Wednesday, February 4, 2026
Wednesday, February 4, 2026

ಕರ್ನಾಟಕ ಪ್ರವಾಸೋದ್ಯಮ ಉತ್ತೇಜನಕ್ಕೆ ಐದು ನಗರಗಳಲ್ಲಿ ಬಿ2ಬಿ ರೋಡ್‌ ಶೋ

ಕರ್ನಾಟಕ ಪ್ರವಾಸೋದ್ಯಮ ಸಂಘ ʻಸೆಂಟ್ರಲ್‌ ಇಂಡಿಯಾ ಬಿ2ಬಿ ರೋಡ್‌ ಶೋʼವನ್ನು ಪ್ರಕಟಿಸಿದೆ. ಜನವರಿ 27ರಿಂದ ರೋಡ್‌ ಶೋ ಆರಂಭವಾಗಲಿದೆ. 31ರವರೆಗೆ ಒಟ್ಟು ಐದು ಪ್ರಮುಖ ನಗರಗಳಲ್ಲಿ ನಡೆಯಲಿದೆ. ಇಂದೋರ್, ನಾಗ್ಪುರ, ಔರಂಗಾಬಾದ್, ನಾಸಿಕ್ ಮತ್ತು ಪುಣೆ ನಗರಗಳನ್ನು ರೋಡ್‌ ಶೋಗಾಗಿ ಗುರುತಿಸಲಾಗಿದೆ.

ಕರ್ನಾಟಕ ಪ್ರವಾಸೋದ್ಯಮದಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸಿ, ಮಾರುಕಟ್ಟೆಯನ್ನು ವಿಸ್ತರಿಸಲು, ಪರಿಸರ ಪ್ರವಾಸೋದ್ಯಮ ಸೇರಿ ಕರ್ನಾಟಕದಲ್ಲಿರುವ ಪ್ರವಾಸಿ ಅವಕಾಶಗಳನ್ನು ಮಧ್ಯ ಭಾರತೀಯ ಟ್ರಾವೆಲ್ ಬ್ಯುಸಿನೆಸ್‌ ಏಜೆನ್ಸಿಗಳಿಗೆ ಪರಿಚಯಿಸಬೇಕು. ಇದೇ ಕಾರಣಕ್ಕೆ ಕರ್ನಾಟಕ ಪ್ರವಾಸೋದ್ಯಮ ಸಂಘ ʻಸೆಂಟ್ರಲ್‌ ಇಂಡಿಯಾ ಬಿ2ಬಿ ರೋಡ್‌ ಶೋʼವನ್ನು ಪ್ರಕಟಿಸಿದೆ. ಜನವರಿ 27ರಿಂದ ರೋಡ್‌ ಶೋ ಆರಂಭವಾಗಲಿದೆ. 31ರವರೆಗೆ ಒಟ್ಟು ಐದು ಪ್ರಮುಖ ನಗರಗಳಲ್ಲಿ ನಡೆಯಲಿದೆ. ಇಂದೋರ್, ನಾಗ್ಪುರ, ಔರಂಗಾಬಾದ್, ನಾಸಿಕ್ ಮತ್ತು ಪುಣೆ ನಗರಗಳನ್ನು ರೋಡ್‌ ಶೋಗಾಗಿ ಗುರುತಿಸಲಾಗಿದೆ. ಜನವರಿ 27ರಂದು ಇಂದೋರ್, 28ರಂದು ನಾಗ್ಪುರ, 29ರಂದು ಔರಂಗಾಬಾದ್, 30ರಂದು ನಾಸಿಕ್ ಮತ್ತು ಜನವರಿ 31ರಂದು ಪುಣೆಯಲ್ಲಿ ರೋಡ್ ಶೋ ನಡೆಯಲಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಎಮ್‌ಎಸ್‌ ಐಎಲ್, ಜೆಎಲ್‌ಆರ್ ಮತ್ತು ಕೆಎಸ್‌ಟಿಡಿಸಿ ಸೇರಿ ಪ್ರಮುಖ ಹೊಟೇಲ್‌ಗಳು, ರೆಸಾರ್ಟ್‌ಗಳು, ಟೂರ್‌ ಏಜೆನ್ಸಿಗಳ ಸಹಯೋಗದಲ್ಲಿ ಈ ರೋಡ್‌ ಶೋಗಳು ನಡೆಯಲಿವೆ.

ಈ ಕುರಿತು ಭಾರತೀಯ ಪ್ರವಾಸೋದ್ಯಮದ ಪ್ರಾದೇಶಿಕ ನಿರ್ದೇಶಕ ಮೊಹಮ್ಮದ್‌ ಫಾರೂಕ್‌ ಮಾತನಾಡಿದ್ದು, ಈ ರೋಡ್ ಶೋ ದೇಶೀಯ ಪ್ರವಾಸವನ್ನು ಉತ್ತೇಜಿಸುತ್ತದೆ. ಕರ್ನಾಟಕದ ಶ್ರೀಮಂತ ಪರಂಪರೆ, ಪ್ರಕೃತಿ ಸೌಂದರ್ಯ ಮತ್ತು ಸಾಹಸ ಅನುಭವಗಳನ್ನು ನೀಡುವ ಮೂಲಕ 'ದೇಖೋ ಅಪ್ನಾ ದೇಶ್' ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುತ್ತದೆ. ಸರಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಇಂಥ ಕಾರ್ಯಕ್ರಮಗಳು ನಡೆಯುವುದು ಉದ್ಯಮವನ್ನು ಬಲಪಡಿಸುತ್ತದೆ. ವರ್ಷಪೂರ್ತಿ ವಿದೇಶಿ ಪ್ರವಾಸಿಗರನ್ನು ಭಾರತದತ್ತ ಸೆಳೆಯಲು ಸಹಕಾರಿಯಾಗುತ್ತವೆ ಎಂದಿದ್ದಾರೆ.

ನವೆಂಬರ್‌ ತಿಂಗಳೊಂದರಲ್ಲೇ ದಕ್ಷಿಣದ ನಗರಗಳಾದ, ಕೊಯಮತ್ತೂರು, ಕೊಚ್ಚಿನ್, ಮಧುರೈ ಮತ್ತು ಸೇಲಂಗಳಲ್ಲಿ ಇತ್ತೀಚೆಗೆ ಡೆಸ್ಟಿನೇಶನ್ ಪ್ರಮೋಷನ್ ಬಿ2ಬಿ ರೋಡ್ ಶೋಗಳು ನಡೆದಿದ್ದವು. ಇವುಗಳ ಯಶಸ್ವಿಯಾಗಿದ್ದು, ಇವುಗಳ ನಂತರ ಕರ್ನಾಟಕದಲ್ಲಿ ರೋಡ್‌ ಶೋ ಘೋಷಿಸಲಾಗಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..