Friday, February 13, 2026
Friday, February 13, 2026

ಅಮೃತ್ ಭಾರತ ಯೋಜನೆ: ಬೆಂಗಳೂರಿನ 9 ರೈಲು ನಿಲ್ದಾಣಗಳ ನವೀಕರಣ

ಬೆಂಗಳೂರು ಕಂಟೋನ್ಮೆಂಟ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್ ಬೆಂಗಳೂರು), ಯಶವಂತಪುರ, ಮಲ್ಲೇಶ್ವರಂ, ವೈಟ್‌ಫೀಲ್ಡ್, ಕೃಷ್ಣರಾಜಪುರಂ, ಕೆಂಗೇರಿ, ಚನ್ನಸಂದ್ರ ಮತ್ತು ದೊಡ್ಡಬಳ್ಳಾಪುರ ನಿಲ್ದಾಣಗಳನ್ನು ಈ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಗುರುತಿಸಲಾಗಿದೆ.

ಬೆಂಗಳೂರಿನಾದ್ಯಂತ ಒಂಬತ್ತು ಪ್ರಮುಖ ರೈಲು ನಿಲ್ದಾಣಗಳನ್ನು ಕೇಂದ್ರದ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಹಂತಹಂತವಾಗಿ ನವೀಕರಣಗೊಳಿಸಲಾಗುತ್ತಿದೆ. ಬೆಂಗಳೂರಿನ 9 ರೈಲು ನಿಲ್ದಾಣಗಳನ್ನು ಆಧುನಿಕ, ಪ್ರಯಾಣಿಕ ಸ್ನೇಹಿ ಸಾರಿಗೆ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ನೈಋತ್ಯ ರೈಲ್ವೆಗೆ 2025-26ರಲ್ಲಿ 572 ಕೋಟಿ ರು. ಹಂಚಿಕೆ ಮಾಡಲಾಗಿದ್ದು, ಡಿಸೆಂಬರ್ 2025 ರವರೆಗೆ 468 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಈ ಕುರಿತು ಮಾತನಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬೆಂಗಳೂರು ಕಂಟೋನ್ಮೆಂಟ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್ ಬೆಂಗಳೂರು), ಯಶವಂತಪುರ, ಮಲ್ಲೇಶ್ವರಂ, ವೈಟ್‌ಫೀಲ್ಡ್, ಕೃಷ್ಣರಾಜಪುರಂ, ಕೆಂಗೇರಿ, ಚನ್ನಸಂದ್ರ ಮತ್ತು ದೊಡ್ಡಬಳ್ಳಾಪುರ ನಿಲ್ದಾಣಗಳನ್ನು ಈ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಗುರುತಿಸಲಾಗಿದೆ ಎಂದು ಹೇಳಿದರು. ನಿಲ್ದಾಣದ ಪ್ರವೇಶವನ್ನು ಸುಧಾರಿಸುವುದು, ಕಾಯುವ ಸಭಾಂಗಣಗಳು ಮತ್ತು ಶೌಚಾಲಯಗಳನ್ನು ಹೆಚ್ಚಿಸುವುದು, ಅಗಲವಾದ ಪಾದಚಾರಿ ಸೇತುವೆಗಳನ್ನು ನಿರ್ಮಿಸುವುದು ಮತ್ತು ಲಿಫ್ಟ್‌ಗಳು, ಎಸ್ಕಲೇಟರ್‌ಗಳು ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ