ಸರಿಸುಮಾರು 6,000 ವರ್ಷಗಳ ಹಿಂದೆಯೇ ಈ ಭೂಮಿಯಿಂದ ಕಣ್ಮರೆಯಾಗಿದೆ ಎಂದು ವಿಜ್ಞಾನಿಗಳು ನಂಬಿದ್ದ ಅಪರೂಪದ ಪ್ರಾಣಿ ಸಂಕುಲವೊಂದು ಈಗ ಇಂಡೋನೇಷ್ಯಾದ ದ್ವೀಪಗಳಲ್ಲಿ ಪತ್ತೆಯಾಗಿದೆ. ಪ್ರಸಿದ್ಧ ತಜ್ಞರ ಪ್ರೊಫೆಸರ್ ಟಿಮ್ ಫ್ಲಾನರಿ ನೇತೃತ್ವದ ಸಂಶೋಧನಾ ತಂಡವು ಇಂಡೋನೇಷ್ಯಾದ ಪಶ್ಚಿಮ ಪಪುವಾ ಪ್ರದೇಶದ ದಟ್ಟ ಅರಣ್ಯಗಳಲ್ಲಿ ಎರಡು ಅಪರೂಪದ ಮಾರ್ಸ್ಪಿಯಲ್ ಪ್ರಭೇದಗಳನ್ನು ಪತ್ತೆಹಚ್ಚಿದೆ.

ರಿಂಗ್-ಟೇಲ್ಡ್ ಗ್ಲೈಡರ್ ಆಸ್ಟ್ರೇಲಿಯಾದ 'ಗ್ರೇಟರ್ ಗ್ಲೈಡರ್' ಪ್ರಾಣಿಗೆ ಹತ್ತಿರದ ಸಂಬಂಧಿ. ಪಿಗ್ಮಿ ಲಾಂಗ್-ಫಿಂಗರ್ಡ್ ಪೋಸಮ್ ಅತ್ಯಂತ ಚಿಕ್ಕದಾದ ಪ್ರಾಣಿಯಾಗಿದ್ದು, ಕೀಟಗಳನ್ನು ಹಿಡಿಯಲು ಉದ್ದವಾದ ಬೆರಳನ್ನು ಹೊಂದಿದೆ.

ಇದನ್ನೂ ಓದಿ: ಕೆಲ ರಾಜ್ಯದ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯ ವಿವಿ ತಿರಸ್ಕಾರ: ಸುಳ್ಳು ಸುದ್ದಿ- ಆಸ್ಟ್ರೇಲಿಯ

ಈ ಐತಿಹಾಸಿಕ ಸಂಶೋಧನೆಯನ್ನು 'ಹೆರಿಟೇಜ್ ಎಕ್ಸ್‌ಪೆಡಿಶನ್ಸ್' ಎಂಬ ಪ್ರವಾಸೋದ್ಯಮ ಸಂಸ್ಥೆಯ ಹಡಗಿನ ಮೂಲಕ ನಡೆಸಲಾಗಿದೆ. ವಿಜ್ಞಾನದ ಭಾಷೆಯಲ್ಲಿ ಈ ಪ್ರಾಣಿಗಳನ್ನು 'ಲಾಜರಸ್ ಟ್ಯಾಕ್ಸಾ' ಎಂದು ಕರೆಯಲಾಗುತ್ತದೆ. ಅಂದರೆ, ಒಂದು ಜೀವಿಯು ಅಳಿದುಹೋಗಿದೆ ಎಂದು ಘೋಷಿಸಿದ ಹಲವು ವರ್ಷಗಳ ನಂತರ ಮತ್ತೆ ಜೀವಂತವಾಗಿ ಕಾಣಿಸಿಕೊಳ್ಳುವುದು.

ಈ ಸಂಶೋಧನೆಯು ಆಧುನಿಕ ತಂತ್ರಜ್ಞಾನದ ಸಹಕಾರದ ಜತೆಗೆ ವೋಗೆಲ್ಕಾಪ್ ಪೆನಿನ್ಸುಲಾದ ಸ್ಥಳೀಯ ಬುಡಕಟ್ಟು ಜನಾಂಗದವರು ನೀಡಿದ ಮಾಹಿತಿ ಮತ್ತು ಅವರ ಮಾರ್ಗದರ್ಶನದೊಂದಿಗೆ ಮಾಡಲಾಗಿದೆ.