Tuesday, September 8, 2026
Tuesday, September 8, 2026

ಜಕಾರ್ತಾ ವಿಮಾನ ನಿಲ್ದಾಣ ಸೇರಿದಂತೆ ಐದು ಏರ್‌ಪೋರ್ಟ್‌ಗಳ ಪುನಾರಂಭ

ಸುರಕ್ಷತಾ ದೃಷ್ಟಿಯಿಂದ ಒಟ್ಟು ಎಂಟು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸುಮಾರು 3,40,000ಕ್ಕೂ ಅಧಿಕ ಪ್ರಯಾಣಿಕರ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಇಂಡೋನೇಷ್ಯಾದಲ್ಲಿ ಮೌಂಟ್ ಅನಾಕ್ ಕ್ರಾಕಟಾವೊ (Mount Anak Krakatau) ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾಗಿದ್ದ ದಟ್ಟವಾದ ಬೂದಿಯಿಂದಾಗಿ ಮುಚ್ಚಲಾಗಿದ್ದ ಜಕಾರ್ತಾ ಮುಖ್ಯ ವಿಮಾನ ನಿಲ್ದಾಣ ಹಾಗೂ ಇತರ ನಾಲ್ಕು ವಿಮಾನ ನಿಲ್ದಾಣಗಳನ್ನು ಅಧಿಕೃತವಾಗಿ ಮರುಪ್ರಾರಂಭಿಸಲಾಗಿದೆ. ಜಾವಾ ಮತ್ತು ಸುಮಾಕ್ರಾ ದ್ವೀಪಗಳ ನಡುವೆ ಇರುವ ಈ ಜ್ವಾಲಾಮುಖಿಯು ಕಳೆದ ಶುಕ್ರವಾರ ರಾತ್ರಿ ಸ್ಫೋಟಗೊಂಡಿದ್ದರಿಂದ ರಾಜಧಾನಿ ಜಕಾರ್ತಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಬೂದಿಯಿಂದ ಆವರಿಸಲ್ಪಟ್ಟಿದ್ದವು.

ಇದನ್ನೂ ಓದಿ: ವಿಮಾನ ದುರಂತದಿಂದ ಪಾರಾದ ಮಹಿಳೆಗೆ ಪ್ರವಾಸವೇ ಚಿಕಿತ್ಸೆ

ಸುರಕ್ಷತಾ ದೃಷ್ಟಿಯಿಂದ ಒಟ್ಟು ಎಂಟು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸುಮಾರು 3,40,000ಕ್ಕೂ ಅಧಿಕ ಪ್ರಯಾಣಿಕರ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಗಾಳಿಯ ದಿಕ್ಕು ಬದಲಾಗಿ ಬೂದಿ ದೂರ ಸರಿದ ಹಿನ್ನೆಲೆಯಲ್ಲಿ ಜಕಾರ್ತಾದ ಮುಖ್ಯ ಸೋಕರ್ಣೋ-ಹಟ್ಟಾ (Soekarno-Hatta) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಪುನಾರಂಭಿಸಲಾಗಿದೆ ಎಂದು ಸಾರಿಗೆ ಸಚಿವ ದುಡಿ ಪುರ್ವಾಗಂಧಿ (Dudy Purwagandhi) ತಿಳಿಸಿದ್ದಾರೆ. ಮುಚ್ಚಲ್ಪಟ್ಟಿದ್ದ ಅವಧಿಯಲ್ಲಿ ನಿಂತಲ್ಲೇ ನೆಲೆಯೂರಿದ್ದ ಸುಮಾರು 178 ವಿಮಾನಗಳ ತಾಂತ್ರಿಕ ಹಾಗೂ ಯೋಗ್ಯತಾ ತಪಾಸಣೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಮುಖ್ಯ ವಿಮಾನ ನಿಲ್ದಾಣಗಳು ಪುನಾರಂಭಗೊಂಡಿದ್ದರೂ, ಮಂಗಳವಾರ ಬೆಳಗ್ಗೆಯೂ ಜ್ವಾಲಾಮುಖಿಯು ಸಣ್ಣ ಪ್ರಮಾಣದಲ್ಲಿ ಮೂರು ಬಾರಿ ಸ್ಫೋಟಗೊಂಡಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಜಾಗತಿಕವಾಗಿ 'ಪೆಸಿಫಿಕ್ ರಿಂಗ್ ಆಫ್ ಫೈರ್' ವಲಯದಲ್ಲಿರುವ ಇಂಡೋನೇಷ್ಯಾದಲ್ಲಿ ಸುಮಾರು 130 ಸಕ್ರಿಯ ಜ್ವಾಮುಖಿಗಳಿದ್ದು, ವಿಮಾನಯಾನಕ್ಕೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ