ಬಂಡೀಪುರದಲ್ಲಿ ಟ್ರ್ಯಾಕರ್ ಡಾಗ್‌ಗಳಿಂದ ಕಾರ್ಯಾಚರಣೆ ಆರಂಭ
ದೇಶದಲ್ಲೇ ಪ್ರಪ್ರಥಮ ಟ್ರ್ಯಾಕರ್ ಡಾಗ್ ತರಬೇತಿ ಘಟಕವಾಗಿರುವ ಇಲ್ಲಿ ಬೆಲ್ಜಿಯನ್ ಮಾಲಿನಾಯಿಸ್ ತಳಿಯ ಶ್ವಾನಗಳನ್ನು ಆಯ್ದು 10 ತಿಂಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗಿದೆ. ತರಬೇತಿಪಡೆಯುವ ಶ್ವಾನಗಳು ನಂತರ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ ಮತ್ತು ಕಾಳಿ ಹುಲಿ ಸಂರಕ್ಷಣಾ ಪ್ರದೇಶಗಳಿಗೆ ನಿಯೋಜನೆಗೊಳ್ಳಲಿವೆ.
ಕರ್ನಾಟಕ ಅರಣ್ಯ ಇಲಾಖೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರವನ್ನು ಕಳೆದ ವರ್ಷ ಸ್ಥಾಪಿಸಿತ್ತು. ಇದೀಗ ಈ ಕೇಂದ್ರದಿಂದ ವಿಶೇಷ ತರಬೇತಿ ಪಡೆದ ಶ್ವಾನದಳವು ಅಕ್ರಮ ಬೇಟೆ, ವನ್ಯಜೀವಿ ಸಂಬಂಧಿ ಕಳ್ಳಸಾಗಣೆ, ಮರಗಳ್ಳತನ ಮತ್ತು ಇತರ ಅರಣ್ಯ ಅಪರಾಧಗಳನ್ನು ಪತ್ತೆಮಾಡುವಲ್ಲಿ ಅರಣ್ಯ ಸಿಬ್ಬಂದಿಗೆ ಸಹಕಾರ ನೀಡುತ್ತಿದೆ.
ದೇಶದಲ್ಲೇ ಪ್ರಪ್ರಥಮ ಟ್ರ್ಯಾಕರ್ ಡಾಗ್ ತರಬೇತಿ ಘಟಕವಾಗಿರುವ ಇಲ್ಲಿ ಬೆಲ್ಜಿಯನ್ ಮಾಲಿನಾಯಿಸ್ ತಳಿಯ ಶ್ವಾನಗಳನ್ನು ಆಯ್ದು 10 ತಿಂಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗಿದೆ. ತರಬೇತಿ ಪಡೆಯುವ ಶ್ವಾನಗಳು ನಂತರ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ ಮತ್ತು ಕಾಳಿ ಹುಲಿ ಸಂರಕ್ಷಣಾ ಪ್ರದೇಶಗಳಿಗೆ ನಿಯೋಜನೆಗೊಳ್ಳಲಿವೆ.
ಈ ಶ್ವಾನಗಳು ರಾತ್ರಿ ವೇಳೆಯಲ್ಲಿಯೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಅರಣ್ಯ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳ ಸುಳಿವು ನೀಡುವುದರಲ್ಲಿ, ಅಕ್ರಮವಾಗಿ ಸಾಗಿಸಲಾಗುವ ವನ್ಯಜೀವಿ ಉತ್ಪನ್ನಗಳನ್ನು ಕಂಡುಹಿಡಿಯುವುದರಲ್ಲಿ ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವುದರಲ್ಲಿ ಪರಿಣತಿಯನ್ನು ಸಾಧಿಸಿವೆ.