದ ಎಲ್ಲಿಗೆ ? ವಿಮಾನ
ದೆಹಲಿ – ಲಂಡನ್ (ಹೀಥ್ರೂ)
ಈ ಮಾರ್ಗದಲ್ಲಿ ಮಾರ್ಚ್ 20, 22, 25, 27ನೆಯ ತಾರೀಕುಗಳಂದು ವಿಮಾನ ಸಂಚರಿಸಲಿವೆ. AI165 ವಿಮಾನವು ದೆಹಲಿಯಿಂದ ಲಂಡನ್‌ಗೆ ಮತ್ತು AI166 ವಿಮಾನವು ಲಂಡನ್‌ನಿಂದ ದೆಹಲಿಗೆ ಸಂಚರಿಸಲಿವೆ.
ಮುಂಬೈ – ಲಂಡನ್ (ಹೀಥ್ರೂ)
ಈ ಮಾರ್ಗದಲ್ಲಿ ಮಾರ್ಚ್ 21ರಂದು ಮಾತ್ರ ವಿಮಾನ ಸಂಚಾರ ಇರಲಿದ್ದು, AI4131 ವಿಮಾನವು ಮುಂಬೈನಿಂದ ಲಂಡನ್ ಕಡೆಗೆ ಮತ್ತು AI4130 ವಿಮಾನವು ಲಂಡನ್‌ನಿಂದ ಮುಂಬೈ ಕಡೆಗೆ ಸಂಚರಿಸಲಿವೆ.
ದೆಹಲಿ – ಫ್ರಾಂಕ್‌ಫೋರ್ಟ್

ಈ ಮಾರ್ಗದಲ್ಲಿ ಮಾರ್ಚ್ 19ರಿಂದ 27ರವರೆಗೆ ವಿಮಾನ ಸಂಚಾರ ಇರಲಿದೆ. AI121 ವಿಮಾನವು ದೆಹಲಿಯಿಂದ ಫ್ರಾಂಕ್‌ಫೋರ್ಟ್ ಕಡೆಗೆ ಮತ್ತು AI120 ವಿಮಾನವು ಫ್ರಾಂಕ್‌ಫೋರ್ಟ್‌ನಿಂದ ದೆಹಲಿಗೆ ಸಂಚರಿಸಲಿವೆ.
ದೆಹಲಿ – ಜ್ಯೂರಿಚ್
ಈ ಮಾರ್ಗದಲ್ಲಿ ಮಾರ್ಚ್ 24ರಂದು ಮಾತ್ರ ವಿಮಾನ ಸಂಚಾರ ಇರಲಿದೆ. AI151 ವಿಮಾನವು ದೆಹಲಿಯಿಂದ ಜ್ಯೂರಿಚ್‌ಗೆ ಮತ್ತು AI152 ವಿಮಾನವು ಜ್ಯೂರಿಚ್‌ನಿಂದ ದೆಹಲಿಗೆ ಸಂಚರಿಸಲಿವೆ.
ದೆಹಲಿ – ಟೊರೊಂಟೋ
ಈ ಮಾರ್ಗದಲ್ಲಿ AI189 ವಿಮಾನವು ಮಾರ್ಚ್ 19, 21, 24 ಮತ್ತು 26ರಂದು ದೆಹಲಿಯಿಂದ ಟೊರೊಂಟೋ ಕಡೆಗೆ ಮತ್ತು AI190 ವಿಮಾನವು ಮಾರ್ಚ್ 20, 22, 25 ಮತ್ತು 27ರಂದು ಟೊರೊಂಟೋದಿಂದ ದೆಹಲಿ ಕಡೆಗೆ ಸಂಚಾರ ಮಾಡಲಿವೆ.
ಈ ಐದು ಮಾರ್ಗಗಳಲ್ಲಿ ಏರ್ ಇಂಡಿಯಾದ ಒಟ್ಟು 36 ಹೆಚ್ಚುವರಿ ವಿಮಾನಗಳು ಸಂಚರಿಸಲಿದ್ದು, ಬುಕಿಂಗ್‌ಗಾಗಿ ಏರ್ ಇಂಡಿಯಾ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಬಳಸಬಹುದು. ಟ್ರಾವೆಲ್ ಏಜೆಂಟ್‌ಗಳನ್ನೂ ಸಂಪರ್ಕಿಸಬಹುದು.