ಸೈಪ್ರಸ್ ದ್ವೀಪ ರಾಷ್ಟ್ರವು ಚಳಿಗಾಲದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಹೊಸ ಕ್ರಮಗಳನ್ನು ಕೈಗೊಂಡಿದೆ. ಸಾಮಾನ್ಯವಾಗಿ ಬೇಸಿಗೆ ಪ್ರವಾಸಕ್ಕೆ ಪ್ರಸಿದ್ಧವಾಗಿರುವ ಈ ಮೆಡಿಟರೇನಿಯನ್ ತೀರ ರಾಜ್ಯ, ಈಗ ಚಳಿಗಾಲದಲ್ಲೂ ಪ್ರವಾಸಿಗರನ್ನು ಆಕರ್ಷಿಸಲು ಹೊಸ ರೀತಿಯ ಪ್ಯಾಕೇಜುಗಳನ್ನು ಪರಿಚಯಿಸಿದೆ.

ಈ ಹೊಸ ಪ್ರಯತ್ನವು “ಗ್ಯಾಸ್ಟ್ರೋಮಿ ಮತ್ತು ಸಂಸ್ಕೃತಿಯ ಸಂಯೋಜನೆ”ಯನ್ನು ಆಧಾರವಾಗಿಸಿಕೊಂಡಿದ್ದು, ಪ್ರವಾಸಿಗರಿಗೆ ಸ್ಥಳೀಯ ಅಡುಗೆ ರುಚಿ, ಗ್ರಾಮೀಣ ಸಂಸ್ಕೃತಿ ಮತ್ತು ದ್ವೀಪದ ಆತಿಥ್ಯ ಪರಂಪರೆಯ ಸವಿ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಬ್ರಿಟನ್‌ನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಪ್ಯಾಕೇಜುಗಳನ್ನು ರೂಪಿಸಲಾಗಿದೆ.

Cyprus tourism


ಸೈಪ್ರಸ್ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಹೊಟೇಲ್‌ಗಳು, ವೈನ್‌ ತಯಾರಿಕಾ ಘಟಕಗಳು, ಗ್ರಾಮೀಣ ಹಬ್ಬಗಳ ಮತ್ತು ಆಹಾರ ಮೇಳಗಳ ಆಯೋಜಕರೊಂದಿಗೆ ಸಹಯೋಗ ಸಾಧಿಸಿದೆ. ಈ ಮೂಲಕ ಪ್ರವಾಸಿಗರು ಸ್ಥಳೀಯ ಜನರ ಜೀವನಶೈಲಿಯನ್ನು ಅತ್ಯಂತ ಹತ್ತಿರದಿಂದ ಅರಿಯಬಹುದಾಗಿದೆ.

ಚಳಿಗಾಲದ ಶಾಂತ ವಾತಾವರಣದಲ್ಲಿ ರುಚಿರುಚಿಯಾದ ಅಡುಗೆ, ಸುಶ್ರಾವ್ಯ ಸಂಗೀತ ಮತ್ತು ಸಂಸ್ಕೃತಿಯ ಹಬ್ಬಗಳು ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡಲಿವೆ.

ಪ್ರವಾಸೋದ್ಯಮ ಇಲಾಖೆ ಪ್ರತಿನಿಧಿಯೊಬ್ಬರು ಮಾತನಾಡಿ- “ಸೈಪ್ರಸ್‌ ಅನ್ನು ಕೇವಲ ಬೇಸಿಗೆ ತಾಣವಾಗಿ ಮಾತ್ರ ಸೀಮಿತಗೊಳಿಸದೆ ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವನ್ನಾಗಿ ರೂಪಿಸುವುದು ನಮ್ಮ ಉದ್ದೇಶ” ಎಂದು ತಿಳಿಸಿದರು. ಈ ಹೊಸ ತಂತ್ರವು ದೇಶದ ಆರ್ಥಿಕತೆಗೂ ಪ್ರೋತ್ಸಾಹ ನೀಡುವುದಾಗಿ ಅವರು ಅಭಿಪ್ರಾಯಪಟ್ಟರು.