ಬಿಹಾರ ಟೂರಿಸಂ: ಐಷಾರಾಮಿ ಮೊಬೈಲ್ ಕ್ಯಾರವಾನ್‌ಗಳ ಪ್ರಾರಂಭ
ಈ ಕ್ಯಾರವಾನ್‌ಗಳು ಸುಂದರ ಬೆಡ್‌ರೂಂ, ಆಧುನಿಕ ಶೌಚಾಲಯ, ಅಡುಗೆ ಸೌಲಭ್ಯ, ಮನರಂಜನಾ ವ್ಯವಸ್ಥೆ, ಮತ್ತು ಆರಾಮವಾಗಿ ಕುಳಿತುಕೊಳ್ಳುವ ಜಾಗ ಸೇರಿದಂತೆ ಎಲ್ಲಾ ಮೂಲಭೂತ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿವೆ.
ಬಿಹಾರ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವ ಉದ್ದೇಶದಿಂದ ಎರಡು ಐಷಾರಾಮಿ ಮೊಬೈಲ್ ಕ್ಯಾರವಾನ್‌ಗಳನ್ನು ಬುಧವಾರ ಪರಿಚಯಿಸಿದೆ. ರಾಜ್ಯದ ನೈಸರ್ಗಿಕ ಸೌಂದರ್ಯ, ಪರಂಪರೆ ಮತ್ತು ಹೇರಿಟೇಜ್ ಜಾಗಗಳನ್ನು ಈ ಕ್ಯಾರಾವಾನ್‌ಗಳಲ್ಲಿ ಸಂಚರಿಸುವ ಮೂಲಕ ಅದ್ಭುತ ಅನುಭವವನ್ನು ಪ್ರವಾಸಿಗರು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರವಾನ್‌ಗಳು ಸುಂದರ ಬೆಡ್‌ರೂಂ, ಆಧುನಿಕ ಶೌಚಾಲಯ, ಅಡುಗೆ ಸೌಲಭ್ಯ, ಮನರಂಜನಾ ವ್ಯವಸ್ಥೆ, ಮತ್ತು ಆರಾಮವಾಗಿ ಕುಳಿತುಕೊಳ್ಳುವ ಜಾಗ ಸೇರಿದಂತೆ ಎಲ್ಲಾ ಮೂಲಭೂತ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿವೆ. ಒಟ್ಟಾರೆ ಇವುಗಳನ್ನು ʼಓಡಾಡುವ ಮನೆʼಗಳೆಂದೇ ಕರೆಯಬಹುದು.
ಬಿಹಾರ ಪ್ರವಾಸೋದ್ಯಮದ ಪ್ರಕಾರ, ಗಯಾ, ರಾಜಗಿರ್, ನಳಂದಾ, ವೈಶಾಲಿ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಈ ಕ್ಯಾರವಾನ್‌ಗಳ ಮೂಲಕ ಸುಗಮವಾಗಿ ಸಂಚರಿಸಬಹುದಾಗಿದೆ. ಕುಟುಂಬ, ಸ್ನೇಹಿತರು ಹಾಗೂ ಸಾಹಸ ಪ್ರವಾಸಿಗರಿಗೆ ಇದು ಹೊಸ ಅನುಭವ ನೀಡುವ ನಿರೀಕ್ಷೆಯಿದೆ.