ಬೆಂಗಳೂರು–ವಿಶಾಖಪಟ್ಟಣಂ ನಡುವೆ ಮತ್ತೊಂದು ವಂದೇ ಭಾರತ್
ಬೆಂಗಳೂರು ಮತ್ತು ವಿಶಾಖಪಟ್ಟಣಂ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನು ದಕ್ಷಿಣ ಕರಾವಳಿ ರೈಲ್ವೇ (South Coast Railway) ರೈಲ್ವೇ ಮಂಡಳಿಗೆ ಸಲ್ಲಿಸಿದೆ.
ಬೆಂಗಳೂರು ಮತ್ತು ವಿಶಾಖಪಟ್ಟಣಂ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನು ದಕ್ಷಿಣ ಕರಾವಳಿ ರೈಲ್ವೇ (South Coast Railway) ರೈಲ್ವೇ ಮಂಡಳಿಗೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ರಾತ್ರಿ ವೇಳೆಯಲ್ಲಿ ಸಂಚರಿಸುವ ಈ ರೈಲು ಆಧುನಿಕ ಸೌಲಭ್ಯಗಳೊಂದಿಗೆ ಎರಡು ನಗರಗಳ ನಡುವಿನ ದೂರ ಪ್ರಯಾಣವನ್ನು ಇನ್ನಷ್ಟು ವೇಗವಾಗಿ ಹಾಗೂ ಆರಾಮದಾಯಕವಾಗಿ ಮಾಡಲಿದೆ.
ಪ್ರಸ್ತಾವಿತ ರೈಲು ವಾರದಲ್ಲಿ ಆರು ದಿನ ಸಂಚರಿಸುವ ಸಾಧ್ಯತೆಯಿದ್ದು, ಸುಮಾರು 20 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣದ ಅವಧಿ 15 ಗಂಟೆಗಳಿಗಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಸೇವೆಯಿಂದ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಬೆಂಗಳೂರು– ವಿಶಾಖಪಟ್ಟಣಂ ಮಾರ್ಗದಲ್ಲಿ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ಸೇವೆ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಅಂತಿಮ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ಸೇವೆ ಆರಂಭದ ದಿನಾಂಕವನ್ನು ರೈಲ್ವೇ ಮಂಡಳಿಯ ಅನುಮೋದನೆಯ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು.